ವಿಶ್ವ ಕ್ರಿಕೆಟ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಸರಣಿಗಳ ಹೊರತಾಗಿ, ಸರಣಿಗಾಗಿ ಎಲ್ಲರೂ ಕಾಯುವ ಸರಣಿಯೆಂದರೆ ಅದು ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ಆ್ಯಶಸ್ ಸರಣಿಯಾಗಿದೆ. ಪ್ರತಿ ಬಾರಿಯಂತೆ, ಇಡೀ ಕ್ರಿಕೆಟ್ ಜಗತ್ತು ಈ ವರ್ಷ ಈ ಸರಣಿಗಾಗಿ ಕಾಯುತ್ತಿದೆ. ಆದರೆ ಸರಣಿಯ ಆರಂಭದ ಮೊದಲು, ಕೆಲವು ಅಡೆತಡೆಗಳು ಎದುರಾಗಿವೆ. ಆ್ಯಶಸ್ ಸರಣಿಗಾಗಿ ಆಸ್ಟ್ರೇಲಿಯಾ ಪ್ರವಾಸದ ಮೊದಲು ಕುಟುಂಬ ಸದಸ್ಯರಿಗೆ ಪ್ರಯಾಣ ಮತ್ತು ಕಟ್ಟುನಿಟ್ಟಿನ ಕ್ಯಾರೆಂಟೈನ್ ನಿಯಮಗಳ ಬಗ್ಗೆ ಯಾವುದೇ ಒಪ್ಪಂದವಿಲ್ಲದಿದ್ದರೆ ಕನಿಷ್ಠ 10 ಇಂಗ್ಲೆಂಡ್ ಆಟಗಾರರು ಪ್ರವಾಸದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಉಭಯ ದೇಶಗಳ ನಡುವಿನ ಐದು ಟೆಸ್ಟ್‌ಗಳ ಆ್ಯಶಸ್ ಸರಣಿಯು ಡಿಸೆಂಬರ್ 8 ರಿಂದ ಜನವರಿ 18 ರವರೆಗೆ ನಡೆಯಲಿದೆ.
ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿಯ ಪ್ರಕಾರ, ಆಸ್ಟ್ರೇಲಿಯಾದ ಕಟ್ಟುನಿಟ್ಟಿನ ಕ್ವಾರಂಟೈನ್ ನಿಯಮಗಳ ಬಗ್ಗೆ ಅನೇಕ ಇಂಗ್ಲೆಂಡ್ ಆಟಗಾರರು ಅತೃಪ್ತರಾಗಿದ್ದಾರೆ ಮತ್ತು ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಪ್ರವಾಸದಿಂದ ಹೊರಗುಳಿಯುವ ಬಗ್ಗೆ ಯೋಚಿಸುತ್ತಿದ್ದಾರೆ. ಈ ವಾರ ಹೆಡಿಂಗ್ಲಿಯಲ್ಲಿ ನಡೆದ ಇಂಗ್ಲೆಂಡ್ ತಂಡದ ಸಭೆ ನಿಯಮಗಳ ಬಗ್ಗೆ ಕ್ರಿಕೆಟ್ ಆಸ್ಟ್ರೇಲಿಯಾ ತಲೆಕೆಡಿಸಿಕೊಳ್ಳದೆ ಇರುವುದನ್ನು ಕಂಡು ಇಸಿಬಿ ನಿರಾಶೆಗೊಂಡಿದೆ ಎಂದು ತಿಳಿದುಬಂದಿದೆ ಎಂದು ಪತ್ರಿಕೆ ವರದಿ ಮಾಡಿದೆ.
ಆಸ್ಟ್ರೇಲಿಯಾದ ಆಟಗಾರರನ್ನು ಸಹ ನಿರ್ಬಂಧಿಸಲಾಗಿದೆ
ಆಸ್ಟ್ರೇಲಿಯಾದಲ್ಲಿ ಕೋವಿಡ್ -19 ಕ್ವಾರಂಟೈನ್ ನಿಯಮಗಳು ತುಂಬಾ ಕಠಿಣವಾಗಿವೆ. ವೆಸ್ಟ್ ಇಂಡೀಸ್ ಮತ್ತು ಬಾಂಗ್ಲಾದೇಶದ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಿಂದ ಹಿಂದಿರುಗಿದ ನಂತರ ಆಸ್ಟ್ರೇಲಿಯಾ ಕ್ರಿಕೆಟಿಗರು ಕೂಡ ಅಡಿಲೇಡ್‌ನ ಹೋಟೆಲ್‌ನಲ್ಲಿ ಎರಡು ವಾರಗಳ ಕ್ವಾರಂಟೈನ್ ಪೂರ್ಣಗೊಳಿಸುತ್ತಿದ್ದಾರೆ. ಆಸ್ಟ್ರೇಲಿಯಾದ ಆಟಗಾರರಿಗೂ ಸದ್ಯಕ್ಕೆ ತರಬೇತಿಗೆ ಅವಕಾಶವಿಲ್ಲ. ಸಿಎ ಅಲ್ಲಿನ ಸರ್ಕಾರದ ಮೇಲೆ ಸಾಕಷ್ಟು ಪ್ರಭಾವವನ್ನು ಹೊಂದಿಲ್ಲ ಮತ್ತು ಪ್ರತ್ಯೇಕ ರಾಜ್ಯಗಳು ಕೂಡ ಇತರರು ತಮ್ಮ ನಗರಕ್ಕೆ ಬರುವುದನ್ನು ನಿಷೇಧಿಸಬಹುದು ಎಂದು ತಿಳಿಸಲಾಗಿದೆ. ಇಂಗ್ಲೆಂಡ್ ಈಗಾಗಲೇ ಆಟಗಾರರಿಗಾಗಿ ಮಾಡಿರುವ ಎಲ್ಲಾ ಒಪ್ಪಂದಗಳಿಗೆ ಇಂತಹ ನಿಯಮಗಳು ಅಡ್ಡಿಯಾಗಬಹುದು.
ಕ್ರಿಕೆಟ್ ಆಸ್ಟ್ರೇಲಿಯಾದ ಕೊನೆಯ ಕಸರತ್ತು
ಪರಿಹಾರವನ್ನು ಕಂಡುಕೊಳ್ಳಲು ಸರ್ಕಾರ ಮತ್ತು ಆರೋಗ್ಯ ಅಧಿಕಾರಿಗಳೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದೇವೆ ಎಂದು ಸಿಎ ಶನಿವಾರ ಹೇಳಿದೆ. CA ಹೊರಡಿಸಿದ ಹೇಳಿಕೆಯ ಪ್ರಕಾರ, ಕ್ರಿಕೆಟ್ ಆಸ್ಟ್ರೇಲಿಯಾ ಮುಂಬರುವ ಆ್ಯಶಸ್ ಸರಣಿಗೆ ಸಂಬಂಧಿಸಿದಂತೆ ECB (ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಮತ್ತು ಆಸ್ಟ್ರೇಲಿಯಾದ ಸರ್ಕಾರಿ ಅಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದನ್ನು ಮುಂದುವರಿಸಿದೆ.
ನಾವು ಪ್ರಸ್ತುತ ಈ ಪ್ರವಾಸದ ಕಾರ್ಯಾಚರಣೆಯ ಅವಶ್ಯಕತೆಗಳನ್ನು ಯೋಜಿಸುತ್ತಿದ್ದೇವೆ ಮತ್ತು ಈ ವಿಷಯದ ಕುರಿತು ಇಸಿಬಿಯೊಂದಿಗೆ ಮಾತನಾಡುತ್ತಿದ್ದೇವೆ ಎಂದು ಅವರು ಹೇಳಿದರು. ಕಳೆದ ಋತುವಿನಲ್ಲಿ ಮಾಡಿದಂತೆ, ಸಿಎ ಸರ್ಕಾರದೊಂದಿಗೆ ಸಹಭಾಗಿತ್ವದಲ್ಲಿ ಕ್ರಿಕೆಟ್ ಸಂಘಟಿಸಲು ಕೆಲಸ ಮಾಡುತ್ತದೆ, ಆದರೆ ಸಮುದಾಯದ ಆರೋಗ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಸರಣಿ ಆಯೋಜಿಸಲಾಗುತ್ತದೆ ಎಂದಿದ್ದಾರೆ.
Published On - 8:35 pm, Sat, 28 August 21