AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KL Rahul: ಕ್ಲೀನ್​ಸ್ವೀಪ್ ಸಾಧನೆ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ

IND vs ZIM, 3rd ODI: ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ 13 ರನ್​ಗಳಿಂದ ಗೆದ್ದು ಬೀಗಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ಏನು ಹೇಳಿದರು ನೋಡಿ.

KL Rahul: ಕ್ಲೀನ್​ಸ್ವೀಪ್ ಸಾಧನೆ ಬಳಿಕ ನಾಯಕ ಕೆಎಲ್ ರಾಹುಲ್ ಆಡಿದ ಮಾತುಗಳೇನು ಕೇಳಿ
Shubhman Gill and KL Rahul
TV9 Web
| Updated By: Vinay Bhat|

Updated on:Aug 23, 2022 | 1:16 PM

Share

ಹರಾರೆ ಸ್ಫೋರ್ಟ್ಸ್ ಕ್ಲಬ್​ನಲ್ಲಿ ನಡೆದ ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಜಯ ಸಾಧಿಸುವ ಮೂಲಕ ಭಾರತ (India vs Zimbabwe) 3-0 ಅಂತರದಿಂದ ಸರಣಿ ಕ್ಲೀನ್​ಸ್ವೀಪ್ ಗೈದ ಸಾಧನೆ ಮಾಡಿದೆ. ಶುಭ್ಮನ್ ಗಿಲ್ (Sbhuman Gill) ಅವರ 130 ರನ್ ಹಾಗೂ ಇಶಾನ್ ಕಿಶನ್ ಅವರ ಅರ್ಧಶತಕದ ನೆರವಿನಿಂದ ಭಾರತ 50 ಓವರ್​​ಗಳಲ್ಲಿ 289 ರನ್ ಬಾರಿಸಿತು. ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ 49.3 ಓವರ್​ನಲ್ಲಿ 276 ರನ್​ಗೆ ಆಲೌಟ್ ಆಗುವ ಮೂಲಕ ಸೋಲು ಕಂಡಿತು. ಸಿಖಂದರ್ ರಾಜಾ 115 ರನ್ ಸಿಡಿಸಿ ತಂಡದ ಗೆಲುವಿಗೆ ಏಕಾಂಗಿ ಹೋರಾಟ ನಡೆಸಿದರೂ ಸಾಧ್ಯವಾಗಲಿಲ್ಲ. ಭಾರತ 13 ರನ್​ಗಳಿಂದ ಗೆದ್ದು ಬೀಗಿತು. ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ಏನು ಹೇಳಿದರು ನೋಡಿ.

“ತುಂಬಾ ಸಂತಸವಾಗುತ್ತಿದೆ. ನಾವು ಕೆಲ ಉತ್ತಮ ಯೋಜನೆಯೊಂದಿಗೆ ಇಲ್ಲಿಗೆ ಬಂದಿದ್ದೆವು. ಅವರು ತುಂಬಾ ವೃತ್ತಿಪರರಾಗಿದ್ದಾರೆ, ಈ ಫಲಿತಾಂಶದಿಂದ ಸಂತೋಷವಾಗಿದೆ. ನಾವು ಈ ಪಂದ್ಯವನ್ನು ಆದಷ್ಟು ಬೇಗ ಮುಗಿಸಲು ಭಯಸಿದ್ದೆವು. ಆದರೆ, ಜಿಂಬಾಬ್ವೆ ಅಂತಿಮ ಹಂತದವರೆಗೆ ಪಂದ್ಯವನ್ನು ಕೊಂಡೊಯ್ಯಿದರು. ಕೆಲವು ತಿಂಗಳುಗಳ ಬಳಿಕ ತಂಡಕ್ಕೆ ಮರಳಿರುವುದರಿಂದ ಆಯಾಸವಾಗಿದೆ. ಆದರೆ, ಇದು ನಮ್ಮ ಕೆಲಸ, ಭಾರತಕ್ಕಾಗಿ ಆಡಬೇಕು,” ಎಂದು ಹೇಳಿದ್ದಾರೆ.

ಶುಭ್ಮನ್ ಗಿಲ್ ಬ್ಯಾಟಿಂಗ್ ವಿಚಾರವಾಗಿ ಮಾತನಾಡಿದ ರಾಹುಲ್, ”ಗಿಲ್ ಐಪಿಎಲ್​ನಿಂದಲೂ ಅದ್ಭುತ ಫಾರ್ಮ್​ನಲ್ಲಿದ್ದು ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇದು ತುಂಬಾ ಖುಷಿ ನೀಡುತ್ತದೆ. ಅವರಲ್ಲಿ ಅತಿಯಾದ ಆತ್ಮವಿಶ್ವಾಸವಿಲ್ಲ. ಆರೀತಿಯ ಮನೋಧರ್ಮ ಒಳ್ಳೆಯದು,” ಎಂಬುದು ರಾಹುಲ್ ಮಾತು.

ಇದನ್ನೂ ಓದಿ
Image
Shubman Gill: ಭಾರತದ ಗೆಲುವಿಗೆ ಕಾರಣವಾಯ್ತು ಶುಭ್ಮನ್ ಗಿಲ್ ಹಿಡಿದ ರೋಚಕ ಕ್ಯಾಚ್: ವಿಡಿಯೋ
Image
IND vs ZIM: ಶತಕದ ಏಕಾಂಗಿ ಹೋರಾಟ; ಸೋಲಿನಲ್ಲೂ ಅಭಿಮಾನಿಗಳ ಹೃದಯ ಗೆದ್ದ ಸಿಕಂದರ್ ರಾಜಾ
Image
Asia Cup 2022: ಏಷ್ಯಾಕಪ್ ಕ್ವಾಲಿಫೈಯರ್‌ನಲ್ಲಿ ಕುವೈತ್​ಗೆ ಗೆಲುವು; ಯುಎಇ ಸೋಲಿಗೆ ಕಾರಣನಾದ ದಾವೂದ್‌..!
Image
IND vs ZIM: ಸಿಕಂದರ್ ರಾಜಾ ಶತಕದ ಹೋರಾಟ ವ್ಯರ್ಥ; ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ

ಇನ್ನು ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಬಳಿಕ ಮಾತನಾಡಿದ ಶುಭ್ಮನ್ ಗಿಲ್, ”ನಾನು ಡಾಟ್ ಬಾಲ್ ಅನ್ನು ಆಡುವುದು ಆದಷ್ಟು ಕಡಿಮೆ ಮಾಡಿಕೊಂಡೆ. ಹೆಚ್ಚು ಗ್ಯಾಪ್​ನಲ್ಲಿ ರನ್ ಗಳಿಸಲು ಮುಂದಾದೆ. ನಾನು ಕ್ರೀಸ್​ಗೆ ಬಂದಾಗ ಕೆಲ ಬೌಲರ್​ಗಳು ಉತ್ತಮ ಬೌಲಿಂಗ್ ಮಾಡುತ್ತಾರೆ. ಸೆಟಲ್ ಆದಾಗ ನಾವುಕೂಡ ಆ್ಯಟಾಕ್ ಮಾಡಬಹುದು. ಇಲ್ಲಿ ಬ್ಯಾಟಿಂಗ್ ಮಾಡಲು ತುಂಬಾ ಖುಷಿಯಾಗುತ್ತದೆ,” ಎಂದು ಹೇಳಿದ್ದಾರೆ.

ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ಶತಕ ಸಿಡಿಸಿದ ಬಗ್ಗೆ ಮಾತನಾಡಿದ ಗಿಲ್, ”ಈ ಶತಕ ನನಗೆ ತುಂಬಾನೆ ವಿಶೇಷ. ನಾನು ಈ ಸೆಂಚುರಿಯನ್ನು ತಂದೆಗೆ ಅರ್ಪಿಸುತ್ತೇನೆ. ಇಂಥಹ ತಂಡದಲ್ಲಿ ಆಡುತ್ತಿರುವುದು ಅತ್ಯುತ್ತಮ ಅನುಭವ ನೀಡುತ್ತದೆ. ಇಲ್ಲಿ ಅನೇಕ ಅದ್ಭುತ ಆಟಗಾರರಿದ್ದಾರೆ,” ಎಂದು ಗಿಲ್ ಹೇಳಿದರು.

ಸೋತ ಜಿಂಬಾಬ್ವೆ ತಂಡದ ನಾಯಕ ರೆಗಿಸಾ ಜಕಾಬ್ವಾ ಮಾತನಾಡಿ, ”ಮೊದಲಿಗೆ ಭಾರತ ತಂಡಕ್ಕೆ ಶುಭಕೋರುತ್ತೇನೆ. ಅವರು ಅತ್ಯುತ್ತಮ ಆಟವಾಡಿದ್ದಾರೆ. ಸಿಖಂದರ್ ಮತ್ತು ಬ್ರಾಡ್ ಉತ್ತಮ ಫೈಟ್ ನೀಡಿದರು. ಆದರೆ, ಭಾರತ ತನ್ನ ಘನತೆಯನ್ನು ಉಳಿಸಿಕೊಂಡಿತು. ನಾವು ಕಷ್ಟದ ಸಂದರ್ಭದಿಂದ ಕಮ್​ಬ್ಯಾಕ್ ಮಾಡಿದ್ದೇವೆ. ನಮ್ಮ ಬೌಲಿಂಗ್ ವಿಭಾಗದಲ್ಲಿ ಪಾಸಿಟಿವ್ ಇದೆ. ಈ ಸರಣಿಯಿಂದ ಅನೇಕ ವಿಚಾರಗಳನ್ನು ಕಲಿತಿದ್ದೇವೆ,” ಎಂದು ಹೇಳಿದ್ದಾರೆ.

Published On - 9:16 am, Tue, 23 August 22

ಸಂಪುಟ ಪುನಾರಚನೆ ಬಗ್ಗೆ ಸಚಿವ ಜಿ ಪರಮೇಶ್ವರ್ ಶಾಕಿಂಗ್ ಪ್ರತಿಕ್ರಿಯೆ!
ಸಂಪುಟ ಪುನಾರಚನೆ ಬಗ್ಗೆ ಸಚಿವ ಜಿ ಪರಮೇಶ್ವರ್ ಶಾಕಿಂಗ್ ಪ್ರತಿಕ್ರಿಯೆ!
ಇಂದಿನಿಂದ ಹಾಸನಾಂಬೆಯ ದರ್ಶನ
ಇಂದಿನಿಂದ ಹಾಸನಾಂಬೆಯ ದರ್ಶನ
ಮುಂಬೈ ಎಕ್ಸ್​​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪೋಷೆ ಕಾರು
ಮುಂಬೈ ಎಕ್ಸ್​​ಪ್ರೆಸ್​ ವೇನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದ ಪೋಷೆ ಕಾರು
Video: 4 ನಿಮಿಷದಲ್ಲಿ 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ ಶ್ವಾನಗಳು!
Video: 4 ನಿಮಿಷದಲ್ಲಿ 24 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ ಮಾಡಿದ ಶ್ವಾನಗಳು!
ಈಗಲ್​​ಟನ್ ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ಬಂದ ಸ್ಪರ್ಧಿಗಳು: ವಿಡಿಯೋ
ಈಗಲ್​​ಟನ್ ರೆಸಾರ್ಟ್​​ನಿಂದ ಬಿಗ್​​ಬಾಸ್ ಮನೆಗೆ ಬಂದ ಸ್ಪರ್ಧಿಗಳು: ವಿಡಿಯೋ
13 ಭರ್ಜರಿ ಸಿಕ್ಸ್​... 29 ಎಸೆತಗಳಲ್ಲಿ ವಿಸ್ಫೋಟಕ ಶತಕ
13 ಭರ್ಜರಿ ಸಿಕ್ಸ್​... 29 ಎಸೆತಗಳಲ್ಲಿ ವಿಸ್ಫೋಟಕ ಶತಕ
ಸರಿಯಾಗಿ ಔಟ್ ಮಾಡದೇ ಅಂಪೈರ್​ ಜೊತೆ ಜಗಳಕ್ಕಿಳಿದ ಪಾಕ್ ಆಟಗಾರ್ತಿಯರು
ಸರಿಯಾಗಿ ಔಟ್ ಮಾಡದೇ ಅಂಪೈರ್​ ಜೊತೆ ಜಗಳಕ್ಕಿಳಿದ ಪಾಕ್ ಆಟಗಾರ್ತಿಯರು
ಹಾಸನಾಂಬೆ ದೇಗುಲದ ಮಹತ್ವ ಹಾಗೂ ಇತಿಹಾಸವೇನು ಗೊತ್ತಾ? ಇಲ್ಲಿದೆ ಮಾಹಿತಿ
ಹಾಸನಾಂಬೆ ದೇಗುಲದ ಮಹತ್ವ ಹಾಗೂ ಇತಿಹಾಸವೇನು ಗೊತ್ತಾ? ಇಲ್ಲಿದೆ ಮಾಹಿತಿ
ಶುಕ್ರ ಗ್ರಹ ಸಿಂಹದಿಂದ ಕನ್ಯಾ ರಾಶಿಗೆ ಪ್ರವೇಶಿಸುವ ಇಂದಿನ ರಾಶಿ ಭವಿಷ್ಯ
ಶುಕ್ರ ಗ್ರಹ ಸಿಂಹದಿಂದ ಕನ್ಯಾ ರಾಶಿಗೆ ಪ್ರವೇಶಿಸುವ ಇಂದಿನ ರಾಶಿ ಭವಿಷ್ಯ
ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್
ಬೆಂಗಾವಲು ವಾಹನ ಡ್ರೈವರ್ ಆತ್ಮಹತ್ಯೆ: ಆಸ್ಪತ್ರೆಗೆ ಬಂದು ಕಣ್ಣೀರಿಟ್ಟ ಅಶೋಕ್