AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dewald Brevis: 4,6,6,6,6: ಒಂದೇ ಓವರ್​ನಲ್ಲಿ ಬರೋಬ್ಬರಿ 29 ರನ್ ಚಚ್ಚಿದ ಜೂನಿಯನ್ ಎಬಿಡಿ: ವಿಡಿಯೋ

MI vs PBKS, IPL 2022: ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ ಹೈಸ್ಕೋರ್ ಪಂದ್ಯದಲ್ಲ ಮುಂಬೈ ಇಂಡಿಯನ್ಸ್ ಸೋಲು ಕಂಡಿತು. ಆದರೆ, ಎಮ್​ಐ ಪರ ಜೂನಿಯರ್ ಎಬಿಡಿ, ಬೇಬಿ ಎಬಿಡಿಎಂದೇ ಖ್ಯಾತಿ ಪಡೆದಿರುವ ಡೆವಾಲ್ಡ್ ಬ್ರೆವಿಸ್ (Dewald Brevis) ಸ್ಫೋಟಕ ಆಟದ ಮೂಲಕ ಗಮನ ಸೆಳೆದರು.

Dewald Brevis: 4,6,6,6,6: ಒಂದೇ ಓವರ್​ನಲ್ಲಿ ಬರೋಬ್ಬರಿ 29 ರನ್ ಚಚ್ಚಿದ ಜೂನಿಯನ್ ಎಬಿಡಿ: ವಿಡಿಯೋ
Dewald Brevis, MI vs PBKS
TV9 Web
| Updated By: Vinay Bhat|

Updated on: Apr 14, 2022 | 7:50 AM

Share

15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್ ತಂಡ ಆಡಿದ ಐದನೇ ಪಂದ್ಯದಲ್ಲೂ ಸೋಲು ಕಂಡಿದೆ. ಬುಧವಾರ ಪಂಜಾಬ್ ಕಿಂಗ್ಸ್ (MI vs PBKS) ವಿರುದ್ಧ ನಡೆದ ಹೈಸ್ಕೋರ್ ಪಂದ್ಯದಲ್ಲೂ ಚೇಸ್ ಮಾಡಲಾಗದೆ ಮುಂಬೈ ತನ್ನ ಮುಂದಿನ ಹಾದಿಯನ್ನು ಕಠಿಣಗೊಳಿಸಿದೆ. ಆದರೆ, ಎಮ್​ಐ ಪರ ಜೂನಿಯರ್ ಎಬಿಡಿ, ಬೇಬಿ ಎಬಿಡಿ (Baby ABD) ಎಂದೇ ಖ್ಯಾತಿ ಪಡೆದಿರುವ ದಕ್ಷಿಣ ಆಫ್ರಿಕಾದ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ (Dewald Brevis) ಸ್ಫೋಟಕ ಆಟದ ಮೂಲಕ ಗಮನ ಸೆಳೆದರು. 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದ ಇವರು ಕೇವಲ 25 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಅಮೋಘ ಸಿಕ್ಸ್ ಸಿಡಿಸಿ 49 ರನ್ ಚಚ್ಚಿದರು. ಅದರಲ್ಲೂ ರಾಹುಲ್ ಚಹರ್ ಅವರ ಒಂದು ಓವರ್​ನಲ್ಲಿ ಬರೋಬ್ಬರಿ 29 ರನ್ ಸಿಡಿಸಿ ಆರ್ಭಟಿಸಿದರು.

ಹೌದು, 9ನೇ ಓವರ್​ ಅನ್ನು ಬೌಲಿಂಗ್ ಮಾಡಲು ರಾಹುಲ್ ಚಹರ್ ಬಂದರು. ಮೊದಲ ಎಸೆತದಲ್ಲಿ ತಿಲಕ್ ವರ್ಮಾ ಸಿಂಗಲ್ ರನ್ ಕಲೆಹಾಕಿದರು. ಎರಡನೇ ಎಸೆತದಲ್ಲಿ ಬ್ರೆವಿಸ್ ಚೆಂಡನ್ನು ಬೌಂಡರಿಗೆ ಅಟ್ಟಿದರು. ಮೂರನೇ ಎಸೆತದಲ್ಲಿ ಲಾಂಗ್​ಆನ್ ಮೂಲಕ ಸಿಕ್ಸ್, ನಾಲ್ಕನೇ ಎಸೆತದಲ್ಲಿ ವೈಡ್ ಲಾಂಗ್​ಆನ್​ನಲ್ಲಿ ಸಿಕ್ಸ್, ಐದನೇ ಎಸೆತದಲ್ಲೂ ಡೀಪ್ ಮಿಡ್ ವಿಕೆಟ್ ಮೂಲಕ ಸಿಕ್ಸ್ ಮತ್ತು ಕೊನೆಯ ಆರನೇ ಎಸೆತದಲ್ಲಿ ಕೂಡ ಲಾಂಗ್ ಆನ್​ನಲ್ಲಿ ಸಿಕ್ಸ್ ಸಿಡಿಸಿ ಒಂದೇ ಓವರ್​​ನಲ್ಲಿ 28 ರನ್ ಚಚ್ಚಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಆದರೂ ಮುಂಬೈಗೆ ಗೆಲ್ಲಲು ಸಾಧ್ಯವಾಗಲಿಲ್ಲ. ಇವರ ಸ್ಫೋಟಕ ಆಟದ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

ಈ ಪಂದ್ಯದಲ್ಲಿ ಮೊದಲು ಪಂಜಾಬ್ ಕಿಂಗ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಯಾಂಕ್ ಅಗರ್ವಾಲ್ ಮತ್ತು ಶಿಖರ್ ಧವನ್ 97 ರನ್‌ಗಳ ಅಮೂಲ್ಯ ಜತೆಯಾಟವಾಡಿದರು. ಮಯಾಂಕ್ ಅಗರ್ವಾಲ್ 52 ರನ್ ಗಳಿಸಿ ಔಟ್ ಆದರೆ, ಶಿಖರ್ ಧವನ್ 70 ರನ್ ಗಳಿಸಿ ಅಬ್ಬರಿಸಿದರು. ಇನ್ನುಳಿದಂತೆ ಜಾನಿ ಬೈರ್ ಸ್ಟೋ 12 ರನ್, ಲಿಯಾಮ್ ಲಿವಿಂಗ್ ಸ್ಟೋನ್ 2 ರನ್, ಶಾರುಖ್ ಖಾನ್ 15 ರನ್ ಮತ್ತು ಒಡಿಯನ್ ಸ್ಮಿತ್ ಅಜೇಯ 1 ರನ್ ಕಲೆ ಹಾಕಿದರೆ ಅಂತಿಮ ಹಂತದಲ್ಲಿ ಅಬ್ಬರಿಸಿದ ಜಿತೇಶ್ ಶರ್ಮಾ 15 ಎಸೆತಗಳಲ್ಲಿ ಅಜೇಯ 30 ರನ್ ಬಾರಿಸಿದರು. ಹೀಗೆ ಆರಂಭದಲ್ಲಿ ಅಬ್ಬರಿಸಿ ದೊಡ್ಡ ಮೊತ್ತ ಕಲೆಹಾಕುವ ನಿರೀಕ್ಷೆಯನ್ನು ಮೂಡಿಸಿದ್ದ ಪಂಜಾಬ್ ಮೊದಲ ವಿಕೆಟ್ ಕಳೆದುಕೊಂಡ ನಂತರ ರನ್ ಗಳಿಸುವ ವೇಗ ಕಳೆದುಕೊಂಡು 198 ರನ್ ಮಾತ್ರ ಕಲೆಹಾಕುವಲ್ಲಿ ಶಕ್ತವಾಯಿತು.

ಪಂಜಾಬ್‌ ನೀಡಿದ 199 ರನ್‌ಗಳ ಸವಾಲು ಬೆನ್ನತ್ತಿದ ಮುಂಬೈ ಇಂಡಿಯನ್ಸ್‌ ಪರ ಡೆವಾಲ್ಡ್‌ ಬ್ರೆವಿಸ್‌ 49 ರನ್‌(25 ಬಾಲ್‌, 4 ಬೌಂಡರಿ, 5 ಸಿಕ್ಸ್‌) ಹಾಗೂ ಸೂರ್ಯಕುಮಾರ್‌ ಯಾದವ್‌ 43 ರನ್‌(30 ಬಾಲ್‌, 1 ಬೌಂಡರಿ, 4 ಸಿಕ್ಸ್‌) ಅಬ್ಬರದ ಆಟವಾಡಿದರು. ಪಂಜಾಬ್‌ ಬೌಲಿಂಗ್‌ ದಾಳಿಯನ್ನ ಧೂಳಿಪಟ ಮಾಡಿದ ಈ ಜೋಡಿ, ಮುಂಬೈ ಗೆಲುವಿಗಾಗಿ ಕೆಚ್ಚೆದೆಯ ಆಟವಾಡಿದರು ತಂಡಕ್ಕೆ ಗೆಲುವಿನ ಫಲ ಸಿಗಲಿಲ್ಲ. ಇದಕ್ಕೂ ಮುನ್ನ ಇನ್ನಿಂಗ್ಸ್‌ ಆರಂಭಿಸಿದ ಮುಂಬೈಗೆ ನಾಯಕ ರೋಹಿತ್‌ ಶರ್ಮ 28 ರನ್‌(17 ಬಾಲ್‌, 3 ಬೌಂಡರಿ, 2 ಸಿಕ್ಸ್‌) ಬಿರುಸಿನ ಆರಂಭ ನೀಡಿದರೆ, ಇಶಾನ್‌ ಕಿಶನ್‌(3) ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ಆದರೆ 2ನೇ ಕ್ರಮಾಂಕದಲ್ಲಿ ಬಂದ ತಿಲಕ್‌ ವರ್ಮ 36 ರನ್‌(20 ಬಾಲ್‌, 3 ಬೌಂಡರಿ, 2 ಸಿಕ್ಸ್‌) ಉತ್ತಮ ಪ್ರದರ್ಶನ ನೀಡಿದರಾದರು, ಇಲ್ಲದ ರನ್‌ಗಳಿಸುವ ಯತ್ನದಲ್ಲಿ ರನೌಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದರು. ಐಪಿಎಲ್ ಇತಿಹಾಸದಲ್ಲಿ ಐದು ಪಂದ್ಯಗಳನ್ನ ಸೋತು ಮುಂಬೈ ಇದುವರೆಗೆ ನೀಡಿದ ಅತ್ಯಂತ ಕೆಟ್ಟ ಪ್ರದರ್ಶನವಾಗಿದೆ.

IPL 2022: ನಿಮಗಿಂತ ಬುಮ್ರಾ ಬೆಸ್ಟ್​ ಎಂದ ಅಭಿಮಾನಿಗೆ ಖಡಕ್ ಉತ್ತರ ನೀಡಿದ ಡೇಲ್ ಸ್ಟೇಯ್ನ್

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ