DC vs RCB, WPL 2023: ಮುಂಬೈನ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ 11ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡವು ರೋಚಕ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ಎಲ್ಲಿಸ್ ಪೆರ್ರಿ (67) ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 150 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿತು. ಅದರಲ್ಲೂ ಅಂತಿಮ ಓವರ್ನಲ್ಲಿ ಡೆಲ್ಲಿಗೆ ಗೆಲ್ಲಲು 9 ರನ್ಗಳ ಅವಶ್ಯಕತೆಯಿತ್ತು. ಈ ಹಂತದಲ್ಲಿ ಭರ್ಜರಿ ಸಿಕ್ಸ್ ಸಿಡಿಸುವ ಮೂಲಕ ಜೆಸ್ ಜೊನಾಸನ್ ಆರ್ಸಿಬಿ ಕೈಯಿಂದ ಜಯವನ್ನು ಕಸಿದುಕೊಂಡರು. ಅಲ್ಲದೆ 19.4 ಓವರ್ಗಳಲ್ಲಿ ಗುರಿ ಮುಟ್ಟುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಇದರೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಆಡಿದ 5 ಪಂದ್ಯಗಳಲ್ಲೂ ಆರ್ಸಿಬಿ ತಂಡ ಸೋಲನುಭವಿಸಿದೆ. ಅಲ್ಲದೆ ಇದುವರೆಗೆ ಗೆಲುವಿನ ಖಾತೆ ತೆರೆಯಲು ವಿಫಲವಾಗಿ ಭಾರೀ ಮುಖಭಂಗಕ್ಕೆ ಒಳಗಾಗಿದೆ.
ಆರ್ಸಿಬಿ- 150/4 (20)
ಡೆಲ್ಲಿ ಕ್ಯಾಪಿಟಲ್ಸ್- 154/4 (19.4)
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಮೆಗ್ ಲ್ಯಾನಿಂಗ್ (ನಾಯಕಿ) , ತಾನಿಯಾ ಭಾಟಿಯಾ (ವಿಕೆಟ್ ಕೀಪರ್) , ಶಫಾಲಿ ವರ್ಮಾ , ಲಾರಾ ಹ್ಯಾರಿಸ್ , ಜೆಮಿಮಾ ರೋಡ್ರಿಗಸ್ , ಮರಿಝನ್ನೆ ಕಪ್ , ಜೆಸ್ ಜೊನಾಸೆನ್ , ಮಿನ್ನು ಮಣಿ , ರಾಧಾ ಯಾದವ್ , ಶಿಖಾ ಪಾಂಡೆ , ತಾರಾ ನಾರ್ರಿಸ್ , ಅರುಂಧತಿ ಎ ಕಾಪ್ಸೆಯ್ , ಜಾಸ್ ಅಲ್ ಕಾಪ್ತಾರ್ , ಟಿಟಾಸ್ ಸಾಧು , ಸ್ನೇಹ ದೀಪ್ತಿ , ಪೂನಂ ಯಾದವ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ: ಸ್ಮೃತಿ ಮಂಧಾನ (ನಾಯಕಿ) , ರಿಚಾ ಘೋಷ್ (ವಿಕೆಟ್ ಕೀಪರ್) , ಸೋಫಿ ಡಿವೈನ್ , ಎಲ್ಲಿಸ್ ಪೆರ್ರಿ , ಕನಿಕಾ ಅಹುಜಾ , ಹೀದರ್ ನೈಟ್ , ಶ್ರೇಯಾಂಕಾ ಪಾಟೀಲ್ , ಎರಿನ್ ಬರ್ನ್ಸ್ , ಕೋಮಲ್ ಝಂಝಾದ್ , ರೇಣುಕಾ ಠಾಕೂರ್ ಸಿಂಗ್ , ಸಹನಾ ಪವಾರ್ , ಪೂನಮ್ ಖೇಮ್ನಾರ್ , ದಿಶಾ ಕಸತ್, ಮೇಗನ್ ಶುಟ್, ಡೇನ್ ವ್ಯಾನ್ ನೀಕರ್ಕ್ , ಪ್ರೀತಿ ಬೋಸ್ , ಇಂದ್ರಾಣಿ ರಾಯ್ , ಆಶಾ ಶೋಬನಾ.
6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್
ರೇಣುಕಾ ಸಿಂಗ್ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಜೆಸ್ ಜೊನಾಸನ್
ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು ಕೊನೆಯ ಓವರ್ನಲ್ಲಿ 9 ರನ್ಗಳ ಅವಶ್ಯಕತೆ
ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಲೆಗ್ ಸೈಡ್ನತ್ತ ಸ್ವೀಪ್ ಶಾಟ್ ಬೌಂಡರಿ ಬಾರಿಸಿದ ಜೆಸ್
ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 12 ಎಸೆತಗಳಲ್ಲಿ 16 ರನ್ಗಳ ಅವಶ್ಯಕತೆ
ಎಲ್ಲಿಸ್ ಪೆರ್ರಿ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಬಾರಿಸಿದ ಮರಿಝನ್ನೆ ಕಪ್
ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 18 ಎಸೆತಗಳಲ್ಲಿ 24 ರನ್ಗಳ ಗುರಿ
ಮೇಗನ್ ಶುಟ್ ಎಸೆತದಲ್ಲಿ ಆಫ್ ಸೈಡ್ನತ್ತ ಪವರ್ಫುಲ್ ಶಾಟ್ ಬಾರಿಸಿದ ಮರಿಝನ್ನೆ ಕಪ್
ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಆಫ್ ಸೈಡ್ನತ್ತ ಬೌಂಡರಿ ಬಾರಿಸಿದ ಎಡಗೈ ಆಟಗಾರ್ತಿ ಜೆಸ್ ಜೊನಾಸನ್
ಡೆಲ್ಲಿ ಕ್ಯಾಪಿಟಲ್ಸ್ಗೆ ಗೆಲ್ಲಲು 30 ಎಸೆತಗಳಲ್ಲಿ 37 ರನ್ಗಳ ಅವಶ್ಯಕತೆ
ಆಶಾ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಆಕರ್ಷಕ ಫೋರ್ ಬಾರಿಸಿದ ಜೆಸ್ ಜೊನಾಸನ್
ಆಶಾ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕೀಪರ್ಗೆ ಕ್ಯಾಚ್ ನೀಡಿ ಜೆಮಿಮಾ (32)
ಕ್ರೀಸ್ನಲ್ಲಿ ಜೆಮಿಮಾ – ಮರಿಝನ್ನೆ ಕಪ್ ಬ್ಯಾಟಿಂಗ್
ಶ್ರೇಯಾಂಕ ಪಾಟೀಲ್ ಎಸೆತದಲ್ಲಿ ಆಕರ್ಷಕ ಫೋರ್ ಬಾರಿಸಿದ ಜೆಮಿಮಾ
ಆಶಾ ಶೋಬನಾ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿದ ಮೆಗ್ ಲ್ಯಾನಿಂಗ್ (15)
ಕ್ರೀಸ್ನಲ್ಲಿ ಜೆಮಿಮಾ ರೋಡಿಗ್ರಸ್ – ಮೆಗ್ ಲ್ಯಾನಿಂಗ್ ಬ್ಯಾಟಿಂಗ್
ಕ್ರೀಸ್ನಲ್ಲಿ ಮೆಗ್ ಲ್ಯಾನಿಂಗ್ – ಜೆಮಿಮಾ ರೋಡಿಗ್ರಸ್ ಬ್ಯಾಟಿಂಗ್
ಪ್ರೀತಿ ಬೋಸ್ ಎಸೆತದಲ್ಲಿ ಬೌಂಡರಿ ಲೈನ್ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದ ಅಲೀಸ್ ಕ್ಯಾಪ್ಸಿ (38)
ಪ್ರೀತಿ ಬೋಸ್ ಓವರ್ನಲ್ಲಿ ಹ್ಯಾಟ್ರಿಕ್ ಫೋರ್ ಸಿಡಿಸಿದ ಅಲೀಸ್ ಕ್ಯಾಪ್ಸಿ
ಪ್ರೀತಿ ಬೋಸ್ ಎಸೆತದಲ್ಲಿ ಡೀಪ್ ಎಕ್ಸ್ಟ್ರಾ ಕವರ್ನತ್ತ ಫೋರ್ ಬಾರಿಸಿದ ಅಲೀಸ್ ಕ್ಯಾಪ್ಸಿ
ರೇಣುಕಾ ಸಿಂಗ್ ಎಸೆತದಲ್ಲಿ ಸ್ಕೂಪ್ ಶಾಟ್ ಮೂಲಕ ಹಿಂಬದಿಯತ್ತ ಫೋರ್ ಬಾರಿಸಿದ ಕ್ಯಾಪ್ಸಿ
ಕ್ರೀಸ್ನಲ್ಲಿ ಅಲೀಸ್ ಕ್ಯಾಪ್ಸಿ ಹಾಗೂ ಮೆಗ್ ಲ್ಯಾನಿಂಗ್ ಬ್ಯಾಟಿಂಗ್
ಮೇಗನ್ ಶುಟ್ ಎಸೆತದಲ್ಲಿ ಶಫಾಲಿ ವರ್ಮಾ (0) ಕ್ಲೀನ್ ಬೌಲ್ಡ್
ಆರ್ಸಿಬಿ ಪರ ಅರ್ಧಶತಕ ಬಾರಿಸಿ ಮಿಂಚಿದ ಎಲ್ಲಿಸ್ ಪೆರ್ರಿ (67)
ಡೆಲ್ಲಿ ಕ್ಯಾಪಿಟಲ್ಸ್ಗೆ 151 ರನ್ಗಳ ಗುರಿ ನೀಡಿದ ಆರ್ಸಿಬಿ
ಜೆಸ್ ಎಸೆತದಲ್ಲಿ ಸ್ಟ್ರೈಟ್ ಹಿಟ್ ಸಿಕ್ಸ್ ಸಿಡಿಸಿದ ಎಲ್ಲಿಸ್ ಪೆರ್ರಿ
ಕ್ರೀಸ್ನಲ್ಲಿ ಎಲ್ಲಿಸ್ ಪೆರ್ರಿ – ಶ್ರೇಯಾಂಕಾ ಪಾಟೀಲ್
ಶಿಖಾ ಪಾಂಡೆ ಎಸೆತದಲ್ಲಿ ಕೀಪರ್ಗೆ ಕ್ಯಾಚ್ ನೀಡಿ ಹೊರನಡೆದ ರಿಚಾ ಘೋಷ್ (37)
ಜೆಸ್ ಎಸೆತದಲ್ಲಿ ಸ್ಟೈಟ್ ಹಿಟ್ ಸಿಕ್ಸ್ ಬಾರಿಸಿದ ರಿಚಾ ಘೋಷ್
ಜೆಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಸಿಕ್ಸ್ ಸಿಡಿಸಿದ ಎಲ್ಲಿಸ್ ಪೆರ್ರಿ
ಶಿಖಾ ಪಾಂಡೆ ಎಸೆತದಲ್ಲಿ ಡೀಪ್ ಮಿಡ್ ವಿಕೆಟ್ನತ್ತ ಫೋರ್ ಬಾರಿಸಿದ ಎಲ್ಲಿಸ್ ಪೆರ್ರಿ
ಟಾರಾ ನೋರಿಸ್ ಎಸೆತದಲ್ಲಿ ಲೆಗ್ ಸೈಡ್ನತ್ತ ಭರ್ಜರಿ ಶಾಟ್ ಬಾರಿಸಿದ ಹೀದರ್ ನೈಟ್…ಅದ್ಭುತವಾಗಿ ಡೈವಿಂಗ್ ಕ್ಯಾಚ್ ಹಿಡಿದ ಶಿಖಾ ಪಾಂಡೆ…ಹೀದರ್ ನೈಟ್ (11) ಔಟ್
ಕ್ರೀಸ್ನಲ್ಲಿ ಎಲ್ಲಿಸ್ ಪೆರ್ರಿ – ಹೀದರ್ ನೈಟ್ ಬ್ಯಾಟಿಂಗ್
ಜೆಸ್ ಎಸೆತದಲ್ಲಿ ಆಫ್ ಸೈಡ್ನತ್ತ ಫೋರ್ ಬಾರಿಸಿದ ಎಲ್ಲಿಸ್ ಪೆರ್ರಿ
ಶಿಖಾ ಪಾಂಡೆ ಎಸೆತದಲ್ಲಿ ಸೋಫಿ ಡಿವೈನ್ ಕ್ಲೀನ್ ಬೌಲ್ಡ್ (21)
ಆರ್ಸಿಬಿ ತಂಡದ 2ನೇ ವಿಕೆಟ್ ಪತನ
ಡೆಲ್ಲಿ ಕ್ಯಾಪಿಟಲ್ಸ್ ಉತ್ತಮ ಬೌಲಿಂಗ್
ಕ್ರೀಸ್ನಲ್ಲಿ ಸೋಫಿ ಡಿವೈನ್ – ಎಲ್ಲಿಸ್ ಪೆರ್ರಿ ಬ್ಯಾಟಿಂಗ್
ರಾಧಾ ಯಾದವ್ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಫೋರ್ ಬಾರಿಸಿದ ಎಲ್ಲಿಸ್ ಪೆರ್ರಿ
ಕ್ರೀಸ್ನಲ್ಲಿ ಸೋಫಿ ಡಿವೈನ್ – ಎಲ್ಲಿಸ್ ಪೆರ್ರಿ ಬ್ಯಾಟಿಂಗ್
ಶಿಖಾ ಪಾಂಡೆ ಎಸೆತದಲ್ಲಿ ಸ್ಮೃತಿ ಭರ್ಜರಿ ಹೊಡೆತಕ್ಕೆ ಯತ್ನ…ಬೌಂಡರಿ ಲೈನ್ನಲ್ಲಿ ಜೆಮಿಮಾ ಉತ್ತಮ ಕ್ಯಾಚ್..ಸ್ಮೃತಿ ಮಂಧಾನ (8) ಔಟ್.
ಕ್ಯಾಪ್ಸಿ ಎಸೆತದಲ್ಲಿ ಎಕ್ಸ್ಟ್ರಾ ಕವರ್ನತ್ತ ಭರ್ಜರಿ ಬೌಂಡರಿ ಬಾರಿಸಿದ ಸೋಫಿ ಡಿವೈನ್
ಕ್ರೀಸ್ನಲ್ಲಿ ಸ್ಮೃತಿ ಮಂಧಾನ-ಸೋಫಿ ಡಿವೈನ್ ಬ್ಯಾಟಿಂಗ್
ಅಲೀಸ್ ಕ್ಯಾಪ್ಸಿ ಎಸೆತದಲ್ಲಿ ಆಫ್ ಸೈಡ್ನತ್ತ ಆಕರ್ಷಕ ಬೌಂಡರಿ ಬಾರಿಸಿದ ಸೋಫಿ ಡಿವೈನ್
ಮರಿಝನ್ನೆ ಕಪ್ ಎಸೆದ ಮೊದಲ ಓವರ್ನಲ್ಲಿ ಒಂದೇ ಒಂದು ರನ್ಗಳಿಸದ ಸ್ಮೃತಿ ಮಂಧಾನ
RCBW 0/0 (1)
ಮೊದಲ ಓವರ್: ಮರಿಝನ್ನೆ ಕಪ್
ಆರಂಭಿಕರು: ಸ್ಮೃತಿ ಮಂಧಾನ ಹಾಗೂ ಸೋಫಿ ಡಿವೈನ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಪ್ಲೇಯಿಂಗ್ XI): ಸ್ಮೃತಿ ಮಂಧಾನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೀದರ್ ನೈಟ್, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೇಯಾಂಕಾ ಪಾಟೀಲ್, ದಿಶಾ ಕಸತ್, ಮೇಗನ್ ಶುಟ್, ಆಶಾ ಶೋಬನಾ, ರೇಣುಕಾ ಠಾಕೂರ್ ಸಿಂಗ್, ಪ್ರೀತಿ ಬೋಸ್
ಡೆಲ್ಲಿ ಕ್ಯಾಪಿಟಲ್ಸ್ (ಪ್ಲೇಯಿಂಗ್ XI): ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಆಲಿಸ್ ಕ್ಯಾಪ್ಸೆ, ಜೆಮಿಮಾ ರಾಡ್ರಿಗಸ್, ಮರಿಜಾನ್ನೆ ಕಪ್, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಜೆಸ್ ಜೊನಾಸೆನ್, ಅರುಂಧತಿ ರೆಡ್ಡಿ, ರಾಧಾ ಯಾದವ್, ಶಿಖಾ ಪಾಂಡೆ, ಟಾರಾ ನೋರಿಸ್.
ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಬೌಲಿಂಗ್ ಆಯ್ದುಕೊಂಡಿದ್ದಾರೆ.
We are at DY Patil Stadium ? ?️@DelhiCapitals take on @RCBTweets to continue their winning streak?
Or will #RCB win❓#DCvRCB pic.twitter.com/MAdc5j66DS
— Women’s Premier League (WPL) (@wplt20) March 13, 2023
ಟಾಸ್ ಪ್ರಕ್ರಿಯೆ: 7 ಗಂಟೆಗೆ
ಪಂದ್ಯ ಶುರು: 7.3 0 ರಿಂದ
ಸ್ಥಳ: ಡಿವೈ ಪಾಟೀಲ್ ಸ್ಟೇಡಿಯಂ, ಮುಂಬೈ
Published On - 6:31 pm, Mon, 13 March 23