IPL 2021, CSK vs KKR: ಪ್ಲೇ ಆಫ್ ಸನಿಹದಲ್ಲಿರುವ ಸಿಎಸ್​ಕೆಗೆ ಕೋಲ್ಕತ್ತಾ ಸವಾಲು: ಸೂಪರ್ ಸಂಡೇ ಪಂದ್ಯದಲ್ಲಿ ಯಾರಿಗೆ ಗೆಲುವು?

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ ಒಟ್ಟು 23 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆಲುವು ಕಂಡರೆ ಕೋಲ್ಕತ್ತಾ ನೈಟ್ ರೈಡರ್ಸ್ 8 ಪಂದ್ಯಗಳಲ್ಲಷ್ಟೆ ಗೆದ್ದ ಇತಿಹಾವಿದೆ.

IPL 2021, CSK vs KKR: ಪ್ಲೇ ಆಫ್ ಸನಿಹದಲ್ಲಿರುವ ಸಿಎಸ್​ಕೆಗೆ ಕೋಲ್ಕತ್ತಾ ಸವಾಲು: ಸೂಪರ್ ಸಂಡೇ ಪಂದ್ಯದಲ್ಲಿ ಯಾರಿಗೆ ಗೆಲುವು?
CSK vs KKR

14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿಂದು (IPL 2021) ಎರಡು ಪಂದ್ಯಗಳು ಜರುಗಲಿವೆ. 38ನೇ ಪಂದ್ಯದಲ್ಲಿ ಎಂ. ಎಸ್. ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಇಯಾನ್ ಮಾರ್ಗನ್ (Eion Morgan) ನೇತೃತ್ವದ ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ತಂಡಗಳು ಮುಖಾಮುಖಿ ಆಗುತ್ತಿದೆ. ಚೆನ್ನೈ ಈ ಪಂದ್ಯ ಗೆದ್ದು ಪ್ಲೇ ಆಫ್​ಗೆ ಲಗ್ಗೆಯಿಡುವ ಯೋಚನೆಯಲ್ಲಿದ್ದರೆ, ಇತ್ತ ಎರಡನೇ ಚರಣದಲ್ಲಿ ಭರ್ಜರಿ ಕಮ್​ಬ್ಯಾಕ್ ಮಾಡಿರುವ ಕೆಕೆಆರ್ ಟಾಪ್ ನಾಲ್ಕರಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಡಬೇಕಿದೆ. ಅಬುಧಾಬಿಯ ಶೇಖ್ ಜಯೇದ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ 3:30ಕ್ಕೆ ಈ ಪಂದ್ಯ ಆರಂಭವಾಗಲಿದೆ.

ಕೆಕೆಆರ್ ಈವರೆಗೆ ಒಟ್ಟು 9 ಪಂದ್ಯಗಳನ್ನು ಆಡಿದ್ದು ಈ ಪೈಕಿ ನಾಲ್ಕರಲ್ಲಿ ಗೆಲುವು, ಐದು ಪಂದ್ಯಗಳಲ್ಲಿ ಸೋತು 8 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ರೈಡರ್ಸ್ ತಂಡ ಸದ್ಯ ಫೀನಿಕ್ಸ್​ನಂತೆ ಮೇಲೇರುತ್ತಿದೆಯಾದರೂ ಪ್ಲೇ ಆಫ್ ಪ್ರವೇಶ ಖಾತ್ರಿಪಡಿಸಿಕೊಳ್ಳುವ ಹಾದಿ ದೂರವೇ ಇದೆ. ಯುಎಇಗೆ ಕಾಲಿಡುವ ಮೊದಲು 7ನೇ ಸ್ಥಾನದಲ್ಲಿದ್ದ ಕೆಕೆಆರ್ ಇದೀಗ ನಾಲ್ಕನೇ ಸ್ಥಾನದಲ್ಲಿ ಕೂತಿದೆ.

ಪ್ರಮುಖವಾಗಿ ಕೆಕೆಆರ್ ಓಪನರ್​ಗಳು ಅಬ್ಬರಿಸುತ್ತಿರುವುದು ತಂಡಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ವೆಂಕಟೇಶ್ ಅಯ್ಯರ್ ಮತ್ತು ಶುಭ್ಮನ್ ಗಿಲ್ ಪವರ್ ಪ್ಲೇ ಓವರ್​ನಲ್ಲಿ ರನ್ ಮಳೆಯನ್ನೇ ಸುರಿಸುತ್ತಿರುವುದು ತಂಡಕ್ಕೆ ಸುಲಭ ಜಯ ಸಿಗಲು ಪ್ರಮುಖ ಕಾರಣ. ಕಳೆದ ಪಂದ್ಯದಲ್ಲಿ ರಾಹುಲ್ ತ್ರಿಪಾಠಿ ಅಬ್ಬರಿಸಿ ಫಾರ್ಮ್​ಗೆ ಬಂದಿರುವುದು ಕೆಕೆಆರ್ ಆತ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.

ಇತ್ತ ಎರಡನೇ ಸ್ಥಾನದಲ್ಲಿ ಸುಭದ್ರವಾಗಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇನ್ನೊಂದು ಪಂದ್ಯ ಗೆದ್ದರೂ ಬಹುತೇಕ ಪ್ಲೇ ಆಫ್ ಚಾನ್ಸ್ ಗಟ್ಟಿಗೊಂಡಂತೆಯೇ. ಸದ್ಯ 9 ಪಂದ್ಯಗಳನ್ನು ಆಡಿರುವ ಧೋನಿ ಪಡೆ ಏಳರಲ್ಲಿ ಗೆಲುವು ಕಂಡಿದ್ದು, ಕೇವಲ ಎರಡು ಪಂದ್ಯಗಳಲ್ಲಷ್ಟೆ ಸೋತಿದೆ. ಹೀಗಾಗಿ 14 ಸಂಪಾದಿಸಿ ಎರಡನೇ ಸ್ಥಾನಲ್ಲಿದೆ. ಜೊತೆಗೆ ಇವರ ನೆಟ್ ರನ್​ರೇಟ್ ಕೂಡ ಅತ್ಯುತ್ತಮವಾಗಿದೆ.

ಸಿಎಸ್​ಕೆಯ ಬ್ಯಾಟರ್ಸ್ ಮತ್ತು ಬೌಲರ್ಸ್ ಒಳ್ಳೆಯ ಫಾರ್ಮ್​ನಲ್ಲಿದ್ದಾರೆ. ತಂಡದಲ್ಲಿ ಒಂದು ಪ್ರಮುಖ ಬದಲಾವಣೆ ನಿರೀಕ್ಷಿಸಲಾಗಿದೆ. ಮೊಯೀನ್ ಅಲಿ ಬದಲು ಸ್ಯಾಮ್ ಕುರ್ರನ್ ತಂಡ ಸೇರಿಕೊಳ್ಳುವ ಸಂಭವವಿದೆ. ರುತುರಾಜ್ ಗಾಯಕ್ವಾಡ್ ಭರ್ಜರಿ ಫಾರ್ಮ್​ನಲ್ಲಿರುವುದು ತಂಡದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಡ್ವೇನ್ ಬ್ರಾವೋ ಬೌಲಿಂಗ್​ನಲ್ಲಿ ಮಿಂಚುತ್ತಿದ್ದಾರೆ. ಒಟ್ಟಾರೆ ಧೋನಿ ಪಡೆ ಸಮತೊಲನದಿಂದ ಕೂಡಿದೆ.

ಉಭಯ ತಂಡಗಳು ಐಪಿಎಲ್​ನಲ್ಲಿ ಈವರೆಗೆ ಒಟ್ಟು 23 ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು ಇದರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆಲುವು ಕಂಡರೆ ಕೋಲ್ಕತ್ತಾ ನೈಟ್ ರೈಡರ್ಸ್ 8 ಪಂದ್ಯಗಳಲ್ಲಷ್ಟೆ ಗೆದ್ದ ಇತಿಹಾವಿದೆ.

IPL 2021, Points Table: ರಾಜಸ್ಥಾನ್ ವಿರುದ್ಧ ಗೆದ್ದ ಡೆಲ್ಲಿ; ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ 4 ರಲ್ಲಿ ಸ್ಥಾನ ಪಡೆದ ತಂಡಗಳಿವು

IPL 2021: ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ ಅಶ್ವಿನ್ ದಾಖಲೆ; ಟಿ20ಯಲ್ಲಿ ಈ ಸಾಧನೆ ಮಾಡಿದ 3ನೇ ಭಾರತೀಯ

(CSK vs KKR IPL 2021 Chennai Super Kings will be taking on Kolkata Knight Riders in the 38th match)

Click on your DTH Provider to Add TV9 Kannada