Virat Kohli: ವಿರಾಟ್ ಕೊಹ್ಲಿಯನ್ನು ಕೆಣಕಿ: ಇಂಗ್ಲೆಂಡ್ ತಂಡಕ್ಕೆ ಮಾಜಿ ಆಟಗಾರನ ಸಲಹೆ..!
Virat Kohli: ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಇದುವರೆಗೆ 28 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 42.36 ಸರಾಸರಿಯಲ್ಲಿ 5 ಶತಕ ಮತ್ತು 1 ದ್ವಿಶತಕದೊಂದಿಗೆ ಒಟ್ಟು 1991 ರನ್ ಗಳಿಸಿದ್ದಾರೆ. ಹಾಗೆಯೇ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 13 ಪಂದ್ಯಗಳಲ್ಲಿ, 56.38 ಸರಾಸರಿಯಲ್ಲಿ 1015 ರನ್ ಗಳಿಸಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಣ 5 ಪಂದ್ಯಗಳ ಟೆಸ್ಟ್ ಸರಣಿಯು ಜನವರಿ 25 ರಿಂದ ಶುರುವಾಗಲಿದೆ. ಪ್ರತಿಷ್ಠಿತ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಬಗ್ಗು ಬಡಿಯಬೇಕಿದ್ದರೆ ವಿರಾಟ್ ಕೊಹ್ಲಿಗಾಗಿ (Virat Kohli) ರಣತಂತ್ರ ರೂಪಿಸಬೇಕೆಂದು ಇಂಗ್ಲೆಂಡ್ನ ಮಾಜಿ ಆಟಗಾರ ಮಾಂಟಿ ಪನೇಸರ್ ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಇಂಗ್ಲೆಂಡ್ ಆಟಗಾರರು ವಿರಾಟ್ ಕೊಹ್ಲಿಯನ್ನು ಕೆಣಕಬೇಕೆಂದು ಸಲಹೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದರುವ ಮಾಂಟಿ ಪನೇಸರ್, ಈ ಸರಣಿಯಲ್ಲಿ ನೀವು (ಇಂಗ್ಲೆಂಡ್) ಗೆಲ್ಲಬೇಕಿದ್ದರೆ ವಿರಾಟ್ ಕೊಹ್ಲಿಯನ್ನು ಟಾರ್ಗೆಟ್ ಮಾಡಬೇಕು. ಇದಕ್ಕಾಗಿ ನೀವು ಕೊಹ್ಲಿಯ ಈಗೋವನ್ನು ಕೆಣಕಬೇಕು. ಐಸಿಸಿ ಟೂರ್ನಿಗಳಲ್ಲಿ ನತದೃಷ್ಟರು ಎಂದು ಹೇಳಿ ಕೆಣಬೇಕೆಂದು ಇಂಗ್ಲೆಂಡ್ ಆಟಗಾರರಿಗೆ ಪನೇಸರ್ ಕಿವಿಮಾತು ಹೇಳಿದ್ದಾರೆ.
ವಿರಾಟ್ ಕೊಹ್ಲಿಗೆ ಐಸಿಸಿ ಟೂರ್ನಿಗಳಲ್ಲಿನ ಚೋಕರ್ಸ್ ಎಂದು ಹೇಳಿ ಹೀಯಾಳಿಸಬೇಕು. ಏಕೆಂದರೆ ಬೆನ್ ಸ್ಟೋಕ್ಸ್ ಏಕದಿನ ಮತ್ತು ಟಿ20 ವಿಶ್ವಕಪ್ ಗೆದ್ದಿದ್ದಾರೆ. ಆದರೆ ಕೊಹ್ಲಿ ಎರಡು ವಿಶ್ವಕಪ್ ಅನ್ನು ಗೆದ್ದಿಲ್ಲ. ಹೀಗೆ ನತದೃಷ್ಟರು ಎಂದು ಹೀಯಾಳಿಸುವುದರಿಂದ ಕೊಹ್ಲಿಗೆ ಮಾನಸಿಕ ಹಿಂಸೆಯಾಗಲಿದೆ. ಇದರ ಸಂಪೂರ್ಣ ಲಾಭವನ್ನು ಇಂಗ್ಲೆಂಡ್ ಆಟಗಾರರು ಪಡೆದುಕೊಳ್ಳಬಹುದು ಎಂದು ಮಾಂಟಿ ಪನೇಸರ್ ತಿಳಿಸಿದ್ದಾರೆ.
ಇತ್ತ ವಿರಾಟ್ ಕೊಹ್ಲಿಯನ್ನು ಕೆಣಕಬೇಕೆಂಬ ಮಾಂಟಿ ಪನೇಸರ್ ಅವರ ಸಲಹೆಯು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎಲ್ಲರೂ ಕೊಹ್ಲಿಯನ್ನು ಕೆಣಕಿ ಕೈ ಸುಟ್ಟುಕೊಳ್ಳಬೇಡಿ ಎಂದರೆ ಇಂಗ್ಲೆಂಡ್ನ ಮಾಜಿ ಆಟಗಾರ ಸ್ಲೆಡ್ಜಿಂಗ್ ಮೂಲಕವೇ ಕಟ್ಟಿಹಾಕಲು ಸಲಹೆ ನೀಡಿರುವುದು ವಿಶೇಷ.
ಕಿಂಗ್ ಕೊಹ್ಲಿ vs ಇಂಗ್ಲೆಂಡ್:
ವಿರಾಟ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಇದುವರೆಗೆ 28 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 42.36 ಸರಾಸರಿಯಲ್ಲಿ 5 ಶತಕ ಮತ್ತು 1 ದ್ವಿಶತಕದೊಂದಿಗೆ ಒಟ್ಟು 1991 ರನ್ ಗಳಿಸಿದ್ದಾರೆ. ಹಾಗೆಯೇ ತವರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 13 ಪಂದ್ಯಗಳಲ್ಲಿ, 56.38 ಸರಾಸರಿಯಲ್ಲಿ 1015 ರನ್ ಗಳಿಸಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಇಂಗ್ಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಕೆಣಕಲು ಬರುವ ಇಂಗ್ಲೆಂಡ್ ವಿರುದ್ಧ ವಿರಾಟ್ ಕೊಹ್ಲಿ ಕೆಚ್ಚೆದೆಯ ಪ್ರದರ್ಶನ ನೀಡಿದರೂ ಅಚ್ಚರಿಪಡಬೇಕಿಲ್ಲ.
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
- ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
- ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
- ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
- ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಹ್ಯಾರಿ ಬ್ರೂಕ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಇದನ್ನೂ ಓದಿ: 147 ವರ್ಷಗಳ ಟೆಸ್ಟ್ ಇತಿಹಾಸದಲ್ಲೇ ಅತ್ಯಂತ ಕಳಪೆ ದಾಖಲೆ ಬರೆದ ಟೀಮ್ ಇಂಡಿಯಾ
ಭಾರತ ಟೆಸ್ಟ್ ತಂಡ (ಮೊದಲೆರಡು ಪಂದ್ಯಗಳಿಗೆ): ರೋಹಿತ್ ಶರ್ಮಾ (ನಾಯಕ ), ಶುಭ್‌ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೇಟ್ ಕೀಪರ್), ಕೆಎಸ್ ಭರತ್ (ವಿಕೇಟ್ ಕೀಪರ್), ಧ್ರುವ್ ಜುರೇಲ್ (ವಿಕೇಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಅವೇಶ್ ಖಾನ್.