India vs New Zealand T20: ಗಪ್ಟಿಲ್​ಗೆ ಗುರಾಯಿಸಿ 1 ಲಕ್ಷ ರೂ. ಪಡೆದ ದೀಪಕ್ ಚಹರ್: ಇದು ಹೇಗೆ ಗೊತ್ತೇ?

| Updated By: Digi Tech Desk

Updated on: Nov 18, 2021 | 12:05 PM

Deepak Chahar stare at Martin Guptill: ದೀಪಕ್ ಚಹರ್ ಅವರ ಮೊದಲ ಎಸೆತದಲ್ಲಿ ಮಾರ್ಟಿನ್ ಗಪ್ಟಿಲ್ ಸಿಕ್ಸ್ ಸಿಡಿಸಿದರು. ಮರು ಎಸೆತದಲ್ಲೇ ಗಪ್ಟಿಲ್ ಅವರನ್ನು ಔಟ್ ಮಾಡಿದ ದೀಪಕ್ ಚಹರ್ ಸೇಡು ತೀರಿಸಿಕೊಂಡಿದ್ದಲ್ಲದೆ, ಅವರೂ ದಿಟ್ಟಿಸಿ ನೋಡಿದರು.

India vs New Zealand T20: ಗಪ್ಟಿಲ್​ಗೆ ಗುರಾಯಿಸಿ 1 ಲಕ್ಷ ರೂ. ಪಡೆದ ದೀಪಕ್ ಚಹರ್: ಇದು ಹೇಗೆ ಗೊತ್ತೇ?
Deepak Chahar and Martin Guptill
Follow us on

ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವೆ ನಡೆದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ (Rohit Sharma) ಪಡೆ ರೋಚಕ ಗೆಲುವು ಸಾಧಿಸಿದೆ. ಸಾಕಷ್ಟು ಕುತೂಹಲದಿಂದ ಕೂಡಿದ್ದ ಈ ಪಂದ್ಯದಲ್ಲಿ ದೀಪಕ್ ಚಹರ್ (Deepak Chahar) ಮತ್ತು ಮಾರ್ಟಿನ್ ಗಪ್ಟಿಲ್ (Martin Guptill) ನಡುವಣ ಕಾಳಗ ಮತ್ತಷ್ಟು ರಂಗೇರಿಸಿತು. ಹೌದು, ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ (Rahul Dravid) ಸಂಪೂರ್ಣ ಅಧಿಕಾರ ಸ್ವೀಕರಿಸಿ ಮೊದಲ ಪಂದ್ಯವನ್ನಾಡಿ ಯಶಸ್ಸು ಸಾಧಿಸಿತು. ರೋಹಿತ್‌ ಶರ್ಮಾ ಟಾಸ್‌ ಗೆದ್ದು ಶುಭಾರಂಭ ಮಾಡುವುದರೊಂದಿಗೆ ಎದುರಾಳಿಯನ್ನು ಮೊದಲು ಬ್ಯಾಟ್‌ ಮಾಡುವಂತೆ ಆಹ್ವಾನಿಸಿದ್ದರು. ಈ ವೇಳೆ ಬ್ಯಾಟರ್ ಮಾರ್ಟಿನ್ ಗಪ್ಟಿಲ್ ಮತ್ತು ವೇಗಿ ದೀಪಕ್ ಚಹರ್ (Deepak Chahar stare at Martin Guptill) ನಡುವಿನ ದೃಷ್ಟಿ ಸಮರ ಸಾಕಷ್ಟು ಗಮನ ಸೆಳೆಯಿತು. ಇವರಿಬ್ಬರ ನಡುವಣ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಕಿವೀಸ್ ತಂಡ ದೊಡ್ಡ ಮೊತ್ತ ಕಳೆಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಆರಂಭಿಕ ಆಟಗಾರ ಮಾರ್ಟಿನ್ ಗಪ್ಟಿಲ್ 70 ರನ್ (42 ಎಸೆತ, 3 ಬೌಂಡರಿ, 4 ಸಿಕ್ಸ್) ಸಿಡಿಸಿ 18ನೇನಲ್ಲಿ ಓವರ್‍ ನಲ್ಲಿ ಔಟ್ ಆದರು. ಗಪ್ಟಿಲ್ ಔಟ್ ಆಗುವ ಮೊದಲು ಇನಿಂಗ್ಸ್‌ನ 18ನೇ ಓವರ್ ಎಸೆಯಲು ಬಂದ ದೀಪಕ್ ಚಹರ್ ಅವರ ಮೊದಲ ಎಸೆತದಲ್ಲಿ ಮಿಡ್ ವಿಕೆಟ್ ಮೇಲೆ ಭರ್ಜರಿ ಸಿಕ್ಸರ್ ಸಿಡಿಸಿದರು. ಇದರ ಬೆನ್ನಲ್ಲೇ ದೀಪಕ್ ಚಹರ್ ಅವರನ್ನು ಗಪ್ಟಿಲ್ ದುರುಗುಟ್ಟಿ ನೋಡಿದರು.

 

ಆದರೆ, ಮರು ಎಸೆತದಲ್ಲೇ ಗಪ್ಟಿಲ್ ಅವರನ್ನು ಔಟ್ ಮಾಡಿದ ದೀಪಕ್ ಚಹರ್ ಸೇಡು ತೀರಿಸಿಕೊಂಡಿದ್ದಲ್ಲದೆ, ಅವರೂ ಗಪ್ಟಿಲ್‌ರನ್ನು ದಿಟ್ಟಿಸಿ ನೋಡಿದರು. ಗಪ್ಟಿಲ್ ಸತತ 2ನೇ ಸಿಕ್ಸರ್ ಸಿಡಿಸುವ ಯತ್ನದಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿದ್ದ ಶ್ರೇಯಸ್ ಅಯ್ಯರ್‌ಗೆ ಕ್ಯಾಚ್ ನೀಡಿ ಕೈಸುಟ್ಟುಕೊಂಡರು. ಗಪ್ಟಿಲ್-ದೀಪಕ್ ನಡುವಿನ ಈ ಜಟಾಪಟಿ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಮನರಂಜನೆ ನೀಡಿತು.

ದಿಫಕ್ ಚಹರ್ ಅವರ ಸ್ಲೋ ಬಾಲ್ ಅರಿಯದೇ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಾರ್ಟಿನ್‌ ಕ್ಯಾಚಿತ್ತರು. ವಿಕೆಟ್ ಪಡೆದ ಬಳಿಕ ಚಹರ್‌ ಬ್ಯಾಟ್ಸ್‌ಮನ್‌ ಕಡಗೆ ಅವರದ್ದೇ ಶೈಲಿಯಲ್ಲಿ ಲುಕ್‌ ಕೊಟ್ಟು ಗಮನ ಸೆಳೆದರು. ಇಬ್ಬರ ನಡುವಣ ಜಟಾಪಟಿ ಕಂಡು ಕ್ರೀಡಾಂಗಣದಲ್ಲಿ ಸೇರಿದ್ದ ಸಾವಿರಾರು ಸಂಖ್ಯೆಯ ಪ್ರೇಕ್ಷಕರು ಹುಚ್ಚೆದ್ದು ಕುಣಿದರು. ಪಂದ್ಯ ಮುಗಿದ ಬಳಿಕ ಪ್ರಶಸ್ತಿ ಸಮಾರಂಭದ ವೇಳೆ ದೀಪಕ್ ಚಹರ್ ಅವರು ಗಪ್ಟಿಲ್ ಅವರನ್ನು ದಿಟ್ಟಿಸಿ ನೋಡಿದ್ದ ಕ್ಷಣವನ್ನು ‘ಮೂಮೆಂಟ್ ಆಫ್ ದಿ ಮ್ಯಾಚ್’ ಎಂದು ಪರಿಗಣಿಸಲಾಗಿದೆ. ಇದಕ್ಕಾಗಿ ಚಹರ್ 1 ಲಕ್ಷ ರೂ. ಅನ್ನೂ ಪಡೆದುಕೊಂಡಿದ್ದಾರೆ.

 

ಸರ್ವಾಂಗೀಣ ನಿರ್ವಹಣೆ ತೋರಿದ ಭಾರತ ತಂಡ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟಿ20 ಸರಣಿಯಲ್ಲಿ ಶುಭಾರಂಭ ಕಂಡಿತು. ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಭಾರತ ತಂಡ ಕಿವೀಸ್ ತಂಡವನ್ನು 5 ವಿಕೆಟ್‌ಗಳಿಂದ ಮಣಿಸಿ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನ ನಿರ್ಣಾಯಕ ಹಣಾಹಣಿಯಲ್ಲಿ ಕಿವೀಸ್ ವಿರುದ್ಧ ಅನುಭವಿಸಿದ್ದ ಸೋಲಿಗೂ ಟೀಮ್ ಇಂಡಿಯಾ ಸೇಡು ತೀರಿಸಿಕೊಂಡಿತು.

Smriti Mandhana: ಮಹಿಳಾ ಬಿಗ್ ಬ್ಯಾಷ್​ನಲ್ಲಿ ಸ್ಮೃತಿ ಮಂದಾನ ಆರ್ಭಟ: ದಾಖಲೆಯ ಸ್ಫೋಟಕ ಶತಕ: ವಿಡಿಯೋ

India vs New Zealand: ಭಾರತ- ನ್ಯೂಜಿಲೆಂಡ್ ಪಂದ್ಯದ ನಡುವೆ ಮೊಹಮ್ಮದ್ ಸಿರಾಜ್​ಗೆ ಹೊಡೆದ ರೋಹಿತ್ ಶರ್ಮಾ

(Deepak Chahar staring at Martin Guptill in India vs New Zealand T20 and wins Rs 1 lakh Video going viral)

Published On - 12:00 pm, Thu, 18 November 21