SA20 2024: ಸೌತ್ ಆಫ್ರಿಕಾ ಟಿ20 ಲೀಗ್ಗೆ ವೇದಿಕೆ ಸಜ್ಜು
SA20 2024: ಈ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್-18 ಚಾನೆಲ್ನಲ್ಲಿ ಲೈವ್ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲೂ ಸೌತ್ ಆಫ್ರಿಕಾ ಟಿ20 ಲೀಗ್ ಪಂದ್ಯಗಳ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.
ಸೌತ್ ಆಫ್ರಿಕಾದಲ್ಲಿ ನಡೆಯಲಿರುವ SA20 ಲೀಗ್ ನಾಳೆಯಿಂದ (ಜ.10) ಶುರುವಾಗಲಿದೆ. 6 ತಂಡಗಳ ನಡುವಣ ಈ ಕದನದಲ್ಲಿ ಒಟ್ಟು 34 ಪಂದ್ಯಗಳನ್ನಾಡಲಾಗುತ್ತದೆ. 2ನೇ ಆವೃತ್ತಿಯ ಈ ಲೀಗ್ನ ಮೊದಲ ಪಂದ್ಯದಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು ಜೋಬರ್ಗ್ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದೆ. ಹಾಗೆಯೇ ಫೈನಲ್ ಪಂದ್ಯವು ಫೆಬ್ರವರಿ 10 ರಂದು ನಡೆಯಲಿದೆ.
ಯಾವ ಚಾನೆಲ್ನಲ್ಲಿ ನೇರ ಪ್ರಸಾರ?
ಈ ಟೂರ್ನಿಯ ಎಲ್ಲಾ ಪಂದ್ಯಗಳನ್ನು ಸ್ಪೋರ್ಟ್ಸ್-18 ಚಾನೆಲ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಜಿಯೋ ಸಿನಿಮಾ ಆ್ಯಪ್ನಲ್ಲೂ ಉಚಿತ ಲೈವ್ ಸ್ಟ್ರೀಮಿಂಗ್ ಇರಲಿದೆ.
SA20 ಲೀಗ್ನಲ್ಲಿ ಕಣಕ್ಕಿಳಿಯುವ ತಂಡಗಳು:
ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ತಂಡ: ಟಾಮ್ ಅಬೆಲ್, ಒಟ್ನಿಯೆಲ್ ಬಾರ್ಟ್‌ಮ್ಯಾನ್, ಟೆಂಬಾ ಬವುಮಾ, ಲಿಯಾಮ್ ಡಾಸನ್ (ENG), ಸರೆಲ್ ಎರ್ವೀ, ಅಯಾ ಗ್ಕಮಾನೆ, ಸೈಮನ್ ಹಾರ್ಮರ್, ಜೋರ್ಡಾನ್ ಹರ್ಮನ್, ಮಾರ್ಕೊ ಜಾನ್ಸೆನ್, ಸಿಸಾಂಡಾ ಮಗಾಲಾ, ಡೇವಿಡ್ ಮಲನ್ (ENG), ಐಡೆನ್ ಮಾರ್ಕ್ರಾಮ್ (ನಾಯಕ), ಕ್ರೇಗ್ ಓವರ್‌ಟನ್ (ENG) , ಆಡಮ್ ರೋಸಿಂಗ್ಟನ್, ಕ್ಯಾಲೆಬ್ ಸೆಲೆಕಾ, ಆಂಡಿಲ್ ಸಿಮೆಲೇನ್, ಟ್ರಿಸ್ಟಾನ್ ಸ್ಟಬ್ಸ್, ಬೇಯರ್ಸ್ ಸ್ವಾನೆಪೋಯೆಲ್, ಡೇನಿಯಲ್ ವೊರಾಲ್.
ಪ್ರಿಟೋರಿಯಾ ಕ್ಯಾಪಿಟಲ್ಸ್ ಫುಲ್ ತಂಡ: ಮ್ಯಾಥ್ಯೂ ಬೋಸ್ಟ್, ಕಾರ್ಬಿನ್ ಬಾಷ್, ಈಥನ್ ಬಾಷ್, ಶೇನ್ ಡ್ಯಾಡ್ಸ್‌ವೆಲ್, ಥೀನಿಸ್ ಡಿ ಬ್ರುಯ್ನ್, ಡೇರಿನ್ ಡುಪಾವಿಲ್ಲನ್, ಕಾಲಿನ್ ಇಂಗ್ರಾಮ್, ವಿಲ್ ಜಾಕ್ಸ್ (ENG), ಸೆನುರಾನ್ ಮುತ್ತುಸಾಮಿ, ಜಿಮ್ಮಿ ನೀಶಮ್ (NZ), ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್ (ನಾಯಕ), ಮಿಗಲ್ ಪ್ರಿಟೋರಿಯಸ್, ಆದಿಲ್ ರಶೀದ್ (ENG), ರಿಲೀ ರೋಸ್ಸೌ, ಫಿಲ್ ಸಾಲ್ಟ್ (ENG), ಪಾಲ್ ಸ್ಟಿರ್ಲಿಂಗ್ (IRE), ಸ್ಟೀವ್ ಸ್ಟೋಕ್, ಕೈಲ್ ವೆರ್ರೆನ್ನೆ.
ಜೋಬರ್ಗ್ ಸೂಪರ್ ಕಿಂಗ್ಸ್ ತಂಡ: ಮೊಯಿನ್ ಅಲಿ (ENG), ನಾಂದ್ರೆ ಬರ್ಗರ್, ಜೆರಾಲ್ಡ್ ಕೊಯೆಟ್ಜಿ, ಸ್ಯಾಮ್ ಕುಕ್ (ENG), ಫಾಫ್ ಡು ಪ್ಲೆಸಿಸ್ (ನಾಯಕ), ಲ್ಯೂಸ್ ಡು ಪ್ಲೂಯ್ (ENG), ಡೊನೊವನ್ ಫೆರೇರಾ, ದಯಾನ್ ಗಲಿಯೆಮ್, ರೀಜಾ ಹೆಂಡ್ರಿಕ್ಸ್, ರೊನಾನ್ ಹೆರ್ಮನ್, ಜಹೀರ್ ಖಾನ್ (AFG), ವೇಯ್ನ್ ಮ್ಯಾಡ್ಸೆನ್ (ITA), ಸಿಬೊನೆಲೊ ಮಖನ್ಯಾ, ಆರನ್ ಫಂಗಿಸೊ, ರೊಮಾರಿಯೊ ಶೆಫರ್ಡ್ (WI), ಕೈಲ್ ಸಿಮಂಡ್ಸ್, ಇಮ್ರಾನ್ ತಾಹಿರ್, ಡೇವಿಡ್ ವೈಸ್ (NAM), ಲಿಜಾದ್ ವಿಲಿಯಮ್ಸ್.
ಪರ್ಲ್ ರಾಯಲ್ಸ್ ತಂಡ: ಫೆರಿಸ್ಕೊ ಆಡಮ್ಸ್, ಫ್ಯಾಬಿಯನ್ ಅಲೆನ್ (WI), ಜೋಸ್ ಬಟ್ಲರ್ (ENG), ಜಾರ್ನ್ ಫಾರ್ಟುಯಿನ್, ಇವಾನ್ ಜೋನ್ಸ್, ವಿಹಾನ್ ಲುಬ್ಬೆ, ಕ್ವೆನಾ ಮಫಕಾ, ಒಬೆಡ್ ಮೆಕಾಯ್ (WI), ಡೇವಿಡ್ ಮಿಲ್ಲರ್ (ನಾಯಕ), ಲುಂಗಿ ಎನ್ಗಿಡಿ, ಆಂಡಿಲ್ ಫೆಹ್ಲುಕ್ವಾಯೊ, ಲುವಾನ್-ಡ್ರೆ ಪ್ರಿಟೋರಿಯಸ್, ಜೇಸನ್ ರಾಯ್ (ENG), ತಬ್ರೈಜ್ ಶಮ್ಸಿ, ಲೋರ್ಕನ್ ಟಕರ್ (IRE), ಜಾನ್ ಟರ್ನರ್ (ENG), ಮಿಚೆಲ್ ವ್ಯಾನ್ ಬ್ಯೂರೆನ್, ಡೇನ್ ವಿಲಾಸ್, ಕೋಡಿ ಯೂಸುಫ್.
MI ಕೇಪ್ ಟೌನ್ ತಂಡ: ನುವಾನ್ ತುಷಾರ (SL), ಟಾಮ್ ಬ್ಯಾಂಟನ್ (ENG), ಕ್ರಿಸ್ ಬೆಂಜಮಿನ್ (ENG), ಡೆವಾಲ್ಡ್ ಬ್ರೆವಿಸ್, ಸ್ಯಾಮ್ ಕರ್ರನ್ (ENG), ಕಾನರ್ ಎಸ್ಟರ್‌ಹುಜೆನ್, ಬ್ಯೂರಾನ್ ಹೆಂಡ್ರಿಕ್ಸ್, ಡುವಾನ್ ಜಾನ್ಸೆನ್, ಥಾಮಸ್ ಕಬರ್, ರಶೀದ್ ಖಾನ್ (AFG), ಜಾರ್ಜ್ ಲಿಂಡೆ, ಲಿಯಾಮ್ ಲಿವಿಂಗ್‌ಸ್ಟೋನ್ (ENG), ಕೀರಾನ್ ಪೊಲಾರ್ಡ್ (ನಾಯಕ), ಡೆಲಾನೊ ಪಾಟ್‌ಗೀಟರ್, ಕಗಿಸೊ ರಬಾಡಾ, ರಿಯಾನ್ ರಿಕೆಲ್ಟನ್, ಗ್ರಾಂಟ್ ರೋಲೋಫ್ಸೆನ್, ಆಲಿ ಸ್ಟೋನ್ (ENG), ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ನೀಲನ್ ವ್ಯಾನ್ ಹೀರ್ಡೆನ್.
ಇದನ್ನೂ ಓದಿ: IPL 2024: RCB ಬೌಲಿಂಗ್ ಲೈನಪ್ ಹೇಗಿದೆ? ಮೋಯೆ ಮೋಯೆ ಎಂದ ಚಹಲ್..!
ಡರ್ಬನ್ ಸೂಪರ್ ಜೈಂಟ್ಸ್ ತಂಡ: ನೂರ್ ಅಹ್ಮದ್ (AFG), ಮ್ಯಾಥ್ಯೂ ಬ್ರೀಟ್ಜ್ಕೆ, ಜೂನಿಯರ್ ಡಾಲಾ, ಕ್ವಿಂಟನ್ ಡಿ ಕಾಕ್, ಟೋನಿ ಡಿ ಜೊರ್ಜಿ, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್ (ನಾಯಕ), ಕೈಲ್ ಮೇಯರ್ಸ್ (WI), ವಿಯಾನ್ ಮುಲ್ಡರ್, ನವೀನ್-ಉಲ್-ಹಕ್ ಮುರಿದ್ (AFG), ಬ್ರೈಸ್ ಪಾರ್ಸನ್ಸ್ , ಕೀಮೋ ಪೌಲ್ (WI), ನಿಕೋಲಸ್ ಪೂರನ್ (WI), ಡ್ವೈನ್ ಪ್ರಿಟೋರಿಯಸ್, ಭಾನುಕಾ ರಾಜಪಕ್ಸೆ (SL), ಜಾನ್-ಜಾನ್ ಸ್ಮಟ್ಸ್, ಜೇಸನ್ ಸ್ಮಿತ್, ಪ್ರೆನೆಲನ್ ಸುಬ್ರಾಯೆನ್, ರೀಸ್ ಟೋಪ್ಲಿ (ENG).