AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾರ್ದೂಲ್ ಠಾಕೂರ್​ಗೆ ನಾಯಕತ್ವ: ಶ್ರೇಯಸ್ ಅಯ್ಯರ್ ಆಯ್ಕೆ

Duleep Trophy 2025: ದುಲೀಪ್ ಟ್ರೋಫಿ ಆಗಸ್ಟ್ 28 ರಿಂದ ಶುರುವಾಗಲಿದೆ. 6 ವಲಯಗಳ ನಡುವಣ ಈ ಕದನಕ್ಕಾಗಿ ವೆಸ್ಟ್ ಝೋನ್ ತಂಡವನ್ನು ಹೆಸರಿಸಲಾಗಿದೆ. 15 ಸದಸ್ಯರ ಈ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಕಾಣಿಸಿಕೊಂಡಿದೆ. ಹೀಗಾಗಿ ಈ ಬಾರಿ ಪಶ್ಚಿಮ ವಲಯ ತಂಡದಿಂದ ಭರ್ಜರಿ ಪ್ರದರ್ಶನ ನಿರೀಕ್ಷಿಸಬಹುದು.

ಶಾರ್ದೂಲ್ ಠಾಕೂರ್​ಗೆ ನಾಯಕತ್ವ: ಶ್ರೇಯಸ್ ಅಯ್ಯರ್ ಆಯ್ಕೆ
Shardul Thakur
ಝಾಹಿರ್ ಯೂಸುಫ್
|

Updated on:Aug 02, 2025 | 10:07 AM

Share

 ದುಲೀಪ್ ಟ್ರೋಫಿಗಾಗಿ ಪಶ್ಚಿಮ ವಲಯ ತಂಡವನ್ನು ಪ್ರಕಟಿಸಲಾಗಿದೆ. ಈ ಬಾರಿ ವೆಸ್ಟ್ ಝೋನ್ ತಂಡವನ್ನು ಆಲ್​ರೌಂಡರ್ ಶಾರ್ದೂಲ್ ಠಾಕೂರ್  ಮುನ್ನಡೆಸಲಿದ್ದಾರೆ. ಇನ್ನು ಉಪನಾಯಕನಾಗಿ ಅಭಿಮನ್ಯು ಈಶ್ವರನ್ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ 15 ಸದಸ್ಯರ ತಂಡದಲ್ಲಿ ಈ ಬಾರಿ ಸ್ಟಾರ್ ಆಟಗಾರ ಶ್ರೇಯಸ್ ಅಯ್ಯರ್ ಕೂಡ ಸ್ಥಾನ ಪಡೆದಿದ್ದಾರೆ.

ಏಕದಿನ ಹಾಗೂ ಟಿ20 ಪಂದ್ಯಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದ ಶ್ರೇಯಸ್ ಅಯ್ಯರ್ ಇದೀಗ ಟೆಸ್ಟ್ ಕ್ರಿಕೆಟ್​ಗೆ ಮರಳುವ ಇಂಗಿತದಲ್ಲಿದ್ದಾರೆ. ಹೀಗಾಗಿ ಮುಂಬರುವ ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಇನ್ನು ಅಯ್ಯರ್ ಜೊತೆ ಸರ್ಫರಾಝ್ ಖಾನ್, ಯಶಸ್ವಿ ಜೈಸ್ವಾಲ್, ರುತುರಾಜ್ ಗಾಯಕ್ವಾಡ್ ಕೂಡ ಪಶ್ಚಿಮ ವಲಯ ತಂಡದಲ್ಲಿದ್ದಾರೆ.

ಪಶ್ಚಿಮ ವಲಯ ತಂಡ: ಶಾರ್ದೂಲ್ ಠಾಕೂರ್ (ನಾಯಕ), ಯಶಸ್ವಿ ಜೈಸ್ವಾಲ್, ಆರ್ಯ ದೇಸಾಯಿ, ಹಾರ್ವಿಕ್ ದೇಸಾಯಿ, ಶ್ರೇಯಸ್ ಅಯ್ಯರ್, ಸರ್ಫರಾಝ್ ಖಾನ್, ರುತುರಾಜ್ ಗಾಯಕ್ವಾಡ್, ಜಯಮೀತ್ ಪಟೇಲ್, ಮನನ್ ಹಿಂಗ್ರಾಜಿಯಾ, ಸೌರಭ್ ನವಲೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅರ್ಜಾನ್ ನಾಗವಾಸ್ವಾಲ, ದರ್ಮೇಂದ್ರ ಜಡೇಜಾ, ತುಷಾರ್ ದೇಶಪಾಂಡೆ.

ಏನಿದು ದುಲೀಪ್ ಟ್ರೋಫಿ?

ದುಲೀಪ್ ಟ್ರೋಫಿಯು ಭಾರತದಲ್ಲಿ ಆಡಲಾಗುವ ದೇಶೀಯ ಟೆಸ್ಟ್ ಕ್ರಿಕೆಟ್ ಟೂರ್ನಿ. ಈ ಟೂರ್ನಿಗೆ ಮಾಜಿ ಆಟಗಾರ ದುಲೀಪ್‌ಸಿನ್‌ಜಿ ಅವರ ಹೆಸರನ್ನು ಇಡಲಾಗಿದೆ. 1961-62 ರಲ್ಲಿ ಶುರುವಾದ ಈ ಪಂದ್ಯಾವಳಿಯಲ್ಲಿ ಭಾರತದ ವಿವಿಧ ಭೌಗೋಳಿಕ ವಲಯಗಳನ್ನು ಪ್ರತಿನಿಧಿಸುವ ತಂಡಗಳು ಕಣಕ್ಕಿಳಿಯುತ್ತವೆ.

ಇದನ್ನೂ ಓದಿ: ಮಾಜಿ ಆಟಗಾರನಿಗೆ ವಿಶೇಷ ಗೌರವ… ಹೆಡ್​ಬ್ಯಾಂಡ್ ಧರಿಸಿ ಕಣಕ್ಕಿಳಿದ ಸಿರಾಜ್

ದುಲೀಪ್ ಟ್ರೋಫಿಯಲ್ಲಿ ಕಣಕ್ಕಿಳಿಯುವ ತಂಡಗಳಾವುವು?

ಈ ಟೂರ್ನಿಯಲ್ಲಿ ಒಟ್ಟು 6 ವಲಯ ತಂಡಗಳು ಕಣಕ್ಕಿಳಿಯುತ್ತವೆ. ಇಲ್ಲಿ ಆಯಾ ವಲಯಗಳನ್ನು ಆಯಾ ಭಾಗದ ರಾಜ್ಯಗಳ ಆಟಗಾರರು ಪ್ರತಿನಿಧಿಸುತ್ತಾರೆ.

– ಉತ್ತರ ವಲಯ : ಚಂಡೀಗಢ, ದೆಹಲಿ, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಪಂಜಾಬ್ ಮತ್ತು ಸರ್ವೀಸಸ್ ತಂಡಗಳು.

-ದಕ್ಷಿಣ ವಲಯ : ಆಂಧ್ರಪ್ರದೇಶ, ಗೋವಾ, ಹೈದರಾಬಾದ್ ಕರ್ನಾಟಕ, ಕೇರಳ, ಪಾಂಡಿಚೇರಿ ಮತ್ತು ತಮಿಳುನಾಡು.

-ಕೇಂದ್ರ ವಲಯ : ಛತ್ತೀಸ್‌ಗಢಮಧ್ಯಪ್ರದೇಶ, ರೈಲ್ವೆ, ರಾಜಸ್ಥಾನಉತ್ತರಾಖಂಡ, ಉತ್ತರ ಪ್ರದೇಶ ಮತ್ತು ವಿದರ್ಭ.

-ಪೂರ್ವ ವಲಯ : ಅಸ್ಸಾಂ, ಬಿಹಾರ, ಬಂಗಾಳ, ಜಾರ್ಖಂಡ್ಒಡಿಶಾ ಮತ್ತು ತ್ರಿಪುರಾ.

-ಈಶಾನ್ಯ ವಲಯ : ಅರುಣಾಚಲ ಪ್ರದೇಶ, ಮಣಿಪುರಮೇಘಾಲಯಮಿಜೋರಾಂನಾಗಾಲ್ಯಾಂಡ್ ಮತ್ತು ಸಿಕ್ಕಿಂ.

-ಪಶ್ಚಿಮ ವಲಯ : ಬರೋಡಾ, ಗುಜರಾತ್, ಮಹಾರಾಷ್ಟ್ರ, ಮುಂಬೈ ಮತ್ತು ಸೌರಾಷ್ಟ್ರ

Published On - 9:54 am, Sat, 2 August 25