MS Dhoni: ಐಪಿಎಲ್​ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಗೆ ಮರುಗಿದ ಸಿಎಸ್​​ಕೆ ಮಾಲೀಕ: ಎನ್. ಶ್ರೀನಿವಾಸನ್ ಭಾವುಕ ಪೋಸ್ಟ್​

ಇಂಡಿಯನ್ ಪ್ರೀಮಿಯರ್ ಲೀಗ್‌ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಸಿಎಸ್‌ಕೆ ಮಾಲೀಕ ಎನ್. ಶ್ರೀನಿವಾಸನ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಧೋನಿ ಯಾವಾಗಲೂ ನಮ್ಮ ಗುರುತಿನ ಭಾಗವಾಗಿರುತ್ತಾರೆ. ಸಿಎಸ್‌ಕೆ ಎಂದೆಂದಿಗೂ ಅವರ ಮನೆಯೇ ಆಗಿರುತ್ತದೆ ಎಂದವರು ತಿಳಿಸಿದ್ದಾರೆ. ಆಟಗಾರನಾಗಿ ನಿವೃತ್ತಿ ಘೋಷಿಸಿದ ತಕ್ಷಣವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಧೋನಿಯನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಿದೆ.

MS Dhoni: ಐಪಿಎಲ್​ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಗೆ ಮರುಗಿದ ಸಿಎಸ್​​ಕೆ ಮಾಲೀಕ: ಎನ್. ಶ್ರೀನಿವಾಸನ್ ಭಾವುಕ ಪೋಸ್ಟ್​
ಐಪಿಎಲ್​ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿಗೆ ಮರುಗಿದ ಸಿಎಸ್​​ಕೆ ಮಾಲೀಕ
Edited By:

Updated on: Nov 17, 2026 | 3:54 PM

ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಮಾಲೀಕ ಎನ್. ಶ್ರೀನಿವಾಸನ್ ಭಾವುಕ ಪೋಸ್ಟ್​​ ಮಾಡಿದ್ದಾರೆ. ಎಂ.ಎಸ್. ಧೋನಿ ಇಲ್ಲದೆ ಸಿಎಸ್‌ಕೆ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಸುಮಾರು ಎರಡು ದಶಕಗಳಿಂದ ನಾವು ಒಟ್ಟಾಗಿ ನಡೆದು ಬೆಳೆದಿದ್ದೇವೆ. ಗೆಲುವುಗಳು, ಸೋಲುಗಳು ಹಾಗೂ ಏರಿಳಿತಗಳ ಸಂದರ್ಭದಲ್ಲೂ ಪರಸ್ಪರ ಜೊತೆಯಾಗಿದ್ದೇವೆ. ನಮ್ಮ ಸಂಬಂಧ ಇಷ್ಟೊಂದು ಗಟ್ಟಿಯಾಗಿರಲು ಒಂದೇ ಕಾರಣವಿದೆ. ನಾವು ಪರಸ್ಪರರ ಉದ್ದೇಶಗಳನ್ನು ಎಂದಿಗೂ ಪ್ರಶ್ನಿಸುವುದಿಲ್ಲ. ನಮ್ಮ ನಡುವಿನ ಆ ನಂಬಿಕೆಯೇ ಈ ಪಯಣ ಸಾಧ್ಯವಾಗಿಸಿದೆ ಎಂದಿದ್ದಾರೆ.

‘ಸಿಎಸ್‌ಕೆ ಎಂದೆಂದಿಗೂ ಧೋನಿಯ ಮನೆ’

2008ರಲ್ಲಿ ಧೋನಿ ಸಿಎಸ್‌ಕೆಯ ಭಾಗವಾಗಲೇಬೇಕು ಎಂದು ನಾನೇ ಪಟ್ಟು ಹಿಡಿದಿದ್ದೆ. ಅದು ನಾನು ತೆಗೆದುಕೊಂಡ ಅತ್ಯುತ್ತಮ ನಿರ್ಧಾರವಾಗಿತ್ತು ಎಂಬುದು ಈಗ ಸಾಬೀತಾಗಿದೆ. ಅದಕ್ಕೆ ಕಾರಣ ಫ್ರಾಂಚೈಸಿಗಾಗಿ ಅವರು ಸಾಧಿಸಿದ ಯಶಸ್ಸು ಮಾತ್ರವಲ್ಲ, ಅವರು ಎಂತಹ ವ್ಯಕ್ತಿ ಎಂಬುದೂ ಕೂಡ. ಧೋನಿ ಯಾವಾಗಲೂ ನಮ್ಮ ಗುರುತಿನ ಭಾಗವಾಗಿರುತ್ತಾರೆ. ಸಿಎಸ್‌ಕೆ ಎಂದೆಂದಿಗೂ ಅವರ ಮನೆಯೇ ಆಗಿರುತ್ತದೆ ಎಂದವರು ತಿಳಿಸಿದ್ದಾರೆ. ಆಟಗಾರನಾಗಿ ನಿವೃತ್ತಿ ಘೋಷಿಸಿದ ತಕ್ಷಣವೇ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಧೋನಿಯನ್ನು ತಂಡದ ಮೆಂಟರ್ ಆಗಿ ನೇಮಕ ಮಾಡಿದೆ ಎನ್ನುವುದು ಕೂಡ ಇಲ್ಲಿ ಗಮನಾರ್ಹ.

ಇದನ್ನೂ ಓದಿ: IPL 2027: ಐಪಿಎಲ್​ನಿಂದ ಮಹೇಂದ್ರ ಸಿಂಗ್ ಧೋನಿ ನಿವೃತ್ತಿ!

‘ಎಂದೆಂದಿಗೂ ಉಳಿಯುವ ಬಾಂಧವ್ಯ’

ಇನ್ನು ಐಪಿಎಲ್​​ನಿಂದ ಧೋನಿ ನಿವೃತ್ತಿ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಕೂಡ ತನ್ನ ಎಕ್ಸ್​​ ಖಾತೆಯಲ್ಲಿ ಮಹತ್ವದ ಮಾಹಿತಿ ಹಂಚಿಕೊಂಡಿದೆ. ಅಸಂಖ್ಯಾತ ಗೆಲುವುಗಳು, ಸವಾಲಿನ ಸಮಯಗಳು ಹಾಗೂ ಎಂದೆಂದಿಗೂ ನಮ್ಮ ಹೃದಯದಲ್ಲಿ ಉಳಿಯುವ ನೆನಪುಗಳೊಂದಿಗೆ, ಆರಂಭದಿಂದಲೂ ಎಂ.ಎಸ್. ಧೋನಿ ಅವರು ನಮ್ಮ ಪಯಣದ ಪ್ರಮುಖ ಭಾಗವಾಗಿದ್ದಾರೆ. ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸುವುದರಿಂದ ಹಿಡಿದು ಮುಂದಿನ ಪೀಳಿಗೆಯ ಸೂಪರ್ ಕಿಂಗ್ಸ್ ಆಟಗಾರರಿಗೆ ಮಾರ್ಗದರ್ಶನ ನೀಡುವವರೆಗೆ, ಅವರು ಯಾವಾಗಲೂ ನಮ್ಮ ಗುರುತಿನ ಭಾಗವಾಗಿರುತ್ತಾರೆ. ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೆಂಟರ್ (ಮಾರ್ಗದರ್ಶಕ) ಆಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:52 pm, Tue, 17 November 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತರಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದಾರೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us