
ಭಾರತ ಹಾಗೂ ವೆಸ್ಟ್ ಇಂಡೀಸ್ (India vs West Indies) ನಡುವೆ ಅಹಮದಾಬಾದ್ನ ನರೇಂದ್ರ ಮೋದಿ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಧ್ರುವ್ ಜುರೆಲ್ (Dhruv Jurel) ತಮ್ಮ ಟೆಸ್ಟ್ ವೃತ್ತಿಜೀವನದ ಮೊದಲ ಶತಕ ಸಿಡಿಸಿ ಮಿಂಚಿದ್ದಾರೆ. ರಿಷಭ್ ಪಂತ್ ಇಂಜುರಿಯಿಂದಾಗಿ ಭಾರತ ಟೆಸ್ಟ್ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ಜುರೇಲ್, ಸಿಕ್ಕ ಅವಕಾಶವನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ. ವೈಯಕ್ತಿಕವಾಗಿ ಶತಕ ಬಾರಿಸಿದಲ್ಲದೆ, ಉಪನಾಯಕ ರವೀಂದ್ರ ಜಡೇಜಾ (Ravindra Jadeja) ಜೊತೆಗೂಡಿ ಶತಕದ ಜೊತೆಯಾಟವನ್ನು ಕಟ್ಟಿದ್ದಾರೆ.
ನಾಯಕ ಶುಭ್ಮನ್ ಗಿಲ್ ಔಟಾದ ನಂತರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದ ಜುರೆಲ್, ಕೆಎಲ್ ರಾಹುಲ್ ಜೊತೆಗೆ ಉತ್ತಮ ಜೊತೆಯಾಟ ಕಟ್ಟಿದರು. ಈ ಹಂತದಲ್ಲಿ ರಾಹುಲ್ ಶತಕ ಬಾರಿಸಿ ಔಟಾದರೆ, ಜುರೆಲ್ ಮಾತ್ರ ತಮ್ಮ ತಾಳ್ಮೆಯ ಆಟವನ್ನು ಮುಂದುವರೆಸಿದರು. ಇತ್ತ ಜುರೆಲ್ಗೆ ಉಪನಾಯಕ ರವೀಂದ್ರ ಜಡೇಜಾ ಅವರಿಂದಲೂ ಉತ್ತಮ ಸಾಥ್ ಸಿಕ್ಕಿತು. ಹೀಗಾಗಿ ಎರಡನೇ ದಿನದ ಮೂರನೇ ಸೆಷನ್‌ನಲ್ಲಿ ಜುರೆಲ್ 190 ಎಸೆತಗಳಲ್ಲಿ ತಮ್ಮ ಮೊದಲ ಟೆಸ್ಟ್ ಶತಕವನ್ನು ಪೂರೈಸಿದರು.
What a special knock that was! 🫡
Dhruv Jurel walks back for 125 and after a 206-run stand with Ravindra Jadeja 🔝
Updates ▶️ https://t.co/MNXdZcelkD#TeamIndia | #INDvWI | @IDFCFIRSTBank | @dhruvjurel21 pic.twitter.com/Zzjcn1viA3
— BCCI (@BCCI) October 3, 2025
ತಮ್ಮ ಶತಕದ ಹಾದಿಯಲ್ಲಿ 12 ಬೌಂಡರಿ ಮತ್ತು ಎರಡು ಸಿಕ್ಸರ್‌ಗಳನ್ನು ಬಾರಿಸಿದ ಜುರೆಲ್ ಇದರೊಂದಿಗೆ ಭಾರತ ಪರ ಟೆಸ್ಟ್ ಶತಕ ಗಳಿಸಿದ 12 ನೇ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಂಡರು. ಅವರಿಗಿಂತ ಮೊದಲು ಲೆಜೆಂಡರಿ ವಿಕೆಟ್‌ಕೀಪರ್‌ಗಳಾದ ವಿಜಯ್ ಮಂಜ್ರೇಕರ್, ಸೈಯದ್ ಕಿರ್ಮಾನಿ, ಅಜಯ್ ರಾತ್ರಾ, ದೀಪ್ ದಾಸ್‌ಗುಪ್ತಾ, ಎಂಎಸ್ ಧೋನಿ, ನಯನ್ ಮೊಂಗಿಯಾ, ವೃದ್ಧಿಮಾನ್ ಸಹಾ ಮತ್ತು ರಿಷಭ್ ಪಂತ್ ಈ ಸಾಧನೆ ಮಾಡಿದ್ದರು.
IND A vs AUS A: ಅಕ್ಕನ ಮದುವೆ ಬಿಟ್ಟು ಆಸೀಸ್ ವಿರುದ್ಧ ಕಣಕ್ಕಿಳಿದಿದ್ದ ಅಭಿಷೇಕ್ ಸೊನ್ನೆಗೆ ಔಟ್
ಇದಲ್ಲದೆ, ಜುರೆಲ್ ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಟೆಸ್ಟ್ ಶತಕ ಗಳಿಸಿದ ಐದನೇ ಭಾರತೀಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು, ವಿಜಯ್ ಮಂಜ್ರೇಕರ್, ಫಾರೋಖ್ ಎಂಜಿನಿಯರ್, ಅಜಯ್ ರಾತ್ರಾ ಮತ್ತು ವೃದ್ಧಿಮಾನ್ ಸಹಾ ಕೆರಿಬಿಯನ್ ವಿರುದ್ಧ ತಮ್ಮ ಮೊದಲ ಟೆಸ್ಟ್ ಶತಕ ಬಾರಿಸಿದ್ದರು. ಇದೀಗ ಜುರೆಲ್ ಕೂಡ ಈ ಪಟ್ಟಿಗೆ ಸೇರಿದ್ದಾರೆ. 125 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ ನಂತರ ಜುರೆಲ್ ಅಂತಿಮವಾಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ. ತಮ್ಮ ಇನ್ನಿಂಗ್ಸ್‌ನಲ್ಲಿ ಜುರೆಲ್ 15 ಬೌಂಡರಿಗಳು ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:10 pm, Fri, 3 October 25