ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ಅವರ ಅದ್ಭುತ ಬೌಲಿಂಗ್, ನಾಯಕ ರುತುರಾಜ್ ಗಾಯಕ್ವಾಡ್ ಅವರ ಅಜೇಯ 67 ರನ್‌ಗಳ ಅಜೇಯ ಇನ್ನಿಂಗ್ಸ್‌ನ ಆಧಾರದ ಮೇಲೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸುವಲ್ಲಿ ಸಿಎಸ್‌ಕೆ ಯಶಸ್ವಿಯಾಯಿತು. ಎರಡು ಸತತ ಪಂದ್ಯಗಳಲ್ಲಿ ಸೋತ ನಂತರ, ಚೆನ್ನೈ ತನ್ನ ತವರು ನೆಲದಲ್ಲಿ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಇತ್ತ ಅಜೇಯರಾಗಿ ಉಳಿದಿದ್ದ ಕೆಕೆಆರ್ ಈ ಸೀಸನ್ನಲ್ಲಿ ತನ್ನ ಮೊದಲ ಸೋಲನ್ನು ಅನುಭವಿಸಿದೆ. ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 139 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಚೆನ್ನೈ 17.4 ಓವರ್‌ಗಳಲ್ಲಿ ಮೂರು ವಿಕೆಟ್‌ಗೆ 141 ರನ್ ಗಳಿಸಿ ಜಯ ಸಾಧಿಸಿತು.
ರವೀಂದ್ರ ಜಡೇಜಾ ಮತ್ತು ತುಷಾರ್ ದೇಶಪಾಂಡೆ ಅವರ ಅದ್ಭುತ ಬೌಲಿಂಗ್, ನಾಯಕ ರುತುರಾಜ್ ಗಾಯಕ್ವಾಡ್ ಅವರ ಅಜೇಯ 67 ರನ್‌ಗಳ ಅಜೇಯ ಇನ್ನಿಂಗ್ಸ್‌ನ ಆಧಾರದ ಮೇಲೆ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡವನ್ನು ಏಳು ವಿಕೆಟ್‌ಗಳಿಂದ ಮಣಿಸುವಲ್ಲಿ ಸಿಎಸ್‌ಕೆ ಯಶಸ್ವಿಯಾಯಿತು.
ಕೆಕೆಆರ್ ಸ್ಪಿನ್ನರ್ ಸುನಿಲ್ ನರೈನ್ ಅವರು ಡೆರಿಲ್ ಮಿಚೆಲ್ ಅವರನ್ನು ಔಟ್ ಮಾಡುವ ಮೂಲಕ ಸಿಎಸ್‌ಕೆಗೆ ಎರಡನೇ ಹೊಡೆತ ನೀಡಿದರು. ಮಿಚೆಲ್ 19 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು. ಆದರೆ, ಸಿಎಸ್‌ಕೆ ನಾಯಕ ರುತುರಾಜ್ ಗಾಯಕ್ವಾಡ್ 48 ಎಸೆತಗಳಲ್ಲಿ 52 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ ಮತ್ತು ಶಿವಂ ದುಬೆ ಹೊಸ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಬಂದಿದ್ದಾರೆ.
ಸಿಎಸ್‌ಕೆ ನಾಯಕ ರುತುರಾಜ್ ಕೆಕೆಆರ್ ವಿರುದ್ಧ ಅಮೋಘ ಬ್ಯಾಟಿಂಗ್ ನಡೆಸಿ ಅರ್ಧಶತಕ ಪೂರೈಸಿದ್ದಾರೆ. 138 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆಗೆ ರಚಿನ್ ರವೀಂದ್ರ ರೂಪದಲ್ಲಿ ಮೊದಲ ಹೊಡೆತ ಸಿಕ್ಕಿತು, ಆದರೆ ನಾಯಕ ರುತುರಾಜ್ ಅವರು ಡೆರಿಲ್ ಮಿಚೆಲ್ ಅವರೊಂದಿಗೆ ಸಿಎಸ್‌ಕೆ ಇನ್ನಿಂಗ್ಸ್ ಅನ್ನು ನಿಭಾಯಿಸಿದರು.
ಪವರ್‌ಪ್ಲೇ ಅಂತ್ಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ 50 ರನ್‌ಗಳ ಗಡಿ ದಾಟಿದೆ. ಆರು ಓವರ್‌ಗಳ ನಂತರ, ಸಿಎಸ್‌ಕೆ ಸ್ಕೋರ್ ಒಂದು ವಿಕೆಟ್‌ಗೆ 52 ರನ್ ಆಗಿದ್ದು, ನಾಯಕ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ಡೇರಿಲ್ ಮಿಚೆಲ್ ಕ್ರೀಸ್‌ನಲ್ಲಿದ್ದಾರೆ.
ಕೆಕೆಆರ್ ಬೌಲರ್ ವೈಭವ್ ಅರೋರಾ ಅವರು ಸಿಎಸ್‌ಕೆ ಆರಂಭಿಕ ಆಟಗಾರ ರಚಿನ್ ರವೀಂದ್ರ ಅವರನ್ನು ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಯಶಸ್ಸನ್ನು ನೀಡಿದರು. ಎಂಟು ಎಸೆತಗಳಲ್ಲಿ 15 ರನ್ ಗಳಿಸಿ ರಚಿನ್ ಔಟಾದರು.
ಚೆನ್ನೈ ಸೂಪರ್ ಕಿಂಗ್ಸ್ ಇನ್ನಿಂಗ್ಸ್ ಆರಂಭವಾಗಿದ್ದು, ನಾಯಕ ರುತುರಾಜ್ ಗಾಯಕ್ವಾಡ್ ಅವರೊಂದಿಗೆ ರಚಿನ್ ರವೀಂದ್ರ ಇನ್ನಿಂಗ್ಸ್ ಆರಂಭಿಸಿದ್ದಾರೆ. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೆಕೆಆರ್ ಬೌಲಿಂಗ್ ಆರಂಭಿಸಿದರು.
ಸ್ಪಿನ್ನರ್ ರವೀಂದ್ರ ಜಡೇಜಾ ಮತ್ತು ವೇಗಿ ತುಷಾರ್ ದೇಶಪಾಂಡೆ ಅವರ ತಲಾ ಮೂರು ವಿಕೆಟ್‌ಗಳ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 20 ಓವರ್‌ಗಳಲ್ಲಿ 9 ವಿಕೆಟ್‌ಗೆ 137 ರನ್‌ಗಳಿಗೆ ಸೀಮಿತಗೊಳಿಸಿತು. ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ 32 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನಿಂದ 34 ರನ್ ಗಳಿಸಿ ಅತ್ಯಧಿಕ ಇನ್ನಿಂಗ್ಸ್ ಆಡಿದರು. ಇವರಲ್ಲದೇ ಸುನಿಲ್ ನರೈನ್ 20 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ 27 ರನ್ ಗಳಿಸಿದರೆ, ಆಂಗ್‌ಕ್ರಿಶ್ ರಘುವಂಶಿ ಜೊತೆಗೂಡಿ ಎರಡನೇ ವಿಕೆಟ್‌ಗೆ 56 ರನ್‌ಗಳ ಜೊತೆಯಾಟ ನೀಡಿದರು. ರಘುವಂಶಿ 18 ಎಸೆತಗಳಲ್ಲಿ ಮೂರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 24 ರನ್ ಗಳಿಸಿದರು.
ಸಿಎಸ್‌ಕೆ ಬೌಲರ್‌ಗಳ ಮುಂದೆ ಕೆಕೆಆರ್ ಬ್ಯಾಟ್ಸ್‌ಮನ್‌ಗಳು ರನ್ ಕದಿಯಲು ಹರಸಾಹಸ ಪಡುತ್ತಿದ್ದಾರೆ. ಕೆಕೆಆರ್ 18 ಓವರ್‌ಗಳ ಅಂತ್ಯಕ್ಕೆ ಆರು ವಿಕೆಟ್‌ಗೆ 123 ರನ್ ಗಳಿಸಿದೆ. ಆಂಡ್ರೆ ರಸೆಲ್ ಮತ್ತು ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ.
ತುಷಾರ್ ಪಾಂಡೆ ಎಸೆತದಲ್ಲಿ ರಿಂಕು ಸಿಂಗ್ ಔಟಾಗಿದ್ದಾರೆ. ರಿಂಕು 14 ಎಸೆತಗಳಲ್ಲಿ ಒಂಬತ್ತು ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಕೆಕೆಆರ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಆಂಡ್ರೆ ರಸೆಲ್ ಕ್ರೀಸ್‌ಗೆ ಆಗಮಿಸಿದ್ದಾರೆ. ಅವರೊಂದಿಗೆ ನಾಯಕ ಶ್ರೇಯಸ್ ಅಯ್ಯರ್ ಕ್ರೀಸ್‌ನಲ್ಲಿದ್ದಾರೆ.
ಕೆಕೆಆರ್ ರನ್ ರೇಟ್ ನಿಯಂತ್ರಿಸುವಲ್ಲಿ ಸಿಎಸ್‌ಕೆ ಬೌಲರ್ಗಳು ಯಶಸ್ವಿಯಾಗಿದ್ದಾರೆ. 14 ಓವರ್‌ಗಳು ಮುಗಿದಿದ್ದು ಕೆಕೆಆರ್ ತಂಡಕ್ಕೆ 100 ರನ್‌ಗಳನ್ನು ಪೂರೈಸಲು ಸಾಧ್ಯವಾಗಿಲ್ಲ. ಕೆಕೆಆರ್ ಪರ ನಾಯಕ ಶ್ರೇಯಸ್ ಅಯ್ಯರ್ ಮತ್ತು ರಿಂಕು ಸಿಂಗ್ ಕ್ರೀಸ್‌ನಲ್ಲಿದ್ದಾರೆ.
ರಮಣದೀಪ್ ರೂಪದಲ್ಲಿ ಕೆಕೆಆರ್ ಐದನೇ ವಿಕೆಟ್ ಕಳೆದುಕೊಂಡಿದೆ. ಮಹೇಶ್ ಟೀಕ್ಷಣ ಬೌಲಿಂಗ್ನಲ್ಲಿ ರಮಣದೀಪ್ ಕ್ಲೀನ್ ಬೌಲ್ಡ್ ಆದರು. ರಮಣದೀಪ್ 12 ಎಸೆತಗಳಲ್ಲಿ 13 ರನ್ ಗಳಿಸಿ ಔಟಾದರು. ಇದೀಗ ರಿಂಕು ಸಿಂಗ್ ಕ್ರೀಸ್‌ಗೆ ಬಂದಿದ್ದು, ಅವರೊಂದಿಗೆ ನಾಯಕ ಶ್ರೇಯಸ್ ಅಯ್ಯರ್ ಇದ್ದಾರೆ.
ರವೀಂದ್ರ ಜಡೇಜಾ ಕೆಕೆಆರ್‌ನ 4ನೇ ವಿಕೆಟ್ ಉರುಳಿಸಿದ್ದಾರೆ. ಜಡೇಜಾ ಎಸೆತದಲ್ಲಿ ವೆಂಕಟೇಶ್ ಅಯ್ಯರ್ ಕ್ಯಾಚಿತ್ತು ಔಟಾದರು. ಎಂಟು ಎಸೆತಗಳಲ್ಲಿ ಮೂರು ರನ್ ಗಳಿಸಿ ವೆಂಕಟೇಶ್ ಔಟಾದರು. ಕೆಕೆಆರ್ ಕೇವಲ 64 ರನ್ ಗಳಿಸುವಷ್ಟರಲ್ಲಿ ತನ್ನ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು. ಇದು ಜಡೇಜಾ ಅವರ ಈ ಪಂದ್ಯದ ಮೂರನೇ ವಿಕೆಟ್ ಆಗಿದೆ.
ತಮ್ಮ ಅದ್ಭುತ ಬೌಲಿಂಗ್ ಮುಂದುವರಿಸಿರುವ ಜಡೇಜಾ ಕೆಕೆಆರ್ಗೆ ಮೂರನೇ ಹೊಡೆತ ನೀಡಿದ್ದಾರೆ. ಉತ್ತಮ ಫಾರ್ಮ್‌ನಲ್ಲಿದ್ದ ಸುನಿಲ್ ನರೈನ್ ಪೆವಿಲಿಯನ್‌ಗೆ ಮರಳಿದ್ದಾರೆ. ನರೈನ್ 20 ಎಸೆತಗಳಲ್ಲಿ 27 ರನ್ ಗಳಿಸಿ ಔಟಾದರು.
ಸಿಎಸ್‌ಕೆ ಸ್ಪಿನ್ನರ್ ರವೀಂದ್ರ ಜಡೇಜಾ, ಆಂಗ್‌ಕ್ರಿಶ್ ರಘುವಂಶಿ ವಿಕೆಟ್ ಉರುಳಿಸಿದ್ದಾರೆ. ರಘುವಂಶಿ 18 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಇದರೊಂದಿಗೆ ಎರಡನೇ ವಿಕೆಟ್‌ಗೆ ನರೈನ್ ಮತ್ತು ರಘುವಂಶಿ ನಡುವಿನ ಅರ್ಧಶತಕದ ಜೊತೆಯಾಟ ಮುರಿದುಬಿತ್ತು. ಪ್ರಸ್ತುತ, ನರೈನ್ 18 ಎಸೆತಗಳಲ್ಲಿ 26 ರನ್, ಶ್ರೇಯಸ್ ಅಯ್ಯರ್ ಒಂದು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಮೊದಲ ಎಸೆತದಲ್ಲಿ ಫಿಲ್ ಸಾಲ್ಟ್ ಔಟಾದ ನಂತರ, ಸುನಿಲ್ ನರೈನ್ ಮತ್ತು ಆಂಗ್‌ಕ್ರಿಶ್ ರಘುವಂಶಿ ಕೆಕೆಆರ್ ಇನ್ನಿಂಗ್ಸ್ ನಿಭಾಯಿಸುತ್ತಿದ್ದಾರೆ. ಮೂರು ಓವರ್ ಮುಕ್ತಾಯಕ್ಕೆ ಕೋಲ್ಕತ್ತಾದ ಸ್ಕೋರ್ ಒಂದು ವಿಕೆಟ್‌ಗೆ 26 ರನ್ ಆಗಿದೆ. ಸುನಿಲ್ ನರೈನ್ 10 ಎಸೆತಗಳಲ್ಲಿ 15 ರನ್ ಮತ್ತು ರಘುವಂಶಿ ಏಳು ಎಸೆತಗಳಲ್ಲಿ ಆರು ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
ಕೋಲ್ಕತ್ತಾ ನೈಟ್ ರೈಡರ್ಸ್ ಮೊದಲ ಎಸೆತದಲ್ಲಿ ಫಿಲ್ ಸಾಲ್ಟ್ ರೂಪದಲ್ಲಿ ಮೊದಲ ವಿಕೆಟ್ ಕಳೆದುಕೊಂಡಿದೆ. ತುಷಾರ್ ದೇಶಪಾಂಡೆ ಬೌಲಿಂಗ್ನಲ್ಲಿ ಸಾಲ್ಟ್ ಜಡೇಜಾಗೆ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಕೆಕೆಆರ್ ಪರ ಸುನಿಲ್ ನರೈನ್ ಜೊತೆಗೆ ಆಂಗ್‌ಕ್ರಿಶ್ ರಘುವಂಶಿ ಕ್ರೀಸ್‌ನಲ್ಲಿದ್ದಾರೆ.
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ವೆಂಕಟೇಶ್ ಅಯ್ಯರ್, ಶ್ರೇಯಸ್ ಅಯ್ಯರ್ (ನಾಯಕ), ಆಂಗ್ಕ್ರಿಶ್ ರಘುವಂಶಿ, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ.
ಇಂಪ್ಯಾಕ್ಟ್ ಪ್ಲೇಯರ್: ಸುಯ್ಯಾಶ್ ಶರ್ಮಾ, ಅನುಕುಲ್ ರಾಯ್, ಮನೀಶ್ ಪಾಂಡೆ, ರಹಮಾನುಲ್ಲಾ ಗುರ್ಬಾಜ್, ಸಾಕಿಬ್ ಹುಸೇನ್.
ರುತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಸಮೀರ್ ರಿಜ್ವಿ, ರವೀಂದ್ರ ಜಡೇಜಾ, ಮಹೇಂದ್ರ ಸಿಂಗ್ ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಮುಸ್ತಾಫಿಜುರ್ ರೆಹಮಾನ್, ತುಷಾರ್ ದೇಶಪಾಂಡೆ, ಮಹೇಶ್ ತಿಕ್ಷಣ.
ಇಂಪ್ಯಾಕ್ಟ್ ಪ್ಲೇಯರ್: ಶಿವಂ ದುಬೆ, ಮೊಯಿನ್ ಅಲಿ, ಶೇಕ್ ರಶೀದ್, ಮಿಚೆಲ್ ಸ್ಯಾಂಟ್ನರ್, ನಿಶಾಂತ್ ಸಿಂಧು.
ಚೆನ್ನೈನಲ್ಲಿ ಟಾಸ್ ಗೆದ್ದ ಸಿಎಸ್‌ಕೆ ನಾಯಕ ರುತುರಾಜ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
ಇಂದು, ಐಪಿಎಲ್‌ನ 22 ನೇ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸುತ್ತಿದೆ. ಉಭಯ ತಂಡಗಳ ನಡುವಿನ ಈ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿದೆ.
Published On - 6:52 pm, Mon, 8 April 24