3 ಎಸೆತ, 4 ನೋ ಬಾಲ್, 33 ರನ್; ಲಂಕಾ ಮಾಜಿ ನಾಯಕನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ

Abu Dhabi T10: ಅಬುಧಾಬಿ ಟಿ10 ಲೀಗ್‌ನಲ್ಲಿ ಶ್ರೀಲಂಕಾದ ಮಾಜಿ ನಾಯಕ ದಸುನ್ ಶನಕ ಒಂದೇ ಓವರ್‌ನಲ್ಲಿ 4 ನೋ ಬಾಲ್‌ಗಳನ್ನು ಎಸೆದು 33 ರನ್‌ಗಳನ್ನು ಬಿಟ್ಟುಕೊಟ್ಟ ಘಟನೆ ಮ್ಯಾಚ್ ಫಿಕ್ಸಿಂಗ್ ಆರೋಪಕ್ಕೆ ಕಾರಣವಾಗಿದೆ. ಡೆಲ್ಲಿ ಬುಲ್ಸ್ ಮತ್ತು ಬೆಂಗಾಲ್ ಟೈಗರ್ಸ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದ್ದು, ಶನಕ ಉದ್ದೇಶಪೂರ್ವಕ ನೋ ಬಾಲ್‌ಗಳು ಎಸೆದಿದ್ದಾರೆ ಎಂಬುದು ನೆಟ್ಟಿಗರ ಆರೋಪವಾಗಿದೆ.

3 ಎಸೆತ, 4 ನೋ ಬಾಲ್, 33 ರನ್; ಲಂಕಾ ಮಾಜಿ ನಾಯಕನ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ
ದಸುನ್ ಶನಕ
Follow us
ಪೃಥ್ವಿಶಂಕರ
|

Updated on:Nov 28, 2024 | 4:08 PM

ಅಬುಧಾಬಿ ಟಿ10 ಲೀಗ್‌ನಲ್ಲಿ ಕೇವಲ 3 ಎಸೆತಗಳಲ್ಲಿ 4 ನೋ ಬಾಲ್​ ಸಹಿತ 33 ರನ್ ನೀಡಿದ್ದ ಶ್ರೀಲಂಕಾದ ಮಾಜಿ ನಾಯಕ ಮತ್ತು ಆಲ್‌ರೌಂಡರ್ ದಸುನ್ ಶನಕ ಮ್ಯಾಚ್ ಫಿಕ್ಸಿಂಗ್ ಆರೋಪ ಎದುರಿಸುತ್ತಿದ್ದಾರೆ. ಡೆಲ್ಲಿ ಬುಲ್ಸ್ ಹಾಗೂ ಬೆಂಗಾಲ್ ಟೈಗರ್ಸ್ ನಡುವಿನ ಪಂದ್ಯದಲ್ಲಿ ದಸುನ್ ಶನಕ ಕೇವಲ 3 ಎಸೆತಗಳಲ್ಲಿ 30 ರನ್ ಬಿಟ್ಟುಕೊಟ್ಟ ಘಟನೆ ಇದೀಗ ಕ್ರಿಕೆಟ್ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೇವಲ 4-5 ವರ್ಷಗಳಿಂದ ಹುಟ್ಟಿಕೊಂಡರುವ ಅಬುಧಾಬಿ ಟಿ10 ಲೀಗ್​ನ ಆರಂಭದಲ್ಲಿ ಕೇವಲ ಬೆರಳೆಣಿಕೆಯಷ್ಟು ಸ್ಟಾರ್ ಕ್ರಿಕೆಟಿಗರು ಮಾತ್ರ ಆಡುತ್ತಿದ್ದರು. ಆದರೆ ಟಿ20 ಮತ್ತು ಟಿ10 ಕ್ರಿಕೆಟ್‌ಗೆ ಹೆಚ್ಚುತ್ತಿರುವ ಜನಪ್ರಿಯತೆಯಿಂದಾಗಿ ವಿಶ್ವದ ಪ್ರಸಿದ್ಧ ಕ್ರಿಕೆಟಿಗರು ಈ ಲೀಗ್‌ನಲ್ಲಿ ಆಡುತ್ತಿದ್ದಾರೆ. ಇದರ ಜೊತೆಗೆ ಈ ಲೀಗ್​ನ ಪ್ರತಿಯೊಂದು ಪಂದ್ಯವೂ ಒಂದಿಲ್ಲೊಂದು ವಿವಾದಕ್ಕೆ ಸಿಲುಕಿಕೊಳ್ಳುತ್ತಿದೆ.

ಶನಕ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ

ಈ ಲೀಗ್​ನಲ್ಲಿ ನವೆಂಬರ್ 25 ರಂದು ನಡೆದ ಡೆಲ್ಲಿ ಬುಲ್ಸ್ ಮತ್ತು ಬೆಂಗಾಲ್ ಟೈಗರ್ಸ್ ತಂಡಗಳ ನಡುವಿನ ಪಂದ್ಯದಲ್ಲಿ ಡೆಲ್ಲಿ ತಂಡ ಮೊದಲು ಬ್ಯಾಟ್ ಮಾಡಿ 10 ಓವರ್‌ಗಳಲ್ಲಿ 6 ವಿಕೆಟ್‌ಗೆ 123 ರನ್ ಗಳಿಸಿತು. ಈ ಪಂದ್ಯದಲ್ಲಿ ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ನಿಖಿಲ್ ಚೌಧರಿ ಡೆಲ್ಲಿ ಪರ ಗರಿಷ್ಠ 47 ರನ್ ಗಳಿಸಿದರು. ಅದು ಕೇವಲ 16 ಎಸೆತಗಳಲ್ಲಿ. ಇದರಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳಿದ್ದವು. ಇದರಲ್ಲಿ ನಿಖಿಲ್ ಒಂದೇ ಓವರ್‌ನಲ್ಲಿ 28 ರನ್ ಗಳಿಸಿದ್ದು, ಅವರ ಸ್ಫೋಟಕ ಆಟಕ್ಕೆ ಸಾಕ್ಷಿಯಾಗಿತ್ತು.

ಆದರೆ ಮೈದಾನದಲ್ಲಿ ಬೌಂಡರಿಗಳ ಮಳೆಗರೆದ ನಿಖಿಲ್​ಗಿಂತ ಹೆಚ್ಚಾಗಿ ಈ ಪಂದ್ಯದಲ್ಲಿ ಒಂದೇ ಓವರ್​ನಲ್ಲಿ 4 ನೋ ಬಾಲ್ ಎಸೆದ ಶ್ರೀಲಂಕಾದ ಮಾಜಿ ನಾಯಕ ದಸುನ್ ಶನಕ ಚರ್ಚೆಯಲ್ಲಿದ್ದಾರೆ. ಶ್ರೀಲಂಕಾದ ಈ ಸ್ಟಾರ್ ಆಲ್ ರೌಂಡರ್ ಒಂದೇ ಓವರ್‌ನಲ್ಲಿ 33 ರನ್‌ಗಳನ್ನು ಬಿಟ್ಟುಕೊಟ್ಟರು. ಅಚ್ಚರಿಯೆಂದರೆ ಶನಕ ಈ ಓವರ್​ನಲ್ಲಿ ಬರೋಬ್ಬರಿ 4 ನೋ ಬಾಲ್​ಗಳನ್ನು ಬೌಲ್ ಮಾಡಿದರು. ಹೀಗಾಗಿ ಶನಕ ಅವರ ಈ ನಡೆ ಎಲ್ಲರಲ್ಲೂ ಅನುಮಾನ ಮೂಡಿಸಿದ್ದು, ಲಂಕಾ ತಂಡದ ಮಾಜಿ ನಾಯಕ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಎಂದು ನೆಟ್ಟಿಗರು ಆರೋಪ ಹೊರಿಸುತ್ತಿದ್ದಾರೆ.

ಒಂದೇ ಓವರ್‌ನಲ್ಲಿ 4 ನೋಬಾಲ್‌

ಶನಕ ಅವರ ಮೊದಲ ಎಸೆತವನ್ನು ನಿಖಿಲ್ ಬೌಂಡರಿ ಬಾರಿಸಿದರು. ನಂತರ ಮುಂದಿನ ಎರಡು ಎಸೆತಗಳನ್ನು ಶನಕ ನೋ ಬಾಲ್‌ ಮಾಡಿದರು. ಆ ಎಸೆತದಲ್ಲೂ ನಿಖಿಲ್ ಬೌಂಡರಿ ಕಲೆಹಾಕಿದರು. ಎರಡನೇ ಫೇರ್ ಬಾಲ್​ನಲ್ಲಿ ಮತ್ತೊಂದು ಬೌಂಡರಿ ಬಂತು. ನಂತರ ಮೂರನೇ ಬಾಲ್​ನಲ್ಲಿ ನಿಖಿಲ್ ಸಿಕ್ಸರ್ ಬಾರಿಸಿದರು. ನಂತರದ ಎಸೆತವೂ ನೋ ಬಾಲ್ ಆಗಿತ್ತು. ಆದರೆ ಅದರಲ್ಲಿ ಯಾವುದೇ ರನ್ ಬರಲಿಲ್ಲ. ಆ ನಂತರದ ಎಸೆತವನ್ನು ಶನಕ ನೋ ಬಾಲ್ ಮಾಡಿದರು. ಇದರಲ್ಲಿ ನಿಖಿಲ್ ಮತ್ತೊಂದು ಬೌಂಡರಿ ಕಲೆಹಾಕಿದರು. ಒಟ್ಟಾರೆ ಶನಕ ಬೌಲ್ ಮಾಡಿದ ಈ ಓವರ್​ನಲ್ಲಿ 4, 4(nb),4(nb),4,6,(nb),4(nb) ದೃಶ್ಯ ಕಂಡುಬಂತು.

ಆ ಓವರ್​ನ ಉಳಿದ 3 ಎಸೆತಗಳಲ್ಲಿ ಶನಕ ಕೇವಲ ಒಂದು ರನ್ ಬಿಟ್ಟುಕೊಟ್ಟರು. ಹೀಗಾಗಿ ಒಂದೇ ಓವರ್​ನಲ್ಲಿ 33 ರನ್ ಬಂದವು. ಇಲ್ಲಿ ಶನಕ ಬೌಲ್ ಮಾಡಿದ ನೋ ಬಾಲ್​ಗಳನ್ನು ನೋಡಿದರೆ, ಶನಕ ಬೇಕಂತಲೇ ನೋ ಬಾಲ್ ಎಸೆದಿದ್ದಾರೆ ಎಂಬುದು ಸ್ಪಷ್ಟವಾಗುತ್ತಿತ್ತು. ಏಕೆಂದರೆ ಶನಕ ಅವರ ಕಾಲು ಕ್ರೀಸ್‌ನ ಹೊರಗೆ ಒಂದು ಅಡಿ ದೂರ ಇತ್ತು. ಇದರಿಂದ ಶನಕ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Thu, 28 November 24

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ