ENG vs AUS: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಘೋಷಣೆ: ಮೂವರು ಪಾದಾರ್ಪಣೆ

|

Updated on: Sep 11, 2024 | 11:54 AM

ENG vs AUS, 1st T20I: ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಣ ಮೂರು ಪಂದ್ಯಗಳ ಟಿ20 ಸರಣಿಯು ಸೆಪ್ಟೆಂಬರ್ 11 ರಿಂದ ಶುರುವಾಗಲಿದೆ. ಈ ಸರಣಿಯ ಮೊದಲ ಪಂದ್ಯವು ಇಂದು ನಡೆದರೆ, 2ನೇ ಪಂದ್ಯವು ಸೆಪ್ಟೆಂಬರ್ 13 ರಂದು ಜರುಗಲಿದೆ. ಹಾಗೆಯೇ ಮೂರನೇ ಪಂದ್ಯ ಸೆಪ್ಟೆಂಬರ್ 15 ರಂದು ನಡೆಯಲಿದೆ.

ENG vs AUS: ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಘೋಷಣೆ: ಮೂವರು ಪಾದಾರ್ಪಣೆ
England
Follow us on

ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕಾಗಿ ಇಂಗ್ಲೆಂಡ್ ತಂಡವು ಪ್ಲೇಯಿಂಗ್ ಇಲೆವೆನ್ ಘೋಷಿಸಿದೆ. ಸೌತಂಪ್ಟನ್​ನ ರೋಸ್ ಬೌಲ್ ಸ್ಟೇಡಿಯಂನಲ್ಲಿ ಬುಧವಾರ (ಸೆ.11) ನಡೆಯಲಿರುವ ಈ ಪಂದ್ಯದಲ್ಲಿ ಫಿಲ್ ಸಾಲ್ಟ್ ನಾಯಕರಾಗಿ ಪಾದಾರ್ಪಣೆ ಮಾಡಲಿದ್ದಾರೆ. ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಗಾಯದ ಕಾರಣ ಈ ಸರಣಿಯಿಂದ ಹೊರಗುಳದಿದ್ದು, ಹೀಗಾಗಿ ಇಂಗ್ಲೆಂಡ್ ತಂಡದ ಸಾರಥ್ಯವನ್ನು ಸಾಲ್ಟ್​ಗೆ ವಹಿಸಲಾಗಿದೆ.

ಇನ್ನು ಈ ಪಂದ್ಯದ ಮೂಲಕ ಇಂಗ್ಲೆಂಡ್ ಪರ ಮೂವರು ಆಟಗಾರರು ಪಾದಾರ್ಪಣೆ ಮಾಡಲಿರುವುದು ವಿಶೇಷ. ಅಂದರೆ ಇಂಗ್ಲೆಂಡ್ ಟಿ20 ತಂಡದ ಭಾಗವಾಗಿದ್ದ ಮೊಯೀನ್ ಅಲಿ, ಡೇವಿಡ್ ಮಲಾನ್ ಸೇರಿದಂತೆ ಕೆಲ ಹಿರಿಯ ಆಟಗಾರರನ್ನು ಈ ಸರಣಿಯಿಂದ ಕೈ ಬಿಡಲಾಗಿದೆ. ಅವರ ಬದಲಿಗೆ ತಂಡದಲ್ಲಿ ಅವಕಾಶ ಪಡೆದಿರುವ ಜೋರ್ಡನ್ ಕಾಕ್ಸ್, ಜೆಕೋಬ್ ಬೆಥೆಲ್ ಹಾಗೂ ಜಾಮಿ ಜೇವರ್ಟನ್ ಮೊದಲ ಟಿ20 ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಹಾಗೆಯೇ ತಂಡದಲ್ಲಿ ಅನುಭವ ಆಟಗಾರರಾಗಿ ಲಿಯಾಮ್ ಲಿವಿಂಗ್​ಸ್ಟೋನ್, ಸ್ಯಾಮ್ ಕರನ್, ಆದಿಲ್ ರಶೀದ್, ರೀಸ್ ಟೋಪ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಜೋಫ್ರಾ ಆರ್ಚರ್ ಈ ಪಂದ್ಯದೊಂದಿಗೆ ಮತ್ತೆ ಇಂಗ್ಲೆಂಡ್ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಅದರಂತೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್ ಈ ಕೆಳಗಿನಂತಿದೆ…

ಇಂಗ್ಲೆಂಡ್ ಪ್ಲೇಯಿಂಗ್ 11:

  1. ಫಿಲ್ ಸಾಲ್ಟ್ (ನಾಯಕ)
  2. ವಿಲ್ ಜ್ಯಾಕ್ಸ್
  3. ಜೋರ್ಡನ್ ಕಾಕ್ಸ್
  4. ಲಿಯಾಮ್ ಲಿವಿಂಗ್‌ಸ್ಟೋನ್
  5. ಜೆಕೋಬ್ ಬೆಥೆಲ್ಸ್ಯಾ
  6. ಮ್ ಕರನ್
  7. ಜಾಮಿ ಓವರ್‌ಟನ್
  8. ಜೋಫ್ರಾ ಆರ್ಚರ್
  9. ಆದಿಲ್ ರಶೀದ್
  10. ಸಾಕಿಬ್ ಮಹಮೂದ್
  11. ರೀಸ್ ಟೋಪ್ಲಿ.

ಇಂಗ್ಲೆಂಡ್ – ಆಸ್ಟ್ರೇಲಿಯಾ ಟಿ20 ಸರಣಿ ವೇಳಾಪಟ್ಟಿ:

ದಿನ ಮತ್ತು ದಿನಾಂಕ ತಂಡಗಳು ಸ್ಥಳ ಸಮಯ (IST)
ಬುಧವಾರ, ಸೆಪ್ಟೆಂಬರ್ 11 ಇಂಗ್ಲೆಂಡ್ vs ಆಸ್ಟ್ರೇಲಿಯಾ, 1ನೇ ಟಿ20 ರೋಸ್ ಬೌಲ್, ಸೌತಾಂಪ್ಟನ್ 11:00 PM
ಶುಕ್ರವಾರ, ಸೆಪ್ಟೆಂಬರ್ 13 ಇಂಗ್ಲೆಂಡ್ vs ಆಸ್ಟ್ರೇಲಿಯಾ, 2ನೇ ಟಿ20 ಸೋಫಿಯಾ ಗಾರ್ಡನ್ಸ್, ಕಾರ್ಡಿಫ್ 11:00 PM
ಭಾನುವಾರ, ಸೆಪ್ಟೆಂಬರ್ 15 ಇಂಗ್ಲೆಂಡ್ vs ಆಸ್ಟ್ರೇಲಿಯಾ, 3ನೇ ಟಿ20 ಎಮಿರೇಟ್ಸ್ ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್ 11:00 PM

ಉಭಯ ತಂಡಗಳು:

ಇಂಗ್ಲೆಂಡ್ ಟಿ20 ತಂಡ: ಫಿಲ್ ಸಾಲ್ಟ್ (ನಾಯಕ/ವಿಕೆಟ್-ಕೀಪರ್), ಜೋಫ್ರಾ ಆರ್ಚರ್, ಜೆಕೋಬ್ ಬೆಥೆಲ್, ಬ್ರೈಡನ್ ಕಾರ್ಸೆ, ಜೋರ್ಡಾನ್ ಕಾಕ್ಸ್ (ವಿಕೆಟ್-ಕೀಪರ್), ಸ್ಯಾಮ್ ಕರನ್, ಜೋಶ್ ಹಲ್, ವಿಲ್ ಜಾಕ್ಸ್, ಲಿಯಾಮ್ ಲಿವಿಂಗ್​ಸ್ಟೋನ್, ಸಾಕಿಬ್ ಮಹಮೂದ್, ಡಾನ್ ಮೌಸ್ಲಿ, ಜಾಮಿ ಓವರ್ಟನ್, ಆದಿಲ್ ರಶೀದ್, ರೀಸ್ ಟೋಪ್ಲಿ, ಜಾನ್ ಟರ್ನರ್.

ಇದನ್ನೂ ಓದಿ: CSK ಪರ ಆಡಬೇಕು… RCB ಆಟಗಾರನ ಹೇಳಿಕೆ..!

ಆಸ್ಟ್ರೇಲಿಯಾ ಟಿ20 ತಂಡ : ಮಿಚೆಲ್ ಮಾರ್ಷ್ (ನಾಯಕ), ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಕ್ಯಾಮೆರೋನ್ ಗ್ರೀನ್, ಆರೋನ್ ಹಾರ್ಡಿ, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಸ್ಪೆನ್ಸರ್ ಜಾನ್ಸನ್ ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಝಂಪಾ.