Frank Duckworth: ಡಕ್ವರ್ತ್-ಲೂಯಿಸ್ ನಿಯಮದ ಸಹ-ಸೃಷ್ಟಿಕರ್ತ ಫ್ರಾಂಕ್ ಡಕ್ವರ್ತ್ ನಿಧನ
Frank Duckworth: ಡಕ್ವರ್ತ್-ಲೂಯಿಸ್ ನಿಯಮದ ಸಹ ಸೃಷ್ಟಿಕರ್ತ ಫ್ರಾಂಕ್ ಡಕ್ವರ್ತ್ ಇಹಲೋಕ ತ್ಯಜಿಸಿದ್ದಾರೆ. 1939 ರಲ್ಲಿ ಜನಿಸಿದ ಫ್ರಾಂಕ್ ಡಕ್ವರ್ತ್ 2024 ರಲ್ಲಿ ಅಂದರೆ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಡಕ್ವರ್ತ್ ಜೂನ್ 21 ರಂದು ಸಾವನಪ್ಪಿದ್ದಾರೆ.
2024ರ ಟಿ20 ವಿಶ್ವಕಪ್ ಇನ್ನೇನು ಮುಗಿಯುವ ಹಂತಕ್ಕೆ ಬಂದು ನಿಂತಿದೆ. ಇನ್ನು ಮೂರು ಪಂದ್ಯಗಳ ಬಳಿಕ 9ನೇ ಆವೃತ್ತಿಯ ಟಿ20 ವಿಶ್ವಕಪ್ನ ಚಾಂಪಿಯನ್ ಯಾರು ಎಂಬುದು ಗೊತ್ತಾಗಲಿದೆ. ಹೀಗಾಗಿ ಇಡೀ ಜಗತ್ತೇ ಚುಟುಕು ವಿಶ್ವ ಸಮರದಲ್ಲಿ ಮುಳುಗಿದೆ. ಆದರೆ, ಈ ನಡುವೆ ವಿಶ್ವ ಕ್ರಿಕೆಟ್ಗೆ ಆಘಾತಕ್ಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಬಂದೆರಗಿದೆ. ಅದೆನೆಂದರೆ ಕ್ರಿಕೆಟ್‌ನಲ್ಲಿ ಬಳಸಲಾಗುವ ಪ್ರಮುಖ ನಿಯಮಗಳಲ್ಲಿ ಒಂದಾಗಿರುವ ಡಕ್ವರ್ತ್-ಲೂಯಿಸ್ ನಿಯಮದ ಸಹ ಸೃಷ್ಟಿಕರ್ತ, ಅಂದರೆ ಈ ನಿಯಮವನ್ನು ರೂಪಿಸಿದವರಲ್ಲಿ ಒಬ್ಬರಾಗಿರುವ ಫ್ರಾಂಕ್ ಡಕ್ವರ್ತ್ ಇಹಲೋಕ ತ್ಯಜಿಸಿದ್ದಾರೆ. 1939 ರಲ್ಲಿ ಜನಿಸಿದ ಫ್ರಾಂಕ್ ಡಕ್ವರ್ತ್ 2024 ರಲ್ಲಿ ಅಂದರೆ ತಮ್ಮ 84 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಸಿಕ್ಕಿರುವ ಮಾಹಿತಿ ಪ್ರಕಾರ ಡಕ್ವರ್ತ್ ಜೂನ್ 21 ರಂದು ಅಸುನೀಗಿದ್ದಾರೆ.
ಇಂಗ್ಲೆಂಡ್ ನಿವಾಸಿಯಾಗಿರುವ ಫ್ರಾಂಕ್ ಡಕ್ವರ್ತ್ ಹಾಗೂ ಟೋನಿ ಲೂಯಿಸ್ ಇಬ್ಬರು ಜೊತೆಗೂಡಿ ಡಿಎಲ್ಎಸ್ ನಿಯಮವನ್ನು ರೂಪಿಸಿದರು. ಈ ನಿಯಮದಿಂದಾಗಿ ಮಳೆ ಬಾಧಿತ ಕ್ರಿಕೆಟ್ ಪಂದ್ಯಗಳಲ್ಲಿ ಫಲಿತಾಂಶ ಕಂಡುಕೊಳ್ಳಲು ಸಾಧ್ಯವಾಗಿದೆ. ಈಗಲೂ ಸಹ ಈ ನಿಯಮ ಕ್ರಿಕೆಟ್ ಲೋಕದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಮಳೆಯಿಂದಾಗಿ ಪಂದ್ಯ ರದ್ದಾದರೆ ಅಥವಾ ಕೆಟ್ಟ ಹವಮಾನದಿಂದಾಗಿ ಪಂದ್ಯವನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಈ ನಿಯಮದನ್ವಯ ಪಂದ್ಯದ ಫಲಿತಾಂಶವನ್ನು ನಿರ್ಧರಿಸಲಾಗುತ್ತದೆ.
ICC T20I rankings: ಟಿ20 ರ್ಯಾಂಕಿಂಗ್ನಲ್ಲಿ ಸೂರ್ಯನ ಅಧಿಪತ್ಯ ಅಂತ್ಯ..! ಅಗ್ರಸ್ಥಾನಕ್ಕೇರಿದ್ಯಾರು ಗೊತ್ತಾ?
1997 ರಲ್ಲಿ ಬಳಸಲಾಯಿತು
ಈ ನಿಯಮವನ್ನು ಮೊದಲು 1997 ರಲ್ಲಿ ಜಿಂಬಾಬ್ವೆ ಮತ್ತು ಇಂಗ್ಲೆಂಡ್ ನಡುವೆ ನಡೆದ ಪಂದ್ಯದಲ್ಲಿ ಬಳಸಲಾಯಿತು. ಅದರ ನಂತರ ಐಸಿಸಿ, 2001 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ನಿಯಮವನ್ನು ಸಂಪೂರ್ಣವಾಗಿ ಜಾರಿಗೆ ತರಲು ನಿರ್ಧರಿಸಿತು. ಅದಾಗ್ಯೂ 2014 ರಲ್ಲಿ ಆಸ್ಟ್ರೇಲಿಯಾದ ಸಂಖ್ಯಾಶಾಸ್ತ್ರಜ್ಞ ಸ್ಟೀವನ್ ಸ್ಟ್ರೇನ್, ಡಕ್‌ವರ್ತ್ ಮತ್ತು ಲೂಯಿಸ್ ನಿಯಮದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿದರು. ಆ ಬಳಿಕ ಈ ನಿಯಮದ ಹೆಸರನ್ನು ಡಕ್ವರ್ತ್-ಲೂಯಿಸ್-ಸ್ಟ್ರೇನ್ ಎಂದು ಬದಲಾಯಿಸಲಾಯಿತು.
ಫಲಿತಾಂಶ ನಿರ್ಧಾರದಲ್ಲಿ ಈ ನಿಯಮ ಪರಿಣಾಮಕಾರಿ
ಈ ಬಾರಿಯ ಟಿ20 ವಿಶ್ವಕಪ್ನಲ್ಲೂ ಮಳೆಯಿಂದಾಗಿ ಅನೇಕ ಪಂದ್ಯಗಳಿಗೆ ಅಡ್ಡಿಯುಂಟಾಗಿರುವುದನ್ನು ನಾವು ನೋಡಿದ್ದೇವೆ. ಇಂತಹ ಮಳೆ ಬಾಧಿತ ಪಂದ್ಯಗಳಲ್ಲಿ DLS ನಿಯಮ ಪ್ರಮುಖ ಪಾತ್ರವಹಿಸಿದೆ. ಈ ನಿಯಮದ ಪ್ರಕಾರ, ಗುರಿ ಬೆನ್ನಟ್ಟುವ ತಂಡಕ್ಕೆ ಓವರ್‌ಗಳಲ್ಲಿ ಕಡಿತವಾದರೆ, ನಿಗದಿತ ಓವರ್‌ನಲ್ಲಿ ಎಷ್ಟು ರನ್‌ಗಳ ಗುರಿಯನ್ನು ಬೆನ್ನಟ್ಟಬೇಕು ಎಂಬ ಲೆಕ್ಕಾಚಾರವನ್ನು ಮಾಡಲಾಗುತ್ತದೆ. ಈ ನಿಯಮವನ್ನು ಪಂದ್ಯದಲ್ಲಿ ಜಾರಿಗೆ ತರಬೇಕೆಂದರೆ ಟಿ20ಯಲ್ಲಿ ಎರಡೂ ತಂಡಗಳು ಕನಿಷ್ಠ ತಲಾ 5 ಓವರ್‌ಗಳನ್ನು ಆಡುವುದು ಅವಶ್ಯಕ. ಹಾಗೆಯೇ ಏಕದಿನದಲ್ಲಿ ಎರಡೂ ತಂಡಗಳು ತಲಾ 20 ಓವರ್‌ಗಳನ್ನು ಆಡುವುದು ಅವಶ್ಯಕ. ಇದಾಗ್ಯೂ ಮಳೆಯಿಂದಾಗಿ ಆಟ ಮುಂದುವರಿಯಲು ಸಾಧ್ಯವಾಗದಿದ್ದರೆ ಈ ನಿಯಮವನ್ನು ಬಳಸಿ ಫಲಿತಾಂಶವನ್ನು ಪ್ರಕಟಿಸಲಾಗುತ್ತದೆ.
ಪಂದ್ಯ ಗೆದ್ದ ಅಫ್ಘಾನ್
ಈ ವಿಶ್ವಕಪ್ನ ಸೂಪರ್-8 ಸುತ್ತಿನಲ್ಲಿ ಆಡಿದ ಕೊನೆಯ ಪಂದ್ಯದಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಈ ವೇಳೆ DLS ನಿಯಮವನ್ನು ಬಳಸಲಾಯಿತು. ಅದರಂತೆ ಅಂತಿಮವಾಗಿ ಅಫ್ಘಾನಿಸ್ತಾನ ತಂಡ 8 ರನ್‌ಗಳಿಂದ ಪಂದ್ಯವನ್ನು ಗೆದ್ದು, ಸೆಮಿ-ಫೈನಲ್‌ಗೆ ಟಿಕೆಟ್ ಕಾಯ್ದಿರಿಸಿತು.
2020 ರಲ್ಲಿ ಲೂಯಿಸ್ ನಿಧನ
ಡಕ್ವರ್ತ್ ಮತ್ತು ಲೂಯಿಸ್ ಇಬ್ಬರಿಗೂ MBE ಅಂದರೆ 2010 ರಲ್ಲಿ ಬ್ರಿಟಿಷ್ ಎಂಪೈರ್ ಸದಸ್ಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ನಿಯಮದ ಮತ್ತೋರ್ವ ಸಹ ಸೃಷ್ಟಿಕರ್ತ ಲೂಯಿಸ್ ಅವರು 2020 ರಲ್ಲಿ ಸಾವನಪ್ಪಿದ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:15 pm, Wed, 26 June 24