Crime News: ನೀನು ಮಟನ್ ತಿಂದಿದ್ದರಿಂದ ಭಾರತ ಸೋತಿತು ಎಂದ ತಮ್ಮನನ್ನೇ ಕೊಂದ ಅಣ್ಣ

|

Updated on: Nov 21, 2023 | 2:17 PM

ICC ODI World Cup 2023: ಭಾರತ ಸೋತಿದ್ದರಿಂದ ಹಿರಿಯ ಮಗ ತನ್ನ ತಂದೆ ಮತ್ತು ಕಿರಿಯ ಸಹೋದರನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಿರಿಯ ಸಹೋದರ ಮೃತಪಟ್ಟಿದ್ದಾನೆ. ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Crime News: ನೀನು ಮಟನ್ ತಿಂದಿದ್ದರಿಂದ ಭಾರತ ಸೋತಿತು ಎಂದ ತಮ್ಮನನ್ನೇ ಕೊಂದ ಅಣ್ಣ
amravati crime
Follow us on

ಅಮರಾವತಿ | ನವೆಂಬರ್ 21, 2023 : ಭಾನುವಾರ (ನ. 19) ಭಾರತೀಯ ಕ್ರಿಕೆಟ್ ತಂಡ (Team India) ಮತ್ತು ಅಭಿಮಾನಿಗಳಿಗೆ ಅತ್ಯಂತ ಕೆಟ್ಟ ಮತ್ತು ಬೇಸರದ ದಿನ. 2023 ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಭಾರತವನ್ನು ಸೋಲಿಸಿ ಆರನೇ ಬಾರಿಗೆ ವಿಶ್ವಕಪ್ ಟ್ರೋಫಿಯನ್ನು ಗೆದ್ದುಕೊಂಡಿತು. ವಿಶ್ವಕಪ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಭಾರತದ ಸೋಲು ರೋಹಿತ್ ಪಡೆಗೆ ಮಾತ್ರವಲ್ಲದೆ ಪ್ರತಿಯೊಬ್ಬ ಅಭಿಮಾನಿಗೂ ಬೇಸರ ತರಿಸಿದೆ. ಭಾರತ ತಂಡವು ವಿಶ್ವಕಪ್​ ಫೈನಲ್​ನಲ್ಲಿ ಸೋತಿದ್ದಕ್ಕೆ ಮನನೊಂದು ಇಬ್ಬರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ. ಇದರ ನಡುವೆ ಬೆಚ್ಚೆಬೀಳಿಸುವಂತಹ ಘಟನೆಯೊಂದು ಅಮರಾವತಿಯಲ್ಲಿ ನಡೆದಿದೆ.

ಭಾರತ ಸೋತಿದ್ದರಿಂದ ಹಿರಿಯ ಮಗ ತನ್ನ ತಂದೆ ಮತ್ತು ಕಿರಿಯ ಸಹೋದರನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಿರಿಯ ಸಹೋದರ ಮೃತಪಟ್ಟಿದ್ದಾನೆ. ತಂದೆಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಆಘಾತಕಾರಿ ಘಟನೆ ಎಲ್ಲೆಡೆ ಸಂಚಲನ ಮೂಡಿಸಿದೆ. ಬದನೇರಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಅಮರಾವತಿ ಸಮೀಪದ ಅಂಜನಗಾಂವ್ ಬರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನ ಹೆಸರು ಅಂಕಿತ್ ಇಂಗೋಲ್ (28) ಮತ್ತು ಆರೋಪಿಯ ಹೆಸರು ಪ್ರವೀಣ್ ಇಂಗೋಲ್ (32). ತಂದೆಯ ಹೆಸರು ರಮೇಶ ಇಂಗೋಳೆ.

ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಿರಿಯರಿಗೆ ರೆಸ್ಟ್, ಹೊಸ ಮುಖಗಳಿಗೆ ಮಣೆ

ಇದನ್ನೂ ಓದಿ
ಕೊನೆಗೂ ಸಿಕ್ತು ಮೋದಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ಗೆ ಬಂದ ವಿಡಿಯೋ
ಸೋಲಿನ ನಂತರ ರೋಹಿತ್ ಪತ್ನಿಯ ಸಹೋದರನ ಜೊತೆ ಸಂಬಂಧ ಕೈಬಿಟ್ಟ ಕೊಹ್ಲಿ
ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಯಾವಾಗ, ಎಲ್ಲಿ ನಡೆಯಲಿದೆ ಗೊತ್ತೇ?
ಮುಂಬೈ ತಲುಪಿದ ಕೊಹ್ಲಿ-ರೋಹಿತ್: ಕ್ಯಾಮೆರಾ ಕಂಡು ಗರಂ ಅನುಷ್ಕಾ

ಭಾನುವಾರ ರಾತ್ರಿ, ಮೂವರೂ ಮನೆಯಲ್ಲಿ ಕುಳಿತು ವಿಶ್ವಕಪ್ ಫೈನಲ್ ಪಂದ್ಯ ವೀಕ್ಷಿಸುತ್ತಿದ್ದರು. ಜೊತೆಗೆ ಮೂವರೂ ಮದ್ಯ ಸೇವಿಸಿದ್ದರು. ಭಾರತ ಸೋಲುತ್ತಿದ್ದಂತೆ ಅಣ್ಣ-ತಮ್ಮಂದಿನ ನಡುವೆ ಜಗಳ ಶುರುವಾಗಿದೆ. ನೀನು ಕುರಿ ಮಾಂಸ ತಿಂದಿದ್ದರಿಂದ ಭಾರತ ಸೋತಿತು ಎಂದು ಪ್ರವೀಣ್, ಆರೋಪಿಯನ್ನು ನಿಂದಿಸಿದ್ದಾನೆ. ಇದರಿಂದ ಕುಪಿತಗೊಂಡ ಆರೋಪಿ ಅಲ್ಲೆ ಇದ್ದ ಕಬ್ಬಿಣದ ಸರಳು ತಂದು ಸಹೋದರ ಅಂಕಿತ್ ಮೇಲೆ ಹಲ್ಲೆ ನಡೆಸಿದ್ದಾನೆ. ತಡೆಯಲು ಬಂದ ತಂದೆಯನ್ನೂ ಹೊಡೆದಿದ್ದಾನೆ.

ಈ ದಾಳಿಯಲ್ಲಿ ಅಂಕಿತ್ ಗಂಭೀರವಾಗಿ ಗಾಯಗೊಂಡು ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ತಂದೆ ರಮೇಶ್ ಕೂಡ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಂದೆಯ ದೂರಿನ ಮೇರೆಗೆ ಬದನೇರಾ ಪೊಲೀಸರು ಆರೋಪಿ ಪ್ರವೀಣ್ ವಿರುದ್ಧ ಕಲಂ 302, 307 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:13 pm, Tue, 21 November 23