ಈ ಏಕೈಕ ವ್ಯಕ್ತಿಯಿಂದಾಗಿ ಇಂದು ಟೀಮ್ ಇಂಡಿಯಾ ಪರ ಆಡುತ್ತಿರುವ ಸಿರಾಜ್..!

Mohammed Siraj: ಆರ್​ಸಿಬಿಯಲ್ಲಿ ವಿರಾಟ್ ಕೊಹ್ಲಿಯಿಂದ ಸಿಕ್ಕಿದ ಬೆಂಬಲ ಮೊಹಮ್ಮದ್ ಸಿರಾಜ್ ಅವರನ್ನು ಪರಿಪೂರ್ಣ ಬೌಲರ್ ಆಗಿಸಿತು ಎಂದರೆ ತಪ್ಪಾಗಲಾರದು. ಸತತ ವೈಫಲ್ಯ ಹೊಂದಿದ್ದರೂ ಆರ್​ಸಿಬಿ ನಾಯಕ ಕಿಂಗ್ ಕೊಹ್ಲಿ ಯುವ ವೇಗಿಯ ಬೆಂಬಲಕ್ಕೆ ನಿಂತರು. ಸತತ ಪಂದ್ಯಗಳಲ್ಲಿ ಕಣಕ್ಕಿಳಿಸಿದರು. ಇಲ್ಲೂ ಕೂಡ ನಾಯಕ ಇರಿಸಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು.

ಈ ಏಕೈಕ ವ್ಯಕ್ತಿಯಿಂದಾಗಿ ಇಂದು ಟೀಮ್ ಇಂಡಿಯಾ ಪರ ಆಡುತ್ತಿರುವ ಸಿರಾಜ್..!
Bharat Arun - Siraj
Follow us
| Edited By: Zahir Yusuf

Updated on: Sep 18, 2023 | 4:18 PM

ಅದು 2015ರ ಐಪಿಎಲ್ ಸಮಯ…ಆರ್​ಸಿಬಿ ತಂಡವು ಎಸ್​ಆರ್​ಹೆಚ್ ವಿರುದ್ಧ ಪಂದ್ಯವಾಡಲು ಹೈದರಾಬಾದ್​ಗೆ ತೆರಳಿತ್ತು. ಅಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಅಭ್ಯಾಸಕ್ಕಾಗಿ ನೆಟ್​ ಬೌಲರ್​ಗಳ ಅವಶ್ಯಕತೆಯಿತ್ತು. ಹೀಗಾಗಿ ಸ್ಥಳೀಯ ಕೆಲ ಬೌಲರ್​ಗಳನ್ನು ಕರೆಸಲಾಗಿತ್ತು. ಹೀಗೆ ಬಂದು ಆರ್​ಸಿಬಿ ನೆಟ್ಸ್​ನಲ್ಲಿ ಯುವ ವೇಗಿಯೊಬ್ಬ ಕರಾರುವಾಕ್ ಬೌಲಿಂಗ್ ದಾಳಿ ನಡೆಸಿದ್ದರು.

ಅತ್ತ ಬ್ಯಾಟ್ಸ್​ಮನ್​ಗಳಿಗೆ ಅಭ್ಯಾಸಕ್ಕಿಂತ ಈ ಯುವ ವೇಗಿಯ ಎಸೆತಗಳನ್ನು ಎದುರಿಸುವುದೇ ಸವಾಲಾಗಿ ಪರಿಣಮಿಸಿತು. ಆದರೆ ಇದನ್ನೆಲ್ಲಾ ಅಂದಿನ ಆರ್​ಸಿಬಿ ತಂಡದ ಬೌಲಿಂಗ್ ಕೋಚ್ ಭರತ್ ಅರುಣ್ ಗಮನಿಸುತ್ತಿದ್ದರು. ಅಷ್ಟೇ ಅಲ್ಲದೆ ಅಂದಿನ ಸನ್​ರೈಸರ್ಸ್ ಹೈದರಾಬಾದ್ ತಂಡದ ನಿರ್ದೇಶಕರಾಗಿದ್ದ ವಿವಿಎಸ್​ ಲಕ್ಷ್ಮಣ್ ಅವರಲ್ಲಿ ಈ ಯುವ ವೇಗಿಯ ಬಗ್ಗೆ ವಿಚಾರಿಸಿದರು.

ಅದ್ಭುತ ಪ್ರತಿಭಾವಂತ ಬೌಲರ್. ಆತನೇನಾದರೂ ಹೈದರಾಬಾದ್‌ ತಂಡದ ಪರ ಆಡುತ್ತಿದ್ದಾನಾ? ಎಂದು ಕೇಳಿದರು. ಆದರೆ ಹೈದರಾಬಾದ್​ನವರೇ ಆದ ಲಕ್ಷ್ಮಣ್ ಅವರಿಗೂ ಈತನ ಪರಿಚಯ ಇರಲಿಲ್ಲ. ಆಗ ಭರತ್ ಅರುಣ್ ಹೇಳಿದ ಒಂದು ಮಾತಿದೆ, ಯಾರೇ ಆಗಲಿ…ಆತ ಅತ್ಯುತ್ತಮ ಬೌಲರ್​ ಆಗುತ್ತಾನೆ ಎಂದು…ಅಲ್ಲಿಗೆ ಈ ಕಥೆ ಮುಗೀತು.

ಇದಾದ ಬಳಿಕ 2016 ರಲ್ಲಿ ಭರತ್ ಅರುಣ್ ಅವರು ಹೈದಾರಾಬಾದ್ ತಂಡದ ಮುಖ್ಯ ಕೋಚ್ ಆಗಿ ನೇಮಕವಾದರು. ರಣಜಿ ಟ್ರೋಫಿಗಾಗಿ ಆಯ್ಕೆ ಮಾಡಲಾದ ಹೈದರಾಬಾದ್ ತಂಡದಲ್ಲಿ ವರ್ಷದ ಹಿಂದೆ ನೋಡಿದ ಯುವ ವೇಗಿ ಇದ್ದಾನಾ ಎಂದು ಭರತ್ ಅರುಣ್ ಹುಡುಕಾಡಿದರು. ಆದರೆ ಆತನ ಹೆಸರು ಕಾಣಿಸಲೇ ಇಲ್ಲ. ತಕ್ಷಣವೇ ಆತನನ್ನು ತಂಡಕ್ಕೆ ಆಯ್ಕೆ ಮಾಡುವಂತೆ ಶಿಫಾರಸ್ಸು ಮಾಡಿದರು. ಇಲ್ಲದಿದ್ದರೆ ನಾನು ಕೋಚ್  ಹುದ್ದೆಯಿಂದ ಕೆಳಗಿಳಿಯುವುದಾಗಿ ಖಂಡತುಂಡವಾಗಿ ಹೇಳಿದರು.

ಅಂದು ಭರತ್ ಅರುಣ್ ಪಟ್ಟು ಹಿಡಿದ ಪರಿಣಾಮ ಹೈದರಾಬಾದ್ ತಂಡಕ್ಕೆ ಮೊಹಮ್ಮದ್ ಸಿರಾಜ್ ಹೆಸರಿನ ಯುವ ವೇಗಿ ಆಯ್ಕೆಯಾದರು. ಅಲ್ಲದೆ ಮೊದಲ ಪಂದ್ಯದಿಂದಲೇ ಕಣಕ್ಕಿಳಿಸಿದರು. ಕೋಚ್ ಅವರ ನಿರೀಕ್ಷೆ ಹುಸಿಯಾಗಲಿಲ್ಲ. ಮೊಹಮ್ಮದ್ ಸಿರಾಜ್ ಪಂದ್ಯದಿಂದ ಪಂದ್ಯಕ್ಕೆ ಅದ್ಭುತ ಬೌಲಿಂಗ್ ಸಂಘಟಿಸಿದರು.

2016ರ ರಣಜಿ ಟ್ರೋಫಿ ಮುಗಿದಾಗ ಮೊಹಮ್ಮದ್ ಸಿರಾಜ್ ಬುಟ್ಟಿಯಲ್ಲಿ ಬರೋಬ್ಬರಿ 41 ವಿಕೆಟ್​ಗಳಿದ್ದವು. ಕೋಚ್ ಭರತ್ ಅರುಣ್ ಅವರ ನಂಬಿಕೆಯನ್ನು ಸಿರಾಜ್ ಉಳಿಸಿಕೊಂಡರು. ಅಷ್ಟೇ ಅಲ್ಲದೆ ಅವರ ಕೋಚಿಂಗ್​ನಲ್ಲೇ ತಮ್ಮ ಬೌಲಿಂಗ್ ನ್ಯೂನತೆಗಳನ್ನು ಸರಿಪಡಿಸಿಕೊಂಡರು. ಇದೇ ವೇಳೆ ನೀನು ಮುಂದೊಂದು ದಿನ ಭಾರತ ತಂಡದ ಪರ ಆಡುತ್ತೀರಿ ಎಂದು ಭರತ್ ಅರುಣ್ ವಿಶ್ವಾಸ ತುಂಬಿದರು.

ಅದಾಗಲೇ ಟೀಮ್ ಇಂಡಿಯಾ ಪರ ಆಡುವ ಕನಸು ಹೊತ್ತಿದ್ದ ಯುವ ವೇಗಿಗೆ ಭರತ್ ಅರುಣ್ ನೀಡಿದ ಆತ್ಮ ವಿಶ್ವಾಸ ಹೊಸ ಭರವಸೆ ಮೂಡಿಸಿತು. ಈ ಭರವಸೆಯೊಂದಿಗೆ ಸಿರಾಜ್ ಸತತ ಪ್ರಯತ್ನ ಆರಂಭಿಸಿದರು. ಪರಿಶ್ರಮಕ್ಕೆ ತಕ್ಕ ಫಲ ಎಂಬಂತೆ ಮೊಹಮ್ಮದ್ ಸಿರಾಜ್ ಭಾರತ ಎ ತಂಡಕ್ಕೆ ಆಯ್ಕೆಯಾದರು.

ಅಲ್ಲದೆ 2017 ರಲ್ಲಿ ಟೀಮ್ ಇಂಡಿಯಾದಿಂದಲೂ ಬುಲಾವ್ ಬಂತು. ನ್ಯೂಝಿಲೆಂಡ್ ವಿರುದ್ಧದ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದ್ದ ಸಿರಾಜ್ ಮೊದಲ ಪಂದ್ಯದಲ್ಲೇ ನಿರಾಸೆ ಮೂಡಿಸಿದರು. ಅಂದು 4 ಓವರ್​ಗಳಲ್ಲಿ ಅವರು ನೀಡಿದ್ದು ಬರೋಬ್ಬರಿ 53 ರನ್​ಗಳು.

ಕೊಹ್ಲಿ ಗರಡಿಯಲ್ಲಿ ಪಳಗಿದ ಮಿಯಾ:

ಆರ್​ಸಿಬಿಯಲ್ಲಿ ವಿರಾಟ್ ಕೊಹ್ಲಿಯಿಂದ ಸಿಕ್ಕಿದ ಬೆಂಬಲ ಮೊಹಮ್ಮದ್ ಸಿರಾಜ್ ಅವರನ್ನು ಪರಿಪೂರ್ಣ ಬೌಲರ್ ಆಗಿಸಿತು ಎಂದರೆ ತಪ್ಪಾಗಲಾರದು. ಸತತ ವೈಫಲ್ಯ ಹೊಂದಿದ್ದರೂ ಆರ್​ಸಿಬಿ ನಾಯಕ ಕಿಂಗ್ ಕೊಹ್ಲಿ ಯುವ ವೇಗಿಯ ಬೆಂಬಲಕ್ಕೆ ನಿಂತರು. ಸತತ ಪಂದ್ಯಗಳಲ್ಲಿ ಕಣಕ್ಕಿಳಿಸಿದರು. ಇಲ್ಲೂ ಕೂಡ ನಾಯಕ ಇರಿಸಿದ್ದ ನಂಬಿಕೆಯನ್ನು ಉಳಿಸಿಕೊಳ್ಳುವಲ್ಲಿ ಮೊಹಮ್ಮದ್ ಸಿರಾಜ್ ಯಶಸ್ವಿಯಾದರು.

ಕೊಹ್ಲಿ ಗರಡಿಯಲ್ಲಿ ಪಳಗಿದ ಸಿರಾಜ್ ಅತ್ಯುತ್ತಮ ಪ್ರದರ್ಶನ ನೀಡಲಾರಂಭಿಸಿದರು. ಅಲ್ಲದೆ 2019 ರಲ್ಲಿ ಏಕದಿನ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರೆ, 2020 ರಲ್ಲಿ ಟೆಸ್ಟ್​ ಕ್ರಿಕೆಟ್​ನಲ್ಲಿ ಕಾಣಿಸಿಕೊಂಡರು. ಅಷ್ಟೇ ಅಲ್ಲದೆ ಕೊಹ್ಲಿಯ ಟ್ರಂಪ್ ಆಗಿ ಬಳಕೆಯಾದರು.

ಇನ್ನು 2021 ರ ಐಪಿಎಲ್​ನಲ್ಲಿ ಎಲ್ಲರೂ ನಿಬ್ಬೆರಾಗುವಂತಹ ಪ್ರದರ್ಶನ ನೀಡಿದರು. ಅಂದು 15 ಪಂದ್ಯಗಳಲ್ಲಿ ಬೌಲಿಂಗ್ ಮಾಡಿದ್ದ ಸಿರಾಜ್ ನೀಡಿದ್ದು 353 ರನ್​ಗಳು ಮಾತ್ರ. ಅಂದರೆ ಪ್ರತಿ ಓವರ್​ಗೆ 6.78 ಸರಾಸರಿಯಲ್ಲಿ ಮಾತ್ರ ರನ್ ಬಿಟ್ಟು ಕೊಟ್ಟಿದ್ದರು. ಇದಾದ ಬಳಿಕ ಮೊಹಮ್ಮದ್ ಸಿರಾಜ್ ಹಿಂತಿರುಗಿ ನೋಡಿಲ್ಲ ಎನ್ನಬಹುದು.

ಏಕೆಂದರೆ ಈ ಬಾರಿಯ ಐಪಿಎಲ್​ನಲ್ಲಿ ಏಕಾಂಗಿಯಾಗಿ ಆರ್​ಸಿಬಿ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದರು. ಇದೀಗ ಏಷ್ಯಾಕಪ್​ನಲ್ಲೂ ಮಿಯಾ ಮ್ಯಾಜಿಕ್ ತೋರಿಸಿದ್ದಾರೆ. ಕೇವಲ 7 ಓವರ್​ಗಳಲ್ಲಿ 21 ರನ್​ಗೆ 6 ವಿಕೆಟ್​ ಉರುಳಿಸಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ: Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್

ಈ ಎಲ್ಲಾ ಸಾಧನೆಗಳ ನಡುವೆ ಮೊಹಮ್ಮದ್ ಸಿರಾಜ್ ಅವರ ಆಯ್ಕೆಗಾಗಿ 7 ವರ್ಷಗಳ ಹಿಂದೆ  ಪಟ್ಟು ಹಿಡಿದಿದ್ದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಅವರ ದೂರದೃಷ್ಟಿಯನ್ನು ಇಂದು ನೆನೆಯಲೇಬೇಕು. ಆ ವ್ಯಕ್ತಿಯ ಹಠದಿಂದಾಗಿ ಇಂದು ಭಾರತದ ಪರ ಮೊಹಮ್ಮದ್ ಸಿರಾಜ್ ಮಿಯಾ ಮ್ಯಾಜಿಕ್ ತೋರಿಸುತ್ತಿದ್ದಾರೆ.

ತಾಜಾ ಸುದ್ದಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಡ್ಯೂಪ್ ಇಲ್ಲದೆ ಫೈಟ್ ಮಾಡಿದ ನಟಿ ಅದಿತಿ: ಮಾಲಾಶ್ರೀಯೇ ಸ್ಪೂರ್ತಿ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ ಮಾಡಿದ ವ್ಯಕ್ತಿ: ಬಂಧನ
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಕಾವೇರಿ ನದಿ ನೀರಿವ ಸಮಸ್ಯೆ ಚರ್ಚಿಸಲು ಕುಮಾರಸ್ವಾಮಿ ದೆಹಲಿಗೆ ಹೋಗಿದ್ದರೇ?
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ಶಿವಕುಮಾರ್ ಲೋಕಸಭಾ ಚುನಾವಣೆಗೆ ಹಣ ಹೊಂಚುವುದರಲ್ಲಿ ಮಗ್ನ: ಕುಮಾರಸ್ವಾಮಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ದಶಕಗಳಿಂದ ಹೋರಾಡುತ್ತಾ ಪಕ್ಷವನ್ನು ಅಧಿಕಾರದಲ್ಲಿ ಕೂರಿಸಿದ್ದೇನೆ: ಡಿಕೆಶಿ
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ವಕೀಲರು ಅದ್ಭುತವಾಗಿ ಕಾವೇರಿ ನೀರಿಗಾಗಿ ವಾದಿಸುತ್ತಿದ್ದಾರೆ:ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
ಡಿಕೆ ಶಿವಕುಮಾರ್ ಪುನಃ ಜೈಲಿಗೆ ಹೋಗೋದು ನಿಶ್ಚಿತ: ಕೆ ಎಸ್ ಈಶ್ವರಪ್ಪ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
‘ಯಾವ ಕೆಲಸ ಮಾಡೋಕೂ ನಾನು ರೆಡಿ’: ನಟಿ ಪ್ರಮೀಳಾ ಜೋಶಾಯ್​ ಸುದ್ದಿಗೋಷ್ಠಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಹರಾಜಿನಲ್ಲಿ ಗಣೇಶನ ಲಡ್ಡು ರೇಟ್‌ ಕೇಳಿದ್ರೆ ನೀವು ದಂಗಾಗೋದು ಗ್ಯಾರೆಂಟಿ
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!
ಕನಸು ಸಾಕಾರಗೊಳಿಸಿದ ಪ್ರಧಾನಿ  ಮೋದಿಯವರನ್ನು ಸತ್ಕರಿಸಿದ ಮಹಿಳೆಯರು!