IND vs ENG: ಇಂಗ್ಲೆಂಡ್ ತಂಡಕ್ಕೆ ಬಿಗ್ ಶಾಕ್: ಭಾರತ ವಿರುದ್ಧದ ಸರಣಿಯಿಂದ ಸ್ಟಾರ್ ಆಟಗಾರ ಔಟ್
India vs England: ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದೆ. 15 ಸದಸ್ಯರ (ಬ್ರೂಕ್ ಹೊರತುಪಡಿಸಿ) ಈ ಬಳಗವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಇನ್ನು ಈ ಸರಣಿಗಾಗಿ ಆಯ್ಕೆ ಮಾಡಲಾದ ಇಂಗ್ಲೆಂಡ್ ತಂಡದಲ್ಲಿ ವೇಗಿ ಗಸ್ ಅಟ್ಕಿನ್ಸನ್ ಸೇರಿದಂತೆ ಮೂವರು ಅನ್‌ಕ್ಯಾಪ್ಡ್ ಆಟಗಾರರಿಗೆ ಅವಕಾಶ ನೀಡಲಾಗಿದೆ.

ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯಿಂದ ಇಂಗ್ಲೆಂಡ್ ಆಟಗಾರ ಹ್ಯಾರಿ ಬ್ರೂಕ್ (Harry Brook) ಹೊರಗುಳಿದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ಬ್ರೂಕ್ ಲಂಡನ್ಗೆ ತೆರಳುತ್ತಿದ್ದು, ಅವರು ಈ ಸರಣಿಗೆ ಅಲಭ್ಯರಾಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಣ ಟೆಸ್ಟ್ ಸರಣಿಯು ಜನವರಿ 25 ರಿಂದ ಶುರುವಾಗಲಿದೆ. ಆದರೆ ಪ್ರತಿಷ್ಠಿತ ಸರಣಿ ಅರಂಭಕ್ಕೆ ದಿನಗಳು ಮಾತ್ರ ಇರುವಾಗ ಪ್ರಮುಖ ಆಟಗಾರ ತಂಡದಿಂದ ಹೊರಗುಳಿದಿರುವುದು ಇಂಗ್ಲೆಂಡ್ ಪಾಲಿಗೆ ಹಿನ್ನಡೆಯನ್ನುಂಟು ಮಾಡಬಹುದು.
ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್, ಬ್ರೂಕ್ ಕುಟುಂಬವು ಈ ಸಮಯದಲ್ಲಿ ವೈಯುಕ್ತಿಕ ಗೌಪ್ಯತೆಯನ್ನು ಗೌರವಿಸಲು ವಿನಂತಿಸಿದೆ. ಹೀಗಾಗಿ ಅವರ ಖಾಸಗಿತನದ ಆಶಯವನ್ನು ಗೌರವಿಸಲು ತಿಳಿಸುತ್ತಿದ್ದೇವೆ. ಇದೇ ಕಾರಣದಿಂದಾಗಿ ಹ್ಯಾರಿ ಬ್ರೂಕ್ ಭಾರತದ ವಿರುದ್ಧದ ಸರಣಿಯಿಂದ ಹೊರಗುಳಿಯಲು ಕಾರಣವೇನು ಎಂಬುದನ್ನು ಬಹಿರಂಗಪಡಿಸಲಾಗುತ್ತಿಲ್ಲ ಎಂದು ಇಸಿಬಿ ತಿಳಿಸಿದೆ.
ಇನ್ನು ಸ್ಪೋಟಕ ದಾಂಡಿಗ ಹ್ಯಾರಿ ಬ್ರೂಕ್ ಅವರ ಬದಲಿ ಆಟಗಾರನನ್ನು ಶೀಘ್ರದಲ್ಲೇ ಆಯ್ಕೆ ಮಾಡುವುದಾಗಿಯೂ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಿಳಿಸಿದೆ. ಅದರಂತೆ ಭಾರತದ ವಿರುದ್ಧದ ಸರಣಿಗೆ ಯಾರು ಆಯ್ಕೆಯಾಗಲಿದ್ದಾರೆ ಎಂಬುದೇ ಕುತೂಹಲ.
ಬಲಿಷ್ಠ ಆಂಗ್ಲ ಪಡೆ:
ಭಾರತದ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಈಗಾಗಲೇ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಆಯ್ಕೆ ಮಾಡಲಾಗಿದೆ. 15 ಸದಸ್ಯರ (ಬ್ರೂಕ್ ಹೊರತುಪಡಿಸಿ) ಈ ಬಳಗವನ್ನು ಬೆನ್ ಸ್ಟೋಕ್ಸ್ ಮುನ್ನಡೆಸಲಿದ್ದಾರೆ. ಇನ್ನು ಈ ಸರಣಿಗಾಗಿ ಆಯ್ಕೆ ಮಾಡಲಾದ ಇಂಗ್ಲೆಂಡ್ ತಂಡದಲ್ಲಿ ವೇಗಿ ಗಸ್ ಅಟ್ಕಿನ್ಸನ್ ಸೇರಿದಂತೆ ಮೂವರು ಅನ್‌ಕ್ಯಾಪ್ಡ್ ಆಟಗಾರರಿಗೆ ಅವಕಾಶ ನೀಡಲಾಗಿದೆ.
ಇನ್ನುಳಿದಂತೆ ತಂಡದಲ್ಲಿ ಸ್ಟಾರ್ ಆಟಗಾರರಾದ ಜೇಮ್ಸ್ ಅ್ಯಂಡರ್ಸನ್, ಜಾನಿ ಬೈರ್‌ಸ್ಟೋವ್, ಜೋ ರೂಟ್, ಝಾಕ್ ಕ್ರಾಲಿ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಇಂಗ್ಲೆಂಡ್ ಟೆಸ್ಟ್ ತಂಡ ಈ ಕೆಳಗಿನಂತಿದೆ.
ಇಂಗ್ಲೆಂಡ್ ಟೆಸ್ಟ್ ತಂಡ: ಬೆನ್ ಸ್ಟೋಕ್ಸ್ (ನಾಯಕ), ರೆಹಾನ್ ಅಹ್ಮದ್, ಜೇಮ್ಸ್ ಅ್ಯಂರ್ಸನ್, ಗಸ್ ಅಟ್ಕಿನ್ಸನ್ , ಜಾನಿ ಬೈರ್‌ಸ್ಟೋವ್, ಶೋಯೆಬ್ ಬಶೀರ್, ಝಾಕ್ ಕ್ರಾಲಿ, ಬೆನ್ ಡಕೆಟ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಜ್ಯಾಕ್ ಲೀಚ್, ಒಲ್ಲಿ ಪೋಪ್, ಆಲಿ ರಾಬಿನ್ಸನ್ , ಜೋ ರೂಟ್ , ಮಾರ್ಕ್ ವುಡ್.
ಇದನ್ನೂ ಓದಿ: Harry Brook: ಬೂಮ್ ಬೂಮ್ ಬ್ರೂಕ್: ಹೊಸ ವಿಶ್ವ ದಾಖಲೆ ನಿರ್ಮಿಸಿದ ಸ್ಪೋಟಕ ದಾಂಡಿಗ
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ ವೇಳಾಪಟ್ಟಿ:
- ಜನವರಿ 25 ರಿಂದ 29- ಮೊದಲ ಟೆಸ್ಟ್ ಪಂದ್ಯ (ಹೈದರಾಬಾದ್)
- ಫೆಬ್ರವರಿ 2 ರಿಂದ 6- ಎರಡನೇ ಟೆಸ್ಟ್ ಪಂದ್ಯ (ವಿಶಾಖಪಟ್ಟಣಂ)
- ಫೆಬ್ರವರಿ 15 ರಿಂದ 19- ಮೂರನೇ ಟೆಸ್ಟ್ ಪಂದ್ಯ (ರಾಜ್ಕೋಟ್)
- ಫೆಬ್ರವರಿ 23 ರಿಂದ 27- ನಾಲ್ಕನೇ ಟೆಸ್ಟ್ ಪಂದ್ಯ (ರಾಂಚಿ)
- ಮಾರ್ಚ್ 7 ರಿಂದ 11- ಐದನೇ ಟೆಸ್ಟ್ ಪಂದ್ಯ (ಧರ್ಮಶಾಲಾ)
Published On - 2:48 pm, Sun, 21 January 24
