AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

NED vs PAK: ನೋ ಬಾಲ್ ಬದಲಿಗೆ ವೈಡ್; ಪಾಕ್ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಮೋಸ..!

NED vs PAK: ಇಷ್ಟೆಲ್ಲಾ ನಡೆದಾಗ ನೆದರ್ಲೆಂಡ್ಸ್‌ಗೆ 26 ಎಸೆತಗಳಲ್ಲಿ 32 ರನ್‌ಗಳ ಅಗತ್ಯವಿತ್ತು. ಹೀಗಾಗಿ ಆ ಎಸೆತ ಫ್ರೀ ಹಿಟ್‌ ಆಗಿದ್ದರೆ, ಬ್ಯಾಟ್ಸ್‌ಮನ್ ಸಿಕ್ಸರ್ ಬಾರಿಸುವ ಸಂಭವವೂ ಇರುತ್ತಿತ್ತು, ಇದು ರನ್ ಮತ್ತು ಬಾಲ್ ವ್ಯತ್ಯಾಸವನ್ನು ಕಡಿಮೆ ಮಾಡುವುದಲ್ಲದೆ, ಬ್ಯಾಟರ್​ನ ಒತ್ತಡವನ್ನು ಕಡಿಮೆ ಮಾಡುತ್ತಿತ್ತು.

NED vs PAK: ನೋ ಬಾಲ್ ಬದಲಿಗೆ ವೈಡ್; ಪಾಕ್ ವಿರುದ್ಧದ ಪಂದ್ಯದಲ್ಲಿ ನೆದರ್ಲೆಂಡ್ಸ್ ತಂಡಕ್ಕೆ ಮೋಸ..!
TV9 Web
| Updated By: ಪೃಥ್ವಿಶಂಕರ|

Updated on:Aug 22, 2022 | 8:19 PM

Share

ಪಾಕಿಸ್ತಾನ (Pakistan) ಕ್ರಿಕೆಟ್​ಗೂ ವಿವಾದಗಳಿಗೂ ಬಹಳ ವರ್ಷಗಳ ನಿಕಟ ಸಂಬಂಧವಿದೆ. ಮೈದಾನದೊಳಗೆ ಪಾಕಿಸ್ತಾನ ತಂಡ ಎಷ್ಟೇ ಪ್ರದರ್ಶನ ನೀಡಿದರೂ ಕೆಲವು ವಿವಾದಗಳು ಆಗಾಗ ಮುನ್ನೆಲೆಗೆ ಬರುತ್ತವೆ. ಮತ್ತೊಮ್ಮೆ ಅಂತಹದ್ದೇ ಸನ್ನಿವೇಶ ನಿರ್ಮಾಣವಾಗಿದ್ದು, ಪಾಕಿಸ್ತಾನ ತಂಡದ ಗೆಲುವಿನಲ್ಲೂ ಪ್ರಶ್ನೆಗಳು ಮೂಡುತ್ತಿವೆ. ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಯ (ODI series) ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಪಾಕಿಸ್ತಾನದ ಗೆಲುವಿನ ಮೇಲೆ ಈ ಪ್ರಶ್ನೆಗಳನ್ನು ಎತ್ತಲಾಗುತ್ತಿದ್ದು, ಅಪ್ರಾಮಾಣಿಕತೆಯ ಆರೋಪಗಳನ್ನು ಎತ್ತಲಾಗುತ್ತಿದೆ. ಅಷ್ಟಕ್ಕೂ, ಏನಾಯಿತು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

ವಾಸ್ತವವಾಗಿ, ಆಗಸ್ಟ್ 21 ಭಾನುವಾರದಂದು, ರೋಟರ್‌ಡ್ಯಾಮ್‌ನಲ್ಲಿ ಎರಡು ತಂಡಗಳ ನಡುವೆ ಸರಣಿಯ ಕೊನೆಯ ಪಂದ್ಯವನ್ನು ಆಡಲಾಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಕೇವಲ 206 ರನ್ ಗಳಿಸಿತ್ತು. ಒಂದು ಸಮಯದಲ್ಲಿ ನೆದರ್ಲೆಂಡ್ಸ್ ತಂಡವು ಈ ಗುರಿಯನ್ನು ಸಾಧಿಸುತ್ತಿದೆ ಎಂದು ತೋರುತ್ತಿತ್ತು. ಆದರೆ ಕೊನೆಯ ಓವರ್‌ಗಳಲ್ಲಿ ತಂಡವು ಅನೇಕ ವಿಕೆಟ್‌ಗಳನ್ನು ತ್ವರಿತವಾಗಿ ಕಳೆದುಕೊಂಡಿತು. ಹೀಗಾಗಿ ಕೊನೆಯ ಓವರ್‌ವರೆಗೂ ನಡೆದ ಪಂದ್ಯದಲ್ಲಿ ಕೇವಲ 197 ರನ್‌ಗಳಿಗೆ ಆಲೌಟ್ ಆಗಿ ಇಡೀ ತಂಡ 9 ರನ್‌ಗಳಿಂದ ಪಂದ್ಯವನ್ನು ಕಳೆದುಕೊಂಡಿತು.

ನೋ ಬಾಲ್ ಬದಲಿಗೆ ವೈಡ್

ಈ ಪಂದ್ಯ ಈಗ ಸುದ್ದಿಯಲ್ಲಿರುವುದು ಅಂಪೈರ್​ರವರ ಅಜಾಗೂರಕ ತೀರ್ಪಿನಿಂದ. ಅಂಪೈರ್ ಮಾಡಿದ ಎಡವಟ್ಟಿನ ಬಗ್ಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಗಳನ್ನು ಮಾಡುತ್ತಿದ್ದಾರೆ. ವಾಸ್ತವವಾಗಿ ಡಚ್ ತಂಡದ ಇನಿಂಗ್ಸ್‌ನ 46ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಟಾಮ್ ಕೂಪರ್ ಅವರ ವಿಕೆಟ್ ಪತನವಾಯಿತು. ನಂತರ ಲೋಗನ್ ವ್ಯಾನ್ ಬೀಕ್ ಬ್ಯಾಟಿಂಗ್​ಗೆ ಬಂದರು, ಈ ವೇಳೆ ಮೊಹಮ್ಮದ್ ವಾಸಿಂ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಮೊಹಮ್ಮದ್ ವಾಸಿಂ ಎಸೆದ ಬಾಲ್ ಫುಲ್ ಟಾಸ್ ಆಗಿತ್ತು, ಆದರೆ ಅದು ಬ್ಯಾಟ್ಸ್​ಮನ್​ನ ಸೊಂಟಕ್ಕಿಂತ ಎತ್ತರದಲ್ಲಿ ಬಂದಿತ್ತು. ವ್ಯಾನ್ ಬೀಕ್ ಅದನ್ನು ಆಡಲು ಪ್ರಯತ್ನಿಸಿದರು, ಆದರೆ ಚೆಂಡು ನೇರವಾಗಿ ವಿಕೆಟ್ ಹಿಂದೆ, ಲೆಗ್-ಸ್ಟಂಪ್ ಹೊರಗೆ ಬಿದ್ದಿತು.

ಸಾಮಾನ್ಯವಾಗಿ, ಚೆಂಡು ಅಷ್ಟು ಎತ್ತರದಲ್ಲಿ ಬಂದಾಗ, ಅಂಪೈರ್ ಅದನ್ನು ನೇರವಾಗಿ ‘ಬೀಮರ್’ ಎಂದು ಘೋಷಿಸುತ್ತಾರೆ. ಆದರೆ ಆನ್-ಫೀಲ್ಡ್ ಅಂಪೈರ್ ಆ ಎಸೆತವನ್ನು ನೋಬಾಲ್ ಬದಲಿಗೆ ವೈಡ್ ನೀಡಿದರು. ಇದನ್ನು ಗಮನಿಸಿದ ಕ್ರಿಕೆಟ್ ಪ್ರೇಮಿಗಳು ಅಂಪೈರ್ ತೀರ್ಮಾನವನ್ನು ಪ್ರಶ್ನಿಸುತ್ತಿದ್ದಾರೆ.

ನೋಬಾಲ್ ಅಥವಾ ವೈಡ್ ಬಾಲ್ ಸಂದರ್ಭದಲ್ಲಿ, ಚೆಂಡನ್ನು ಎಣಿಕೆ ಮಾಡಲಾಗುವುದಿಲ್ಲ ಮತ್ತು ಹೆಚ್ಚುವರಿ ರನ್ ನೀಡಲಾಗುತ್ತದೆ. ಆದರೆ ನೋಬಾಲ್ ನೀಡಿದಾಗ ಬ್ಯಾಟಿಂಗ್‌ ಮಾಡುವ ತಂಡಕ್ಕೆ ಫ್ರೀ ಹಿಟ್ ಸಿಗುತ್ತದೆ, ಆದ್ದರಿಂದ ಬ್ಯಾಟರ್ ಮುಂದಿನ ಎಸೆತವನ್ನು ತನ್ನ ಮನಸ್ಸೋ ಇಚ್ಚೆ ಆಡುವ ಅವಕಾಶವನ್ನು ಹೊಂದಿರುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಫ್ರೀ-ಹಿಟ್‌ನ ಲಾಭವನ್ನು ಪಡೆದುಕೊಂಡು, ಬ್ಯಾಟ್ಸ್‌ಮನ್ ನಿರ್ಭಯವಾಗಿ ದೊಡ್ಡ ಹೊಡೆತವನ್ನು ಆಡುವ ಅವಕಾಶಗಳಿರುತ್ತವೆ. ಹೀಗಾಗಿ ಗೆಲುವಿನ ಅಂಚಿನಲ್ಲಿದ್ದ ನೆದರ್ಲೆಂಡ್ಸ್​ಗೆ ಈ ಫ್ರೀ-ಹಿಟ್‌ ಅಗತ್ಯವಾಗಿತ್ತು. ಆದರೆ ಅಂಪೈರ್ ಈ ಎಸೆತವನ್ನು ವೈಡ್ ನೀಡಿದರು. ಇದನ್ನು ಗಮನಿಸಿದ ನೆಟ್ಟಿಗರು ಈ ನಿರ್ಧಾರದ ಬಗ್ಗೆ ಕೋಪ ಹೊರಹಾಕುತ್ತಿದ್ದಾರೆ. ಜೊತೆಗೆ ಅಂಪೈರ್ ಪಾಕ್ ಪರ ತೀರ್ಪು ನೀಡಿದ್ದಾರೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ.

ನಿಕಟ ಅಂತರದಿಂದ ಸೋತ ನೆದರ್ಲ್ಯಾಂಡ್ಸ್

ಇಷ್ಟೆಲ್ಲಾ ನಡೆದಾಗ ನೆದರ್ಲೆಂಡ್ಸ್‌ಗೆ 26 ಎಸೆತಗಳಲ್ಲಿ 32 ರನ್‌ಗಳ ಅಗತ್ಯವಿತ್ತು. ಹೀಗಾಗಿ ಆ ಎಸೆತ ಫ್ರೀ ಹಿಟ್‌ ಆಗಿದ್ದರೆ, ಬ್ಯಾಟ್ಸ್‌ಮನ್ ಸಿಕ್ಸರ್ ಬಾರಿಸುವ ಸಂಭವವೂ ಇರುತ್ತಿತ್ತು, ಇದು ರನ್ ಮತ್ತು ಬಾಲ್ ವ್ಯತ್ಯಾಸವನ್ನು ಕಡಿಮೆ ಮಾಡುವುದಲ್ಲದೆ, ಬ್ಯಾಟರ್​ನ ಒತ್ತಡವನ್ನು ಕಡಿಮೆ ಮಾಡುತ್ತಿತ್ತು. ಅಂತಿಮವಾಗಿ ಕೊನೆಯ ಓವರ್‌ನಲ್ಲಿ ಜಿಂಬಾಬ್ವೆಗೆ 14 ರನ್ ಅಗತ್ಯವಿತ್ತು. ಆದರೆ ನೆದರ್ಲ್ಯಾಂಡ್ಸ್ ತಂಡ ಕೇವಲ 4 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೋಪ್ಪಿಕೊಂಡಿತು.

Published On - 8:19 pm, Mon, 22 August 22

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ