David Warner: ಫಾರ್ಮ್​ಗೆ ಬಂದ ಡೇವಿಡ್ ವಾರ್ನರ್: ಅಗ್ರಸ್ಥಾನದತ್ತ ಆಸ್ಟ್ರೇಲಿಯಾ ಕಣ್ಣು: 5ನೇ ಸ್ಥಾನದಲ್ಲಿ ಭಾರತ

David Warner: ಫಾರ್ಮ್​ಗೆ ಬಂದ ಡೇವಿಡ್ ವಾರ್ನರ್: ಅಗ್ರಸ್ಥಾನದತ್ತ ಆಸ್ಟ್ರೇಲಿಯಾ ಕಣ್ಣು: 5ನೇ ಸ್ಥಾನದಲ್ಲಿ ಭಾರತ
AUS vs SL T20 World Cup

Australia vs Sri Lanka T20 World Cup: ಟಿ20 ವಿಶ್ವಕಪ್​ನ ಪಾಯಿಂಟ್ ಟೇಬಲ್​ನ ಗ್ರೂಪ್ 1 ರಲ್ಲಿ ಆಸ್ಟ್ರೇಲಿಯಾ 4 ಅಂಕದೊಂದಿಗೆ ಎರಡನೇ ಸ್ಥಾನಲ್ಲಿದೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ 4 ಅಂಕ ಪಡೆದು ರನ್​ರೇಟ್ ಆಧಾರದ ಮೇಲೆ ಅಗ್ರಸ್ಥನದಲ್ಲಿದೆ. ಇತ್ತ ಭಾರತ ಗ್ರೂಪ್ 2 ರಲ್ಲಿ ಐದನೇ ಸ್ಥಾನದಲ್ಲಿದೆ.

TV9kannada Web Team

| Edited By: Vinay Bhat

Oct 29, 2021 | 7:19 AM

ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಗುರುವಾರ ನಡೆದ ಟಿ20 ವಿಶ್ವಕಪ್​ನ (T20 World Cup) 22ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ (Australia vs Sri Lanka) ಗೆಲುವು ಸಾಧಿಸಿತು. ಸತತ ವೈಫಲ್ಯದಿಂದ ಕಂಗೆಟ್ಟಿದ್ದ ಡೇವಿಡ್ ವಾರ್ನರ್ (David Warner) ಕೊನೆಗೂ ಫಾರ್ಮ್​ಗೆ ಮರಳಿ ಅರ್ಧಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 7 ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಸತತ 2ನೇ ಗೆಲುವನ್ನು ದಾಖಲಿಸಿದೆ. ಅಲ್ಲದೆ ಪಾಯಿಂಟ್ ಟೇಬಲ್​ನ (T20 World Cup Point Table) ಗ್ರೂಪ್ 1 ರಲ್ಲಿ 4 ಅಂಕದೊಂದಿಗೆ ಎರಡನೇ ಸ್ಥಾನಲ್ಲಿದೆ. ಮೊದಲ ಸ್ಥಾನದಲ್ಲಿ ಇಂಗ್ಲೆಂಡ್ (England) 4 ಅಂಕ ಪಡೆದು ರನ್​ರೇಟ್ ಆಧಾರದ ಮೇಲೆ ಅಗ್ರಸ್ಥನದಲ್ಲಿದೆ. ಇತ್ತ ಭಾರತ (Team India) ಗ್ರೂಪ್ 2 ರಲ್ಲಿ ಐದನೇ ಸ್ಥಾನದಲ್ಲಿದೆ.

ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಲಂಕಾ ಇನಿಂಗ್ಸ್‌ನ ಆರಂಭ ಉತ್ತಮವಾಗಿರಲಿಲ್ಲ. ಮೂರನೇ ಓವರ್‌ನಲ್ಲಿಯೇ ಪ್ಯಾಟ್ ಕಮಿನ್ಸ್‌ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಪಥುಮ್ ನಿಸಾಂಕ (7ರನ್) ಔಟಾದರು. ಕುಸಾಲ್ ಪೆರೆರ ಅಸಲಂಕಾ ತಲಾ 35 ರನ್‌ಗಳ ಕೊಡುಗೆ ನೀಡಿದರು.

ಜಂಪಾ ಹಾಕಿದ 12ನೇ ಓವರ್‌ನಲ್ಲಿ ಅವಿಷ್ಕಾ ಫರ್ನಾಂಡೊ ಔಟಾದರು. ಇದರಿಂದಾಗಿ ರನ್‌ ಗಳಿಕೆಯ ವೇಗ ಕುಸಿಯಿತು. ಆದರೆ, ರಾಜಪಕ್ಸ (ಔಟಾಗದೆ 33 ರನ್ 26 ಎಸೆತ, 4 ಬೌಂಡರಿ, 1ಸಿಕ್ಸರ್) ಅವರ ಬಿರುಸಿನ ಬ್ಯಾಟಿಂಗ್‌ನಿಂದಾಗಿ ತಂಡದ ಮೊತ್ತವು ಹೆಚ್ಚಾಯಿತು. ಒಂದು ಕಡೆ ವಿಕೆಟ್‌ಗಳು ಉರುಳುತ್ತಿದ್ದರೂ ಇನ್ನೊಂದೆಡೆ ರಾಜಪಕ್ಸ ಅವರ ಆತ್ಮವಿಶ್ವಾಸದ ಆಟ ಗಮನ ಸೆಳೆಯಿತು. ಶ್ರಿಲಂಕಾ ತಂಡ 154 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಮುಗಿಸಿತು. ಆಸ್ಟ್ರೇಲಿಯಾ ತಂಡದ ಪರವಾಗಿ ಆಡಂ ಜಂಪಾ ನಾಲ್ಕು ಓವರ್‌ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಪಡೆದರೆ ಸ್ಟಾರ್ಕ್ ಹಾಗೂ ಪ್ಯಾಟ್ ಕಮ್ಮಿನ್ಸ್ ಕೂಡ ತಲಾ 2 ವಿಕೆಟ್ ಪಡೆದರು.

ಸವಾಲಿನ ಮೊತ್ತ ಬೆನ್ನತ್ತಿದ ಆಸೀಸ್‌ಗೆ ನಾಯಕ ಆ್ಯರನ್ ಫಿಂಚ್ ಹಾಗೂ ಡೇವಿಡ್ ವಾರ್ನರ್ 41 ಎಸೆತಗಳಲ್ಲೇ 70 ರನ್‌ಗಳ ಭರ್ಜರಿ ಜೊತೆಯಾಟ ಕಟ್ಟಿದರು. 23 ಎಸೆತಗಳನ್ನು ಎದುರಿಸಿದ ಫಿಂಚ್ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದ 37 ರನ್ ಗಳಿಸಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ಪಡೆದು ಕ್ರೀಸಿಗಿಳಿದ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ (5) ಮಿಂಚಲಾಗಲಿಲ್ಲ.

ಆದರೆ ಇನ್ನೊಂದೆಡೆ ನಿರಂತಕವಾಗಿ ಬ್ಯಾಟ್ ಬೀಸಿದ ವಾರ್ನರ್ ಕೇವಲ 31 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದರು. ಅಲ್ಲದೆ ಲಯಕ್ಕೆ ಮರಳುವ ಮೂಲಕ ಟೀಕಾಕಾರರಿಗೆ ತಕ್ಕ ಉತ್ತರ ನೀಡಿದರು. ಸ್ಟೀವ್ ಸ್ಮಿತ್ ಜೊತೆಗೂಡಿದ ವಾರ್ನರ್ ಮೂರನೇ ವಿಕೆಟ್‌ಗೆ ಅರ್ಧಶತಕದ ಜೊತೆಯಾಟ ನೀಡಿದರು. 42 ಎಸೆತಗಳನ್ನು ಎದುರಿಸಿದ ವಾರ್ನರ್ 10 ಬೌಂಡರಿಗಳ ನೆರವಿನಿಂದ 65 ರನ್ ಗಳಿಸಿದರು.

ಅಂತಿಮವಾಗಿ 17 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗೆಲುವು ದಾಖಲಿಸಿತು. ಸ್ಟೀವ್ ಸ್ಮಿತ್ (28*) ಹಾಗೂ ಮಾರ್ಕಸ್ ಸ್ಟೋಯಿನಿಸ್ (16*) ಔಟಾಗದೆ ಉಳಿದರು. ಲಂಕಾ ಪರ ವನಿಂದು ಹಸರಂಗ ಎರಡು ವಿಕೆಟ್ ಕಬಳಿಸಿದರು. ಎದುರಾಳಿಯ ಎರಡು ಪ್ರಮುಖ ವಿಕೆಟ್ ಕಿತ್ತ ಆಡಂ ಜಂಪಾ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು.

T20 World Cup 2021: ಟಿ20 ವಿಶ್ವಕಪ್ ಗೆಲ್ಲುವ ತಂಡ ಹೆಸರಿಸಿದ ವೀರೇಂದ್ರ ಸೆಹ್ವಾಗ್

(David Warner Half-Century Australia chased down the target of 155 runs vs Sri Lanka in T20 WC 2021)

Follow us on

Related Stories

Most Read Stories

Click on your DTH Provider to Add TV9 Kannada