Duleep Trophy 2023: ಸೌರಭ್​ಗೆ 8 ವಿಕೆಟ್: ಕೇಂದ್ರ ವಲಯಕ್ಕೆ ಭರ್ಜರಿ ಜಯ

Duleep Trophy 2023: ಮುರಾಸಿಂಗ್ ಕೇವಲ 42 ರನ್​ಗಳಿಗೆ 5 ವಿಕೆಟ್ ಉರುಳಿಸಿ ಮಿಂಚಿದರು. ಪರಿಣಾಮ ಕೇಂದ್ರ ವಲಯ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 182 ರನ್​ಗಳಿಸಿ ಆಲೌಟ್ ಆಯಿತು.

Duleep Trophy 2023: ಸೌರಭ್​ಗೆ 8 ವಿಕೆಟ್: ಕೇಂದ್ರ ವಲಯಕ್ಕೆ ಭರ್ಜರಿ ಜಯ
Saurabh Kumar
Edited By:

Updated on: Jul 01, 2023 | 10:00 PM

Duleep Trophy 2023: ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ದುಲೀಪ್ ಟ್ರೋಫಿಯ (Duleep Trophy 2023) ಮೊದಲ ಕ್ವಾರ್ಟರ್ ಫೈನಲ್​ ಪಂದ್ಯದಲ್ಲಿ ಕೇಂದ್ರ ವಲಯ (Central Zone) ತಂಡವು ಭರ್ಜರಿ ಜಯ ಸಾಧಿಸಿದೆ. ಪೂರ್ವ ವಲಯ (East Zone) ತಂಡದ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಕೇಂದ್ರ ವಲಯ ಮೊದಲು ಬ್ಯಾಟಿಂಗ್ ಮಾಡಿತು. ಆದರೆ ಮಣಿಶಂಕರ್ ಮುರಾಸಿಂಗ್ ದಾಳಿಗೆ ಕ್ರೀಸ್ ಕಚ್ಚಿ ನಿಲ್ಲಲು ಪರದಾಡಿದ ಕೇಂದ್ರ ವಲಯದ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್ ನಡೆಸಿದರು.

ಇತ್ತ ಮುರಾಸಿಂಗ್ ಕೇವಲ 42 ರನ್​ಗಳಿಗೆ 5 ವಿಕೆಟ್ ಉರುಳಿಸಿ ಮಿಂಚಿದರು. ಪರಿಣಾಮ ಕೇಂದ್ರ ವಲಯ ತಂಡವು ಮೊದಲ ಇನಿಂಗ್ಸ್​ನಲ್ಲಿ ಕೇವಲ 182 ರನ್​ಗಳಿಸಿ ಆಲೌಟ್ ಆಯಿತು. ಇದರ ಬೆನ್ನಲ್ಲೇ ಇನಿಂಗ್ಸ್ ಆರಂಭಿಸಿದ ಪೂರ್ವ ವಲಯ ಕೂಡ ಆರಂಭಿಕ ಆಘಾತಕ್ಕೆ ಸಿಲುಕಿತ್ತು. ಅದರಲ್ಲೂ ಪೂರ್ವ ತಂಡದ ಯಾವುದೇ ಬ್ಯಾಟ್ಸ್​ಮನ್ ಅನ್ನು ಕ್ರೀಸ್ ಕಚ್ಚಿ ನಿಲ್ಲಲು ಕೇಂದ್ರ ವಲಯದ ಬೌಲರ್​ಗಳು ಬಿಡಲಿಲ್ಲ.

ಪರಿಣಾಮ ಪೂರ್ವ ವಲಯ ತಂಡವು 100 ರನ್​ಗಳಿಸುವಷ್ಟರಲ್ಲಿ ಪ್ರಮುಖ 7 ವಿಕೆಟ್ ಕಳೆದುಕೊಂಡಿತು. ಇತ್ತ ಅವೇಶ್ ಖಾನ್ ಹಾಗೂ ಸೌರಭ್ ಕುಮಾರ್ ತಲಾ 3 ವಿಕೆಟ್ ಪಡೆದು ಮಿಂಚಿದರೆ, ನಾಯಕ ಶಿವಂ ಮಾವಿ 2 ವಿಕೆಟ್ ಕಬಳಿಸಿದರು. ಇದರೊಂದಿಗೆ ಪೂರ್ವ ವಲಯ ತಂಡವು ಕೇವಲ 122 ರನ್​ಗಳಿಗೆ ಸರ್ವಪತನ ಕಂಡಿತು.

60 ರನ್​ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್​ ಆರಂಭಿಸಿದ ಕೇಂದ್ರ ವಲಯದ ಪರ ಆರಂಭಿಕರಾದ ಇಮಾಂಶು ಮಂತ್ರಿ (68) ಹಾಗೂ ವಿವೇಕ್ ಸಿಂಗ್ (56) ಅರ್ಧಶತಕ ಬಾರಿಸಿ ಮಿಂಚಿದರು. ಆದರೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ಗಳು ಮತ್ತೊಮ್ಮೆ ವಿಫಲರಾಗುವುದರೊಂದಿಗೆ ಕೇಂದ್ರ ವಲಯ 2ನೇ ಇನಿಂಗ್ಸ್​ ಅನ್ನು 239 ರನ್​ಗಳಿಗೆ ಅಂತ್ಯಗೊಳಿಸಿತು.

ಪ್ರಥಮ ಇನಿಂಗ್ಸ್​ ಹಿನ್ನಡೆಯೊಂದಿಗೆ 300 ರನ್​ಗಳ ಗುರಿ ಪಡೆದ ಪೂರ್ವ ವಲಯ ತಂಡವು ಸೌರಭ್ ಕುಮಾರ್ ಸ್ಪಿನ್ ದಾಳಿಗೆ ತತ್ತರಿಸಿತು. 12.4 ಓವರ್ ಮಾಡಿದ ಸೌರಭ್ ಕೇವಲ 33 ರನ್​ ನೀಡಿ 8 ವಿಕೆಟ್ ಕಬಳಿಸಿದರು. ಈ ಮೂಲಕ ಪೂರ್ವ ವಲಯ ತಂಡವನ್ನು ಕೇವಲ 129 ರನ್​ಗಳಿಗೆ ಆಲೌಟ್ ಮಾಡಿ ಕೇಂದ್ರ ವಲಯ ತಂಡ 170 ರನ್​ಗಳ ಭರ್ಜರಿ ಜಯ ಸಾಧಿಸಿತು.

ಕೇಂದ್ರ ವಲಯ ಪ್ಲೇಯಿಂಗ್ 11: ಹಿಮಾಂಶು ಮಂತ್ರಿ , ಶುಭಂ ಎಸ್ ಶರ್ಮಾ , ಕುನಾಲ್ ಚಂದೇಲಾ , ವಿವೇಕ್ ಸಿಂಗ್ , ಸರನ್ಶ್ ಜೈನ್ , ರಿಂಕು ಸಿಂಗ್ , ಉಪೇಂದ್ರ ಯಾದವ್ (ವಿಕೆಟ್ ಕೀಪರ್) , ಶಿವಂ ಮಾವಿ (ನಾಯಕ) , ಸೌರಭ್ ಕುಮಾರ್ , ಅವೇಶ್ ಖಾನ್ , ಯಶ್ ಠಾಕೂರ್.

ಇದನ್ನೂ ಓದಿ: ODI World Cup 2023: ಚೆಪಾಕ್ ಮತ್ತು ಆಸ್ಟ್ರೇಲಿಯಾ: ಟೀಮ್ ಇಂಡಿಯಾಗೆ ಚಿಂತೆ ಶುರು..!

ಪೂರ್ವ ವಲಯ ಪ್ಲೇಯಿಂಗ್ 11: ಅಭಿಮನ್ಯು ಈಶ್ವರನ್ (ನಾಯಕ) , ಸುದೀಪ್ ಕುಮಾರ್ ಘರಾಮಿ , ಅನುಸ್ತುಪ್ ಮಜುಂದಾರ್ , ರಿಯಾನ್ ಪರಾಗ್ , ಮಣಿಶಂಕರ್ ಮುರಾಸಿಂಗ್ , ಶಹಬಾಜ್ ಅಹ್ಮದ್ , ಕುಮಾರ್ ಕುಶಾಗ್ರಾ (ವಿಕೆಟ್ ಕೀಪರ್) , ಶಹಬಾಝ್ ನದೀಮ್ , ಆಕಾಶ್ ದೀಪ್ , ಶಾಂತನು ಮಿಶ್ರಾ , ಇಶಾನ್ ಪೊರೆಲ್.