Duleep Trophy 2023: ದುಲೀಪ್ ಟ್ರೋಫಿ ಫೈನಲ್: ಮೊದಲ ದಿನದಾಟದಲ್ಲಿ ಪಶ್ಚಿಮ ವಲಯಕ್ಕೆ ಮೇಲುಗೈ
Duleep Trophy 2023 Final: ದುಲೀಪ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು.
Duleep Trophy 2023: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದುಲೀಪ್ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಪಶ್ಚಿಮ ವಲಯ ಹಾಗೂ ದಕ್ಷಿಣ ವಲಯ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಶ್ಚಿಮ ವಲಯ ತಂಡದ ನಾಯಕ ಪ್ರಿಯಾಂಕ್ ಪಾಂಚಾಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ದಕ್ಷಿಣ ವಲಯ ಪರ ಇನಿಂಗ್ಸ್ ಆರಂಭಿಸಿದ ರವಿಕುಮಾರ್ ಸಮರ್ಥ್ (7) ಹಾಗೂ ಮಯಾಂಕ್ ಅಗರ್ವಾಲ್ (28) ಬೇಗನೆ ವಿಕೆಟ್ ಒಪ್ಪಿಸಿದ್ದರು.
ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ 40 ರನ್ ಬಾರಿಸಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು. ಮತ್ತೊಂದೆಡೆ ನಾಯಕ ಹನುಮ ವಿಹಾರಿ 130 ಎಸೆತಗಳಲ್ಲಿ 63 ರನ್ ಬಾರಿಸಿ ತಂಡಕ್ಕೆ ಆಸರೆಯಾದರು. ಪರಿಣಾಮ 2 ವಿಕೆಟ್ ನಷ್ಟದೊಂದಿಗೆ ದಕ್ಷಿಣ ವಲಯ ತಂಡದ ಸ್ಕೋರ್ 100 ರ ಗಡಿದಾಟಿತು.
ಆದರೆ ತಿಲಕ್ ವರ್ಮಾ ಹಾಗೂ ಹನುಮ ವಿಹಾರಿ ವಿಕೆಟ್ ಬೀಳುತ್ತಿದ್ದಂತೆ ದಿಢೀರ್ ಕುಸಿತಕ್ಕೊಳಗಾದ ದಕ್ಷಿಣ ವಲಯ ತಂಡ ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 182 ರನ್ ಕಲೆಹಾಕಿದೆ. ಕ್ರೀಸ್ನಲ್ಲಿ ವಿಜಯಕುಮಾರ್ ವೈಶಾಕ್ ಹಾಗೂ ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಪಶ್ಚಿಮ ವಲಯ ಪರ ಅರ್ಝಾನ್ ನಾಗ್ವಾಸ್ವಾಲ್ಲಾ, ಚಿಂತನ್ ಗಜ ಹಾಗೂ ಶಮ್ಸ್ ಮುಲಾನಿ ತಲಾ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.
ದಕ್ಷಿಣ ವಲಯ ಪ್ಲೇಯಿಂಗ್ 11: ರವಿಕುಮಾರ್ ಸಮರ್ಥ್ , ಮಯಾಂಕ್ ಅಗರ್ವಾಲ್ , ಹನುಮ ವಿಹಾರಿ (ನಾಯಕ) , ರಿಕಿ ಭುಯಿ (ವಿಕೆಟ್ ಕೀಪರ್) , ತಿಲಕ್ ವರ್ಮ , ವಾಷಿಂಗ್ಟನ್ ಸುಂದರ್ , ಸಾಯಿ ಕಿಶೋರ್ , ಸಚಿನ್ ಬೇಬಿ , ವಿಧ್ವತ್ ಕಾವೇರಪ್ಪ , ವಿಜಯ್ ಕುಮಾರ್ ವೈಶಾಕ್ , ವಾಸುಕಿ ಕೌಶಿಕ್.
ಇದನ್ನೂ ಓದಿ: ODI World Cup 2023: ಏಕದಿನ ವಿಶ್ವಕಪ್ನಲ್ಲಿನ ಟೀಮ್ ಇಂಡಿಯಾದ 9 ಎದುರಾಳಿಗಳು ಇವರೇ..!
ಪಶ್ಚಿಮ ವಲಯ ಪ್ಲೇಯಿಂಗ್ 11: ಪೃಥ್ವಿ ಶಾ , ಪ್ರಿಯಾಂಕ್ ಪಾಂಚಾಲ್ (ನಾಯಕ) , ಚೇತೇಶ್ವರ ಪೂಜಾರ , ಸೂರ್ಯಕುಮಾರ್ ಯಾದವ್ , ಸರ್ಫರಾಜ್ ಖಾನ್ , ಧರ್ಮೇಂದ್ರಸಿನ್ಹ್ ಜಡೇಜಾ , ಹಾರ್ವಿಕ್ ದೇಸಾಯಿ ( ವಿಕೆಟ್ ಕೀಪರ್ ) , ಚಿಂತನ್ ಗಜ , ಅರ್ಝಾನ್ ನಾಗವಾಸ್ವಾಲ್ಲಾ , ಅತಿತ್ ಶೇತ್ , ಶಮ್ಸ್ ಮುಲಾನಿ.