ಸೌತ್ ಆಫ್ರಿಕಾದಲ್ಲಿ ನಡೆಯುತ್ತಿರುವ SA20 ಲೀಗ್ನ 13ನೇ ಪಂದ್ಯದಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡ ಜಯ ಸಾಧಿಸಿದೆ. ಜೋಹಾನ್ಸ್ಬರ್ಗ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡವು ಮೊದಲು ಬ್ಯಾಟಿಂಗ್ ಮಾಡಿತು. ಆದರೆ ನಿರೀಕ್ಷಿತ ಆರಂಭ ಪಡೆದಿರಲಿಲ್ಲ. ಕೇವಲ 33 ರನ್ಗಳಿಸುವಷ್ಟರಲ್ಲಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಅಗ್ರ ಕ್ರಮಾಂಕದ ಮೂವರು ಪೆವಿಲಿಯನ್ಗೆ ಮರಳಿದ್ದರು. ಈ ಹಂತದಲ್ಲಿ ಕಣಕ್ಕಿಳಿದ ಕೈಲ್ ವೆರ್ರೆನ್ನೆ ಸ್ಪೋಟಕ ಇನಿಂಗ್ಸ್ ಆಡಿದರು.
ಆಕರ್ಷಕ ಹೊಡೆತಗಳ ಮೂಲಕ ಗಮನ ಸೆಳೆದ ಕೈಲ್ 52 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 72 ರನ್ ಬಾರಿಸಿದರು. ಈ ಮೂಲಕ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 167 ರನ್ ಕಲೆಹಾಕಿತು.
168 ರನ್ಗಳ ಗುರಿ ಪಡೆದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ ಆರಂಭಿಕ ಆಘಾತ ನೀಡುವಲ್ಲಿ ಕ್ಯಾಪಿಟಲ್ಸ್ ಬೌಲರ್ಗಳು ಯಶಸ್ವಿಯಾದರು. ಆದರೆ 5ನೇ ವಿಕೆಟ್ಗೆ ಜೊತೆಯಾದ ಮೊಯೀನ್ ಅಲಿ (25) ಹಾಗೂ ಡೊನೊವನ್ ಫೆರೆರಾ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು.
ಅದರಲ್ಲೂ ಬಿರುಸಿನ ಬ್ಯಾಟಿಂಗ್ ಮೂಲಕ ಕ್ಯಾಪಿಟಲ್ಸ್ ಬೌಲರ್ಗಳ ಬೆಂಡೆತ್ತಿದ ಡೊನೊವನ್ ಫೆರೆರಾ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಲ್ಲದೆ 20 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ ಅಜೇಯ 56 ರನ್ ಬಾರಿಸಿ 18 ಓವರ್ಗಳಲ್ಲಿ ತಂಡವನ್ನು ಗುರಿ ಮುಟ್ಟಿಸಿದರು. ಈ ಮೂಲಕ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ವಿಶೇಷ ಎಂದರೆ ಇದು ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ಮೊದಲ ಜಯ. ಅಂದರೆ ಈ ಬಾರಿಯ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳಲ್ಲಿ ಜೆಎಸ್ಕೆ 4 ರಲ್ಲಿ ಸೋಲನುಭವಿಸಿತ್ತು. ಇದೀಗ ಡೊನೊವನ್ ಫೆರೆರಾ ಅವರ ಅಬ್ಬರದೊಂದಿಗೆ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವು ಮೊದಲ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
106 meters! 😱 Take a bow, Donovan Ferreira. 🚀 You’ve just surpassed the record set by Heinrich Klaasen earlier today. 🙌#Betway #SA20 #WelcomeToIncredible #JSKvPC pic.twitter.com/p4D3RRU0oX
— Betway SA20 (@SA20_League) January 20, 2024
ಜೋಬರ್ಗ್ ಸೂಪರ್ ಕಿಂಗ್ಸ್ ಪ್ಲೇಯಿಂಗ್ 11: ರೀಝ ಹೆಂಡ್ರಿಕ್ಸ್ , ಫಾಫ್ ಡು ಪ್ಲೆಸಿಸ್ (ನಾಯಕ) , ಲೆಯುಸ್ ಡು ಪ್ಲೂಯ್ , ಮೊಯಿನ್ ಅಲಿ , ಸಿಬೊನೆಲೊ ಮಖನ್ಯಾ , ಡೊನೊವನ್ ಫೆರೆರಾ (ವಿಕೆಟ್ ಕೀಪರ್) , ಡೇವಿಡ್ ವೈಸ್ , ರೊಮಾರಿಯೊ ಶೆಫರ್ಡ್ , ಲಿಜಾದ್ ವಿಲಿಯಮ್ಸ್ , ನಾಂಡ್ರೆ ಬರ್ಗರ್ , ಇಮ್ರಾನ್ ತಾಹಿರ್.
ಇದನ್ನೂ ಓದಿ: Rohit Sharma: 5 ಮ್ಯಾಚ್ 15 ಸಿಕ್ಸ್: ಸೆಹ್ವಾಗ್ ದಾಖಲೆ ಮೇಲೆ ಕಣ್ಣಿಟ್ಟಿ ರೋಹಿತ್ ಶರ್ಮಾ
ಪ್ರಿಟೋರಿಯಾ ಕ್ಯಾಪಿಟಲ್ಸ್ ಪ್ಲೇಯಿಂಗ್ 11: ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್) , ವಿಲ್ ಜ್ಯಾಕ್ಸ್ , ಕೈಲ್ ವೆರ್ರೆನ್ನೆ , ರಿಲೀ ರೊಸೊವ್ , ಕಾಲಿನ್ ಇಂಗ್ರಾಮ್ , ಜೇಮ್ಸ್ ನೀಶಮ್ , ಕಾರ್ಬಿನ್ ಬಾಷ್ , ವೇಯ್ನ್ ಪಾರ್ನೆಲ್ (ನಾಯಕ) , ಈಥನ್ ಬಾಷ್ , ಹಾರ್ಡಸ್ ವಿಲ್ಜೋನ್ , ಆದಿಲ್ ರಶೀದ್.