MS Dhoni: ಧೋನಿನ ಪ್ರೀತಿಯಿಂದ ಹಗ್ ಮಾಡಿದ ಗೌತಮ್ ಗಂಭೀರ್; ವಿಡಿಯೋ ವೈರಲ್
ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದವರು ಬಂದು ಶೇಕ್ ಹ್ಯಾಂಡ್ ಮಾಡಿದರು. ಈ ವೇಳೆ ಗಂಭೀರ್ ಹಾಗೂ ಧೋನಿ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಗೌತಮ್ ಅವರು ಖುಷಿ ಖುಷಿಯಿಂದ ಧೋನಿಯನ್ನು ಅಪ್ಪಿದ್ದಾರೆ. ಈ ವಿಡಿಯೋ ಫ್ಯಾನ್ಸ್ ಪೇಜ್ಗಳಲ್ಲಿ ವೈರಲ್ ಆಗುತ್ತಿದೆ.
2011ರ ವರ್ಲ್ಡ್ಕಪ್ ಗೆಲುವಿನ ಪ್ರಮುಖ ರುವಾರಿ ಎಂಎಸ್ ಧೋನಿ (MS Dhoni) ಹಾಗೂ ಗೌತಮ್ ಗಂಭೀರ್ ಚಪಾಕ್ ಸ್ಟೇಡಿಯಂನಲ್ಲಿ ಪ್ರೀತಿಯಿಂದ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದಲ್ಲಿ ಧೋನಿ ಬಳಗ ಗೆದ್ದು ಬೀಗಿದೆ. ಪಂದ್ಯ ಮುಗಿದ ಬಳಿಕ ಒಬ್ಬರನ್ನೊಬ್ಬರನ್ನು ಹಗ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದಾರೆ.
ಚೆನ್ನೈನ ಚಿದಂಬರಮ್ ಸ್ಟೇಡಿಯಂನಲ್ಲಿ ಸಿಎಸ್ಕೆ ಹಾಗೂ ಕೆಕೆಆರ್ ಪಂದ್ಯ ನಡೆದಿದೆ. ಟಾಸ್ ಗೆದ್ದ ಚೆನ್ನೈ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಕೆಕೆಆರ್ ತಂಡ 20 ಓವರ್ನಲ್ಲಿ 9 ವಿಕೆಟ್ ನಷ್ಟಕ್ಕೆ ಕೇವಲ 137 ರನ್ ಟಾರ್ಗೆಟ್ ನೀಡಿತು. ಓಪನರ್ ಸಾಲ್ಟ್ ಸೊನ್ನೆ ಸುತ್ತಿದರು. ಶ್ರೇಯಸ್ ಅಯ್ಯರ್ ಅವರು ಬಾರಿಸಿದ 34 ರನ್ ತಂಡಕ್ಕೆ ಆಸರೆ ಆಯಿತು. ಸುಲಭ ಮೊತ್ತ ಬೆನ್ನು ಹತ್ತಿದ ಚೆನ್ನೈ ಉತ್ತಮ ಆರಂಭ ಕಾಣಲಿಲ್ಲ. ರಚಿನ್ ರವಿಂದ್ರ 15 ರನ್ಗೆ ಔಟ್ ಆದರು. ನಾಯಕ ರುತುರಾಜ್ ಗಾಯಕ್ವಾಡ್ ಅವರು 67 ರನ್ ಬಾರಿಸಿದರು. ಮಿಚೆಲ್ ಅವರು 25 ರನ್, ಶಿವಮ್ ದೂಬೆ 28 ರನ್ ಗಳಿಸಿದರು. ಕೊನೆಯಲ್ಲಿ ಬಂದ ಧೋನಿ ಅವರು 3 ಬಾಲ್ಗೆ 1 ರನ್ ಬಾರಿಸಿದರು.
ಇದನ್ನೂ ಓದಿ: MS Dhoni: ಕನ್ನಡದಲ್ಲಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ ಧೋನಿ? ಶೀಘ್ರವೇ ಘೋಷಣೆ
ಪಂದ್ಯ ಮುಗಿದ ಬಳಿಕ ಎದುರಾಳಿ ತಂಡದವರು ಬಂದು ಶೇಕ್ ಹ್ಯಾಂಡ್ ಮಾಡಿದರು. ಈ ವೇಳೆ ಗಂಭೀರ್ ಹಾಗೂ ಧೋನಿ ಪರಸ್ಪರ ಹಗ್ ಮಾಡಿಕೊಂಡಿದ್ದಾರೆ. ಗೌತಮ್ ಅವರು ಖುಷಿ ಖುಷಿಯಿಂದ ಧೋನಿಯನ್ನು ಅಪ್ಪಿದ್ದಾರೆ. ಈ ವಿಡಿಯೋ ಫ್ಯಾನ್ಸ್ ಪೇಜ್ಗಳಲ್ಲಿ ವೈರಲ್ ಆಗುತ್ತಿದೆ.
View this post on Instagram
ಧೋನಿ ಬಗ್ಗೆ ಗಂಭೀರ್ಗೆ ಈ ಮೊದಲು ಅಸಮಾಧಾನ ಇತ್ತು. 2011ರ ವರ್ಲ್ಡ್ ಕಪ್ನಲ್ಲಿ ತಾವು ಸ್ಕೋರ್ ಮಾಡಿದ 97 ರನ್ನ ಪರಿಗಣನೆಗೆ ತೆಗೆದುಕೊಳ್ಳದೆ ಧೋನಿ ಬಾರಿಸಿದ 91 ರನ್ಗಳನ್ನು ಮಾತ್ರ ವೈಭವೀಕರಿಸಲಾಯಿತು ಎನ್ನುವ ಬೇಸರ ಅವರಿಗೆ ಇದೆ. ಈ ಕಾರಣಕ್ಕೆ ಅವರು ಧೋನಿ ವಿರುದ್ಧ ಆಗಾಗ ಕಿಡಿಕಾರಿದ್ದು ಇದೆ. ಈಗ ಅದೆಲ್ಲವನ್ನೂ ಮರೆತು ಒಂದಾಗಿದ್ದಾರೆ. ಗೌತಮ್ ಅವರು ಕೆಕೆಆರ್ ತಂಡದ ಮೆಂಟರ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:59 am, Tue, 9 April 24