AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

CPL 2021: ಕ್ರಿಸ್ ಗೇಲ್ ಸ್ಫೊಟಕ ಹೊಡೆತ ತಾಳಲಾರದೆ ಬ್ಯಾಟ್ ಪೀಸ್ ಪೀಸ್: ಇಲ್ಲಿದೆ ವಿಡಿಯೋ

Chris Gayle: ಕ್ರಿಸ್ ಗೇಲ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಿಡಿಸಿ 42 ರನ್ ಚಚ್ಚಿದರು. ಇದರ ನಡುವೆ ಗೇಲ್ ಸಿಕ್ಸರ್ ಸಿಡಿಸಲು ಮುಂದಾದಾಗ ಬ್ಯಾಟ್ ಕಟ್ ಆದ ಘಟನೆಯೂ ನಡೆಯಿತು.

CPL 2021: ಕ್ರಿಸ್ ಗೇಲ್ ಸ್ಫೊಟಕ ಹೊಡೆತ ತಾಳಲಾರದೆ ಬ್ಯಾಟ್ ಪೀಸ್ ಪೀಸ್: ಇಲ್ಲಿದೆ ವಿಡಿಯೋ
Chris Gayle
TV9 Web
| Updated By: Vinay Bhat|

Updated on: Sep 16, 2021 | 10:49 AM

Share

ವೆಸ್ಟ್​ ಇಂಡೀಸ್ (West Indies) ಕ್ರಿಕೆಟ್ ತಂಡದ ದೈತ್ಯ ಯುನಿವರ್ಸೆಲ್ ಬಾಸ್ ಕ್ರಿಸ್ ಗೇಲ್ (Chris Gayle) ಸ್ಫೊಟಕ ಆಟಕ್ಕೆ ಎದ್ದು ನಿಂತರೆ ಅವರನ್ನು ತಡೆಯುವುದು ಸುಲಭವಲ್ಲ. ಚೆಂಡು ಫೋರ್-ಸಿಕ್ಸರ್ ಎಂದು ಸರಾಗವಾಗಿ ಸಾಗುತ್ತಲೇ ಇರುತ್ತದೆ. ಹೀಗಾಗಿ ವಿಶ್ವ ಕ್ರಿಕೆಟ್​ನಲ್ಲಿರುವ ಸ್ಫೋಟಕ ಬ್ಯಾಟ್ಸ್​ಮನ್​ಗಳಲ್ಲಿ ಗೇಲ್ ಪ್ರಮುಖರೆಂದೇ ಹೇಳಬಹುದು. ಇವರ ಸ್ಫೋಟಕ ಹೊಡೆತ ತಾಳಲಾರದೆ ಅದೆಷ್ಟೊ ಬಾರಿ ಬ್ಯಾಟ್ ಪೀಸ್ ಪೀಸ್ ಆಗ ಘಟನೆಗಳು ನಡೆದಿವೆ. ಈಗ ಅಂತಹದೆ ಘಟನೆ ಮರುಕಳಿಸಿದೆ. ವೆಸ್ಟ್​ ಇಂಡೀಸ್​ನಲ್ಲಿ ನಡೆದ ಈ ಬಾರಿಯ ಕೆರಿಬಿಯನ್ ಪ್ರೀಮಿಯರ್ ಲೀಗ್​ನಲ್ಲಿ (CPL 2021) ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ (st kitts and nevis patriots) ತಂಡದ ಪರ ಆಡಿದ ಕ್ರಿಸ್ ಗೇಲ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಸೆಮಿ ಫೈನಲ್ ಪಂದ್ಯದಲ್ಲಿ ಇವರ ರಭಸದ ಬ್ಯಾಟಿಂಗ್​ಗೆ ಬ್ಯಾಟೇ ಕಟ್ ಆಯಿತು.

ಮಂಗಳವಾರ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ನಡುವೆ ನಡೆದ ಸೆಮಿ ಫೈನಲ್ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿತ್ತು. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಅಮೆಜಾನ್ ವಾರಿಯರ್ಸ್ ತಂಡ 20 ಓವರ್​ನಲ್ಲಿ 9 ವಿಕೆಟ್ ನಷ್ಟಕ್ಕೆ 178 ರನ್ ಕಲೆಹಾಕಿತು. ತಂಡದ ಪರ ಶಿಮ್ರೋನ್ ಹೆಟ್ಮೇರ್ 20 ಎಸೆತಗಳಲ್ಲಿ ಅಜೇಯ 45 ರನ್ ಸಿಡಿಸಿದರು.

179 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ತಂಡ ಸ್ಫೋಟಕ ಆರಂಭ ಪಡೆದುಕೊಂಡಿತು. ಓಪನರ್​ಗಳಾದ ಕ್ರಿಸ್ ಗೇಲ್ ಹಾಗೂ ಎವಿನ್ ಲೆವಿಸ್ ಮನಬಂದಂತೆ ಬ್ಯಾಟ್ ಬೀಸಿದರು. 7 ಓವರ್ ಆಗುವ ಹೊತ್ತಿಗೆನೇ ತಂಡದ ಮೊತ್ತವನ್ನು 70ರ ಗಡಿ ದಾಟಿಸಿದರು. ಕ್ರಿಸ್ ಗೇಲ್ ಕೇವಲ 27 ಎಸೆತಗಳಲ್ಲಿ 5 ಬೌಂಡರಿ 3 ಸಿಕ್ಸರ್ ಸಿಡಿಸಿ 42 ರನ್ ಚಚ್ಚಿದರು. ಇದರ ನಡುವೆ ಗೇಲ್ ಸಿಕ್ಸರ್ ಸಿಡಿಸಲು ಮುಂದಾದಾಗ ಬ್ಯಾಟ್ ಕಟ್ ಆದ ಘಟನೆಯೂ ನಡೆಯಿತು.

ಇನಿಂಗ್ಸ್‌ನ ನಾಲ್ಕನೇ ಓವರ್‌ನ ಎರಡನೇ ಎಸೆತದಲ್ಲಿ ಈ ವಿಚಿತ್ರ ಘಟನೆ ನಡೆಯಿತು. ಗಯಾನಾ ತಂಡದ ವೇಗದ ಬೌಲರ್‌ ಒಡೆನ್‌ ಸ್ಮಿತ್‌ ಅವರ ಎಸೆತದಲ್ಲಿ ಗೇಲ್‌ ಆಫ್‌ ಸೈಡ್‌ ವಿಭಾಗದಲ್ಲಿ ದೊಡ್ಡ ಹೊಡೆತವನ್ನಾಡಲು ಬಲವಾಗಿ ಬ್ಯಾಟ್‌ ಬೀಸಿದ್ದರು. ಆದರೆ, ಚೆಂಡು ತಾಗುತ್ತಿದ್ದಂತೆಯೇ ಬ್ಯಾಟ್‌ ಎರಡು ತುಂಡಾಗಿ ಬಿದ್ದಿತ್ತು. ಆ ಎಸೆತ ಬರೋಬ್ಬರಿ 155 ಕಿ.ಮೀ ವೇಗದಲ್ಲಿ ನುಗ್ಗಿಬಂದಿತ್ತು ಎಂಬುದು ವಿಶೇಷ.

ಈ ಪಂದ್ಯದಲ್ಲಿ ಸ್ಯಾಂಟ್ ಕಿಟ್ಸ್ ತಂಡ 17.5 ಓವರ್​ನಲ್ಲೇ 181 ರನ್ ಚಚ್ಚಿ ಗೆಲುವು ಸಾಧಿಸಿತು. ಲೆವಿಸ್ 39 ಎಸೆತಗಳಲ್ಲಿ 3 ಬೌಂಡರಿ, 8 ಸಿಕ್ಸರ್ ಬಾರಿಸಿ 77 ರನ್ ಗಳಿಸಿ ಅಜೇಯರಾಗಿ ಉಳಿದರು. ಫೈನಲ್​ನಲ್ಲೂ ಸ್ಯಾಂಟ್ ಕಿಟ್ಸ್ ಆ್ಯಂಡ್ ಪೇಟ್ರಿಯಾಟ್ಸ್ ತಂಡ 3 ವಿಕೆಟ್​ಗಳಿಂದ ಗೆದ್ದು ಚೊಚ್ಚಲ ಬಾರಿಗೆ ಕೆರಿಬಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಅಲಂಕರಿಸಿತು.

Ashes: ಪ್ರತಿಷ್ಠಿತ ಆ್ಯಷಸ್ ಸರಣಿ ಆಡದಿರಲು ಇಂಗ್ಲೆಂಡ್ ಆಟಗಾರರ ಚಿಂತನೆ: ಯಾಕೆ ಗೊತ್ತಾ?

Virat Kohli: ಕೊಹ್ಲಿ ಫಾರ್ಮ್​​ಗೆ ಬಂದರೆ ಶತಕ, ದ್ವಿಶತಕವಲ್ಲ ತ್ರಿಶತಕ ಬಾರಿಸುತ್ತಾನೆ: ಇದು ಕ್ರಿಕೆಟ್ ದಿಗ್ಗಜನ ಮಾತು

(CPL 2021 Chris Gayle bat broke into two pieces in Caribbean Premier League Viral Video)

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?