
ಕೆವಿನ್ ಪೀಟರ್ಸನ್, ಇಂಗ್ಲೆಂಡ್ ತಂಡದ ಅಸಾಧಾರಣ ಬ್ಯಾಟ್ಸ್ಮನ್ ಆಗಿದ್ದರು. ಆದರೆ ಅವರು ತಮ್ಮ ವರ್ಣರಂಜಿತ ವೈಯಕ್ತಿಕ ಜೀವನದಿಂದಾಗಿ ಚರ್ಚೆಯಲ್ಲಿದ್ದಾರೆ. ಪ್ಲೇಬಾಯ್ ಮಾಡೆಲ್ ವನೆಸ್ಸಾ ನಿಮ್ಮೊ ಕೆವಿನ್ ಗೆಳತಿಯಾಗಿದ್ದಾರೆ. ನಂತರ ಈ ಸಂಬಂಧವನ್ನು ಎಸ್‌ಎಂಎಸ್ ಮೂಲಕ ಮುರಿಯಲಾಯಿತು. ಇದರ ನಂತರ ನಿಮ್ಮೋ ಅನೇಕ ಆಘಾತಕಾರಿ ಮಾಹಿತಿಗಳನ್ನು ಬಹಿರಂಗ ಮಾಡಿದರು. ಕೆವಿನ್ ಪೀಟರ್ಸನ್ ಲೈಂಗಿಕತೆಗಾಗಿ ಹಸಿದಿದ್ದಾರೆ ಮತ್ತು ಎಲ್ಲಾ ಸಮಯದಲ್ಲೂ ಆತ ಬರಿ ಈ ಬಗ್ಗೆಯೆ ಚಿಂತಿಸುತ್ತಿರುತ್ತಾನೆ ಎಂದು ಹೇಳಿಕೊಂಡಿದ್ದರು.

ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಆಟ ಮತ್ತು ಸೌಂದರ್ಯದಿಂದಾಗಿ ವಿಶ್ವದಾದ್ಯಂತ ಪ್ರಸಿದ್ಧರಾಗಿದ್ದಾರೆ. ಅವರಿಗೆ ಮಹಿಳೆಯರ ಮೇಲೆ ತುಂಬಾ ಉತ್ಸಾಹವಿದೆ. ಆದರೆ 2000 ನೇ ಇಸವಿಯಲ್ಲಿ ಅವರು ಮಾಡಿದ ತಪ್ಪಿನಿಂದಾಗಿ ಬಾರಿ ಸುದ್ದಿಯಲ್ಲಿದ್ದರು. ಶಾಹಿದ್ ಅಫ್ರಿದಿ ಮತ್ತು ಅವರ ಸಹಚರರು ಹೋಟೆಲ್‌ನಲ್ಲಿ ಕೆಲವು ಹುಡುಗಿಯರೊಂದಿಗೆ ಸಿಕ್ಕಿಬಿದಿದ್ದರು. ತನ್ನ ಸ್ಪಷ್ಟೀಕರಣದಲ್ಲಿ, ಹುಡುಗಿಯರು ಆಟೋಗ್ರಾಫ್ ತೆಗೆದುಕೊಳ್ಳಲು ಬಂದಿದ್ದಾರೆ ಎಂದು ಅಫ್ರಿದಿ ಹೇಳಿದ್ದರು. ಆದರೆ ಈ ಕ್ಷಮೆಯನ್ನು ಯಾರೂ ಜೀರ್ಣಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿಷೇಧಿಸಿತು. ಕೀನ್ಯಾದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಲು ಸಹ ಅವರಿಗೆ ಸಾಧ್ಯವಾಗಲಿಲ್ಲ.

ವೆಸ್ಟ್ ಇಂಡೀಸ್ ಓಪನರ್ ಕ್ರಿಸ್ ಗೇಲ್ ಮಹಿಳೆಯರ ಕಾರಣದಿಂದಾಗಿ ಹಲವು ಬಾರಿ ಮುಖ್ಯಾಂಶಗಳಲ್ಲಿದ್ದಾರೆ. ಒಮ್ಮೆ ಅವರು ಮೂವರು ಬ್ರಿಟಿಷ್ ಮಹಿಳೆಯರೊಂದಿಗೆ ಹೋಟೆಲ್ನಲ್ಲಿ ಸಿಕ್ಕಿಬಿದ್ದಿದ್ದರು. ಈ ಘಟನೆ ಐಸಿಸಿ ವರ್ಲ್ಡ್ ಟಿ 20, 2012 ರ ಸಮಯದಲ್ಲಿ ಸಂಭವಿಸಿತ್ತು. ನಂತರ ಬಿಗ್ ಬ್ಯಾಷ್‌ನಲ್ಲಿ ಆಡುವಾಗ ಕ್ರಿಸ್ ಗೇಲ್ ಆಸ್ಟ್ರೇಲಿಯಾದ ಟಿವಿ ನಿರೂಪಕ ಮೆಲ್ ಮೆಕ್‌ಲಾಫ್ಲಿನ್‌ರನ್ನು ಡ್ರಿಂಕ್ಸ್ ಪಾರ್ಟಿಗೆ ಆಹ್ವಾನ ನೀಡಿದ್ದರು. ಈ ಬಗ್ಗೆ ಸಾಕಷ್ಟು ಕೋಲಾಹಲ ಉಂಟಾಯಿತು.

ದಕ್ಷಿಣ ಆಫ್ರಿಕಾದ ಅಗ್ರ ಬ್ಯಾಟ್ಸ್‌ಮನ್ ಹರ್ಷಲ್ ಗಿಬ್ಸ್ ಕೂಡ ಕುಖ್ಯಾತ ಬೀದಿಯಲ್ಲಿ ಹಾದು ಹೋಗಿದ್ದಾರೆ. ಅವರೇ ತಮ್ಮ ಪುಸ್ತಕದಲ್ಲಿ ಈ ಬಗ್ಗೆ ಬಹಿರಂಗಪಡಿಸಿದ್ದಾರೆ. 1999 ರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಗುಂಪು ಸುತ್ತಿನ ಪಂದ್ಯದ ಮೊದಲು ತಾನು ಹುಡುಗಿಯ ಜೊತೆ ಸಂಬಂಧ ಹೊಂದಿದ್ದೆ ಎಂದು ಗಿಬ್ಸ್ ಹೇಳಿದ್ದರು. ಹೋಟೆಲ್ನಲ್ಲಿ ಯುವತಿಯನ್ನು ಬೇಟಿಯಾಗಿದ್ದ ಗಿಬ್ಸ್ ರಾತ್ರಿಯಿಡಿ ಹೋಟೆಲ್ನಲ್ಲಿ ಜೊತೆಯಾಗಿ ಕಳೆದಿದ್ದರಂತೆ. ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಹುಡುಗಿ ತನ್ನ ಅದೃಷ್ಟದ ಮೋಡಿ ಎಂದು ಗಿಬ್ಸ್ ಹೇಳಿದರು. ಆದರೆ ನಂತರ ಅವರು ಸ್ಟೀವ್ ವಾ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಇದರಿಂದ ಬಾರಿ ಬೆಲೆ ತೆತ್ತಬೇಕಾಯ್ತು. ಒಮ್ಮೆ ಇಬ್ಬರು ಕ್ರಿಕೆಟಿಗರು ಮತ್ತು ಮೂವರು ಮಹಿಳೆಯರು ಒಂದು ಕೋಣೆಯಲ್ಲಿದ್ದೇವು ಎಂದು ಗಿಬ್ಸ್ ಇದೇ ರೀತಿಯ ಮತ್ತೊಂದು ಘಟನೆಯ ಬಗ್ಗೆ ಹೇಳಿದರು. ಒಂದು ಹುಡುಗಿ ಪ್ರತ್ಯೇಕವಾಗಿದ್ದರೂ ಉಳಿದ ಕೆಲಸಗಳು ಸುಗಮವಾಗಿ ನಡೆದವು ಎಂದಿದ್ದರು.

ಇಂಗ್ಲೆಂಡ್‌ನ ಖ್ಯಾತ ಆಲ್‌ರೌಂಡರ್ ಇಯಾನ್ ಬೋಥಮ್‌ರ ಲೈಂಗಿಕ ಹಗರಣವೂ ಸಾಕಷ್ಟು ಚರ್ಚೆಯಲ್ಲಿದೆ. ಮದುವೆಯ ನಂತರವೂ ಅವರು ಅನೇಕ ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು. ಅವರು ಆಸ್ಟ್ರೇಲಿಯಾದ ಪರಿಚಾರಿಕೆಯೊಂದಿಗೆ ಸಂಬಂಧ ಹೊಂದಿದ್ದರು. ಅಲ್ಲದೆ, 1980 ರಲ್ಲಿ ಮಿಸ್ ಬಾರ್ಬಡೋಸ್ ಲಿಂಡಿ ಫೀಲ್ಡ್ ಅವರೊಂದಿಗಿನ ಸಂಬಂಧವನ್ನು ಸಹ ಯಾರಿಂದಲೂ ಮರೆಮಾಡಲಾಗಿಲ್ಲ. ಈ ಸಂಬಂಧದ ಸಮಯದಲ್ಲಿ, ಒಮ್ಮೆ ಬೋಥಮ್ ಅವರ ಕೋಣೆಯ ಹಾಸಿಗೆ ಮುರಿದು ಬಿದ್ದಿದ್ದು ಬಹಿರಂಗವಾಗಿತ್ತು.

ಕೆಲವು ವರ್ಷಗಳ ಹಿಂದೆ, ಅಶ್ಲೀಲ ಸಂದೇಶಗಳು ಮತ್ತು ಚಿತ್ರಗಳನ್ನು ಕಳುಹಿಸಿದ ಪ್ರಕರಣದಲ್ಲಿ ಪಾಕಿಸ್ತಾನದ ಯುವ ಕ್ರಿಕೆಟಿಗ ಇಮಾಮ್-ಉಲ್-ಹಕ್ ಕೂಡ ಸಿಕ್ಕಿಬಿದ್ದಿದ್ದರು. ಮಹಿಳೆಯೊಬ್ಬರು ಇಮಾಮ್ ತನಗೆ ಕೊಳಕು ಸಂದೇಶಗಳನ್ನು ಕಳುಹಿಸುತ್ತಾರೆ ಎಂದು ಆರೋಪಿಸಿದ್ದರು. ಅವರು ಇಮಾಮ್ ಕಳುಹಿಸಿದ ಚಿತ್ರಗಳು ಮತ್ತು ಸಂದೇಶಗಳನ್ನು ಸಾರ್ವಜನಿಕಗೊಳಿಸಿದರು. ಆದರೆ, ನಂತರ ಈ ವಿಷಯವನ್ನು ಮರೆಮಾಚಲಾಯಿತು.

ಇಂಗ್ಲೆಂಡ್‌ನ ಮಾಜಿ ನಾಯಕ ಮೈಕ್ ಗ್ಯಾಟಿಂಗ್ ಕೂಡ ಇಂತಹ ಅಪಚಾರದಿಂದ ಪಾರಾಗಲು ಸಾಧ್ಯವಾಗಲಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸಮಯದಲ್ಲಿ, ಲೂಯಿಸ್ ಶಿಪ್ಮನ್ ಎಂಬ ಬಾರ್ಗರ್ಲ್ ಅವರ ಕೋಣೆಯಲ್ಲಿ ಕಾಣಿಸಿಕೊಂಡಿದ್ದಳು. ಆದಾಗ್ಯೂ, ಗ್ಯಾಟಿಂಗ್ ಅವಳೊಂದಿಗೆ ಸಂಬಂಧ ಹೊಂದಿರುವುದನ್ನು ನಿರಾಕರಿಸಿದರು. ಆದರೆ ಯಾರೂ ಅವರ ಮಾತನ್ನು ಕೇಳಲು ಸಿದ್ದರಿರಲಿಲ್ಲ.

ಆಸ್ಟ್ರೇಲಿಯಾದ ಖ್ಯಾತ ಸ್ಪಿನ್ನರ್ ಶೇನ್ ವಾರ್ನ್ ಅನೇಕ ಬಾರಿ ಲೈಂಗಿಕ ಹಗರಣದಲ್ಲಿ ಸಿಲುಕಿಕೊಂಡಿದ್ದಾರೆ. ಅವರ ವೃತ್ತಿಜೀವನದ ಉತ್ಕರ್ಷದ ದಿನಗಳಲ್ಲಿ, ಈ ಕಾರಣದಿಂದಾಗಿ ಅವರು ಸಾಕಷ್ಟು ಕುಖ್ಯಾತಿಯನ್ನು ಪಡೆದಿದ್ದರು. ನಂತರ, ಮಹಿಳೆಯರೊಂದಿಗೆ ನಿರಂತರ ಅಕ್ರಮ ಸಂಬಂಧದಿಂದಾಗಿ ಅವರು ವಿಚ್ಚೇದನ ಪಡೆಯಬೇಕಾಯ್ತು. ಶೇನ್ ವಾರ್ನ್ ಒಮ್ಮೆ ಇಬ್ಬರು ಮಹಿಳೆಯರೊಂದಿಗೆ ಇಂಗ್ಲೆಂಡ್‌ನ ಹೋಟೆಲ್‌ನಲ್ಲಿ ಸಿಕ್ಕಿಬಿದ್ದಿದ್ದರು. ಅವರ ನೆರೆಹೊರೆಯವರ ದೂರಿನ ನಂತರ ಈ ವಿಚಾರ ಬಹಿರಂಗವಾಗಿತ್ತು. ಮತ್ತೊಮ್ಮೆ ಅವರು ಮೆಲ್ಬೋರ್ನ್ನಲ್ಲಿ ಸ್ಟ್ರಿಪ್ಪರ್ನೊಂದಿಗೆ ಸಿಕ್ಕಿಬಿದ್ದಿದ್ದರು. ಶೇನ್ ವಾರ್ನ್ ಬ್ರಿಟಿಷ್ ನರ್ಸ್‌ಗೆ ಕಿರುಕುಳ ನೀಡಿದ ಪ್ರಕರಣವೂ ಇತ್ತು.