ಒಂದೇ ಓವರ್​ನಲ್ಲಿ 32 ರನ್: ಸ್ಪೋಟಕ ಸೆಂಚುರಿ ಸಿಡಿಸಿದ ಶಾಯ್ ಹೋಪ್

| Updated By: ಝಾಹಿರ್ ಯೂಸುಫ್

Updated on: Sep 18, 2023 | 2:35 PM

CPL 2023: 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾಯ್ ಹೋಪ್ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಬಲಗೈ ದಾಂಡಿಗ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಪರಿಣಾಮ 15 ಓವರ್​ಗಳಿಗೂ ಮುನ್ನವೇ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಸ್ಕೋರ್ 150 ರನ್​ಗಳ ಗಡಿದಾಟಿತು.

ಒಂದೇ ಓವರ್​ನಲ್ಲಿ 32 ರನ್: ಸ್ಪೋಟಕ ಸೆಂಚುರಿ ಸಿಡಿಸಿದ ಶಾಯ್ ಹೋಪ್
Shai Hope
Follow us on

ವೆಸ್ಟ್ ಇಂಡೀಸ್​​ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್​ನ 30ನೇ ಪಂದ್ಯದಲ್ಲಿ ಶಾಯ್ ಹೋಪ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ ತಂಡದ ನಾಯಕ ರೋವ್​ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಸೈಮ್ ಅಯ್ಯುಬ್ (16) ಹಾಗೂ ಒಡಿಯನ್ ಸ್ಮಿತ್ (21) ಬೇಗನೆ ವಿಕೆಟ್ ಒಪ್ಪಿಸಿದರು.

ಶಾಯ್​ಯ ಸಿಡಿಲಬ್ಬರ:

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾಯ್ ಹೋಪ್ ಸಿಡಿಲಬ್ಬರದ ಬ್ಯಾಟಿಂಗ್​ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತು ನೀಡಿದ ಬಲಗೈ ದಾಂಡಿಗ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಪರಿಣಾಮ 15 ಓವರ್​ಗಳಿಗೂ ಮುನ್ನವೇ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಸ್ಕೋರ್ 150 ರನ್​ಗಳ ಗಡಿದಾಟಿತು.

ರಹಕೀಮ್ ಕಾರ್ನ್‌ವಾಲ್ ಎಸೆದ 16ನೇ ಓವರ್​ನಲ್ಲಿ ಅಕ್ಷರಶಃ ಅಬ್ಬರಿಸಿದ ಶಾಯ್ 4, 6, 6, 6, 4, 6 ಬಾರಿಸಿದರು. ಈ ಮೂಲಕ ಒಂದೇ ಓವರ್​ನಲ್ಲಿ 32 ರನ್ ಚಚ್ಚಿದರು. ಅಲ್ಲದೆ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.

ಅಂತಿಮವಾಗಿ 44 ಎಸೆತಗಳನ್ನು ಎದುರಿಸಿದ ಶಾಯ್ ಹೋಪ್ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್​ಗಳೊಂದಿಗೆ 106 ರನ್ ಬಾರಿಸಿದರು. ಮತ್ತೊಂದೆಡೆ ಕೆಲ್ವೊನ್ ಅಂಡರ್ಸನ್ 47 ರನ್​ಗಳ ಕಾಣಿಕೆ ನೀಡಿದರು. ಪರಿಣಾಮ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು 226 ರನ್​ ಕಲೆಹಾಕಿತು.

 

ರಾಯಲ್ಸ್​ಗೆ ಬೃಹತ್ ಟಾರ್ಗೆಟ್:

227 ರನ್​ಗಳ ಕಠಿಣ ಗುರಿ ಪಡೆದ ಬಾರ್ಬಡೋಸ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ಯಶಸ್ವಿಯಾಯಿತು. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್​ಗಳಿಗೆ ಇಮ್ರಾನ್ ತಾಹಿರ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 50 ರನ್​ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಇದಾಗ್ಯೂ ವಿಕೆಟ್ ಕೀಪರ್ ಬ್ಯಾಟರ್ ರಿವಾಲ್ಡೊ ಕ್ಲಾರ್ಕ್ 54 ರನ್​ಗಳ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಅಷ್ಟರಲ್ಲಾಗಲೇ 20 ಓವರ್​ಗಳಲ್ಲಿ 6 ವಿಕೆಟ್ ಉರುಳಿಸಿ 138 ರನ್​ಗಳಿಗೆ ಬಾರ್ಬಡೋಸ್ ತಂಡವನ್ನು ನಿಯಂತ್ರಿಸುವಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಯಶಸ್ವಿಯಾಯಿತು. ಈ ಪಂದ್ಯದಲ್ಲಿ 88 ರನ್​ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಗಯಾನಾ ಅಮೆಜಾನ್ ವಾರಿಯರ್ಸ್ ಪ್ಲೇಯಿಂಗ್ 11: ಸೈಮ್ ಅಯೂಬ್ , ಓಡಿಯನ್ ಸ್ಮಿತ್ , ಶಾಯ್ ಹೋಪ್ , ಶಿಮ್ರಾನ್ ಹೆಟ್ಮೆಯರ್ , ಆಝಮ್ ಖಾನ್ (ವಿಕೆಟ್ ಕೀಪರ್) , ಡ್ವೈನ್ ಪ್ರಿಟೋರಿಯಸ್ , ಕೆಲ್ವೊನ್ ಅಂಡರ್ಸನ್ , ಗುಡಾಕೇಶ್ ಮೋಟಿ , ರಾನ್ಸ್ ಫೋರ್ಡ್ ಬೀಟನ್ , ಇಮ್ರಾನ್ ತಾಹಿರ್ (ನಾಯಕ) , ಶಮರ್ ಜೋಸೆಫ್.

ಇದನ್ನೂ ಓದಿ: Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್

ಬಾರ್ಬಡೋಸ್ ರಾಯಲ್ಸ್​ ಪ್ಲೇಯಿಂಗ್ 11: ರಹಕೀಮ್ ಕಾರ್ನ್‌ವಾಲ್ , ಜಸ್ಟಿನ್ ಗ್ರೀವ್ಸ್ , ಲಾರಿ ಇವಾನ್ಸ್ , ಅಲಿಕ್ ಅಥಾನಾಜೆ , ರೋವ್‌ಮನ್ ಪೊವೆಲ್ (ನಾಯಕ) , ಜೇಸನ್ ಹೋಲ್ಡರ್ , ಕಾರ್ಲೋಸ್ ಬ್ರಾಥ್‌ವೈಟ್ , ರಿವಾಲ್ಡೊ ಕ್ಲಾರ್ಕ್ (ವಿಕೆಟ್ ಕೀಪರ್) , ಓಬೆಡ್ ಮೆಕಾಯ್ , ಅಕೀಮ್ ಜೋರ್ಡಾನ್ , ಕೈಸ್ ಅಹ್ಮದ್.