Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubman Gill: ಭಾರತದ ಗೆಲುವಿಗೆ ಕಾರಣವಾಯ್ತು ಶುಭ್ಮನ್ ಗಿಲ್ ಹಿಡಿದ ರೋಚಕ ಕ್ಯಾಚ್: ವಿಡಿಯೋ

IND vs ZIM 3rd ODI: ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ಅವರು ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲೂ ಭಾರತಕ್ಕೆ ನೆರವಾದರು. ಅದರಲ್ಲೂ ಗಿಲ್ ಹಿಡಿದ ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು.

Shubman Gill: ಭಾರತದ ಗೆಲುವಿಗೆ ಕಾರಣವಾಯ್ತು ಶುಭ್ಮನ್ ಗಿಲ್ ಹಿಡಿದ ರೋಚಕ ಕ್ಯಾಚ್: ವಿಡಿಯೋ
Shubman Gill Catch
Follow us
TV9 Web
| Updated By: Vinay Bhat

Updated on: Aug 23, 2022 | 7:37 AM

ವೆಸ್ಟ್ ಇಂಡೀಸ್ ಬಳಿಕ ಇದೀಗ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯನ್ನೂ ಭಾರತ (Zimbabwe vs India) ಕ್ರಿಕೆಟ್ ತಂಡ ಕ್ಲೀನ್​ಸ್ವೀಪ್ ಮಾಡಿದ ಸಾಧನೆ ಗೈದಿದೆ. ಹರಾರೆಯಲ್ಲಿ ಸೋಮವಾರ ನಡೆದ ಅಂತಿಮ ತೃತೀಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 13 ರನ್​ಗಳ ರೋಚಕ ಗೆಲುವು ಕಂಡಿತು. ಶುಭ್ಮನ್ ಗಿಲ್ (Shubman Gill) ಅವರ ಆಕರ್ಷಕ ಶತಕ, ಇಶಾನ್ ಕಿಶನ್ ಅರ್ಧಶತಕ ಒಂದು ಕಡೆಯಾದರೆ ಬೌಲರ್​ಗಳು ಮತ್ತೊಮ್ಮೆ ಸಂಘಟಿತ ಪ್ರದರ್ಶನ ತೋರಿದರು. ಈ ಮೂಲಕ 3-0 ಅಂತರದಿಂದ ಕೆಎಲ್ ರಾಹುಲ್ (KL Rahul) ಪಡೆ ಏಕದಿನ ಸರಣಿಯನ್ನು ಟೈಟ್​ವಾಷ್ ಮಾಡಿದೆ. ಶುಭ್ಮನ್ ಗಿಲ್ ಅವರು ಕೇವಲ ಬ್ಯಾಟಿಂಗ್​ನಲ್ಲಿ ಮಾತ್ರವಲ್ಲದೆ ಫೀಲ್ಡಿಂಗ್​ನಲ್ಲೂ ತಂಡಕ್ಕೆ ನೆರವಾದರು. ಅದರಲ್ಲೂ ಗಿಲ್ ಹಿಡಿದ ಒಂದು ಕ್ಯಾಚ್ ಪಂದ್ಯದ ಗತಿಯನ್ನೇ ಬದಲಾಯಿಸಿತು.

ಭಾರತ ನೀಡಿದ್ದ 290 ರನ್​ಗಳ ಕಠಿಣ ಟಾರ್ಗೆಟ್ ಬೆನ್ನಟ್ಟಿದ ಜಿಂಬಾಬ್ವೆ ಮುಖ್ಯ ವಿಕೆಟ್​ಗಳನ್ನು ಕಳೆದುಕೋಳ್ಳುತ್ತಾ ಸಾಗಿದರೂ 5ನೇ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ಸಿಖಂದರ್ ರಾಜಾ ಏಕಾಂಗಿ ಹೋರಾಟವನ್ನ ನಡೆಸಿದರು. ತಂಡದ ಗೆಲುವಿಗೆ ರನ್ ಗಳಿಸುತ್ತಾ ಸಾಗಿದ ಸಿಖಂದರ್ ಆಕರ್ಷಕ ಶತಕ ಸಿಡಿಸಿ ಅಬ್ಬರಿಸಿದರು. ಕೊನೆಯ ಹಂತದ ವರೆಗೂ ಕ್ರೀಸ್​ನಲ್ಲಿದ್ದ ಇವರು ತಂಡಕ್ಕೆ ಗೆಲುವು ತಂದುಕೊಡುತ್ತಾರೆ ಎಂದೇ ನಂಬಲಾಗಿತ್ತು. ಆದರೆ, 49ನೇ ಓವರ್​ನಲ್ಲಿ ನಡೆದ ಒಂದು ಘಟನೆ ಭಾರತದ ಗೆಲುವಿಗೆ ಕಾರಣವಾದರೆ, ಇದು ಜಿಂಬಾಬ್ವೆ ಸೋಲು ಖಚಿತಪಡಿಸಿತು.

ಇದನ್ನೂ ಓದಿ
Image
IND vs ZIM: ಶತಕದ ಏಕಾಂಗಿ ಹೋರಾಟ; ಸೋಲಿನಲ್ಲೂ ಅಭಿಮಾನಿಗಳ ಹೃದಯ ಗೆದ್ದ ಸಿಕಂದರ್ ರಾಜಾ
Image
Asia Cup 2022: ಏಷ್ಯಾಕಪ್ ಕ್ವಾಲಿಫೈಯರ್‌ನಲ್ಲಿ ಕುವೈತ್​ಗೆ ಗೆಲುವು; ಯುಎಇ ಸೋಲಿಗೆ ಕಾರಣನಾದ ದಾವೂದ್‌..!
Image
IND vs ZIM: ಸಿಕಂದರ್ ರಾಜಾ ಶತಕದ ಹೋರಾಟ ವ್ಯರ್ಥ; ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ
Image
NED vs PAK: ನೋ ಬಾಲ್ ಬದಲಿಗೆ ವೈಡ್; ಪಾಕ್ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಮೋಸ..!

49ನೇ ಓವರ್​ನಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್​ನ 4ನೇ ಎಸೆತದಲ್ಲಿ ಸಿಖಂದರ್ ಲಾಂಗ್​ ಆನ್​ನಲ್ಲಿ ಸಿಕ್ಸರ್​ಗೆಂದು ಚೆಂಡನ್ನು ಅಟ್ಟಿದರು. ಆದರೆ ಅವರು ಅಂದುಕೊಂಡ ರೀತಿ ಟೈಮ್ ಆಗದೆ ಚೆಂಡು ನೇರವಾಗಿ ಬೌಂಡರಿ ಗೆರೆ ದಾಟಲಿಲ್ಲ. ಶುಭ್ಮನ್ ಗಿಲ್ ಸರಿಯಾದ ಸಮಯಕ್ಕೆ ಓಡಿ ಬಂದು ಡೈವ್ ಬಿದ್ದು ರೋಚಕ ಕ್ಯಾಚ್ ಹಿಡಿದರು. ಇದು ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಸಿಖಂದರ್ ಕೇವಲ 95 ಎಸೆತಗಳಲ್ಲಿ 9 ಫೋರ್, 3 ಸಿಕ್ಸರ್ ಬಾರಿಸಿ 115 ರನ್ ಸಿಡಿಸಿದರು.

ಇದಕ್ಕೂ ಮುನ್ನ ಮೊದಲ ಬ್ಯಾಟಿಂಗ್ ಮಾಡಿದ ಭಾರತ ತಂಡವು 50 ಓವರ್​ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 289 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಾಧನೆ ಮಾಡಿದ ಶುಭ್ಮನ್ ಗಿಲ್ 97 ಎಸೆತಗಳಲ್ಲಿ ಜೀವನಶ್ರೇಷ್ಠ 130 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 15 ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು. ಇವರಿಗೆ ಸಾಥ್ ನೀಡಿದ ಇಶಾನ್ ಕಿಶನ್ 61 ಎಸೆತಗಳಲ್ಲಿ 6 ಬೌಂಡರಿ ಬಾರಿಸಿ 50 ರನ್ ಗಳಿಸಿ ಮಿಂಚಿದರು. ಜಿಂಬಾಬ್ವೆ ಪರ ಬ್ರಾಡ್ ಇವಾನ್ಸ್ ಐದು ವಿಕೆಟ್ ಕಿತ್ತರು.

ಸವಾಲಿನ ಬೆನ್ನಟ್ಟಿದ ಜಿಂಬಾಬ್ವೆ ತಂಡ 49.3 ಓವರ್‌ಗಳಲ್ಲಿ 276 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಸಿಖಂದರ್ 95 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮೂರು ಸಿಕ್ಸರ್ ನೆರವಿನಿಂದ 115 ರನ್ ಗಳಿಸಿ ಅಬ್ಬರಿಸಿದರು. ಸೀನ್ ವಿಲಿಮ್ಸ್ 45 ಹಾಗೂ ಬ್ರಾಡ್ ಇವಾನ್ಸ್ 28 ರನ್ ಗಳಿಸಿ ಗಮನ ಸೆಳೆದರು. ಭಾರತದ ಪರ ಆವೇಶ್ ಖಾನ್ ಮೂರು ಮತ್ತು ದೀಪಕ್ ಚಾಹರ್, ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಕಬಳಿಸಿದರು.

ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!
ಪ್ರಿಯಕರನ ಜೊತೆ ಸೇರಿ ನಡುರಸ್ತೆಯಲ್ಲೇ ಗಂಡನನ್ನು ಥಳಿಸಿದ ಹೆಂಡತಿ!
ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
ರೈತರಿಗೆ, ರೈತರ ಮಕ್ಕಳಿಗೆ ಒಳ್ಳೆಯದಾಗಲಿ: ವಿಜಯಲಕ್ಷ್ಮಿ ದರ್ಶನ್ ಹಾರೈಕೆ
ಪಲ್ಟಿ ಹೊಡೆದ ಆಟೋ ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್​​ಸಿ ಬಾಲಕೃಷ್ಣ
ಪಲ್ಟಿ ಹೊಡೆದ ಆಟೋ ಮೇಲೆತ್ತಿದ ಶಾಸಕ: ಮಾನವೀಯತೆ ಮೆರೆದ ಹೆಚ್​​ಸಿ ಬಾಲಕೃಷ್ಣ
ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದಲ್ಲಿ ಪ್ರಧಾನಿ ಮೋದಿ ಪೂಜೆ
ಗುಜರಾತ್‌ನ ಸೋಮನಾಥ ಜ್ಯೋತಿರ್ಲಿಂಗ ಮಂದಿರದಲ್ಲಿ ಪ್ರಧಾನಿ ಮೋದಿ ಪೂಜೆ
ಉತ್ತರಾಖಂಡದ ಹಿಮಪಾತ; ಎಲ್ಲ 8 ಶವಗಳೂ ಪತ್ತೆ
ಉತ್ತರಾಖಂಡದ ಹಿಮಪಾತ; ಎಲ್ಲ 8 ಶವಗಳೂ ಪತ್ತೆ
ಜನ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ; ಬಿಜೆಪಿ ಸಚಿವರ ವಿವಾದ
ಜನ ಭಿಕ್ಷೆ ಬೇಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ; ಬಿಜೆಪಿ ಸಚಿವರ ವಿವಾದ
ಉತ್ತರಾಖಂಡದ ಹಿಮಪಾತದಲ್ಲಿ ಇನ್ನೂ 3 ಶವಗಳು ಪತ್ತೆ
ಉತ್ತರಾಖಂಡದ ಹಿಮಪಾತದಲ್ಲಿ ಇನ್ನೂ 3 ಶವಗಳು ಪತ್ತೆ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ