2023-24ರ ದೇಶೀಯ ಕ್ರಿಕೆಟ್ ಸೀಸನ್ನಲ್ಲಿ ನಾಲ್ಕು ವರ್ಷಗಳ ಬಳಿಕ ದೇವಧರ್ ಟ್ರೋಫಿಯನ್ನು (Deodhar Trophy 2023) ಆಯೋಜಿಸಲಾಗುತ್ತಿದೆ. ವಿಜಯ್ ಹಜಾರೆ ಟ್ರೋಫಿಯ (Vijay Hazare Trophy) ನಂತರ ಭಾರತದಲ್ಲಿ ನಡೆಯುತ್ತಿರುವ ಎರಡನೇ ಪ್ರಮುಖ ದೇಶೀಯ ಲಿಸ್ಟ್ ಎ ಪಂದ್ಯಾವಳಿ ಇದಾಗಿದೆ. ದೇವಧರ್ ಟ್ರೋಫಿಯನ್ನು 50 ಓವರ್ಗಳ ಮಾದರಿಯಲ್ಲಿ ಆಡಲಾಗುತ್ತಿದ್ದು, ಪಂದ್ಯಾವಳಿಯಲ್ಲಿ ಆರು ತಂಡಗಳು ಬಾಗಿಯಾಗುತ್ತಿವೆ. ಈ ಆರು ತಂಡಗಳನ್ನು ಉತ್ತರ ವಲಯ, ದಕ್ಷಿಣ ವಲಯ, ಮಧ್ಯ ವಲಯ, ಈಶಾನ್ಯ ವಲಯ, ಪಶ್ಚಿಮ ವಲಯ ಮತ್ತು ಪೂರ್ವ ವಲಯ ತಂಡಗಳಾಗಿ ವಿಂಗಡಿಸಲಾಗಿದೆ.
1973 ರಲ್ಲಿ ಆರಂಭವಾದ ದೇವಧರ್ ಟ್ರೋಫಿಗೆ, ದಿನಕರ್ ಬಲವಂತ ದೇವಧರ್ ಅವರ ಗೌರವಾರ್ಥವಾಗಿ ಈ ಹೆಸರಿಡಲಾಯಿತು. ರಣಜಿ ಟ್ರೋಫಿಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸಿ, ಮುನ್ನಡೆಸುತ್ತಿದ್ದ ದೇವಧರ್ ಅವರು 81 ಪ್ರಥಮ ದರ್ಜೆ ಪಂದ್ಯಗಳಲ್ಲಿ 4522 ರನ್ ಕಲೆಹಾಕಿದ್ದರು. ಅಲ್ಲದೆ ಮೊದಲ ವಿಶ್ವಯುದ್ಧದ ಮೊದಲು ಮತ್ತು ಎರಡನೇ ವಿಶ್ವಯುದ್ಧದ ನಂತರ ಪ್ರಥಮ ದರ್ಜೆ ಕ್ರಿಕೆಟ್ ಆಡಿದ ಕೆಲವೇ ಕೆಲವು ಕ್ರಿಕೆಟಿಗರಲ್ಲಿ ದೇವಧರ್ ಕೂಡ ಒಬ್ಬರು. ದೇವಧರ್ ಅವರು ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಬಿಸಿಸಿಐ ಉಪಾಧ್ಯಕ್ಷರಾಗಿ ಮತ್ತು ಮಾಜಿ ರಾಷ್ಟ್ರೀಯ ಆಯ್ಕೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.
Deodhar Trophy 2023: ಕನ್ನಡಿಗ ಮಯಾಂಕ್ಗೆ ದಕ್ಷಿಣ ವಲಯದ ನಾಯಕತ್ವ; ಅರ್ಜುನ್ಗೆ ತಂಡದಲ್ಲಿ ಸ್ಥಾನ
ಅಂತರ-ವಲಯ ಸ್ವರೂಪದಲ್ಲಿ, ಉತ್ತರ ವಲಯವು 13 ಪ್ರಶಸ್ತಿಗಳೊಂದಿಗೆ ದೇವಧರ್ ಟ್ರೋಫಿಯಲ್ಲಿ ಅತ್ಯಂತ ಯಶಸ್ವಿ ತಂಡವಾಗಿದೆ. ಪೂರ್ವ ವಲಯವು 2014-15ರ ಆವೃತ್ತಿಯಲ್ಲಿ ಪಂದ್ಯಾವಳಿಯ ಕೊನೆಯ ವಲಯ ವಿಜೇತವಾಗಿತ್ತು.
ಈ ಬಾರಿಯ ದೇವಧರ್ ಟ್ರೋಫಿ ಜುಲೈ 24 ರಿಂದ ಪ್ರಾರಂಭವಾಗುತ್ತದೆ. ಎಲ್ಲಾ ಪಂದ್ಯಗಳು ಪಾಂಡಿಚೇರಿಯಲ್ಲಿ ನಡೆಯಲಿವೆ. ಆಗಸ್ಟ್ 3 ರಂದು ಸೀಚೆಮ್ ಕ್ರೀಡಾಂಗಣದಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಆರು ತಂಡಗಳ ಈ ಪಂದ್ಯಾವಳಿಯನ್ನು ರೌಂಡ್-ರಾಬಿನ್ ಮಾದರಿಯಲ್ಲಿ ಆಡಲಾಗುತ್ತದೆ. ಅದರರ್ಥ ಎಲ್ಲಾ ಆರು ತಂಡಗಳು ಪ್ರತಿ ತಂಡದ ಎದುರು ತಲಾ ಒಂದೊಂದು ಪಂದ್ಯವನ್ನು ಆಡುತ್ತವೆ. ಲೀಗ್ ಹಂತದಲ್ಲಿ ಅಗ್ರ ಎರಡು ಸ್ಥಾನ ಪಡೆಯುವ ತಂಡಗಳು ನೇರವಾಗಿ ಫೈನಲ್‌ಗೆ ಲಗ್ಗೆ ಇಡಲಿವೆ.
ದಕ್ಷಿಣ ವಲಯ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ರೋಹನ್ ಕುನ್ನುಮ್ಮಲ್ (ಉಪನಾಯಕ), ಎನ್ ಜಗದೀಸನ್ (ವಿಕೆಟ್ ಕೀಪರ್), ರೋಹಿತ್ ರಾಯಡು, ಕೆಬಿ ಅರುಣ್ ಕಾರ್ತಿಕ್, ದೇವದತ್ ಪಡಿಕ್ಕಲ್, ರಿಕಿ ಭುಯಿ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ವಿ. ಕಾವೇರಪ್ಪ, ವೈಶಾಕ್ ವಿಜಯ್ಕುಮಾರ್. ಕೌಶಿಕ್ ವಿ, ಮೋಹಿತ್ ರೆಡ್ಕರ್, ಸಿಜೋಮನ್ ಜೋಸೆಫ್, ಅರ್ಜುನ್ ತೆಂಡೂಲ್ಕರ್, ಸಾಯಿ ಕಿಶೋರ್.
ಮೀಸಲು ಆಟಗಾರರು: ಸಾಯಿ ಸುದರ್ಶನ್, ನಿಕಿನ್ ಜೋಸ್, ಪ್ರದೋಶ್ ರಂಜನ್ ಪಾಲ್, ನಿತೀಶ್ ಕುಮಾರ್ ರೆಡ್ಡಿ, ಕೆಎಸ್ ಭರತ್.
ಪಶ್ಚಿಮ ವಲಯ ತಂಡ: ಪ್ರಿಯಾಂಕ್ ಪಾಂಚಾಲ್ (ನಾಯಕ), ರಾಹುಲ್ ತ್ರಿಪಾಠಿ, ಹಾರ್ವಿಕ್ ದೇಸಾಯಿ, ಹೆಟ್ ಪಟೇಲ್, ಸರ್ಫರಾಜ್ ಖಾನ್, ಅಂಕೀತ್ ಬವಾನೆ, ಸಮರ್ಥ್ ವ್ಯಾಸ್, ಶಿವಂ ದುಬೆ, ಅತಿತ್ ಸೇಠ್, ಪಾರ್ಥ್ ಭುತ್, ಶಮ್ಸ್ ಮುಲಾನಿ, ಅರ್ಜನ್ ನಾಗವಾಸ್ವಾಲ್ಲಾ, ಚಿಂತನ್ ಗಾಜ, ರಾಜವರ್ಧನ್ ಹಂಗರ್ಗೆಕರ್.
ಮೀಸಲು ಆಟಗಾರರು: ಚೇತನ್ ಸಕರಿಯಾ, ತುಷಾರ್ ದೇಶಪಾಂಡೆ, ಯುವರಾಜ್ ದೋಡಿಯಾ, ಎ ಕಾಜಿ, ಕಥನ್ ಪಟೇಲ್
ಉತ್ತರ ವಲಯ ತಂಡ: ನಿತೀಶ್ ರಾಣಾ (ನಾಯಕ), ಅಭಿಷೇಕ್ ಶರ್ಮಾ, ಪ್ರಭ್ಸಿಮ್ರಾನ್ ಸಿಂಗ್, ಎಸ್ ಜಿ ರೋಹಿಲ್ಲಾ, ಎಸ್ ಖಜುರಿಯಾ, ಮನ್ದೀಪ್ ಸಿಂಗ್, ಹಿಮಾಂಶು ರಾಣಾ, ವಿವ್ರಾಂತ್ ಶರ್ಮಾ, ನಿಶಾಂತ್ ಸಿಂಧು, ರಿಷಿ ಧವನ್, ಯುಧ್ವೀರ್ ಸಿಂಗ್, ಸಂದೀಪ್ ಶರ್ಮಾ, ಹರ್ಷಿತ್ ರಾಣಾ, ವೈಭವ್ ಅರೋರಾ, ಮಾರ್ಕಂಡೆ.
ಕೇಂದ್ರ ವಲಯ ತಂಡ: ವೆಂಕಟೇಶ್ ಅಯ್ಯರ್ (ನಾಯಕ), ಮಾಧವ್ ಕೌಶಿಕ್, ಶಿವಂ ಚೌಧರಿ, ಯಶ್ ದುಬೆ, ಯಶ್ ಕೊಥಾಯ್, ರಿಂಕು ಸಿಂಗ್, ಆರ್ಯನ್ ಜುಯಲ್, ಉಪೇಂದ್ರ ಯಾದವ್, ಕರಣ್ ಶರ್ಮಾ, ಆದಿತ್ಯ ಸರ್ವತೆ, ಯಶ್ ಠಾಕೂರ್, ಶಿವಂ ಮಾವಿ, ಅನಿಕೇತ್ ಚೌಧರಿ (ಉಪನಾಯಕ), ಮೊಹ್ಸಿನ್ ಖಾನ್, ಆಕಾಶ್ ಮಧ್ವಲ್.
ಪೂರ್ವ ವಲಯ ತಂಡ: ಸೌರಭ್ ತಿವಾರಿ (ನಾಯಕ), ಅಭಿಮನ್ಯು ಈಶ್ವರನ್ (ಉಪನಾಯಕ), ಸುದೀಪ್ ಘರಾಮಿ, ಸುಭ್ರಾಂಶು ಸೇನಾಪತಿ, ರೆಶಬ್ ದಾಸ್, ಉತ್ಕರ್ಷ್ ಸಿಂಗ್, ಕುಮಾರ್ ಕುಶಾಗ್ರಾ, ಅಭಿಷೇಕ್ ಪೊರೆಲ್, ವಿರಾಟ್ ಸಿಂಗ್, ರಿಯಾನ್ ಪರಾಗ್, ಶಹಬಾಜ್ ಅಹ್ಮದ್, ಅವಿನಾವ್ ಚೌಧರಿ, ಮುರಾ ಸಿಂಗ್, ಮುಕ್ತಾರ್ ಚೌಧರಿ ಹುಸೇನ್, ಆಕಾಶ್ ದೀಪ್
ಈಶಾನ್ಯ ವಲಯ ತಂಡ: ಇನ್ನು ಪ್ರಕಟಿಸಿಲ್ಲ
ಸದ್ಯಕ್ಕೆ, ದೇವಧರ್ ಟ್ರೋಫಿ 2023 ಭಾರತದಲ್ಲಿ ಪ್ರಸಾರವಾಗುತ್ತಿಲ್ಲ ಅಥವಾ ಲೈವ್-ಸ್ಟ್ರೀಮ್ ಆಗುತ್ತಿಲ್ಲ. ಆದಾಗ್ಯೂ, ಟೂರ್ನಿಯ ಆಯ್ದ ಪಂದ್ಯಗಳನ್ನು ಬಿಸಿಸಿಐ ವೆಬ್‌ಸೈಟ್ ಮತ್ತು ಅಪ್ಲಿಕೇಶನ್ ಮೂಲಕ ಸ್ಟ್ರೀಮ್ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:25 am, Sun, 16 July 23