Sign In

By signing in or creating an account, you agree with Associated Broadcasting Company's Terms & Conditions and Privacy Policy.

IND vs ZIM: ಸಿಕಂದರ್ ರಾಜಾ ಶತಕದ ಹೋರಾಟ ವ್ಯರ್ಥ; ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ

IND vs ZIM: ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು 13 ರನ್‌ಗಳಿಂದ ಸೋಲಿಸಿದ ಭಾರತ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಕೊನೆಯ ಏಕದಿನ ಪಂದ್ಯ ಎರಡು ಅದ್ಭುತ ಶತಕಗಳಿಗೆ ಸಾಕ್ಷಿಯಾಯಿತು.

IND vs ZIM: ಸಿಕಂದರ್ ರಾಜಾ ಶತಕದ ಹೋರಾಟ ವ್ಯರ್ಥ; ಸರಣಿ ಕ್ಲೀನ್​ ಸ್ವೀಪ್ ಮಾಡಿದ ಭಾರತ
Shubman Gill
Follow us
TV9 Web
| Updated By: ಪೃಥ್ವಿಶಂಕರ

Updated on:Aug 22, 2022 | 9:39 PM

ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆಯನ್ನು 13 ರನ್‌ಗಳಿಂದ ಸೋಲಿಸಿದ ಭಾರತ ಮೂರು ಪಂದ್ಯಗಳ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ. ಕೊನೆಯ ಏಕದಿನ ಪಂದ್ಯ ಎರಡು ಅದ್ಭುತ ಶತಕಗಳಿಗೆ ಸಾಕ್ಷಿಯಾಯಿತು. ಆದರೆ ಶ್ರೇಷ್ಠ ಪ್ರದರ್ಶನ ಮತ್ತು ರೋಚಕತೆಯೊಂದಿಗೆ ಸರಣಿಗೆ ತೆರೆ ಬಿದ್ದಿದೆ. ಯುವ ಬ್ಯಾಟ್ಸ್‌ಮನ್ ಶುಭ್​ಮನ್ ಗಿಲ್ (Shubman Gill) ಅವರ ವೃತ್ತಿಜೀವನದ ಮೊದಲ ಶತಕದ ಆಧಾರದ ಮೇಲೆ ಟೀಮ್ ಇಂಡಿಯಾ 289 ರನ್ ಗಳಿಸಿತು. ಈ ಸ್ಕೋರ್‌ಗೆ ಜಿಂಬಾಬ್ವೆ ತಂಡದ ಸಿಕಂದರ್ ರಾಜಾ (Sikandar Raza) ಪ್ರಬಲ ಶತಕದೊಂದಿಗೆ ಸವಾಲು ಹಾಕಿದರು ಮತ್ತು ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಆದರೆ ಕೊನೆಯಲ್ಲಿ, ಗಿಲ್, ರಜಾ ಅವರ ಪ್ರಚಂಡ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಪಂದ್ಯದ ಅಂತ್ಯಕ್ಕೆ ನಾಂದಿ ಹಾಡಿದರು.

ಈ ಪಂದ್ಯಕ್ಕೆ ಟೀಂ ಇಂಡಿಯಾ ದೀಪಕ್ ಚಹರ್​ಗೆ ಮರಳಿ ಅವಕಾಶ ನೀಡಿದರೆ, ಅವೇಶ್ ಖಾನ್ ಅವರಿಗೆ ಸರಣಿಯಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಯಿತು. ಚಹಾರ್ ಮತ್ತೊಮ್ಮೆ ಮೂರನೇ ಓವರ್‌ನಲ್ಲಿ ವಿಕೆಟ್ ಪಡೆಯುವ ಮೂಲಕ ಉತ್ತಮ ಆರಂಭವನ್ನು ಪಡೆದರು. ಆದಾಗ್ಯೂ, ಮೊದಲ ಎರಡು ಪಂದ್ಯಗಳನ್ನು ಹೊರತುಪಡಿಸಿ, ಜಿಂಬಾಬ್ವೆಯ ಬ್ಯಾಟ್ಸ್‌ಮನ್‌ಗಳು ಈ ಬಾರಿ ಆರಂಭಿಕ ಓವರ್‌ಗಳಿಂದಲೇ ಆಕ್ರಮಣಕಾರಿ ನಿಲುವು ತಳೆದರು. ಬಾಂಗ್ಲಾದೇಶ ವಿರುದ್ಧದ ಹಿಂದಿನ ಸರಣಿಯಲ್ಲೂ ಜಿಂಬಾಬ್ವೆ ಗುರಿ ಬೆನ್ನಟ್ಟಿದ ಸಂದರ್ಭದಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು ಮತ್ತು ಸಿಕಂದರ್ ರಜಾ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಾರಿಯೂ ಅದೇ ನಡೆಯಿತು.

ಸಿಕಂದರ್ ರಾಜಾ ಹೋರಾಟ ವ್ಯರ್ಥ

ಶಾನ್ ವಿಲಿಯಮ್ಸ್ ಮತ್ತೊಮ್ಮೆ ತಂಡಕ್ಕೆ ಉತ್ತಮ ಆರಂಭ ನೀಡಿ 45 ರನ್ ಗಳಿಸಿ ಔಟಾದರು. ಇದಾದ ನಂತರ ಕ್ರಮೇಣ ತಂಡದ ವಿಕೆಟ್‌ಗಳು ಬೀಳಲಾರಂಭಿಸಿದವು ಮತ್ತು 145 ರನ್‌ಗಳವರೆಗೆ 6 ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್‌ಗೆ ಮರಳಿದರು. ಇದನ್ನೆಲ್ಲಾ ನೋಡುತ್ತಿದ್ದ ಸಿಕಂದರ್ ರಾಜಾ ಮಾತ್ರ ವಿಕೆಟ್ ಮುಂದಿ ಭದ್ರವಾಗಿ ನಿಂತುಬಿಟ್ಟರು. ಜೊತೆಗೆ ಈಗಾಗಲೇ 5 ವಿಕೆಟ್ ಪಡೆದು ಭಾರತಕ್ಕೆ ತೊಂದರೆ ನೀಡಿದ್ದ ಬ್ರಾಡ್ ಇವಾನ್ಸ್ ರಾಜಾಗೆ ಬೆಂಬಲ ಪಡೆದರು. ಇವರಿಬ್ಬರು ಏಳನೇ ವಿಕೆಟ್‌ಗೆ 104 ರನ್‌ಗಳ ಜೊತೆಯಾಟವಾಡಿದರು. ಈ ವೇಳೆ ಸಿಕಂದರ್ ಕೇವಲ 88 ಎಸೆತಗಳಲ್ಲಿ ಆರನೇ ಏಕದಿನ ಶತಕ ಪೂರೈಸಿದರು.

ಅಂತಿಮವಾಗಿ ಜಿಂಬಾಬ್ವೆಗೆ 13 ಎಸೆತಗಳಲ್ಲಿ 17 ರನ್ ಅಗತ್ಯವಿತ್ತು. ಆದರೆ ಅವೇಶ್ ಖಾನ್ ಎಸೆತದಲ್ಲಿ ಇವಾನ್ಸ್ ಎಲ್ಬಿಡಬ್ಲ್ಯೂ ಬಲೆಗೆ ಬಿದ್ದರು. ನಂತರದ ಓವರ್‌ನಲ್ಲಿಯೇ ಗಿಲ್ ಅವರು ಲಾಂಗ್ ಆನ್‌ನಲ್ಲಿ ಡೈವಿಂಗ್ ಮಾಡುವ ಮೂಲಕ ಸಿಕಂದರ್ ರಾಜಾ ಅವರ ಅದ್ಭುತ ಕ್ಯಾಚ್ ಪಡೆದು ಜಿಂಬಾಬ್ವೆಯ ಭರವಸೆಯನ್ನು ಮುರಿದರು. ಭಾರತ ಪರ ಅವೇಶ್ ಖಾನ್ 3 ವಿಕೆಟ್ ಪಡೆದರು.

ಭಾರತದ ಇನ್ನಿಂಗ್ಸ್ ಹೀಗಿತ್ತು

ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಭಾರತ ಮತ್ತು ಜಿಂಬಾಬ್ವೆ ತಂಡಗಳ ನಡುವಿನ ಅಂತಿಮ ಏಕದಿನ ಕದನದಲ್ಲಿ ಟೀಂ ಇಂಡಿಯಾ ನಾಯಕ ಕೆಎಲ್ ರಾಹುಲ್ ಮತ್ತೊಮ್ಮೆ ಟಾಸ್ ಗೆದ್ದು, ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ, ವೈಯಕ್ತಿಕವಾಗಿ ರಾಹುಲ್​ಗೆ ಅದರ ಲಾಭ ಪಡೆಯಲು ಸಾಧ್ಯವಾಗಲಿಲ್ಲ. ಉತ್ತಮ ಆರಂಭವನ್ನು ಪಡೆದರೂ ನಾಯಕ ಕೇವಲ 30 ರನ್ ಗಳಿಸಿ ವಿಕೆಟ್ ಒಪ್ಪಿದರು. ನಿಧಾನಗತಿಯ ಆರಂಭದ ನಂತರ ಶಿಖರ್ ಧವನ್ ಕೂಡ ಔಟಾದರು.

ಗಿಲ್ ಶತಕ

ಇಂತಹ ಪರಿಸ್ಥಿತಿಯಲ್ಲಿ ಶುಭ್​ಮನ್ ಗಿಲ್ ಭಾರತ ತಂಡದ ಇನ್ನಿಂಗ್ಸ್ ನಿಭಾಯಿಸಿದರು. ವೆಸ್ಟ್ ಇಂಡೀಸ್ ಪ್ರವಾಸದಿಂದಲೂ ಸತತವಾಗಿ ರನ್ ಗಳಿಸುತ್ತಿರುವ ಗಿಲ್ ಮತ್ತೊಮ್ಮೆ ಅದೇ ರೀತಿ ಮಾಡಿದರು. ಮೊದಲು ಟೀಂ ಇಂಡಿಯಾದ ಇನ್ನಿಂಗ್ಸ್​ಗೆ ವೇಗ ನೀಡಿದ ಅವರು ನಂತರ ರನ್​ಗಳ ಸುರಿಮಳೆಗೈದರು. ಈ ಸಮಯದಲ್ಲಿ ಗಿಲ್, ಇಶಾನ್ ಕಿಶನ್ ಅವರೊಂದಿಗೆ 140 ರನ್ ಜೊತೆಯಾಟವನ್ನು ಹಂಚಿಕೊಂಡರು, ಅವರು ಸ್ವತಃ ಅರ್ಧಶತಕವನ್ನು ಗಳಿಸಿದರು.

ವೆಸ್ಟ್ ಇಂಡೀಸ್​ನಲ್ಲಿ ಕೇವಲ 2 ರನ್ ಅಂತರದಲ್ಲಿ ಶತಕ ವಂಚಿತರಾಗಿದ್ದ ಗಿಲ್ ಈ ಬಾರಿ ಈ ಅಡೆತಡೆ ದಾಟುವಲ್ಲಿ ಯಶಸ್ವಿಯಾದರು. 23ರ ಹರೆಯದ ಗಿಲ್ ಕೇವಲ 82 ಎಸೆತಗಳಲ್ಲಿ ತಮ್ಮ ಅಂತಾರಾಷ್ಟ್ರೀಯ ವೃತ್ತಿ ಜೀವನದ ಮೊದಲ ಶತಕ ಪೂರೈಸಿದರು.

ಆದರೆ, ಭಾರತದ ಮಧ್ಯಮ ಕ್ರಮಾಂಕ ಸಂಪೂರ್ಣ ವಿಫಲವಾಯಿತು. ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್ ದೊಡ್ಡ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಜೊತೆಗೆ ಆಲ್​ರೌಂಡರ್‌ಗಳಾದ ಅಕ್ಷರ್ ಪಟೇಲ್ ಮತ್ತು ಶಾರ್ದೂಲ್ ಠಾಕೂರ್ ಕೂಡ ಈ ಬಾರಿ ವಿಫಲರಾದರು. ಕೊನೆಯ ಓವರ್‌ನಲ್ಲಿ ಔಟಾದ ಗಿಲ್, 97 ಎಸೆತಗಳಲ್ಲಿ 130 ರನ್ (15 ಬೌಂಡರಿ, 1 ಸಿಕ್ಸರ್) ಗಳಿಸಿದರು. ಈ ಶತಕದಿಂದಾಗಿ ಟೀಂ ಇಂಡಿಯಾ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 289 ರನ್ ಗಳಿಸಿತು.

Published On - 8:56 pm, Mon, 22 August 22

ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಪತಿ ಉಪೇಂದ್ರ ಅವರ ಮಿಮಿಕ್ರಿ ಮಾಡಿ ರಂಜಿಸಿದ ಪ್ರಿಯಾಂಕಾ ಉಪೇಂದ್ರ
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಅಬ್ಬಬ್ಬಾ.. ಚೈತ್ರಾ ವಾಸುದೇವನ್ ಮದುವೆ ಸೀರೆ ಬೆಲೆ ಬರೋಬ್ಬರಿ 2 ಲಕ್ಷ ರೂ!
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಕಾಪು ಹೊಸ ಮಾರಿಗುಡಿಗೆ ಪತ್ನಿ ಹೆಸರಲ್ಲಿ 9,99,999 ರೂ ಡಿಕೆಶಿ​ ದೇಣಿಗೆ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಹಾಲಮತ ಸಮಾಜದ ಕೈಯಲ್ಲಿರುವ ಅಧಿಕಾರ ಬಿಡಿಸಿಕೊಳ್ಳೋದು ಸುಲಭವಲ್ಲ: ಕೋಡಿಶ್ರೀ
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಕರ್ನಾಟಕದ ಬಗ್ಗೆ ಮಹತ್ವದ ಭವಿಷ್ಯ ನುಡಿದ ಕೋಡಿಮಠದ ಶ್ರೀಗಳು
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಎಲ್ಲಿಸ್ ಪೆರ್ರಿ ಸೂಪರ್​​ವುಮೆನ್ ಕ್ಯಾಚ್: ವಿಡಿಯೋ ವೈರಲ್
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಯಾದಗಿರಿ: ಸುರಪುರ ಪಟ್ಟಣದಲ್ಲಿ ಒಂದೇ ರಾತ್ರಿಯಲ್ಲಿ 7 ಅಂಗಡಿಗಳ ಕಳ್ಳತನ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ಕೊಪ್ಪಳದಲ್ಲಿ ಕಾರ್ಖಾನೆ ಆರಂಭಿಸುವುದು ಕೇಂದ್ರ ಸಂಬಂಧಿಸಿದ್ದಲ್ಲ: ಹೆಚ್​ಡಿಕೆ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ನಿರೂಪಕಿ ಚೈತ್ರಾ ವಾಸುದೇವನ್ ಎರಡನೇ ವಿವಾಹ, ಮಾಂಗಲ್ಯಧಾರಣೆ ವಿಡಿಯೋ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ
ಸುಳ್ಳು ಹೇಳಿದರೆ ಪಾಪ ತಟ್ಟುತ್ತದೆಯೇ? ವಿಡಿಯೋ ನೋಡಿ