
ಭಾರತ-ಜಿಂಬಾಬ್ವೆ ನಡುವಣ ಏಕದಿನ ಸರಣಿ ಮುಗಿದಿದೆ. ಈ ಸರಣಿಯನ್ನು 3-0 ಅಂತರದಿಂದ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಆತಿಥೇಯರನ್ನು ಕ್ಲೀನ್ ಸ್ವೀಪ್ ಮಾಡಿದೆ. ಆದರೆ ಮೊದಲೆರಡು ಪಂದ್ಯಗಳಲ್ಲಿ ನೀರಯಾಸವಾಗಿ ಗೆದ್ದಿದ್ದ ಟೀಮ್ ಇಂಡಿಯಾಗೆ ಜಿಂಬಾಬ್ವೆ ಭರ್ಜರಿ ಪೈಪೋಟಿ ನೀಡಿತ್ತು ಎಂಬುದು ವಿಶೇಷ. ಟೀಮ್ ಇಂಡಿಯಾ ನೀಡಿದ 290 ರನ್ಗಳ ಟಾರ್ಗೆಟ್ ಅನ್ನು ಬೆನ್ನತ್ತಿದ ಜಿಂಬಾಬ್ವೆ ಪರ ಇನ್ನೊಸೆಂಟ್ ಕೈಯಾ ಹಾಗೂ ಕೈಟಾನೊ ಇನಿಂಗ್ಸ್ ಆರಂಭಿಸಿದ್ದರು.
ವಿಶೇಷ ಎಂದರೆ ಈ ಇನಿಂಗ್ಸ್ನ ಮೊದಲ ಎಸೆತದಲ್ಲೇ ಕೈಯಾ ಅವರನ್ನು ಔಟ್ ಮಾಡುವ ಅವಕಾಶ ವೇಗಿ ದೀಪಕ್ ಚಹರ್ ಮುಂದಿತ್ತು. ನಾನ್‌ಸ್ಟ್ರೈಕರ್‌ನ ತುದಿಯಲ್ಲಿದ್ದ ಓಪನರ್ ಇನ್ನೋಸೆಂಟ್ ಕೈಯಾ ಚಹರ್ ಚೆಂಡೆಸೆಯುವ ಮುನ್ನವೇ ಕ್ರೀಸ್ ಬಿಟ್ಟಿದ್ದರು. ಇದನ್ನು ಗಮಿಸಿದ ಟೀಮ್ ಇಂಡಿಯಾ ವೇಗಿ ಮಂಕಡ್ ರನೌಟ್ ಮಾಡಿದರು. ಆದರೆ ಅಂಪೈರ್ಗೆ ಯಾವುದೇ ಮನವಿ ಸಲ್ಲಿಸದೇ ಜೀವದಾನ ನೀಡಿದರು. ಅಂದರೆ ದೀಪಕ್ ಚಹರ್ ಅಪೀಲ್ ಮಾಡಿದ್ದರೆ ಅಂಪೈರ್ಗೆ ಔಟ್ ನೀಡುವ ಅವಕಾಶವಿತ್ತು. ಇದಕ್ಕೆ ಮುಂದಾಗದೇ ದೀಪಕ್ ಚಹರ್ ಮತ್ತೆ ಬೌಲಿಂಗ್ ಮಾಡಲು ಮುಂದಾದರು.
ಇದೀಗ ದೀಪಕ್ ಚಹರ್ ಅವರ ಮಂಕಡಿಂಗ್ ರನೌಟ್ ವಿಡಿಯೋ ವೈರಲ್ ಆಗಿದೆ. ಅಲ್ಲದೆ ಬೇಲ್ಸ್ ಎಗರಿಸಿದರೂ ಔಟ್ಗಾಗಿ ಮೇಲ್ಮನವಿ ಸಲ್ಲಿಸದೇ ಕ್ರೀಡಾ ಸ್ಪೂರ್ತಿ ಮೆರೆದಿದಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗುತ್ತಿದೆ. ಇನ್ನು ದೀಪಕ್ ಚಹರ್ ನೀಡಿದ ಈ ಜೀವದಾನವನ್ನು ಬಳಸಿಕೊಳ್ಳುವಲ್ಲಿ ಇನ್ನೊಸೆಂಟ್ ಕೈಯಾ ವಿಫಲರಾದರು. 9 ಎಸೆತಗಳಲ್ಲಿ 6 ರನ್ಗಳಿಸಿ ಕೊನೆಗೆ ಚಹರ್ ಎಸೆತದಲ್ಲಿ ಎಲ್ಬಿಡಬ್ಲ್ಯೂ ಆಗಿ ಹೊರನಡೆದರು.
Deepak Chahar didn’t Appeal on Mankad ? pic.twitter.com/4ihfnljbMl
— Keshav Bhardwaj ? (@keshxv1999) August 22, 2022
ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನೀಡಿದ 290 ರನ್ಗಳ ಬೃಹತ್ ಗುರಿ ಬೆನ್ನತ್ತಿದ ಜಿಂಬಾಬ್ವೆ ತಂಡವು 276 ರನ್ಗಳಿಗೆ ಆಲೌಟ್ ಆಗುವ ಮೂಲಕ 13 ರನ್ಗಳಿಂದ ವಿರೋಚಿತ ಸೋಲೊಪ್ಪಿಕೊಂಡಿತು.