IND vs ZIM: ಗಿಲ್ ವಿಕೆಟ್​ಗಾಗಿ ಡಿಆರ್​ಎಸ್ ತೆಗೆದುಕೊಂಡ ಬಿಂಬಾಬ್ವೆ; ಆದರೆ ಔಟಾಗಿದ್ದು ಮಾತ್ರ ಇಶಾನ್ ಕಿಶನ್!

IND vs ZIM: 43ನೇ ಓವರ್‌ನಲ್ಲಿ, ಬ್ರಾಡ್ ಇವಾನ್ಸ್ ಅವರ ಮೊದಲ ಎಸೆತದಲ್ಲಿ ಶುಭ್​ಮನ್ ಗಿಲ್ ವಿರುದ್ಧ ಎಲ್‌ಬಿಡಬ್ಲ್ಯೂ ಅಪೀಲ್ ಆಗಿತ್ತು. ಈ ವೇಳೆ ಇಶಾನ್ ಕಿಶನ್ ರನ್ ಗಳಿಸಲು ಯತ್ನಿಸಿದರೂ ಗಿಲ್ ನಿರಾಕರಿಸಿದರು.

IND vs ZIM: ಗಿಲ್ ವಿಕೆಟ್​ಗಾಗಿ ಡಿಆರ್​ಎಸ್ ತೆಗೆದುಕೊಂಡ ಬಿಂಬಾಬ್ವೆ; ಆದರೆ ಔಟಾಗಿದ್ದು ಮಾತ್ರ ಇಶಾನ್ ಕಿಶನ್!
Follow us
TV9 Web
| Updated By: ಪೃಥ್ವಿಶಂಕರ

Updated on:Aug 22, 2022 | 5:52 PM

ಜಿಂಬಾಬ್ವೆ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಶುಭ್​ಮನ್ ಗಿಲ್ (Shubman Gill) ಭರ್ಜರಿ ಶತಕ ಬಾರಿಸಿದರೆ, ಇಶಾನ್ ಕಿಶನ್ (Ishan Kishan) ಕೂಡ ಅರ್ಧಶತಕ ದಾಖಲಿಸಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಮೂರನೇ ವಿಕೆಟ್‌ಗೆ 127 ಎಸೆತಗಳಲ್ಲಿ 140 ರನ್‌ಗಳನ್ನು ಹಂಚಿಕೊಂಡರು. ಆದಾಗ್ಯೂ, ಈ ಪಾಲುದಾರಿಕೆಯು ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಕೊನೆಗೊಂಡಿತು. ಇಶಾನ್ ಕಿಶನ್ ರನ್ ಔಟ್ ಆದ ಕಾರಣ ಈ ಜೊತೆಯಾಟ ಮುರಿದುಬಿತ್ತು. ಆದರೆ ಇಶಾನ್ ರನ್ ಔಟ್ ಆದ ರೀತಿ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ವಾಸ್ತವವಾಗಿ ಜಿಂಬಾಬ್ವೆ ಆಟಗಾರರು ಶುಭ್​ಮನ್ ಗಿಲ್ ವಿರುದ್ಧ ಮೇಲ್ಮನವಿ ಸಲ್ಲಿಸುತ್ತಿದ್ದರು. ಆದರೆ ಮೇಲ್ಮನವಿಯಲ್ಲಿ ಕಂಡುಬಂದಿದ್ದು ಮಾತ್ರ ಇಶಾನ್ ಕಿಶನ್ ರನೌಟ್ ಆಗಿರುವುದು.

ಗಿಲ್ ವಿರುದ್ಧ ಮೇಲ್ಮನವಿ, ಇಶಾನ್ ವಿಕೆಟ್ ಪತನ 43ನೇ ಓವರ್‌ನಲ್ಲಿ, ಬ್ರಾಡ್ ಇವಾನ್ಸ್ ಅವರ ಮೊದಲ ಎಸೆತದಲ್ಲಿ ಶುಭ್​ಮನ್ ಗಿಲ್ ವಿರುದ್ಧ ಎಲ್‌ಬಿಡಬ್ಲ್ಯೂ ಅಪೀಲ್ ಆಗಿತ್ತು. ಈ ವೇಳೆ ಇಶಾನ್ ಕಿಶನ್ ರನ್ ಗಳಿಸಲು ಯತ್ನಿಸಿದರೂ ಗಿಲ್ ನಿರಾಕರಿಸಿದರು. ನಂತರ ಮುನ್ಯೊಂಗಾ ಸೊಗಸಾದ ಥ್ರೋ ಮಾಡಿ ಇಶಾನ್ ಕಿಶನ್ ಅವರನ್ನು ನಾನ್ ಸ್ಟ್ರೈಕರ್ ಕೊನೆಯಲ್ಲಿ ರನೌಟ್ ಮಾಡಿದರು. ಇದರ ನಂತರ ಜಿಂಬಾಬ್ವೆ ಗಿಲ್ ವಿರುದ್ಧ ಡಿಆರ್​ಎಸ್ ತೆಗೆದುಕೊಂಡಿತು. ಇದರಲ್ಲಿ ಗಿಲ್ ಔಟಾಗದ್ದಿದ್ದರು, ಇಶಾನ್ ಕಿಶನ್ ರನ್ ಔಟ್ ಆಗಿರುವುದು ಸ್ಪಷ್ಟವಾಗಿತ್ತು.

ಇದನ್ನೂ ಓದಿ
Image
IND vs ZIM: 20ನೇ ಪಂದ್ಯದಲ್ಲಿ ಶತಕದ ಖಾತೆ ತೆರೆದು ಸಚಿನ್ ದಾಖಲೆ ಮುರಿದ ಶುಭ್​ಮನ್ ಗಿಲ್..!
Image
IND VS ZIM: ರಾತ್ರೋರಾತ್ರಿ ನಾಯಕತ್ವ ಪಡೆದಿದ್ದ ರಾಹುಲ್ ಜಿಂಬಾಬ್ವೆ ವಿರುದ್ಧ ಫೇಲ್..! ಹೀಗಾದರೆ ಏಷ್ಯಾಕಪ್ ಕಥೆ ಏನು?
Image
IND vs ZIM, 2nd ODI: ಅದ್ಭುತ ಪ್ರದರ್ಶನ ನೀಡಿದರು ಎರಡನೇ ಪಂದ್ಯದಿಂದ ದೀಪಕ್​ರನ್ನು ತಂಡದಿಂದ ಕೈಬಿಟ್ಟಿದ್ಯಾಕೆ?

ಅರ್ಧಶತಕ ಬಾರಿಸಿದ ಇಶಾನ್ ಕಿಶನ್

ಆದರೆ ರನೌಟ್ ಆಗುವುದಕ್ಕೂ ಮುನ್ನ ಇಶಾನ್ ಕಿಶನ್ ಅರ್ಧ ಶತಕ ಗಳಿಸಿದ್ದರು. ಹರಾರೆಯ ಕಠಿಣ ಪಿಚ್‌ನಲ್ಲಿ ಇಶಾನ್ ಕಿಶನ್ ನಿಧಾನವಾಗಿ ಪ್ರಾರಂಭಿಸಿ, ನಂತರ ವೇಗವನ್ನು ಹೆಚ್ಚಿಸಿದರು. ಕಿಶನ್ 61 ಎಸೆತಗಳಲ್ಲಿ 6 ಬೌಂಡರಿ ಒಳಗೊಂಡಂತೆ ಅರ್ಧಶತಕ ಪೂರೈಸಿದರು.

ಶತಕ ಬಾರಿಸಿದ ಗಿಲ್

ಇಶಾನ್ ಕಿಶನ್ ರನೌಟ್ ಆದರೂ, ಶತಕ ಗಳಿಸಿದ ನಂತರವೇ ಗಿಲ್ ತಮ್ಮ ವಿಕೆಟ್ ಕಳೆದುಕೊಂಡರು. ಈ ಬಲಗೈ ಬ್ಯಾಟ್ಸ್‌ಮನ್ ಅದ್ಭುತವಾಗಿ ಬ್ಯಾಟಿಂಗ್ ಮಾಡಿ, ಅಂತರರಾಷ್ಟ್ರೀಯ ವೃತ್ತಿಜೀವನದ ಮೊದಲ ಶತಕವನ್ನು ಬಾರಿಸಿದರು. ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡ ನಂತರ ಕ್ರೀಸ್‌ಗೆ ಕಾಲಿಟ್ಟ ಗಿಲ್, ಬಂದ ತಕ್ಷಣವೇ ಅಬ್ಬರಿಸಲು ಆರಂಭಿಸಿದರು. ಕಠಿಣ ಪಿಚ್‌ನಲ್ಲಿ ಕೇವಲ 51 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಗಿಲ್ ನಂತರದ 31 ಎಸೆತಗಳಲ್ಲಿ ಶತಕ ಪೂರೈಸಿದರು. ಗಿಲ್ ಅವರ ಅತ್ಯುತ್ತಮ ಇನ್ನಿಂಗ್ಸ್‌ನ ಆಧಾರದ ಮೇಲೆ ಭಾರತ ತಂಡ ಜಿಂಬಾಬ್ವೆ ವಿರುದ್ಧ 50 ಓವರ್‌ಗಳಲ್ಲಿ 289 ರನ್ ಗಳಿಸಿತು. ಒಂದು ಶತಕ ಮತ್ತು ಅರ್ಧಶತಕವನ್ನು ಒಳಗೊಂಡಂತೆ ಈ ODI ಸರಣಿಯಲ್ಲಿ ಗಿಲ್ ಅತ್ಯಧಿಕ 245 ರನ್‌ಗಳನ್ನು ಗಳಿಸಿದ್ದಾರೆ.

Published On - 5:51 pm, Mon, 22 August 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್