ಒಂದೇ ಓವರ್ನಲ್ಲಿ 32 ರನ್: ಸ್ಪೋಟಕ ಸೆಂಚುರಿ ಸಿಡಿಸಿದ ಶಾಯ್ ಹೋಪ್
CPL 2023: 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾಯ್ ಹೋಪ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಬಲಗೈ ದಾಂಡಿಗ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಪರಿಣಾಮ 15 ಓವರ್ಗಳಿಗೂ ಮುನ್ನವೇ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಸ್ಕೋರ್ 150 ರನ್ಗಳ ಗಡಿದಾಟಿತು.
ವೆಸ್ಟ್ ಇಂಡೀಸ್ನಲ್ಲಿ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ನ 30ನೇ ಪಂದ್ಯದಲ್ಲಿ ಶಾಯ್ ಹೋಪ್ ಸ್ಪೋಟಕ ಸೆಂಚುರಿ ಸಿಡಿಸಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಬಾರ್ಬಡೋಸ್ ರಾಯಲ್ಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕರಾದ ಸೈಮ್ ಅಯ್ಯುಬ್ (16) ಹಾಗೂ ಒಡಿಯನ್ ಸ್ಮಿತ್ (21) ಬೇಗನೆ ವಿಕೆಟ್ ಒಪ್ಪಿಸಿದರು.
ಶಾಯ್ಯ ಸಿಡಿಲಬ್ಬರ:
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶಾಯ್ ಹೋಪ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ ಬಲಗೈ ದಾಂಡಿಗ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ತಲುಪಿಸಿದರು. ಪರಿಣಾಮ 15 ಓವರ್ಗಳಿಗೂ ಮುನ್ನವೇ ಗಯಾನಾ ಅಮೆಜಾನ್ ವಾರಿಯರ್ಸ್ ತಂಡದ ಸ್ಕೋರ್ 150 ರನ್ಗಳ ಗಡಿದಾಟಿತು.
ರಹಕೀಮ್ ಕಾರ್ನ್‌ವಾಲ್ ಎಸೆದ 16ನೇ ಓವರ್ನಲ್ಲಿ ಅಕ್ಷರಶಃ ಅಬ್ಬರಿಸಿದ ಶಾಯ್ 4, 6, 6, 6, 4, 6 ಬಾರಿಸಿದರು. ಈ ಮೂಲಕ ಒಂದೇ ಓವರ್ನಲ್ಲಿ 32 ರನ್ ಚಚ್ಚಿದರು. ಅಲ್ಲದೆ ಕೇವಲ 41 ಎಸೆತಗಳಲ್ಲಿ ಶತಕ ಪೂರೈಸಿ ಬ್ಯಾಟ್ ಮೇಲೆಕ್ಕೆತ್ತಿದರು.
ಅಂತಿಮವಾಗಿ 44 ಎಸೆತಗಳನ್ನು ಎದುರಿಸಿದ ಶಾಯ್ ಹೋಪ್ 8 ಭರ್ಜರಿ ಸಿಕ್ಸ್ ಹಾಗೂ 9 ಫೋರ್ಗಳೊಂದಿಗೆ 106 ರನ್ ಬಾರಿಸಿದರು. ಮತ್ತೊಂದೆಡೆ ಕೆಲ್ವೊನ್ ಅಂಡರ್ಸನ್ 47 ರನ್ಗಳ ಕಾಣಿಕೆ ನೀಡಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು 226 ರನ್ ಕಲೆಹಾಕಿತು.
466646 – Hope gets to century in style!#CPL2023 #CPLonFanCode pic.twitter.com/owKZVm9LJs
— FanCode (@FanCode) September 18, 2023
ರಾಯಲ್ಸ್ಗೆ ಬೃಹತ್ ಟಾರ್ಗೆಟ್:
227 ರನ್ಗಳ ಕಠಿಣ ಗುರಿ ಪಡೆದ ಬಾರ್ಬಡೋಸ್ ರಾಯಲ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ಯಶಸ್ವಿಯಾಯಿತು. ಇನ್ನು ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಗೆ ಇಮ್ರಾನ್ ತಾಹಿರ್ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ 50 ರನ್ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದಾಗ್ಯೂ ವಿಕೆಟ್ ಕೀಪರ್ ಬ್ಯಾಟರ್ ರಿವಾಲ್ಡೊ ಕ್ಲಾರ್ಕ್ 54 ರನ್ಗಳ ಮೂಲಕ ತಂಡಕ್ಕೆ ಆಸರೆಯಾದರು. ಆದರೆ ಅಷ್ಟರಲ್ಲಾಗಲೇ 20 ಓವರ್ಗಳಲ್ಲಿ 6 ವಿಕೆಟ್ ಉರುಳಿಸಿ 138 ರನ್ಗಳಿಗೆ ಬಾರ್ಬಡೋಸ್ ತಂಡವನ್ನು ನಿಯಂತ್ರಿಸುವಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಯಶಸ್ವಿಯಾಯಿತು. ಈ ಪಂದ್ಯದಲ್ಲಿ 88 ರನ್ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗಯಾನಾ ಅಮೆಜಾನ್ ವಾರಿಯರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.
ಗಯಾನಾ ಅಮೆಜಾನ್ ವಾರಿಯರ್ಸ್ ಪ್ಲೇಯಿಂಗ್ 11: ಸೈಮ್ ಅಯೂಬ್ , ಓಡಿಯನ್ ಸ್ಮಿತ್ , ಶಾಯ್ ಹೋಪ್ , ಶಿಮ್ರಾನ್ ಹೆಟ್ಮೆಯರ್ , ಆಝಮ್ ಖಾನ್ (ವಿಕೆಟ್ ಕೀಪರ್) , ಡ್ವೈನ್ ಪ್ರಿಟೋರಿಯಸ್ , ಕೆಲ್ವೊನ್ ಅಂಡರ್ಸನ್ , ಗುಡಾಕೇಶ್ ಮೋಟಿ , ರಾನ್ಸ್ ಫೋರ್ಡ್ ಬೀಟನ್ , ಇಮ್ರಾನ್ ತಾಹಿರ್ (ನಾಯಕ) , ಶಮರ್ ಜೋಸೆಫ್.
ಇದನ್ನೂ ಓದಿ: Mohammed Siraj: 6 ವಿಕೆಟ್ 10 ದಾಖಲೆಗಳು: ಇದು ಮಿಯಾನ್ ಮ್ಯಾಜಿಕ್
ಬಾರ್ಬಡೋಸ್ ರಾಯಲ್ಸ್ ಪ್ಲೇಯಿಂಗ್ 11: ರಹಕೀಮ್ ಕಾರ್ನ್‌ವಾಲ್ , ಜಸ್ಟಿನ್ ಗ್ರೀವ್ಸ್ , ಲಾರಿ ಇವಾನ್ಸ್ , ಅಲಿಕ್ ಅಥಾನಾಜೆ , ರೋವ್‌ಮನ್ ಪೊವೆಲ್ (ನಾಯಕ) , ಜೇಸನ್ ಹೋಲ್ಡರ್ , ಕಾರ್ಲೋಸ್ ಬ್ರಾಥ್‌ವೈಟ್ , ರಿವಾಲ್ಡೊ ಕ್ಲಾರ್ಕ್ (ವಿಕೆಟ್ ಕೀಪರ್) , ಓಬೆಡ್ ಮೆಕಾಯ್ , ಅಕೀಮ್ ಜೋರ್ಡಾನ್ , ಕೈಸ್ ಅಹ್ಮದ್.