ಟೀಮ್ ಇಂಡಿಯಾ ವಿರುದ್ಧ ಹೊಸ ಇತಿಹಾಸ ನಿರ್ಮಿಸಿದ ಯುವ ಸ್ಪಿನ್ನರ್ ದುನಿತ್

Dunith Wellalage: ಮೊದಲ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡುವ ಮೂಲಕ ಈ ಜೋಡಿಯು ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿಸಿದ್ದರು. ಆದರೆ 12ನೇ ಓವರ್​ನಲ್ಲಿ ದಾಳಿಗಿಳಿದ 20 ರ ಹರೆಯದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಟೀಮ್ ಇಂಡಿಯಾ ವಿರುದ್ಧ ಹೊಸ ಇತಿಹಾಸ ನಿರ್ಮಿಸಿದ ಯುವ ಸ್ಪಿನ್ನರ್ ದುನಿತ್
Dunith Wellalage
Edited By:

Updated on: Sep 12, 2023 | 8:57 PM

ಕೊಲಂಬೊದ ಆರ್​. ಪ್ರೇಮದಾಸ ಮೈದಾನದಲ್ಲಿ ನಡೆದ ಟೀಮ್ ಇಂಡಿಯಾ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ತಂಡದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಸಾರ್ವಕಾಲಿಕ ಶ್ರೇಷ್ಠ ಪ್ರದರ್ಶನ ನೀಡಿ ಮಿಂಚಿದ್ದಾರೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಇನಿಂಗ್ಸ್ ಆರಂಭಿಸಿದ ಶುಭ್​ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಭಾರತ ತಂಡಕ್ಕೆ ಉತ್ತಮ ಆರಂಭ ಒದಗಿಸಿದ್ದರು.

ಮೊದಲ ವಿಕೆಟ್​ಗೆ 80 ರನ್​ಗಳ ಜೊತೆಯಾಟವಾಡುವ ಮೂಲಕ ಈ ಜೋಡಿಯು ಬೃಹತ್ ಮೊತ್ತ ಪೇರಿಸುವ ಭರವಸೆ ಮೂಡಿಸಿದ್ದರು. ಆದರೆ 12ನೇ ಓವರ್​ನಲ್ಲಿ ದಾಳಿಗಿಳಿದ 20 ರ ಹರೆಯದ ಯುವ ಸ್ಪಿನ್ನರ್ ದುನಿತ್ ವೆಲ್ಲಾಲಗೆ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಮೊದಲ ಎಸೆತದಲ್ಲೇ ಶುಭ್​ಮನ್ ಗಿಲ್ (19) ಅವರನ್ನು ಬೌಲ್ಡ್ ಮಾಡಿದ ದುನಿತ್, ಮರು ಓವರ್​ನಲ್ಲೇ ವಿರಾಟ್ ಕೊಹ್ಲಿಯ (3) ವಿಕೆಟ್ ಪಡೆದರು. ಇದರ ಬೆನ್ನಲ್ಲೇ ಅರ್ಧಶತಕ ಬಾರಿಸಿದ್ದ ರೋಹಿತ್ ಶರ್ಮಾ (53) ವೆಲ್ಲಾಲಗೆ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು.

ಆ ಬಳಿಕ ಕೆಎಲ್ ರಾಹುಲ್ (39) ಹಾಗೂ ಹಾರ್ದಿಕ್ ಪಾಂಡ್ಯ (5) ವಿಕೆಟ್ ಕಬಳಿಸಿದರು. ಇದರೊಂದಿಗೆ ಶ್ರೀಲಂಕಾ ಪರ 5 ವಿಕೆಟ್ ಕಬಳಿಸಿದ ಅತ್ಯಂತ ಕಿರಿಯ ಬೌಲರ್ ಎಂಬ ದಾಖಲೆ ದುನಿತ್ ವೆಲ್ಲಾಲಗೆ ಪಾಲಾಯಿತು.

ಇದಕ್ಕೂ ಮುನ್ನ ಈ ದಾಖಲೆ ಚರಿತ ಬುದ್ಧಿಕ ಹೆಸರಿನಲ್ಲಿತ್ತು. 2001 ರಲ್ಲಿ ಝಿಂಬಾಬ್ವೆ ವಿರುದ್ಧ 21 ವರ್ಷ ಚರಿತ 5 ವಿಕೆಟ್ ಪಡೆದು ಇತಿಹಾಸ ನಿರ್ಮಿಸಿದ್ದರು. ಇದೀಗ 20 ವರ್ಷ ದುನಿತ್ ವೆಲ್ಲಾಲಗೆ ಈ ದಾಖಲೆಯನ್ನು ಮುರಿದಿದ್ದಾರೆ.

ಟೀಮ್ ಇಂಡಿಯಾ ವಿರುದ್ಧ 10 ಓವರ್​ಗಳಲ್ಲಿ 40 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಶ್ರೀಲಂಕಾ ಪರ ಐದು ವಿಕೆಟ್​ಗಳ ಸಾಧನೆ ಮಾಡಿದ ಅತ್ಯಂತ ಕಿರಿಯ ಬೌಲರ್​ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!

ಶ್ರೀಲಂಕಾ ಪರ 5 ವಿಕೆಟ್​ ಕಬಳಿಸಿದ ಕಿರಿಯ ಬೌಲರ್​ಗಳ ಪಟ್ಟಿ ಹೀಗಿದೆ:

  1. ದುನಿತ್ ವೆಲ್ಲಲಾಗೆ (20 ವರ್ಷ, 246 ದಿನಗಳು) vs ಭಾರತ- 2023
  2. ಚರಿತ ಬುದ್ಧಿಕ (21 ವರ್ಷ, 65 ದಿನಗಳು) vs ಝಿಂಬಾಬ್ವೆ- 2001
  3. ತಿಸರ ಪೆರೇರಾ (21 ವರ್ಷ, 141 ದಿನಗಳು) vs ಭಾರತ- 2010
  4. ತಿಸರ ಪೆರೇರಾ (21 ವರ್ಷ, 241 ದಿನಗಳು) vs ಆಸ್ಟ್ರೇಲಿಯಾ- 2010
  5. ಉವೈಸ್ ಕರ್ನೈನ್ (21 ವರ್ಷ, 233 ದಿನಗಳು) vs ನ್ಯೂಝಿಲೆಂಡ್- 1984

 

Published On - 8:56 pm, Tue, 12 September 23