Dwayne Bravo: ನೂರಲ್ಲ ಇನ್ನೂರಲ್ಲ ಬರೋಬ್ಬರಿ 500 ಟಿ-20 ಪಂದ್ಯವನ್ನಾಡಿ ದಾಖಲೆ ಬರೆದ ಡ್ವೇನ್ ಬ್ರಾವೋ
Dwayne Bravo 500 T20 Matches: 2006ರಲ್ಲಿ ಟಿ-20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 37 ವರ್ಷದ ಬ್ರಾವೋ, ವಿಶ್ವದ ಅನೇಕ ಫ್ರಾಂಚೈಸಿ ಆಧಾರಿತ ಟಿ-20 ಲೀಗ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಸದ್ಯ ಟಿ-20 ಕ್ರಿಕೆಟ್‌ನಲ್ಲಿ ತಮ್ಮ 500ನೇ ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ.

ವೆಸ್ಟ್ ಇಂಡೀಸ್ (West Indies) ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಡ್ವೇನ್ ಬ್ರಾವೋ (Dwayne Bravo) ಟಿ-20 ಕ್ರಿಕೆಟ್ (T20 Cricket) ಇತಿಹಾಸದಲ್ಲಿ ನೂತನ ದಾಖಲೆ ಬರೆದಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್ 2021 (CPL 2021) ರಲ್ಲಿ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ (St Kitts and Nevis Patriots) ತಂಡದ ಪರ ಫೈನಲ್ನಲ್ಲಿ ಕಣಕ್ಕಿಳಿಯುವ ಮೂಲಕ ಬ್ರಾವೋ ಟಿ-20 ಕ್ರಿಕೆಟ್ ಇತಿಹಾಸದಲ್ಲಿ 500ನೇ ಪಂದ್ಯವನ್ನಾಡಿದ ಸಾಧನೆ ಮಾಡಿದ್ದಾರೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಟಿ-20 ಪಂದ್ಯವನ್ನು ಆಡಿದ ಎರಡನೇ ಆಟಗಾರ ಬ್ರಾವೋ ಆಗಿದ್ದಾರೆ. ಈ ಸಾಲಿನಲ್ಲಿ ಪ್ರಥಮ ಸ್ಥಾನವನ್ನು ಇವರ ತಂಡದವರೇ ಆಗಿರುವ ಕೀರೊನ್ ಪೊಲಾರ್ಡ್ (Kieron Pollard) ಪಡೆದುಕೊಂಡಿದ್ದಾರೆ.
2006ರಲ್ಲಿ ಟಿ-20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 37 ವರ್ಷದ ಬ್ರಾವೋ, ವಿಶ್ವದ ಅನೇಕ ಫ್ರಾಂಚೈಸಿ ಆಧಾರಿತ ಟಿ-20 ಲೀಗ್ ಟೂರ್ನಿಗಳಲ್ಲಿ ಕಣಕ್ಕಿಳಿದಿದ್ದಾರೆ. ಜೊತೆಗೆ ಅತ್ಯಂತ ಯಶಸ್ಸಿ ಆಟಗಾರರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿರುವ ಬ್ರಾವೋ, 2017ರ ಬಳಿಕ ಏಕದಿನ ಕ್ರಿಕೆಟ್‌ನಲ್ಲಿ ಪಾಲ್ಗೊಂಡಿಲ್ಲ. ಆದರೆ, ಟಿ20 ಕ್ರಿಕೆಟ್‌ನಲ್ಲಿ ಈಗಲೂ ತಮ್ಮ ಅಬ್ಬರದ ಆಟದ ಮೂಲಕ ಗಮನ ಸೆಳೆದು ಬೇಡಿಕೆಯನ್ನು ಇಟ್ಟುಕೊಂಡಿದ್ದಾರೆ.
The #CPL2021 final is Dwayne Bravo’s 500th T20 appearance.
In 499 games, he has scored 6,566 runs and picked up 540 wickets. ? pic.twitter.com/VZPsDbC7zb
— Wisden India (@WisdenIndia) September 15, 2021
ಸಿಪಿಎಲ್ 2021 ಟೂರ್ನಿಯ ಫೈನಲ್ ಪಂದ್ಯಕ್ಕೂ ಮುನ್ನ ಬ್ರಾವೋ ಟಿ-20 ಕ್ರಿಕೆಟ್‌ನಲ್ಲಿ 499 ಪಂದ್ಯಗಳಿಂದ 126.90ರ ಸ್ಟ್ರೈಕ್‌ರೇಟ್‌ನೊಂದಿಗೆ 6566 ರನ್‌ಗಳನ್ನು ಬಾರಿಸಿ, ಬೌಲಿಂಗ್‌ನಲ್ಲಿ 8.21ರ ಎಕಾನಮಿಯೊಂದಿಗೆ ಬರೋಬ್ಬರಿ 540 ವಿಕೆಟ್‌ಗಳನ್ನು ಉರುಳಿಸಿದ್ದರು. ಅಜೇಯ 70 ರನ್ ಅವರ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನವಾಗಿದ್ದು, 23ಕ್ಕೆ 5 ವಿಕೆಟ್‌ಗಳನ್ನು ಪಡೆದಿರುವುದು ಅವರ ಶ್ರೇಷ್ಠ ಬೌಲಿಂಗ್ ಸಾಧನೆಯಾಗಿದೆ.
ಬ್ರಾವೋ ಅವರು ಐಪಿಎಲ್ನ ಚೆನ್ನೈ ಸೂಪರ್ ಕಿಂಗ್ಸ್, ಚಿತ್ತಗಾಂಗ್ ಕಿಂಗ್ಸ್, ಗುಜರಾತ್ ಲಯನ್ಸ್, ಕೆಂಟ್, ಲಾಹೋರ್ ಕಲಂದರ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಮೆಲ್ಬೋರ್ನ್ ಸ್ಟಾರ್ಸ್, ಮುಂಬೈ ಇಂಡಿಯನ್ಸ್, ಪಾರ್ಲ್ ರಾಕ್ಸ್, ಕ್ವೆಟಾ ಗ್ಲಾಡಿಯೇಟರ್ಸ್, ಸೇಂಟ್ ಕಿಟ್ಸ್ ಅಂಡ್ ನೆವೀಸ್ ಪೇಟ್ರಿಯಟ್ಸ್, ಸರ್ರೇ, ಸಿಡ್ನಿ ಸಿಕ್ಸರ್ಸ್, ಟ್ರಿನ್ಬಾಗೊ ನೈಟ್ ರೈಡರ್ಸ್, ಟ್ರಿನಿಡಾಡ್ ಅಂಡ್ ಟೊಬಾಗೊ ವಿಶ್ವದ ವಿವಿಧ ಭಾಗಗಳಲ್ಲಿ ಪ್ರತಿನಿಧಿಸಿರುವ ಪ್ರಮುಖ ತಂಡಗಳು.
ಬುಧವಾರ ನಡೆದ ಸಿಪಿಎಲ್ 2021 ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೇಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ಬ್ರಾವೋ ಕಣಕ್ಕಿಳಿಯುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ತಮ್ಮ 500ನೇ ಪಂದ್ಯವನ್ನಾಡಿದ ಸಾಧನೆ ಮಾಡಿದರು. ಅಲ್ಲದೆ ತಂಡ ಇದೇ ಮೊದಲ ಬಾರಿಗೆ ಚಾಂಪಿಯನ್ ಪಟ್ಟವನ್ನೂ ಅಲಂಕರಿಸಿತು. ವೆಸ್ಟ್ ಇಂಡೀಸ್‌ನ ದೈತ್ಯ ಆಲ್‌ರೌಂಡರ್ ಕೈರೊನ್ ಪೊಲಾರ್ಡ್ 500 ಟಿ20 ಪಂದ್ಯಗಳನ್ನಾಡಿದ ವಿಶ್ವದ ಮೊದಲ ಆಟಗಾರ. ಈ ಪಟ್ಟಿಗೆ ಈಗ ಬ್ರಾವೋ ಸೇರಿಕೊಂಡಿದ್ದಾರೆ.
ಪೊಲಾರ್ಡ್ ಅವರು 561 ಟಿ-20 ಪಂದ್ಯಗಳನ್ನು ಆಡಿದ್ದು 11,159 ರನ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ 298 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ. ಅತಿ ಹೆಚ್ಚು ಟಿ20 ಪಂದ್ಯಗಳನ್ನಾಡಿದ ಆಟಗಾರರ ಪಟ್ಟಿಯಲ್ಲಿ ‘ಯೂನಿವರ್ಸ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್ 445 ಪಂದ್ಯಗಳಿಂದ 14,261 ರನ್‌ಗಳನ್ನು ಗಳಿಸಿದ್ದು, 82 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಪಾಕಿಸ್ತಾನದ ಆಲ್‌ರೌಂಡರ್ ಶೊಯೇಬ್ ಮಲ್ಲಿಕ್ ನಾಲ್ಕನೇ ಸ್ಥಾನದಲ್ಲಿದ್ದು, 436 ಪಂದ್ಯಗಳಿಂದ 10,808 ರನ್‌ಗಳನ್ನು ಗಳಿಸಿ 152 ವಿಕೆಟ್‌ಗಳನ್ನು ಸಂಪಾದಿಸಿದ್ದಾರೆ.
CPL 2021 Final: ಕೊನೆಯ ಬಾಲ್ನಲ್ಲಿ ರೋಚಕ ಗೆಲುವು: ಚೊಚ್ಚಲ ಬಾರಿಗೆ ಸಿಪಿಎಲ್ ಕಿರೀಟ ತೊಟ್ಟ ಸ್ಯಾಂಟ್ ಕಿಟ್ಸ್ ತಂಡ
ಒಲಿಂಪಿಕ್ಸ್ ಕೋಚ್ ವಿವಾದ; ಏಷ್ಯನ್ ಚಾಂಪಿಯನ್‌ಶಿಪ್ ತಂಡದಿಂದ ಮನಿಕಾ ಬಾತ್ರಾಗೆ ಗೇಟ್ಪಾಸ್!
(Dwayne Bravo appeared in his 500th T20 match of the Caribbean Premier League CPL 2021 final )
