ಐಪಿಎಲ್ ಇತಿಹಾಸದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಒಮ್ಮೆಯೂ ಪ್ರಶಸ್ತಿಯನ್ನು ಗೆಲ್ಲದೇ ಇರಬಹುದು, ಆದರೆ ಇದು ಅವರ ಅಭಿಮಾನಿಗಳ ಪ್ರೀತಿಯನ್ನು ಎಂದಿಗೂ ಕಡಿಮೆ ಮಾಡಿಲ್ಲ. ಅವರು ಪ್ರತಿ ಕ್ರೀಡಾ ಋತುವಿನಲ್ಲಿ ತಮ್ಮ ತಂಡದ ಗೆಲುವನ್ನು ನಿರೀಕ್ಷಿಸುತ್ತಾ ಕುಳಿತುಕೊಳ್ಳುತ್ತಾರೆ ಮತ್ತು ಅದೇ ಉತ್ಸಾಹದಿಂದ ತಂಡವನ್ನು ಹುರಿದುಂಬಿಸುತ್ತಾರೆ. ಅದು ಬೆಂಗಳೂರಿನ್ನಲಾಗಲಿ ಅಥವಾ ಮುಂಬೈಯಾಗಲಿ ಅಥವಾ ದುಬೈ ಕ್ರೀಡಾಂಗಣವಾಗಲಿ, ಆರ್‌ಸಿಬಿ ಅಭಿಮಾನಿಗಳು ತಮ್ಮ ತಂಡವನ್ನು ಹುರಿದುಂಬಿಸಲು ಎಲ್ಲಿಗೆ ಬೇಕಾದರೂ ಹೋಗುತ್ತಾರೆ.
ಕೊರೊನಾದಿಂದ ಮುಂದೂಡಲ್ಪಟ್ಟ ನಂತರ, ಈಗ ಎರಡನೇ ಹಂತದ ಐಪಿಎಲ್ 2021 ಯುಎಇಯಲ್ಲಿ ನಡೆಯುತ್ತಿದೆ. ಇಲ್ಲಿ ಅಭಿಮಾನಿಗಳಿಗೆ ಕ್ರೀಡಾಂಗಣಕ್ಕೆ ಬರಲು ಅವಕಾಶ ನೀಡಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಅಭಿಮಾನಿಗಳು ತಮ್ಮ ನೆಚ್ಚಿನ ತಂಡವನ್ನು ಹುರಿದುಂಬಿಸಲು ಕ್ರೀಡಾಂಗಣಕ್ಕೆ ಬರುತ್ತಾರೆ. ಶುಕ್ರವಾರ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಒಂದು ವಿಚಿತ್ರ ಹಾಗೂ ತಮಾಷದಾಯಕ ಘಟನೆಯೊಂದು ಸಂಭವಿಸಿದೆ. ಇದು ಆರ್‌ಸಿಬಿಯ ಅಭಿಮಾನಿಗಳು ಅತ್ಯಂತ ನಿಷ್ಠಾವಂತರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಪತ್ನಿಗೆ ಹೆದರಿದ ಪತಿ
ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಶುಕ್ರವಾರ ನಡೆಯಿತು. ಆ ಪಂದ್ಯದ ಸಮಯದಲ್ಲಿ, ಕೈಯಲ್ಲಿ ಪ್ಲೆಕಾರ್ಡ್ ಹಿಡಿದಿದ್ದ ವ್ಯಕ್ತಿಯ ಮೇಲೆ ಕ್ಯಾಮೆರಾದ ಕಣ್ಣು ಬಿದ್ದಿತು. ಆ ವ್ಯಕ್ತಿ ಆರ್‌ಸಿಬಿ ಟಿ-ಶರ್ಟ್ ಧರಿಸಿದ್ದ. ಆತ ಹಿಡಿದಿದ್ದ ಪ್ಲೆಕಾರ್ಡ್‌ನಲ್ಲಿ, ಚೆನ್ನೈ ಸೂಪರ್ ಕಿಂಗ್ಸ್‌ನ ಟೀ ಶರ್ಟ್ ಧರಿಸಲು ನನ್ನ ಪತ್ನಿ ನನಗೆ ಅವಕಾಶ ನೀಡುತ್ತಿಲ್ಲ ಎಂದು ಬರೆದಿತ್ತು. ಇದರ ಮೂಲ ಅರ್ಥವೆಂದರೆ, ಆತನ ಪತ್ನಿ ಆರ್‌ಸಿಬಿಯ ಅಭಿಮಾನಿ ಇರಬೇಕು. ಅದಕ್ಕಾಗಿಯೇ ಆಕೆ ತನ್ನ ಪತಿಗೆ ಆರ್‌ಸಿಬಿಯ ಟಿ-ಶರ್ಟ್ ಧರಿಸಬೇಕು ಎಂದು ತಾಕೀತು ಮಾಡಿದ್ದಾಳೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಈಗ ಈ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ಆ ಚಿತ್ರಕ್ಕೆ, ಪ್ರೀತಿಗೆ ಯಾವುದೇ ಬಣ್ಣ ಕಾಣುವುದಿಲ್ಲ ಎಂದು ತಲೆ ಬರಹ ನೀಡಿದೆ. ಈ ಫೋಟೋದಿಂದಾಗಿ ಈ ದಂಪತಿಗಳು ಸಖತ್ ಚರ್ಚೆಯಲ್ಲಿದ್ದಾರೆ. ಇದರ ಜೊತೆಗೆ ಆರ್‌ಸಿಬಿಯ ಅಭಿಮಾನಿಗಳ ನಿಷ್ಠೆ ಮತ್ತೊಮ್ಮೆ ಸಾಭೀತಾದಂತ್ತಾಗಿದೆ.
Love is colour blind ❤️?#RCBvCSK #WhistlePodu #Yellove ? pic.twitter.com/C7oMPEJjfI
— Chennai Super Kings – Mask P?du Whistle P?du! (@ChennaiIPL) September 25, 2021
ಚೆನ್ನೈ ಸೂಪರ್ ಕಿಂಗ್ಸ್ ಪಂದ್ಯವನ್ನು ಗೆದ್ದಿತು
ಈ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಆರು ವಿಕೆಟ್‌ಗಳಿಂದ ಆರ್‌ಸಿಬಿಯನ್ನು ಸೋಲಿಸಿತು. ರಿತುರಾಜ್ ಗಾಯಕವಾಡ್ (38) ಮತ್ತು ಫಾಫ್ ಡು ಪ್ಲೆಸಿಸ್ (31) ಭರ್ಜರಿ ಅರ್ಧಶತಕ ಪಾಲುದಾರಿಕೆ ಮತ್ತು ಡ್ವೇನ್ ಬ್ರಾವೊ (3 ವಿಕೆಟ್) ಅವರ ಅತ್ಯುತ್ತಮ ಬೌಲಿಂಗ್ ನೆರವಿನಿಂದ ಐಪಿಎಲ್ 2021 ರ 35 ನೇ ಪಂದ್ಯದಲ್ಲಿ ಚೆನ್ನೈ ತಂಡವನ್ನು 6 ವಿಕೆಟ್ ಗಳಿಂದ ಸೋಲಿಸಿತು. ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು. ಪ್ರತಿಯಾಗಿ, ಚೆನ್ನೈ ಈ ಪಂದ್ಯವನ್ನು 11 ಎಸೆತಗಳು ಬಾಕಿ ಇರುವಂತೆ ಗೆದ್ದಿತು. ಈ ಗೆಲುವಿನೊಂದಿಗೆ ಧೋನಿಯ ಸಿಎಸ್ ಕೆ 14 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ತಲುಪಿತ್ತು.(ಈಗ 2ನೇ ಸ್ಥಾನಕ್ಕೆ ಕುಸಿದಿದೆ)
Published On - 3:33 pm, Sun, 26 September 21