AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2024: ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ..!

IPL 2024: ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 12 ರಿಂದ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವು ಮೇ 12 ರಂದು ನಡೆಯುವ ಸಾಧ್ಯತೆಯಿದೆ.

IPL 2024: ಐಪಿಎಲ್​ನಲ್ಲಿ ಮಹತ್ವದ ಬದಲಾವಣೆ..!
IPL 2024
TV9 Web
| Edited By: |

Updated on: Jul 31, 2023 | 2:56 PM

Share

IPL 2024: ಇಂಡಿಯನ್ ಪ್ರೀಮಿಯರ್ ಲೀಗ್​​ ಸೀಸನ್ 17 ರ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗುವುದು ಬಹುತೇಕ ಖಚಿತವಾಗಿದೆ. ಈ ಹಿಂದೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯುತ್ತಿದ್ದ ವಿಶ್ವದ ಶ್ರೀಮಂತ ಲೀಗ್ ಈ ಬಾರಿ ಮಾರ್ಚ್​ನಲ್ಲೇ ಶುರುವಾಗಲಿದೆ. ಇದಕ್ಕೆ ಮುಖ್ಯ ಕಾರಣ ಮುಂಬರುವ ಟಿ20 ವಿಶ್ವಕಪ್​. 2024 ಟಿ20 ವಿಶ್ವಕಪ್ ಜೂನ್ 4 ರಿಂದ ಆರಂಭವಾಗಲಿದ್ದು, ಅದಕ್ಕೂ ಮುಂಚಿತವಾಗಿಯೇ ಟೂರ್ನಿಯನ್ನು ಅಂತ್ಯಗೊಳಿಸಬೇಕಾದ ಅನಿವಾರ್ಯತೆ ಬಿಸಿಸಿಐ ಮುಂದಿದೆ. ಹೀಗಾಗಿ ಮಾರ್ಚ್​ ಮೊದಲ ಅಥವಾ 2ನೇ ವಾರದಲ್ಲಿ ಐಪಿಎಲ್ ಸೀಸನ್ 17 ಶುರುವಾಗುವ ಸಾಧ್ಯತೆ ಹೆಚ್ಚಿದೆ.

ವಿದೇಶದಲ್ಲಿ ಟೂರ್ನಿ:

2024 ರಲ್ಲೇ ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಕೂಡ ನಡೆಯಲಿದೆ. ಹೀಗಾಗಿ ಈ ಬಾರಿ ಟೂರ್ನಿಯನ್ನು ವಿದೇಶದಲ್ಲಿ ಆಯೋಜಿಸಲು ಬಿಸಿಸಿಐ ಚಿಂತಿಸಿದೆ. ಏಕೆಂದರೆ 2009 ಹಾಗೂ 2014 ಲೋಕಸಭಾ ಚುನಾವಣೆ ನಿಮಿತ್ತ ಐಪಿಎಲ್​ ಅನ್ನು ವಿದೇಶದಲ್ಲಿ ಆಯೋಜಿಸಲಾಗಿತ್ತು. 2009 ರಲ್ಲಿ ಸೌತ್ ಆಫ್ರಿಕಾದಲ್ಲಿ ಟೂರ್ನಿ ನಡೆದರೆ, 2014 ರಲ್ಲಿ ಯುಎಇನಲ್ಲಿ ಕೆಲ ಪಂದ್ಯಗಳನ್ನು ಆಡಲಾಗಿತ್ತು. ಇದೀಗ ಮತ್ತೆ ಐಪಿಎಲ್ ಸಂದರ್ಭದಲ್ಲೇ ಚುನಾವಣಾ ದಿನಾಂಕ ಘೋಷಣೆಯಾದರೆ ವಿದೇಶದಲ್ಲಿ ಟೂರ್ನಿ ನಡೆಯುವುದು ಖಚಿತ ಎನ್ನಬಹುದು.

ಡಬಲ್ ಹೆಡ್ಡರ್ ಪಂದ್ಯಗಳ ಸಂಖ್ಯೆ ಹೆಚ್ಚಳ:

ಮುಂಬರುವ ಟಿ20 ವಿಶ್ವಕಪ್ ಹಿನ್ನಲೆಯಲ್ಲಿ ಕಡಿಮೆ ಅವಧಿಯಲ್ಲಿ ಐಪಿಎಲ್​ ಮುಗಿಸಬೇಕಾದ ಅನಿವಾರ್ಯತೆ ಬರಲಿದೆ. ಏಕೆಂದರೆ ಬಹುತೇಕ ರಾಷ್ಟ್ರೀಯ ತಂಡಗಳ ಆಟಗಾರರು ಟಿ20 ವಿಶ್ವಕಪ್​ ಆರಂಭಕ್ಕೆ ಒಂದೆರೆಡು ವಾರ ಮುಂಚಿತವಾಗಿ ತಮ್ಮ ದೇಶಗಳಿಗೆ ಹಿಂತಿರುಗಲಿದ್ದಾರೆ. ಹೀಗಾಗಿ ಸ್ಟಾರ್ ಆಟಗಾರರು ಅರ್ಧದಲ್ಲೇ ಐಪಿಎಲ್ ತೊರೆಯುವುದನ್ನು ತಡೆಯಲು ಬಿಸಿಸಿಐ ಪ್ಲ್ಯಾನ್ ರೂಪಿಸಲಿದೆ.

ಇದಕ್ಕಾಗಿ ಕಡಿಮೆ ಅವಧಿಯಲ್ಲಿ ಹೆಚ್ಚಿನ ಪಂದ್ಯಗಳನ್ನು ಆಯೋಜಿಸಬೇಕಾಗುತ್ತದೆ. ಅಂದರೆ ಹೆಚ್ಚಿನ ಡಬಲ್ ಹೆಡ್ಡರ್ ಪಂದ್ಯಗಳ ಮೂಲಕ ಐಪಿಎಲ್​ ಅನ್ನು ಬೇಗನೆ ಮುಗಿಸಬಹುದು.

ಇದನ್ನೂ ಓದಿ: IPL 2024: RCB ತಂಡಕ್ಕೆ ಮೇಜರ್ ಸರ್ಜರಿ: ಕೋಚ್​ಗೆ ಗೇಟ್​ ಪಾಸ್..?

ತತ್ಕಾಲಿಕ ದಿನಾಂಕ:

ಪ್ರಸ್ತುತ ಮಾಹಿತಿ ಪ್ರಕಾರ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 12 ರಿಂದ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವು ಮೇ 12 ರಂದು ನಡೆಯಲಿದೆ ಎಂದು ತಿಳಿದು ಬಂದಿದೆ. ಅಂದರೆ ಟಿ20 ವಿಶ್ವಕಪ್ ಆರಂಭಕ್ಕೂ ಮೂರು ವಾರ ಮುಂಚಿತವಾಗಿ ಐಪಿಎಲ್​ ಟೂರ್ನಿಯನ್ನು ಮುಗಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಹೀಗಾಗಿ ಇದೇ ಅವಧಿಯಲ್ಲಿ ಐಪಿಎಲ್ ಸೀಸನ್-17 ಜರುಗುವುದು ಬಹುತೇಕ ಖಚಿತ ಎನ್ನಬಹುದು.

Follow Us
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ