Team India Dressing Room: ಕೊನೆಗೂ ಸಿಕ್ತು ಮೋದಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ಗೆ ಬಂದ ವಿಡಿಯೋ: ಇಲ್ಲಿದೆ ನೋಡಿ

PM Narendra Modi in Team India dressing Room Video: ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಟೀಮ್ ಇಂಡಿಯಾದ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ಕೊಟ್ಟ ಸಂಪೂರ್ಣ ವಿಡಿಯೋ ರಿಲೀಸ್ ಆಗಿದೆ. ಇಲ್ಲಿ ಮೋದಿ ಅವರು ಕೊಹ್ಲಿ-ರೋಹಿತ್ ಕೈಹಿಡಿದು ನೊಂದ ಮನಕ್ಕೆ ಸಾಂತ್ವಾನ ಹೇಳಿದ್ದಾರೆ.

Team India Dressing Room: ಕೊನೆಗೂ ಸಿಕ್ತು ಮೋದಿ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್​ಗೆ ಬಂದ ವಿಡಿಯೋ: ಇಲ್ಲಿದೆ ನೋಡಿ
PM Modi in India Dressing Room Video
Follow us
|

Updated on:Nov 21, 2023 | 10:51 AM

ಭಾನುವಾರ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಏಕದಿನ ವಿಶ್ವಕಪ್ 2023 ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಮ್ ಇಂಡಿಯಾ ಡ್ರೆಸ್ಸಿಂಗ್ ಕೋಣೆಗೆ ಭೇಟಿ ನೀಡಿದ ಫೋಟೋ ಸೋಮವಾರ ಸಖತ್ ವೈರಲ್ ಆಗಿತ್ತು. ಇದೀಗ ಮೋದಿ ಅವರು ನಾಯಕ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರ ಜೊತೆ ಮಾತುಕತೆ ನಡೆಸುತ್ತಿರುವ ವಿಡಿಯೋ ಬಿಡುಗಡೆ ಆಗಿದ್ದು, ಇದುಕೂಡ ಎಲ್ಲೆಡೆ ಹರಿದಾಡುತ್ತಿದೆ.

ಸೋಮವಾರ, ವೇಗಿ ಮೊಹಮ್ಮದ್ ಶಮಿ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜಾ ಅವರು ಭಾರತದ ಡ್ರೆಸ್ಸಿಂಗ್ ಕೋಣೆಯಲ್ಲಿ ಪ್ರಧಾನಿ ಮೋದಿಯವರ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದರು. ಸೋಲಿನ ನಂತರ ಅವರು ಆಟಗಾರರನ್ನು ಹೇಗೆ ಸಮಾಧಾನ ಪಡಿಸಿದರು ಎಂಬುದನ್ನು ಹೇಳಿದ್ದರು. ಇದೀಗ ಮೋದಿ ಭೇಟಿಯ ಸಂಪೂರ್ಣ ವಿಡಿಯೋ ರಿಲೀಸ್ ಆಗಿದೆ. ಇಲ್ಲಿ ಮೋದಿ ಅವರು ಕೊಹ್ಲಿ-ರೋಹಿತ್ ಕೈಹಿಡಿದು ನೊಂದ ಮನಕ್ಕೆ ಸಾಂತ್ವಾನ ಹೇಳಿದ್ದಾರೆ.

ಇದನ್ನೂ ಓದಿ
Image
ಸೋಲಿನ ನಂತರ ರೋಹಿತ್ ಪತ್ನಿಯ ಸಹೋದರನ ಜೊತೆ ಸಂಬಂಧ ಕೈಬಿಟ್ಟ ಕೊಹ್ಲಿ
Image
ಮುಂದಿನ ಐಸಿಸಿ ಏಕದಿನ ವಿಶ್ವಕಪ್ ಯಾವಾಗ, ಎಲ್ಲಿ ನಡೆಯಲಿದೆ ಗೊತ್ತೇ?
Image
ಮುಂಬೈ ತಲುಪಿದ ಕೊಹ್ಲಿ-ರೋಹಿತ್: ಕ್ಯಾಮೆರಾ ಕಂಡು ಗರಂ ಅನುಷ್ಕಾ
Image
IND vs AUS ಟಿ20 ಸರಣಿ ಯಾವಾಗ ಆರಂಭ?, ಎಷ್ಟು ಗಂಟೆಗೆ?, ನೇರಪ್ರಸಾರ?

ಭಾರತದ ಡ್ರೆಸ್ಸಿಂಗ್ ರೂಮ್​ಗೆ ಭೇಟಿ ಕೊಟ್ಟ ಮೋದಿ ವಿಡಿಯೋ:

ಫೈನಲ್ ಪಂದ್ಯದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಆಟಗಾರರ ಡ್ರೆಸ್ಸಿಂಗ್ ದಿಢೀರ್ ಕೋಣೆಗೆ ಭೇಟಿ ನೀಡಿದ್ದರು. ಟೂರ್ನಿಯಲ್ಲಿ ತಂಡದ ಪ್ರದರ್ಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಬೌಲರ್ ಶಮಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ನಂತರ ಎಕ್ಸ್ ನಲ್ಲಿ ಭಾವನಾತ್ಮಕ ಟ್ವೀಟ್ ಹಂಚಿಕೊಂಡಿದ್ದಾರೆ.

IND vs AUS T20I Series: ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಪ್ರಕಟ: ಹಿರಿಯರಿಗೆ ರೆಸ್ಟ್, ಹೊಸ ಮುಖಗಳಿಗೆ ಮಣೆ

”ದುರದೃಷ್ಟವಶಾತ್ ಭಾನುವಾರ ನಮ್ಮ ದಿನವಾಗಿರಲಿಲ್ಲ. ಟೂರ್ನಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಭಾರತೀಯರಿಗೆ ಧನ್ಯವಾದ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಧನ್ಯವಾದ ತಿಳಿಸುತ್ತೇನೆ. ಅವರು ನಮ್ಮ ಡ್ರೆಸ್ಸಿಂಗ್ ರೂಮಿಗೆ ಬಂದು ತಮ್ಮ ಮಾತುಗಳಿಂದ ನಮಗೆ ಸ್ಫೂರ್ತಿ ತುಂಬಿದರು. ನಾವು ಖಂಡಿತವಾಗಿಯೂ ಕಮ್​ಬ್ಯಾಕ್ ಮಾಡುತ್ತೇವೆ,” ಎಂದು ಶಮಿ ಬರೆದಿದ್ದಾರೆ.

ಆಟಗಾರರನ್ನು ಭೇಟಿ ಮಾಡಿದ ನಂತರ ಪ್ರಧಾನಿ ಮೋದಿ ಕೂಡ ಎಕ್ಸ್ ನಲ್ಲಿ ಟ್ವೀಟ್ ಮಾಡಿದ್ದಾರೆ. ”ಆತ್ಮೀಯ ಟೀಮ್ ಇಂಡಿಯಾ.. ಈ ವಿಶ್ವಕಪ್‌ನಲ್ಲಿ ನಿಮ್ಮ ಪ್ರತಿಭೆ ಮತ್ತು ಸಂಕಲ್ಪ ಗಮನಾರ್ಹವಾಗಿದೆ. ನೀವು ತುಂಬಾ ಉತ್ಸಾಹದಿಂದ ಆಡಿದ್ದೀರಿ. ನಿಮ್ಮ ಆಟದ ಬಗ್ಗೆ ದೇಶಕ್ಕೆ ಹೆಮ್ಮೆ ತಂದರು. ನಾವು ಇಂದು ಮಾತ್ರವಲ್ಲ… ಸದಾ ನಿಮ್ಮೊಂದಿಗೆ ಇರುತ್ತೇವೆ,” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 10:49 am, Tue, 21 November 23

ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಕೊತ್ವಾಲನ ಶಿಷ್ಯರು ವಿಧಾನಸೌಧಕ್ಕೆ ಬಂದ್ಮೇಲೆ ಕುಲಗೆಟ್ಟಿದ್ದು: ಹೆಚ್​ಡಿಕೆ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಸ್ಯಾಮ್​ಸಂಗ್ ಎಲೆಕ್ಟ್ರಾನಿಕ್ಸ್ ಹಬ್ಬದ ವಿಶೇಷ ಮಾರಾಟ ಕೊಡುಗೆ ಆರಂಭ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ
ಶಿವಣ್ಣ-ಉಪ್ಪಿ ನಟನೆಯ ‘45’ ಚಿತ್ರದ ಸುದ್ದಿಗೋಷ್ಠಿ ಲೈವ್ ನೋಡಿ