Abu Dhabi T10: ಡೆಕ್ಕನ್ ಗ್ಲಾಡಿಯೇಟರ್ಸ್ ಚಾಂಪಿಯನ್ಸ್
Abu Dhabi T10 champions: ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು ಮೂರನೇ ಬಾರಿಗೆ ಅಬುಧಾಬಿ ಟಿ10 ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ 2021 ಮತ್ತು 2022 ರಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಅಬುಧಾಬಿಯಲ್ಲಿ ನಡೆದ ಟಿ10 ಲೀಗ್ ನಲ್ಲಿ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಶೇಖ್ ಝಾಯೆದ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ಹಾಗೂ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡದ ನಾಯಕ ನಿಕೋಲಸ್ ಪೂರನ್ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸ್ಯಾಂಪ್ ಆರ್ಮಿ ತಂಡವು ನಿರೀಕ್ಷಿತ ಆರಂಭ ಪಡೆದಿರಲಿಲ್ಲ.
ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ 23 ಎಸೆತಗಳಲ್ಲಿ 34 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟರ್ ಗಳು ರನ್ಗಳಿಸಲು ಪರದಾಡಿದರು. ಪರಿಣಾಮ ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ತಂಡವು 10 ಓವರುಗಳಲ್ಲಿ 7 ವಿಕೆಟ್ ಕಳೆದುಕೊಂಡು 104 ರನ್ ಗಳಿಸಲಷ್ಟೇ ಶಕ್ತರಾದರು.
105 ರನ್ ಗಳ ಗುರಿ ಬೆನ್ನತ್ತಿದ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡಕ್ಕೆ ಕೊಹ್ಲರ್ ಕ್ಯಾಡ್ಮೋರ್ ಹಾಗೂ ನಿಕೋಲಸ್ ಪೂರನ್ ಸ್ಪೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್ ಗೆ 51 ರನ್ ಗಳ ಜೊತೆಯಾಟವಾಡಿದ ಬಳಿಕ ಪೂರನ್ (28) ಔಟಾದರು.
ಮತ್ತೊಂದೆಡೆ ಸಿಡಿಲಬ್ಬರ ಮುಂದುವರೆಸಿದ ಕೊಹ್ಲರ್ 21 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 5 ಫೋರ್ ಗಳೊಂದಿಗೆ 56 ರನ್ ಚಚ್ಚಿದರು. ಈ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು 6.5 ಓವರ್‌ಗಳಲ್ಲಿ ಗುರಿ ಮುಟ್ಟಿ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.
ಈ ಮೂಲಕ ಡೆಕ್ಕನ್ ಗ್ಲಾಡಿಯೇಟರ್ಸ್ ತಂಡವು ಮೂರನೇ ಬಾರಿಗೆ ಅಬುಧಾಬಿ ಟಿ10 ಲೀಗ್ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದಕ್ಕೂ ಮುನ್ನ 2021 ಮತ್ತು 2022 ರಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಇದೀಗ ಮೂರನೇ ಬಾರಿ ಟ್ರೋಫಿ ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗಿದೆ.
ಅಬುಧಾಬಿ ಟಿ10 ಲೀಗ್ನ ಈ ಹಿಂದಿನ ವಿಜೇತರು:
ಸೀಸನ್ | ವಿನ್ನರ್ಸ್ | ರನ್ನರ್ಸ್ ಅಪ್ |
---|---|---|
2017 | ಕೇರಳ ಕಿಂಗ್ಸ್ | ಪಂಜಾಬಿ ಲೆಜೆಂಡ್ಸ್ |
2018 | ನಾರ್ಥನ್ ವಾರಿಯರ್ಸ್ | ಪಖ್ತೂನ್ಸ್ |
2019 | ಮರಾಠ ಅರೇಬಿಯನ್ಸ್ | ಡೆಕ್ಕನ್ ಗ್ಲಾಡಿಯೇಟರ್ಸ್ |
2021 | ನಾರ್ಥನ್ ವಾರಿಯರ್ಸ್ | ಡೆಲ್ಲಿ ಬುಲ್ಸ್ |
2021-22 | ಡೆಕ್ಕನ್ ಗ್ಲಾಡಿಯೇಟರ್ಸ್ | ಡೆಲ್ಲಿ ಬುಲ್ಸ್ |
2022 | ಡೆಕ್ಕನ್ ಗ್ಲಾಡಿಯೇಟರ್ಸ್ | ನ್ಯೂಯಾರ್ಕ್ ಸ್ಟ್ರೈಕರ್ಸ್ |
2023 | ನ್ಯೂಯಾರ್ಕ್ ಸ್ಟ್ರೈಕರ್ಸ್ | ಡೆಕ್ಕನ್ ಗ್ಲಾಡಿಯೇಟರ್ಸ್ |
ಡೆಕ್ಕನ್ ಗ್ಲಾಡಿಯೇಟರ್ಸ್ ಪ್ಲೇಯಿಂಗ್ 11: ನಿಕೋಲಸ್ ಪೂರನ್ (ನಾಯಕ) , ಟಾಮ್ ಕೊಹ್ಲರ್-ಕ್ಯಾಡ್ಮೋರ್ , ಜೋಸ್ ಬಟ್ಲರ್ , ಮಾರ್ಕಸ್ ಸ್ಟೊಯಿನಿಸ್ , ಡೇವಿಡ್ ವೀಝ , ಉಸ್ಮಾನ್ ತಾರಿಕ್ , ಅನ್ರಿಕ್ ನೋಕಿಯಾ, ಮಹೀಶ್ ತೀಕ್ಷಣ , ಜಹೂರ್ ಖಾನ್ , ಇಬ್ರಾರ್ ಅಹ್ಮದ್ , ರಿಚರ್ಡ್ ಗ್ಲೀಸನ್.
ಇದನ್ನೂ ಓದಿ: IPL 2025: ಐಪಿಎಲ್ ಅಖಾಡದಲ್ಲಿ 13 ಕನ್ನಡಿಗರು
ಮೋರಿಸ್ವಿಲ್ಲೆ ಸ್ಯಾಂಪ್ ಆರ್ಮಿ ಪ್ಲೇಯಿಂಗ್ 11: ಫಾಫ್ ಡು ಪ್ಲೆಸಿಸ್ , ಚರಿತ್ ಅಸಲಂಕಾ , ಆಂಡ್ರೀಸ್ ಗೌಸ್ (ವಿಕೆಟ್ ಕೀಪರ್) , ರೋಹನ್ ಮುಸ್ತಫಾ (ನಾಯಕ) , ಜಾಕ್ ಟೇಲರ್ , ಕರೀಮ್ ಜನತ್ , ಇಮಾದ್ ವಾಸಿಮ್ , ಶಾರ್ಜೀಲ್ ಖಾನ್ , ಕೈಸ್ ಅಹ್ಮದ್ , ಇಸುರು ಉಡಾನ , ಮೊಹಮ್ಮದ್ ಝಾಹಿದ್.