David Warner: ಸರ್ಫರಾಜ್​ರನ್ನು ತಡೆದು ನಾನು ಮೊದಲ ಬಾಲ್ ಆಡುತ್ತೇನೆ ಎಂದು ಕೈಸುಟ್ಟುಕೊಂಡ ವಾರ್ನರ್

| Updated By: Vinay Bhat

Updated on: May 17, 2022 | 9:32 AM

PBKS vs DC: ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಡೆಲ್ಲಿಗೆ ಆರಂಭ ಚೆನ್ನಾಗಿರಲಿಲ್ಲ. ಇನ್ನಿಂಗ್ಸ್​ನ ಮೊದಲ ಓವರ್​​​ನ ಮೊದಲ ಎಸೆತದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಅದುಕೂಡ ಪ್ರಮುಖ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ (David Warner) ವಿಕೆಟ್.

David Warner: ಸರ್ಫರಾಜ್​ರನ್ನು ತಡೆದು ನಾನು ಮೊದಲ ಬಾಲ್ ಆಡುತ್ತೇನೆ ಎಂದು ಕೈಸುಟ್ಟುಕೊಂಡ ವಾರ್ನರ್
David Warner PBKS vs DC IPL 2022
Follow us on

ಇಂಡಿಯನ್ ಪ್ರೀಮಿಯರ್ ಲೀಗ್​ನ ಅಸಲಿ ಆಟ ಈಗ ಶುರುವಾಗಿದೆ. ಬಾಕಿ ಉಳಿದಿರುವುದು ಇನ್ನು ಕೆಲವೇ ಪಂದ್ಯಗಳಾದರೂ ಪ್ಲೇ ಆಫ್​ನ ಮೂರು ಸ್ಥಾನಕ್ಕೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಇದರ ನಡುವೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ (PBKS vs DC) ವಿರುದ್ಧ ಗೆಲ್ಲುವ ಮೂಲಕ ಪಾಯಿಂಟ್ ಟೇಬಲ್​ನಲ್ಲಿ (Point Table) ನಾಲ್ಕನೇ ಸ್ಥಾನಕ್ಕೆ ಜಿಗಿದಿದ್ದು ಪ್ಲೇ ಆಫ್ ರೇಸ್​ನಲ್ಲಿ ಕಾಣಿಸಿಕೊಂಡಿದೆ. ಡೆಲ್ಲಿ ಕಲೆಹಾಕಿದ್ದು ಸವಾಲಿನ ಮೊತ್ತವೇನು ಅಲ್ಲ. ಆದರೆ, ಬೌಲರ್​​ಗಳು ನೀಡಿದ ಅದ್ಭುತ ಪ್ರದರ್ಶನದಿಂದ ಪಂತ್​ ಪಡೆ 17 ರನ್​ಗಳಿಂದ ಗೆದ್ದು ಬೀಗಿತು. ಟಾಸ್ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಡೆಲ್ಲಿಗೆ ಆರಂಭ ಚೆನ್ನಾಗಿರಲಿಲ್ಲ. ಇನ್ನಿಂಗ್ಸ್​ನ ಮೊದಲ ಓವರ್​​​ನ ಮೊದಲ ಎಸೆತದಲ್ಲೇ ಮೊದಲ ವಿಕೆಟ್ ಕಳೆದುಕೊಂಡಿತು. ಅದುಕೂಡ ಪ್ರಮುಖ ಬ್ಯಾಟ್ಸ್​ಮನ್ ಡೇವಿಡ್ ವಾರ್ನರ್ (David Warner) ವಿಕೆಟ್. ಇಲ್ಲಿ ವಾರ್ನರ್ ತಾವು ಮಾಡಿಕೊಂಡ ಎಡವಟ್ಟಿನಿಂದಲೇ ಪೆವಿಲಿಯನ್ ಸೇರಿಕೊಳ್ಳಬೇಕಾಗಿ ಬಂತು.

ಹೌದು, ಪಂದ್ಯದ ಮೊದಲ ಎಸೆತದಲ್ಲೇ ಸ್ಫೋಟಕ ಓಪನರ್ ಡೇವಿಡ್ ವಾರ್ನರ್ ಶೂನ್ಯಕ್ಕೆ ಗೋಲ್ಡರ್ ಡಕೌಟ್‌ ಔಟ್ ಆದರು. ಲಿಯಾಮ್ ಲಿವಿಂಗ್‌ಸ್ಟೋನ್ ಸ್ಪಿನ್ ದಾಳಿಯನ್ನ ಅರಿಯದೇ ರಾಹುಲ್ ಚಹಾರ್‌ಗೆ ಕ್ಯಾಚಿತ್ತು ನಿರ್ಗಮಿಸಿದರು. ಆದರೆ, ವಾರ್ನರ್ ಔಟಾಗಲೂ ಪಂದ್ಯ ಆರಂಭಕ್ಕೂ ಮುನ್ನ ಅವರು ಮಾಡಿದ ಎಡವಟ್ಟೇ ಕಾರಣವಾಯಿತು. ಪಂದ್ಯ ಆರಂಭದ ಮೊದಲ ಓವರ್ ಶುರುವಾಗುವುದಕ್ಕೂ ಮುನ್ನ ವಾರ್ನರ್ ನಾನ್‌ಸ್ಟ್ರೈಕ್‌ನಲ್ಲಿದ್ದರು. ಸರ್ಫರಾಜ್ ಖಾನ್ ಮೊದಲ ಎಸೆತವನ್ನ ಎದುರಿಸಲು ರೆಡಿಯಾಗಿದ್ದರು. ಹೀಗಿರುವಾಗ ಪಂಜಾಬ್ ನಾಯಕ ಮಯಾಂಕ್ ಅಗರ್ವಾಲ್‌ ಮೊದಲ ಓವರ್ ಅನ್ನು ಹಾಕಲು ಚೆಂಡನ್ನು ಲಿಯಾಮ್ ಲಿವಿಂಗ್‌ಸ್ಟೋನ್​ಗೆ ನೀಡಿದರು.

ಇದನ್ನೂ ಓದಿ
RCB, IPL 2022: ತೂಗುಯ್ಯಾಲೆಯಲ್ಲಿ ಆರ್​​ಸಿಬಿ ಪ್ಲೇ ಆಫ್ ಭವಿಷ್ಯ: ಆ ಒಂದು ಪಂದ್ಯದ ಮೇಲೆ ಎಲ್ಲರ ಕಣ್ಣು
Thomas Cup: ಥಾಮಸ್ ಕಪ್ ವಿಜೇತರಿಗೆ ಕೇಂದ್ರದಿಂದ 1 ಕೋಟಿ, ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಬಹುಮಾನ ಘೋಷಣೆ
MI vs SRH IPL 2022 Match Prediction: ಹೈದರಾಬಾದ್‌ ಪ್ಲೇಆಫ್​ಗೇರಬೇಕೆಂದರೆ ಮುಂಬೈ ತಂಡವನ್ನು ಸೋಲಿಸಲೇಬೇಕು
IPL 2022: ಇಬ್ಬರು ಯುವ ಆಟಗಾರರ ಪ್ರದರ್ಶನಕ್ಕೆ ಗಂಗೂಲಿ ಫಿದಾ..!

 

ಇದನ್ನು ಗಮನಿಸಿದ ವಾರ್ನರ್ ನಾನ್‌ಸ್ಟ್ರೈಕ್‌ನಿಂದ ಬಂದು ಸರ್ಫರಾಜ್​ಗೆ ನಾನು ಮೊದಲೆಸೆತವನ್ನು ಆಡುತ್ತೇನೆ ಎಂದರು. ಆದರೆ ದುರಂತ ಅಂದರೆ ವಾರ್ನರ್‌ನ ಈ ನಿರ್ಧಾರ ಅವರಿಗೆ ತಿರುಗುಬಾಣವಾಯಿತು. ಲಿವಿಂಗ್‌ಸ್ಟೋನ್​ ಅವರ ಮೊದಲ ಎಸೆತದಲ್ಲೇ ವಾರ್ನರ್‌ ಔಟಾದರು. ಅಚ್ಚರಿ ಎಂದರೆ, ಐಪಿಎಲ್ ಇತಿಹಾಸದಲ್ಲಿ ಕಳೆದ ಎಂಟು ವರ್ಷಗಳ ಪೈಕಿ ಇದು ಮೊದಲ ಬಾರಿ ವಾರ್ನರ್ ಗೋಲ್ಡರ್ ಡಕೌಟ್‌ ಆಗಿರುವುದು.

 

ಆರಂಭದಲ್ಲಿಯೇ ಡೆಲ್ಲಿ ವಾರ್ನರ್ ವಿಕೆಟ್ ಕಳೆದುಕೊಂಡಿತಾದರೂ ನಂತರ ಉತ್ತಮ ಕಮ್​ಬ್ಯಾಕ್ ಮಾಡಿತು. ಸರ್ಫರಾಜ್ ಖಾನ್‌ ಮತ್ತು ಮಿಚೆಲ್‌ ಮಾರ್ಷ್‌ ಪಂಜಾಬ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿ ದ್ವಿತೀಯ ವಿಕೆಟಿಗೆ 51 ರನ್‌ ಪೇರಿಸಿ ತಂಡವನ್ನು ಆರಂಭದ ಕುಸಿತದಿಂದ ಪಾರು ಮಾಡಿದರು. ಉತ್ತಮವಾಗಿ ಆಡುತ್ತಿದ್ದ ಸರ್ಫರಾಜ್ 32 ರನ್‌ ಗಳಿಸಿ ಅರ್ಷದೀಪ್‌ ಅವರ ಬೌಲಿಂಗ್‌ನಲ್ಲಿ ಔಟಾದರು. ಪಂಜಾಬ್‌ ದಾಳಿಯನ್ನು ದಿಟ್ಟವಾಗಿ ಎದುರಿಸಿದ ಮಿಚೆಲ್‌ ಮಾರ್ಷ್‌ ಆಕರ್ಷಕ ಅರ್ಧಶತಕ ದಾಖಲಿಸಿ ತಂಡವನ್ನು ಆಧರಿಸಿದರು. 48 ಎಸೆತ ಎದುರಿಸಿ 4 ಬೌಂಡರಿ ಮತ್ತು 3 ಸಿಕ್ಸರ್‌ ನೆರವಿನಿಂದ 63 ರನ್‌ ಗಳಿಸಿ ಔಟಾದರು. ಅಂತಿಮವಾಗಿ ಡೆಲ್ಲಿ 20 ಓವರ್​​ಗೆ 7 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.

ಸ್ಪರ್ಧಾತ್ಮಕ ಮೊತ್ತ ಬೆಂಬತ್ತಿದ ಪಂಜಾಬ್ ಕಿಂಗ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಗೆ 142 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ತಂಡಕ್ಕೆ ಜಾನಿ ಬೇರ್ ಸ್ಟೊ (28) ಮತ್ತು ಶಿಖರ್ ಧವನ್ (19) ಉತ್ತಮ ಆರಂಭ ನೀಡಿದರಾದರೂ ನಂತರ ನಾಟಕೀಯ ಕುಸಿತ ಅನುಭವಿಸಿ ಒತ್ತಡಕ್ಕೆ ಒಳಗಾಯಿತು. ಮಧ್ಯಮ ಕ್ರಮಾಂಕದಲ್ಲಿ ಜತೇಶ್ ಶರ್ಮ 34 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡ 44 ರನ್ ಬಾರಿಸಿ ಔಟಾದರೆ, ರಾಹುಲ್ ಚಾಹರ್ 22 ಎಸೆತಗಳಲ್ಲಿ 2 ಬೌಂಡರಿ ಮತ್ತು 1 ಸಿಕ್ಸರ್ ಸಹಾಯದಿಂದ 24 ರನ್ ಗಳಿಸಿ ಔಟಾಗದೆ ಉಳಿದರು

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:32 am, Tue, 17 May 22