Avesh Khan: ಟೀಮ್ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಅವೇಶ್ ಖಾನ್​ಗೆ ಗಾಯ..!

| Updated By: ಝಾಹಿರ್ ಯೂಸುಫ್

Updated on: Jul 06, 2023 | 4:10 PM

Duleep Trophy 2023: ಪಶ್ಚಿಮ ವಲಯ ವಿರುದ್ಧದ ಮೊದಲ ದಿನದಾಟದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ರಿಂಕು ಸಿಂಗ್ ಹಾಗೂ ಅವೇಶ್ ಖಾನ್  ಡಿಕ್ಕಿಯಾಗಿದ್ದರು.

Avesh Khan: ಟೀಮ್ ಇಂಡಿಯಾಗೆ ಆಯ್ಕೆಯಾದ ಬೆನ್ನಲ್ಲೇ ಅವೇಶ್ ಖಾನ್​ಗೆ ಗಾಯ..!
Avesh Khan
Follow us on

India vs West Indies: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಯುವ ವೇಗಿ ಅವೇಶ್ ಖಾನ್ (Avsesh Khan) ಕೂಡ ಸ್ಥಾನ ಪಡೆದಿದ್ದಾರೆ. ಆದರೆ ಅತ್ತ ಭಾರತ ತಂಡದಲ್ಲಿ ಸ್ಥಾನ ಸಿಗುತ್ತಿದ್ದಂತೆ, ಇತ್ತ ಅವೇಶ್ ಗಾಯಕ್ಕೆ ತುತ್ತಾಗಿದ್ದಾರೆ. ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಮೊದಲ ಸೆಮಿಫೈನಲ್​ನಲ್ಲಿ ಕೇಂದ್ರ ವಲಯದ ಪರ ಕಣಕ್ಕಿಳಿದಿದ್ದ ಅವೇಶ್ ಖಾನ್ ಫೀಲ್ಡಿಂಗ್ ವೇಳೆ ಗಾಯಗೊಂಡಿದ್ದಾರೆ.

ಪಶ್ಚಿಮ ವಲಯ ವಿರುದ್ಧದ ಮೊದಲ ದಿನದಾಟದಲ್ಲಿ ಕ್ಯಾಚ್ ಹಿಡಿಯುವ ಯತ್ನದಲ್ಲಿ ರಿಂಕು ಸಿಂಗ್ ಹಾಗೂ ಅವೇಶ್ ಖಾನ್  ಡಿಕ್ಕಿಯಾಗಿದ್ದರು. ಇದರಿಂದ ಅವರ ಬಲ ಭುಜಕ್ಕೆ ಗಂಭೀರ ಗಾಯವಾಗಿದ್ದು, ಹೀಗಾಗಿ ಅರ್ಧದಲ್ಲೇ ಮೈದಾನ ತೊರೆದಿದ್ದರು.

ಅಲ್ಲದೆ 2ನೇ ದಿನದಾಟದಲ್ಲೂ ಅವೇಶ್ ಖಾನ್ ಮೈದಾನಕ್ಕಿಳಿದಿಲ್ಲ. ಇತ್ತ ಭಾರತ ತಂಡಕ್ಕೆ ಆಯ್ಕೆಯಾದ ಬೆನ್ನಲ್ಲೇ ಯುವ ವೇಗಿ ಗಾಯಗೊಂಡಿರುವುದು ಚಿಂತೆಗೆ ಕಾರಣವಾಗಿದೆ. ಏಕೆಂದರೆ 2022 ರಲ್ಲಿ ಟೀಮ್ ಇಂಡಿಯಾ ಪರ ಕೊನೆಯ ಬಾರಿ ಟಿ20 ಪಂದ್ಯವಾಡಿದ್ದ ಅವೇಶ್ ಖಾನ್​ಗೆ ಇದೀಗ ಮತ್ತೆ ಭಾರತ ತಂಡದಲ್ಲಿ ಅವಕಾಶ ನೀಡಲಾಗಿದೆ.

ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವ ವಿಶ್ವಾಸದಲ್ಲಿದ್ದ ಯುವ ವೇಗಿ ಇದೀಗ ಗಾಯಕ್ಕೆ ತುತ್ತಾಗಿದ್ದಾರೆ. ಇನ್ನು ಈ ಗಾಯವು ಗಂಭೀರವಾಗಿದ್ದರೆ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಿಂದ ಹೊರಗುಳಿಯಬಹುದು.

ಇದನ್ನೂ ಓದಿ: IND vs AUS: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್​ ಪ್ಲ್ಯಾನ್..!

ಭಾರತ-ವೆಸ್ಟ್ ಇಂಡೀಸ್ ನಡುವಣ ಟಿ20 ಸರಣಿಯು ಆಗಸ್ಟ್ 3 ರಿಂದ ಶುರುವಾಗಲಿದ್ದು, ಅದಕ್ಕೂ ಮುನ್ನ ಚೇತರಿಸಿಕೊಳ್ಳುವ ಭರವಸೆಯಿದ್ದರೆ ಮಾತ್ರ ಅವರನ್ನು ತಂಡದಲ್ಲಿರಿಸಲಾಗುತ್ತದೆ. ಹೀಗಾಗಿ ಅವೇಶ್ ಖಾನ್ ಅವರ ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಬಿಸಿಸಿಐ ಮುಂದಿನ ನಿರ್ಧಾರ ತೆಗೆದುಕೊಳ್ಳಲಿದೆ.

ಭಾರತ ಟಿ20 ತಂಡ

ಇಶಾನ್ ಕಿಶನ್ (ವಿಕೆಟ್ ಕೀಪರ್), ಶುಭ್​​ಮನ್ ಗಿಲ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್, ಅವೇಶ್ ಖಾನ್, ಸೂರ್ಯ ಕುಮಾರ್ ಯಾದವ್ (ಉಪನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ನಾಯಕ), ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್.