CSK vs PBKS Highlights IPL 2023: ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಪಂಜಾಬ್

ಪೃಥ್ವಿಶಂಕರ
|

Updated on:Apr 30, 2023 | 7:36 PM

Chennai Super Kings vs Punjab Kings IPL 2023 Highlights in Kannada: ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 4 ವಿಕೆಟ್​ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು.

CSK vs PBKS Highlights IPL 2023: ಕೊನೆಯ ಎಸೆತದಲ್ಲಿ ಗೆದ್ದು ಬೀಗಿದ ಪಂಜಾಬ್
ಚೆನ್ನೈ- ಪಂಜಾಬ್ ಮುಖಾಮುಖಿ

ಹೈವೋಲ್ಟೇಜ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ 4 ವಿಕೆಟ್​ಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 4 ವಿಕೆಟ್‌ ಕಳೆದುಕೊಂಡು 200 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಂಜಾಬ್ 6 ವಿಕೆಟ್ ಕಳೆದುಕೊಂಡು ಈ ಗುರಿ ಮುಟ್ಟಿತು. ಕೊನೆಯ ಎಸೆತದಲ್ಲಿ 3 ರನ್ ಬಾರಿಸುವ ಮೂಲಕ ಪಂಜಾಬ್​ಗೆ ಅಮೋಘ ಜಯ ತಂದುಕೊಡುವ ಕೆಲಸವನ್ನು ಸಿಕಂದರ್ ರಜಾ ಮಾಡಿದರು. ಪಂಜಾಬ್ ಪರ ಪ್ರಭಾಸಿಮ್ರಾನ್ ಸಿಂಗ್ ಗರಿಷ್ಠ 42 ರನ್ ಗಳಿಸಿದರೆ, ಚೆನ್ನೈ ಪರ ಡೆವೊನ್ ಕಾನ್ವೇ ಗರಿಷ್ಠ 92 ರನ್ ಬಾರಿಸಿದರು.

LIVE NEWS & UPDATES

The liveblog has ended.
  • 30 Apr 2023 07:07 PM (IST)

    12 ಎಸೆತದಲ್ಲಿ 22 ರನ್ ಬೇಕು

    ಪತಿರಾನ ಬೌಲ್ ಮಾಡಿದ 18ನೇ ಓವರ್​​ನಲ್ಲಿ 9 ರನ್ ಬಂದವು. ಜಿತೇಶ್ ಈ ಓವರ್​​ನಲ್ಲಿ ಬೌಂಡರಿ ಕೂಡ ಹೊಡೆದರು. ಪಂಜಾಬ್ ಗೆಲುವಿಗೆ 12 ಎಸೆತದಲ್ಲಿ 22 ರನ್ ಬೇಕು

  • 30 Apr 2023 07:02 PM (IST)

    ಕರನ್ ಔಟ್

    18ನೇ ಓವರ್​​ನ ಮೊದಲ ಎಸೆತದಲ್ಲೇ ಕರನ್ ಕ್ಲೀನ್ ಬೌಲ್ಡ್ ಆದರು.

  • 30 Apr 2023 07:00 PM (IST)

    ಜಡೇಜಾ ದುಬಾರಿ

    17ನೇ ಓವರ್​​ ಬೌಲ್ ಮಾಡಿದ ಜಡೇಜಾ 7 ರನ್ ಬಿಟ್ಟುಕೊಟ್ಟರು. ಈ ಓವರ್​​ನಲ್ಲಿ 2 ಸಿಕ್ಸರ್ ಬಂದವು. ಪಂಜಾಬ್ ಗೆಲುವಿಗೆ 18 ಎಸೆತದಲ್ಲಿ 31 ರನ್ ಬೇಕು

  • 30 Apr 2023 06:59 PM (IST)

    ಲಿವಿಂಗ್​​ಸ್ಟನ್ ಔಟ್

    ದೇಶಪಾಂಡೆ ಓವರ್​​ನಲ್ಲಿ 24 ರನ್ ಚಚ್ಚಿದ ಲಿವಿಂಗ್​​ಸ್ಟನ್ 5ನೇ ಎಸೆತದಲ್ಲಿ ಮತ್ತೊಂದು ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.

  • 30 Apr 2023 06:57 PM (IST)

    ಒಂದೇ ಓವರ್​​ನಲ್ಲಿ 24 ರನ್

    ದೇಶಪಾಂಡೆ ಬೌಲ್ ಮಾಡಿದ 16ನೇ ಓವರ್​​ನಲ್ಲಿ ಲಿವಿಂಗ್​​ಸ್ಟನ್ 3 ಸಿಕ್ಸರ್ ಹಾಗೂ 1 ಬೌಂಡರಿ ಹೊಡೆದರು.

  • 30 Apr 2023 06:40 PM (IST)

    ಓವರ್​ಗೆ 14 ರನ್ ಬೇಕು

    ಪಂಜಾಬ್ ಇನ್ನಿಂಗ್ಸ್​​ನ 14ನೇ ಓವರ್​ ಮುಗಿದಿದ್ದು, ತಂಡದ ಗೆಲುವಿಗೆ 36 ಎಸೆತಗಳಲ್ಲಿ 82 ರನ್ ಬೇಕು.

  • 30 Apr 2023 06:32 PM (IST)

    ಪಂಜಾಬ್ ಶತಕ ಪೂರ್ಣ

    12ನೇ ಓವರ್​​ನ 4ನೇ ಎಸೆತವನ್ನು ಸ್ಕ್ವೇರ್​​ ಲೆಗ್​​ನಲ್ಲಿ ಬೌಂಡರಿ ಬಾರಿಸಿದ ಲಿವಿಂಗ್​​ಸ್ಟನ್ ಪಂಜಾಬ್ ಮೊತ್ತವನ್ನು 100ರ ಗಡಿ ದಾಟಿಸಿದರು.

  • 30 Apr 2023 06:26 PM (IST)

    ಟೈಡೆ ಔಟ್

    9ನೇ ಓವರ್​​ನಲ್ಲಿ ಪ್ರಭ್​​ಸಿಮ್ರಾನ್ ವಿಕೆಟ್ ಉರುಳಿಸಿದ್ದ ಜಡೇಜಾ 11ನೇ ಓವರ್​​ನಲ್ಲಿ ಕಳೆದ ಪಂದ್ಯದ ಹೀರೋ ಅಥರ್ವ್​ ಟೈಡೆ ವಿಕೆಟ್ ಉರುಳಿಸಿದರು.

  • 30 Apr 2023 06:25 PM (IST)

    10 ಓವರ್ ಅಂತ್ಯ

    ಪಂಜಾಬ್ ಇನ್ನಿಂಗ್ಸ್​​ನ 10 ಓವರ್​ ಮುಗಿದಿದ್ದು, ಪಂಜಾಬ್ 94 ರನ್​​ಗಳಿಗೆ 2 ವಿಕೆಟ್ ಕಳೆದುಕೊಂಡಿದೆ. ಈ ಓವರ್​​ನಲ್ಲಿ ಲಿವಿಂಗ್​​ಸ್ಟನ್ ಸಿಕ್ಸರ್ ಕೂಡ ಬಾರಿಸಿದರು.

  • 30 Apr 2023 06:13 PM (IST)

    ಪ್ರಭ್​​ಸಿಮ್ರಾನ್ ಔಟ್

    24 ಎಸೆತಗಳಲ್ಲಿ 42 ರನ್ ಬಾರಿಸಿದ ಪ್ರಭ್​​ಸಿಮ್ರಾನ್ ಜಡೇಜಾ ಓವರ್​​ನಲ್ಲಿ ಸ್ಟಂಪ್ ಔಟಾದರು. ಪಂಜಾಬ್ 2ನೇ ವಿಕೆಟ್ ಪತನ

  • 30 Apr 2023 06:12 PM (IST)

    ಅಲಿಗೆ ಸಿಕ್ಸರ್

    8ನೇ ಓವರ್​​ ಬೌಲ್ ಮಾಡಿದ ಅಲಿ 10 ರನ್ ಬಿಟ್ಟುಕೊಟ್ಟರು. ಈ ಓವರ್​ನ 2ನೇ ಎಸೆತದಲ್ಲಿ ಪ್ರಭ್​​ಸಿಮ್ರಾನ್ ಕೌ ಕಾರ್ನರ್​​ನಲ್ಲಿ ಸಿಕ್ಸರ್ ಬಾರಿಸಿದರು.

  • 30 Apr 2023 06:06 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇಯ ಕೊನೆಯ ಓವರ್​​ನ ಮೊದಲ ಎಸೆತದಲ್ಲಿ ಪ್ರಭ್​​ಸಿಮ್ರಾನ್ ಕವರ್ಸ್​ ದಿಕ್ಕಿನಲ್ಲಿ ಬೌಂಡರಿ ಹೊಡೆದರು. ಇದರೊಂದಿಗೆ ಪಂಜಾಬ್ 6 ಓವರ್​​ಗಳಲ್ಲಿ 1 ವಿಕೆಟ್ ಕಳೆದುಕೊಂಡು 66 ರನ್ ಬಾರಿಸಿದೆ.

  • 30 Apr 2023 05:58 PM (IST)

    ಧವನ್ ಔಟ್

    ಪಂಜಾಬ್ ಅರ್ಧಶತಕ ಪೂರ್ಣಗೊಂಡ ಬೆನ್ನಲ್ಲೇ ಮತ್ತೊಂದು ಬಿಗ್ ಶಾಟ್ ಆಡಲು ಯತ್ನಿಸಿದ ಧವನ್ ಥರ್ಡ್​ಮ್ಯಾನ್​​ನಲ್ಲಿ ಕ್ಯಾಚಿತ್ತು ಔಟಾದರು.

  • 30 Apr 2023 05:58 PM (IST)

    ಪಂಜಾಬ್ ಅರ್ಧಶತಕ

    4ನೇ ಓವರ್​ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಧವನ್ ಪಂಜಾಬ್ ಮೊತ್ತವನ್ನು 50ರ ಗಡಿ ದಾಟಿಸಿದರು.

  • 30 Apr 2023 05:50 PM (IST)

    ಧವನ್ ಸಿಕ್ಸರ್

    ಆಕಾಶ್ ಸಿಂಗ್ ಬೌಲ್ ಮಾಡಿದ 3ನೇ ಓವರ್​​​ನ 5ನೇ ಎಸೆತವನ್ನು ಧವನ್ ಬೌಂಡರಿಗಟ್ಟಿದರೆ, ಕೊನೆಯ ಎಸೆತವನ್ನು ಸಿಕ್ಸರ್​ಗಟ್ಟಿದರು. ಈ ಓವರ್​​ನಲ್ಲಿ 14 ರನ್ ಬಂದವು.

  • 30 Apr 2023 05:42 PM (IST)

    ದೇಶಪಾಂಡೆಗೆ ಸಿಕ್ಸರ್

    2ನೇ ಓವರ್​​ ಬೌಲ್ ಮಾಡಿದ ದೇಶಪಾಂಡೆಯ 3ನೇ ಎಸೆತವನ್ನು ಪ್ರಭ್​​ಸಿಮ್ರಾನ್ ಶಾರ್ಟ್​ ಥರ್ಡ್​ಮ್ಯಾನ್​​ನಲ್ಲಿ ಸಿಕ್ಸರ್​​ಗಟ್ಟಿದರು. ಪಂಜಾಬ್ 20/0

  • 30 Apr 2023 05:37 PM (IST)

    ಧವನ್ 2 ಬೌಂಡರಿ

    ಇನ್ನಿಂಗ್ಸ್​​ನ ಮೊದಲ ಓವರ್​​ನಲ್ಲೇ ನಾಯಕ ಧವನ್ 2 ಬ್ಯಾಕ್ ಟು ಬ್ಯಾಕ್ ಬೌಂಡರಿ ಬಾರಿಸಿದರು. ಪಂಜಾಬ್​​ಗೆ ಉತ್ತಮ ಆರಂಭ

  • 30 Apr 2023 05:23 PM (IST)

    ಸಿಎಸ್​ಕೆ ಖಾತೆಯಲ್ಲಿ 200 ರನ್

    ಕೊನೆಯ ಓವರ್‌ನಲ್ಲಿ ಧೋನಿ ಸತತ ಎರಡು ಸಿಕ್ಸರ್‌ ಬಾರಿಸಿದರೆ, ಡೆವೊನ್ ಕಾನ್ವೇ 92 ರನ್ ಬಾರಿಸಿ ಅಜೇಯರಾಗಿ ಉಳಿದರು. ಸಿಎಸ್‌ಕೆ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 200 ರನ್ ಗಳಿಸಿತು.

  • 30 Apr 2023 05:16 PM (IST)

    ಧೋನಿ ಸಿಕ್ಸರ್

    ಜಡೇಜಾ ವಿಕೆಟ್ ಬಳಿಕ ಬ್ಯಾಟಿಂಗ್​ಗೆ ಬಂದ ಧೋನಿ 20ನೇ ಓವರ್​​ 5ನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು.

  • 30 Apr 2023 05:14 PM (IST)

    ಜಡೇಜಾ ಔಟ್

    20ನೇ ಓವರ್​​ನ ಮೊದಲ ಎಸೆತದಲ್ಲಿ ಬಿಗ್ ಶಾಟ್ ಆಡಲು ಯತ್ನಿಸಿದ ಜಡೇಜಾ ಡೀಪ್ ಮಿಡ್ ವಿಕೆಟ್​​ನಲ್ಲಿ ಲಿವಿಂಗ್​​ಸ್ಟನ್​ಗೆ ಕ್ಯಾಚಿತ್ತು ಔಟಾದರು.

  • 30 Apr 2023 05:08 PM (IST)

    ಶತಕದಂಚಿನಲಿ ಕಾನ್ವೇ

    19ನೇ ಓವರ್​​ ಬೌಲ್ ಮಾಡಿದ ರಬಾಡ ಕೊನೆಯ ಎಸೆತದಲ್ಲಿ ಬೌಂಡರಿ ನೀಡಿದರು. ಇದರೊಂದಿಗೆ ಕಾನ್ವೇ 90ರ ಗಡಿ ದಾಟಿದ್ದು ಶತಕದಂಚಿನಲ್ಲಿದ್ದಾರೆ. ಚೆನ್ನೈ 185/3

  • 30 Apr 2023 05:06 PM (IST)

    ಅರ್ಶದೀಪ್ ಉತ್ತಮ ಓವರ್

    ತಮ್ಮ ಖೋಟಾದ ಕೊನೆಯ ಓವರ್​ ಬೌಲ್ ಮಾಡಿದ ಅರ್ಶದೀಪ್​ ಯಾವುದೇ ಬೌಂಡರಿ ನೀಡಲಿಲ್ಲ. ಚೆನ್ನೈ 177/3

  • 30 Apr 2023 04:58 PM (IST)

    ಅಲಿ ಔಟ್

    ಮೊಯಿನ್ ಅಲಿ 6 ಎಸೆತಗಳಲ್ಲಿ 10 ರನ್ ಗಳಿಸಿ ರಾಹುಲ್ ಚಹಾರ್​​ಗೆ ಬಲಿಯಾದರು. ಚೆನ್ನೈ 3ನೇ ವಿಕೆಟ್ ಪತನ

  • 30 Apr 2023 04:51 PM (IST)

    ಚೆನ್ನೈ 150 ರನ್ ಪೂರ್ಣ

    16ನೇ ಓವರ್​​ನ 2ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಅಲಿ ಚೆನ್ನೈ ಸ್ಕೋರ್​​ ಅನ್ನು 150 ರನ್​ಗಳ ಗಡಿ ದಾಟಿಸಿದರು.

  • 30 Apr 2023 04:50 PM (IST)

    15ನೇ ಓವರ್​ನಲ್ಲಿ 16 ರನ್

    15ನೇ ಓವರ್​​ನಲ್ಲಿ 3 ಬೌಂಡರಿ ಬಂದವು. 2 ಬೌಂಡರಿಗಳನ್ನು ಕಾನ್ವೇ ಹೊಡೆದರೆ, 1 ಬೌಂಡರಿ ಅಲಿ ಬ್ಯಾಟ್​​ನಿಂದ ಬಂತು.

  • 30 Apr 2023 04:49 PM (IST)

    ದುಬೆ ಔಟ್

    ಅರ್ಷದೀಪ್ ಸಿಂಗ್ ಶಿವ್ ದುಬೆ ವಿಕೆಟ್ ಉರುಳಿಸಿದ್ದಾರೆ. ಶಿವಂ 16 ಎಸೆತಗಳಲ್ಲಿ 28 ರನ್ ಬಾರಿಸಿ, ಶಾರುಖ್​​ಗೆ ಕ್ಯಾಚಿತ್ತು ಔಟಾದರು.

  • 30 Apr 2023 04:34 PM (IST)

    13 ಓವರ್ ಮುಕ್ತಾಯ

    13ನೇ ಓವರ್​​ನ ಮೊದಲ ಎಸೆತವನ್ನು ದುಬೆ ಸಿಕ್ಸರ್​ಗಟ್ಟಿದರೆ, ಕೊನೆಯ ಎಸೆತದಲ್ಲಿ ಕಾನ್ವೇ ಬೌಂಡರಿ ಬಾರಿಸಿದರು.

  • 30 Apr 2023 04:31 PM (IST)

    ಕಾನ್ವೇ ಅರ್ಧಶತಕ

    ಅದೇ 12ನೇ ಓವರ್​​ನ 4ನೇ ಎಸೆತವನ್ನು ಬೌಂಡರಿಗಟ್ಟಿದ ಕಾನ್ವೇ ತಮ್ಮ ಅರ್ಧಶತಕ ಪೂರೈಸಿದರು. ಕಾನ್ವೇ 30 ಎಸೆತದಲ್ಲಿ ಅರ್ಧಶತಕ ಪೂರೈಸಿದರು.

  • 30 Apr 2023 04:30 PM (IST)

    ಚೆನ್ನೈ ಶತಕ ಪೂರ್ಣ

    12ನೇ ಓವರ್​​ನ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದ ದುಬೆ ಚೆನ್ನೈ ಮೊತ್ತವನ್ನು ಶತಕದ ಗಡಿ ದಾಟಿಸಿದರು.

  • 30 Apr 2023 04:17 PM (IST)

    ರುತುರಾಜ್ ಔಟ್

    10ನೇ ಓವರ್​​ನ 4ನೇ ಎಸೆತದಲ್ಲಿ ರುತುರಾಜ್ ಸ್ಟಂಪ್ ಔಟ್ ಆದರು. ರಜಾ ಬೌಲ್ ಮಾಡಿದ ಈ ಓವರ್​​ನಲ್ಲಿ ಕಾನ್ವೇ ಮೊದಲೆರಡು ಎಸೆತಗಳನ್ನು ಬೌಂಡರಿಗಟ್ಟಿದ್ದರು.

    ಚೆನ್ನೈ 86/1

  • 30 Apr 2023 04:11 PM (IST)

    ಕಾನ್ವೇ ಬೌಂಡರಿ, ಚೆನ್ನೈ 67/0

    ರಜಾ ಬೌಲ್ ಮಾಡಿದ 8ನೇ ಓವರ್​​ನ 4ನೇ ಎಸೆತವನ್ನು ಕಾನ್ವೇ ಎಕ್ಸ್​​ಟ್ರಾ ಕವರ್​​ನಲ್ಲಿ ಬೌಂಡರಿ ಗಟ್ಟಿದರು.

  • 30 Apr 2023 04:05 PM (IST)

    ಪವರ್ ಪ್ಲೇ ಅಂತ್ಯ

    ಪವರ್ ಪ್ಲೇನ ಕೊನೆಯ ಓವರ್​​ನಲ್ಲಿ ಬರೋಬ್ಬರಿ 3 ಬೌಂಡರಿ ಬಂದವು. ಇದರೊಂದಿಗೆ ಸಿಎಸ್​​ಕೆ ಅರ್ಧಶತಕ ಕೂಡ ಪೂರೈಸಿತು.

  • 30 Apr 2023 03:56 PM (IST)

    ರುತುರಾಜ್ ಸಿಕ್ಸರ್

    ಚಹರ್ ಬೌಲ್ ಮಾಡಿದ 5ನೇ ಓವರ್​​ನಲ್ಲಿ ರುತುರಾಜ್ ಲಾಂಗ್ ಆನ್​​ನಲ್ಲಿ ಅದ್ಭುತ ಸಿಕ್ಸರ್ ಬಾರಿಸಿದರು. 5 ಓವರ್ ಅಂತ್ಯಕ್ಕೆ 41/0

  • 30 Apr 2023 03:47 PM (IST)

    3ನೇ ಓವರ್​​ನಲ್ಲಿ 3 ಬೌಂಡರಿ

    ಅರ್ಷದೀಪ್ ಬೌಲ್ ಮಾಡಿದ 3ನೇ ಓವರ್​ನಲ್ಲಿ 3 ಬೌಂಡರಿ ಬಂದವು. ಮೊದಲೆರಡು ಬೌಂಡರಿಗಳನ್ನು ರುತುರಾಜ್ ಬಾರಿಸಿದರೆ, ಓವರ್​​ನ ಕೊನೆಯ ಎಸೆತದಲ್ಲಿ ಕಾನ್ವೇ ಬೌಂಡರಿ ಹೊಡೆದರು.

  • 30 Apr 2023 03:41 PM (IST)

    ಕಾನ್ವೇ ಬೌಂಡರಿ, 16/0

    ರಬಾಡ ಬೌಲ್ ಮಾಡಿದ 2ನೇ ಓವರ್​ನ​ 4ನೇ ಮತ್ತು 5ನೇ ಎಸೆತವನ್ನು ಕಾನ್ವೇ ಬೌಂಡರಿಗಟ್ಟಿದರು.

  • 30 Apr 2023 03:34 PM (IST)

    ಚೆನ್ನೈ ಬ್ಯಾಟಿಂಗ್ ಆರಂಭ

    ಚೆನ್ನೈ ಪರ ರುತುರಾಜ್ ಹಾಗೂ ಕಾನ್ವೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅರ್ಷದೀಪ್ ಬೌಲ್ ಮಾಡಿದ ಮೊದಲ ಓವರ್​ನಲ್ಲಿ ರುತುರಾಜ್ ಕವರ್ಸ್​ ಮೇಲೆ ಬೌಂಡರಿ ಹೊಡೆದರು.

  • 30 Apr 2023 03:23 PM (IST)

    ಪಂಜಾಬ್ ಕಿಂಗ್ಸ್

    ಶಿಖರ್ ಧವನ್, ಅಥರ್ವ ಟೈಡೆ, ಲಿಯಾಮ್ ಲಿವಿಂಗ್​ಸ್ಟನ್, ಸಿಕಂದರ್ ರಜಾ, ಜಿತೇಶ್ ಶರ್ಮಾ, ಸ್ಯಾಮ್ ಕರನ್, ಶಾರುಖ್ ಖಾನ್, ಹರ್ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್ದೀಪ್ ಸಿಂಗ್.

  • 30 Apr 2023 03:16 PM (IST)

    ಚೆನ್ನೈ ಸೂಪರ್ ಕಿಂಗ್ಸ್

    ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಅಂಬಟಿ ರಾಯಡು, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ, ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ

  • 30 Apr 2023 03:02 PM (IST)

    ಟಾಸ್ ಗೆದ್ದ ಚೆನ್ನೈ

    ಟಾಸ್ ಗೆದ್ದ ಚೆನ್ನೈ ನಾಯಕ ಎಂಎಸ್ ಧೋನಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ.

  • Published On - Apr 30,2023 3:01 PM

    Follow us
    ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
    ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
    ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
    ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
    ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
    ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
    New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
    New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
    ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
    ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
    ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
    ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
    ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
    ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
    ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
    ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
    ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
    ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
    ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
    ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ