
ಅದು 2010, ಮಾರ್ಚ್ 18… ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ರಾಜಸ್ಥಾನ್ ರಾಯಲ್ಸ್ (RR) ತಂಡ ಮುಖಾಮುಖಿಯಾಗಿತ್ತು. ಟಾಸ್ ಗೆದ್ದ ಆರ್ಸಿಬಿ ನಾಯಕ ಅನಿಲ್ ಕುಂಬ್ಳೆ (Anil Kumble) ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ರಾಜಸ್ಥಾನ್ ರಾಯಲ್ಸ್ ಕೇವಲ 92 ರನ್ಗಳಿಗೆ ಆಲೌಟ್ ಆಯಿತು. ಇದರ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರಾಯಭಾರಿಯಾಗಿದ್ದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಆರ್ಆರ್ ತಂಡದ ಬ್ಯಾಟಿಂಗ್ ಅನ್ನು ವ್ಯಂಗ್ಯವಾಡಿ ಟ್ವಿಟರ್ನಲ್ಲಿ ಪೋಸ್ಟ್ ಹಾಕಿದ್ದರು.
ಆ ಪೋಸ್ಟ್ ಹೇಗಿತ್ತು ಅಂದ್ರೆ…”92 !! ಇದೆಲ್ಲಾ ಒಂದು ಸ್ಕೋರಾ? ಎಲ್ಲಾ ರೀತಿಯಲ್ಲೂ ಆರ್ಸಿಬಿ ಹುಡುಗರು ಅದ್ಭುತವಾಗಿ ಆಡುತ್ತಿದ್ದಾರೆ… ಪ್ರತಿ ಸೆಕೆಂಡ್ ಅನ್ನು ಲೈವ್ ಆಗಿ ನೋಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದರು. 11 ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಮಾಡಿದ್ದ ಈ ಟ್ವೀಟ್ ಇದೀಗ ವೈರಲ್ ಆಗಿದೆ. ವೈರಲ್ ಆಗಲು ಬಹುಮುಖ್ಯ ಕಾರಣ ಐಪಿಎಲ್ನ ದ್ವಿತಿಯಾರ್ಧದಲ್ಲಿ ಆರ್ಸಿಬಿ ತಂಡ ಕೇವಲ 92 ರನ್ಗಳಿಗೆ ಆಲೌಟ್ ಆಗಿರುವುದು.
ಯುಎಇನಲ್ಲಿ ನಡೆದ ಐಪಿಎಲ್ನ 31ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಕೇವಲ 92 ರನ್ಗಳಿಗೆ ಆಲೌಟ್ ಆಯಿತು. ಈ ಸುಲಭ ಟಾರ್ಗೆಟ್ ಅನ್ನು ಕೆಕೆಆರ್ ಕೇವಲ 10 ಓವರ್ನಲ್ಲಿ ಮುಟ್ಟಿತು. ಈ ಹೀನಾಯ ಸೋಲಿನ ಬೆನ್ನಲ್ಲೇ 11 ವರ್ಷಗಳ ಹಿಂದಿನ ಟ್ವೀಟ್ ಮೂಲಕ ನೆಟ್ಟಿಗರು ದೀಪಿಕಾ ಪಡುಕೋಣೆಯನ್ನು ಟ್ರೋಲ್ ಮಾಡುತ್ತಿದ್ದಾರೆ.
ಯಾವುದು ಬದಲಾಗಿಲ್ಲ. ಇಲ್ಲಿ ತಂಡ ಮಾತ್ರ ಬದಲಾಗಿದೆ. ಬೇಕಿದ್ರೆ ನೀವು ಮತ್ತೊಮ್ಮೆ ನಿಮ್ಮ ಟ್ವೀಟ್ ಅನ್ನು ರಿಟ್ವೀಟ್ ಮಾಡಬಹುದು ಎಂದು ವ್ಯಕ್ತಿಯೊಬ್ಬರು ದೀಪಿಕಾರನ್ನು ಕಾಲೆಳೆದಿದ್ದಾರೆ. ಇನ್ನು ಮತ್ತೊಬ್ಬರು 11 ವರ್ಷಗಳ ಬಳಿಕ ಕರ್ಮ ಮರುಕಳಿಸಿದೆ ಎಂದು ವ್ಯಂಗ್ಯವಾಡಿದ್ದಾರೆ. ಇನ್ನೊಬ್ಬರು ಸೆಲೆಬ್ರಿಟಿಗಳು ದುಡ್ಡಿಗಾಗಿ ಟ್ವೀಟ್ ಮಾಡುವಾಗ ಸ್ವಲ್ಪ ಎಚ್ಚರವಹಿಸಿ. ಇಲ್ಲದಿದ್ದರೆ ವರ್ಷಗಳ ಬಳಿಕ ಅದು ನಿಮಗೆ ರಿಟನ್ ಹೊಡೆಯುತ್ತೆ ಎಂಬುದಕ್ಕೆ ದೀಪಿಕಾ ಟ್ವೀಟ್ ಸಾಕ್ಷಿ ಎಂದು ಕಾಲೆಳೆದಿದ್ದಾರೆ. ಒಟ್ಟಿನಲ್ಲಿ 11 ವರ್ಷಗಳ ಹಿಂದೆ ದೀಪಿಕಾ ಪಡುಕೋಣೆ ಮಾಡಿದ ಟ್ವೀಟ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿರುವುದಂತು ಸುಳ್ಳಲ್ಲ.
ಇದನ್ನೂ ಓದಿ: Virat Kohli: ನಮಗೆ ಸೋಲುಣಿಸಿದ ಆತನೇ ನಮ್ಮ ಪ್ರಮುಖ ಅಸ್ತ್ರ..!
ಇದನ್ನೂ ಓದಿ: Virat Kohli: ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ವಿರಾಟ್ ಕೊಹ್ಲಿ
ಇದನ್ನೂ ಓದಿ: 90 ಕಿ.ಮೀ ಮೈಲೇಜ್ ನೀಡುವ ಕಡಿಮೆ ಬೆಲೆಯ ಬೈಕ್ಗಳ ಪಟ್ಟಿ ಇಲ್ಲಿದೆ
ಇದನ್ನೂ ಓದಿ: IPL 2021: ಪ್ಲೇ ಆಫ್ ಪ್ರವೇಶಿಸುವ 4 ತಂಡಗಳನ್ನು ಹೆಸರಿಸಿದ ಗೌತಮ್ ಗಂಭೀರ್
(Deepika Padukone’s Vintage Tweet Goes Viral After RCB Get Bundled Out for 92)