
ದೇಶೀ ಕ್ರಿಕೆಟ್‌ನಲ್ಲಿ ಐದು ಎಸೆತಗಳಲ್ಲಿ ಸತತ 5 ವಿಕೆಟ್ ಉರುಳಿಸಿದ್ದ ಲಕ್ನೋ ಸೂಪರ್ ಜೈಂಟ್ಸ್ (LSG) ಸ್ಪಿನ್ನರ್ ದಿಗ್ವೇಶ್ ರಾಠಿ (Digvesh Rathi) ಈಗ ಹೊಸ ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ವಾಸ್ತವವಾಗಿ ದಿಗ್ವೇಶ್ ರಾಠಿ ಅವರನ್ನು ದೆಹಲಿ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಹರಾಜಿನಲ್ಲಿ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡವು, ಐಪಿಎಲ್ಗಿಂತಲೂ ಹೆಚ್ಚಿನ ಮೊತ್ತವನ್ನು ನೀಡಿ ತಂಡಕ್ಕೆ ಸೇರಿಸಿಕೊಂಡಿದೆ. 2025 ರ ಐಪಿಎಲ್ ಹರಾಜಿನಲ್ಲಿ 30 ಲಕ್ಷ ಮೂಲ ಬೆಲೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೇರಿಕೊಂಡಿದ್ದ ದಿಗ್ವೇಶ್ ರಾಠಿಗೆ ಇದೀಗ ಸೌತ್ ದೆಹಲಿ ಸೂಪರ್‌ಸ್ಟಾರ್ಸ್ ತಂಡವು 38 ಲಕ್ಷ ರೂ ನೀಡಿ ಖರೀದಿ ಮಾಡಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ಸ್ಪಿನ್ನರ್ ದಿಗ್ವೇಶ್ ರಾಠಿ ಈಗ ದೆಹಲಿ ಪ್ರೀಮಿಯರ್ ಲೀಗ್ (ಡಿಪಿಎಲ್) ನ ಎರಡನೇ ಸೀಸನ್‌ನಲ್ಲಿ ಆಡಲಿದ್ದಾರೆ. ಅವರನ್ನು ಸೌತ್ ದೆಹಲಿ ಸೂಪರ್‌ಸ್ಟಾರ್ಸ್ 38 ಲಕ್ಷ ರೂ.ಗೆ ಖರೀದಿಸಿದ್ದು, ಈ ಮೂಲಕ ಅವರು ಈ ಲೀಗ್‌ನ ಎರಡನೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಐಪಿಎಲ್ 2025 ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರ ಆಡಿದ್ದ ಸಿಮರ್‌ಜಿತ್ ಸಿಂಗ್ ಈ ಆವೃತ್ತಿಯ ಅತ್ಯಂತ ದುಬಾರಿ ಆಟಗಾರರಾಗಿದ್ದು, ಅವರನ್ನು ಸೆಂಟ್ರಲ್ ದೆಹಲಿ ಕಿಂಗ್ಸ್ ತಂಡ 39 ಲಕ್ಷ ರೂ.ಗೆ ಖರೀದಿ ಮಾಡಿದೆ.
38 ಲಕ್ಷ ರೂಗೆ ಮಾರಾಟವಾಗಿರುವ ದಿಗ್ವೇಶ್ ರಾಠಿ ಐಪಿಎಲ್ಗಿಂತ ಡಿಪಿಎಲ್ ಸೀಸನ್ 2 ರಲ್ಲಿ 8 ಲಕ್ಷ ರೂ. ಹೆಚ್ಚು ಹಣ ಪಡೆದಿದ್ದಾರೆ. ಐಪಿಎಲ್ 2025 ರಲ್ಲಿ ತಮ್ಮ ಸಿಗ್ನೇಚರ್ ಸೆಲೆಬ್ರೇಷನ್ ಮೂಲಕ ಸಾಕಷ್ಟು ವಿವಾದ ಮಾಡಿಕೊಂಡಿದ್ದ ದಿಗ್ವೇಶ್, ಒಂದು ಪಂದ್ಯದಿಂದ ನಿಷೇಧಕ್ಕೂ ಒಳಗಾಗಿದ್ದರು. ಆದಾಗ್ಯೂ ಅವರು ತಮ್ಮ ಅದ್ಭುತ ಪ್ರದರ್ಶನದ ಮೂಲಕ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಐಪಿಎಲ್ 2025 ರಲ್ಲಿ ದಿಗ್ವೇಶ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ ತಂಡ ಖರೀದಿಸಿತ್ತು. ಆಡಿದ ಮೊದಲ ಪಂದ್ಯದಿಂದಲೇ ಕಮಾಲ್ ಮಾಡಿದ್ದ ದಿಗ್ವೇಶ್, ಆಟಗಾರರನ್ನು ಔಟ್ ಮಾಡಿದ ಬಳಿಕ ಸಿಗ್ನೇಚರ್ ಸೆಲೆಬ್ರೇಷನ್ ಮಾಡುವ ಮೂಲಕ ಸಾಕಷ್ಟು ವಿವಾದ ಮಾಡಿಕೊಂಡಿದ್ದರು. ಈ ಕಾರಣದಿಂದಾಗಿ, ಬಿಸಿಸಿಐ ಅವರಿಗೆ ಎರಡು ಬಾರಿ ದಂಡ ವಿಧಿಸಿತು, ಜೊತೆಗೆ ಒಂದು ಪಂದ್ಯದಲ್ಲಿ ಆಡದಂತೆ ನಿಷೇಧ ಹೇರಿತು. ಇದು ಮಾತ್ರವಲ್ಲದೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಅವರೊಂದಿಗಿನ ವಿವಾದ ಸಾಕಷ್ಟು ಚರ್ಚೆಯಾಗಿತ್ತು.
ಸತತ 5 ಎಸೆತಗಳಲ್ಲಿ 5 ವಿಕೆಟ್ ಉರುಳಿಸಿದ ದಿಗ್ವೇಶ್ ರಾಥಿ; ವಿಡಿಯೋ ನೋಡಿ
ಐಪಿಎಲ್ 2025 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ದಿಗ್ವೇಶ್, ಈ ಸೀಸನ್‌ನಲ್ಲಿ ಆಡಿದ 13 ಪಂದ್ಯಗಳಲ್ಲಿ 8.25 ರ ಎಕಾನಮಿಯಲ್ಲಿ ರನ್ ನೀಡಿ 14 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೆ ದೆಹಲಿ ಪರ 15 ಟಿ20 ದೇಶೀಯ ಪಂದ್ಯಗಳನ್ನು ಆಡಿರುವ ಅವರು ಇದರಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ