
ಐಪಿಎಲ್ 2025 ರಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಪ್ರಿಯಾಂಶ್ ಆರ್ಯ (Priyansh Arya), ಪ್ರಸ್ತುತ ದೆಹಲಿ ಪ್ರೀಮಿಯರ್ ಲೀಗ್ನಲ್ಲಿ (Delhi Premier League) ಔಟರ್ ದೆಹಲಿ ವಾರಿಯರ್ಸ್ ಪರ ಆಡುತ್ತಿದ್ದಾರೆ. ಅದರಂತೆ ಶುಕ್ರವಾರ ನಡೆದ ಈಸ್ಟ್ ಡೆಲ್ಲಿ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಸ್ಫೋಟಕ ಶತಕವನ್ನು ಬಾರಿಸಿ ತಂಡದ ಮೊತ್ತವನ್ನು 200 ರನ್‌ಗಳ ಗಡಿ ದಾಟಿಸಿದರು. ಆದರೆ ಇದರ ಹೊರತಾಗಿಯೂ, ಪ್ರಿಯಾಂಶ್ ಮಾಡಿದ ಒಂದು ತಪ್ಪು ಅವರ ತಂಡವನ್ನು ಸೋಲಿನ ದವಡೆಗೆ ತಳ್ಳಿತ್ತು. ವಾಸ್ತವವಾಗಿ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ್ದ ಪ್ರಿಯಾಂಶ್ ಆರ್ಯ ಫೀಲ್ಡಿಂಗ್‌ನಲ್ಲಿ ಮಾಡಿದ ಅದೊಂದು ತಪ್ಪಿನಿಂದಾಗಿ ಇಡೀ ತಂಡಕ್ಕೆ ಸೋಲಿನ ಆಘಾತ ಎದುರಾಯಿತು.
ಪ್ರಿಯಾಂಶ್ ಆರ್ಯ ಕೇವಲ ಆರಂಭಿಕ ಬ್ಯಾಟ್ಸ್‌ಮನ್ ಮಾತ್ರವಲ್ಲದೆ, ಅತ್ಯುತ್ತಮ ಫೀಲ್ಡಿಂಗ್ ಕೂಡ ಮಾಡುತ್ತಾರೆ. ಆದರೆ ಪೂರ್ವ ದೆಹಲಿ ವಿರುದ್ಧದ ಪಂದ್ಯದಲ್ಲಿ ಪ್ರಿಯಾಂಶ್ ಪ್ರಮುಖ ಕ್ಯಾಚ್ ಕೈಚೆಲ್ಲಿದರು. ವಾಸ್ತವವಾಗಿ, ಪ್ರಿಯಾಂಶ್ ಪೂರ್ವ ದೆಹಲಿ ತಂಡದ ನಾಯಕ ಅನುಜ್ ರಾವತ್ ಅವರ ಕ್ಯಾಚ್ ಅನ್ನು ಕೈಬಿಟ್ಟರು. ಇದರ ಪರಿಣಾಮವಾಗಿ ಪ್ರಿಯಾಂಶ್ ತಂಡ ಸೋಲನ್ನು ಎದುರಿಸಬೇಕಾಯಿತು. ಪ್ರಿಯಾಂಶ್ ಅವರಿಂದ ಜೀವದಾನ ಪಡೆದ ಅನುಜ್ ರಾವತ್ ಕೇವಲ 35 ಎಸೆತಗಳಲ್ಲಿ 84 ರನ್‌ಗಳ ಇನ್ನಿಂಗ್ಸ್ ಆಡಿದರು. ಈ ವೇಳೆ 9 ಸಿಕ್ಸರ್‌ಗಳನ್ನು ಬಾರಿಸಿದರು. ಹಾಗೆಯೇ ಆರಂಭಿಕ ಅರ್ಪಿತ್ ರಾಣಾ ಜೊತೆಗೆ, ಅನುಜ್ 59 ಎಸೆತಗಳಲ್ಲಿ 130 ರನ್‌ಗಳ ಅದ್ಭುತ ಪಾಲುದಾರಿಕೆಯನ್ನು ಮಾಡಿದರು. ಈ ಜೊತೆಯಾಟದ ಬಲದಿಂದ, ಪೂರ್ವ ದೆಹಲಿ ತಂಡ, ಔಟರ್ ದೆಹಲಿ ನಿಗದಿಪಡಿಸಿದ 231 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿತು.
Priyansh Arya scored big but dropped a vital catch.
Priyansh Arya | East Delhi Riders | Outer Delhi Warriors | Adani Delhi Premier League 2025 | Anuj Rawat | Siddhant Sharma #DPL #DPL2025 #Cricket #Delhi pic.twitter.com/Fv3EcqC6IV
— Delhi Premier League T20 (@DelhiPLT20) August 8, 2025
ಎರಡನೇ ಪಂದ್ಯದಲ್ಲಿ ಔಟರ್ ಡೆಲ್ಲಿ ವಾರಿಯರ್ಸ್ ಗೆಲ್ಲುವ ಅವಕಾಶ ಹೊಂದಿತ್ತು. ಆದರೆ ಪ್ರಿಯಾಂಶ್ ಆರ್ಯ ಮಾಡಿದ ತಪ್ಪು ತಂಡವನ್ನು ಸೋಲಿಗೆ ಕೊರಳೊಡ್ಡುವಂತೆ ಮಾಡಿತು. ಇನ್ನು ಇತ್ತೀಚಿನ ಪಾಯಿಂಟ್ ಟೇಬಲ್ ಬಗ್ಗೆ ಹೇಳುವುದಾದರೆ, ಪ್ರಿಯಾಂಶ್ ತಂಡ 4 ಪಂದ್ಯಗಳಲ್ಲಿ 3 ರಲ್ಲಿ ಸೋತು ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಮತ್ತೊಂದೆಡೆ, ಈಸ್ಟ್ ಡೆಲ್ಲಿ ರೈಡರ್ಸ್ 4 ಪಂದ್ಯಗಳಲ್ಲಿ 3 ರಲ್ಲಿ ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಸೆಂಟ್ರಲ್ ಡೆಲ್ಲಿ ತಂಡವು ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದೆ. ಪೂರ್ವ ಡೆಲ್ಲಿ ಬಗ್ಗೆ ಹೇಳುವುದಾದರೆ, ತಂಡದ ನಾಯಕ ಅನುಜ್ ರಾವತ್ ಪ್ರಸ್ತುತ ಟೂರ್ನಮೆಂಟ್‌ನಲ್ಲಿ ಅತಿ ಹೆಚ್ಚು 228 ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಅರ್ಪಿತ್ ರಾಣಾ 206 ರನ್ ಗಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ