ಭಾರತದ ಸರಣಿಗೆ ಇಂಗ್ಲೆಂಡ್ ಮಾಸ್ಟರ್​ ಪ್ಲ್ಯಾನ್: ಬ್ರೆಂಡನ್ ಮೆಕಲಂಗೆ ಕೋಚ್ ಪಟ್ಟ

Brendon McCullum: ಚಾಂಪಿಯನ್ಸ್ ಟ್ರೋಫಿ 2025 ರ ಆರಂಭಕ್ಕೂ ಮುನ್ನ ಇಂಗ್ಲೆಂಡ್ ತಂಡವು ತನ್ನ ಕೋಚ್ ಅನ್ನು ಬದಲಿಸಿದೆ. ಈ ಬಾರಿ ಆಂಗ್ಲರ ಪಡೆಯ ತರಬೇತುದಾರನಾಗಿ ಆಯ್ಕೆಯಾಗಿರುವುದು ಬ್ರೆಂಡನ್ ಮೆಕಲಂ ಎಂಬುದು ವಿಶೇಷ. ಈಗಾಗಲೇ ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಯಶಸ್ವಿಯಾಗಿರುವ ಮೆಕಲಂ ಅವರಿಗೆ ಏಕದಿನ ಮತ್ತು ಟಿ20 ತಂಡಗಳ ಕೋಚಿಂಗ್ ಜವಾಬ್ದಾರಿಗಳನ್ನು ನೀಡಲಾಗಿದೆ.

ಭಾರತದ ಸರಣಿಗೆ ಇಂಗ್ಲೆಂಡ್ ಮಾಸ್ಟರ್​ ಪ್ಲ್ಯಾನ್: ಬ್ರೆಂಡನ್ ಮೆಕಲಂಗೆ ಕೋಚ್ ಪಟ್ಟ
Brendon McCullum
Follow us
ಝಾಹಿರ್ ಯೂಸುಫ್
|

Updated on: Sep 04, 2024 | 9:37 AM

ಇಂಗ್ಲೆಂಡ್ ಸೀಮಿತ ಓವರ್​ಗಳ ತಂಡದ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಂ ನೇಮಕವಾಗಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನ್ಯೂಝಿಲೆಂಡ್​ನ ಮಾಜಿ ನಾಯಕನ್ನು ಇದೀಗ ಏಕದಿನ ಹಾಗೂ ಟಿ20 ತಂಡಗಳ ತರಬೇತುದಾರರಾಗಿ ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಇದಕ್ಕೂ ಮುನ್ನ ಏಕದಿನ ಮತ್ತು ಟಿ20 ತಂಡಗಳ ಮುಖ್ಯ ಕೋಚ್ ಆಗಿ ಮ್ಯಾಥ್ಯೂ ಮೋಟ್ ಅವರು ಕಾರ್ಯ ನಿರ್ವಹಿಸಿದ್ದರು. ಆದರೆ ಕಳೆದ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವು ಕಳಪೆ ಪ್ರದರ್ಶನ ನೀಡಿದ್ದರಿಂದ ಮ್ಯಾಥ್ಯೂ ಮೋಟ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅಲ್ಲದೆ ಟೆಸ್ಟ್ ತಂಡದ ಕೋಚ್ ಆಗಿರುವ ಬ್ರೆಂಡನ್ ಮೆಕಲಂ ಅವರಿಗೆ ಮೂರು ತಂಡಗಳ ಜವಾಬ್ದಾರಿವಹಿಸಲಾಗಿದೆ.

ಇಂಗ್ಲೆಂಡ್ ತಂಡದ ಮಾಸ್ಟರ್ ಪ್ಲ್ಯಾನ್:

ಬ್ರೆಂಡನ್ ಮೆಕಲಂ ಅವರು ಕೋಚ್ ಆಗಿ ಆಯ್ಕೆಯಾದರೂ ಅವರು ಕಾರ್ಯಾರಂಭ ಮಾಡಲಿರುವುದು ಜನವರಿ 2025 ರಿಂದ ಎಂಬುದು ವಿಶೇಷ. ಅಂದರೆ ಅದುವರೆಗೆ ಮಾರ್ಕಸ್ ಟ್ರೆಸ್ಕೋಥಿಕ್ ಇಂಗ್ಲೆಂಡ್ ತಂಡದ ಹಂಗಾಮಿ ಕೋಚ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಇನ್ನು ಟೀಮ್ ಇಂಡಿಯಾ ವಿರುದ್ಧದ ಸರಣಿಯೊಂದಿಗೆ ಬ್ರೆಂಡನ್ ಮೆಕಲಂ ಇಂಗ್ಲೆಂಡ್ ಏಕದಿನ ಮತ್ತು ಟಿ20 ತಂಡಗಳ ಕೋಚ್ ಆಗಿ ಕಾರ್ಯಾರಂಭ ಮಾಡಲಿದ್ದಾರೆ.

ಜನವರಿ 22 ರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಣ ಟಿ20 ಸರಣಿ ಶುರುವಾಗಲಿದ್ದು, ಇದಾದ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಈ ಸರಣಿಗಳ ಬಳಿಕ ಉಭಯ ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಲಿದೆ.

ಇದನ್ನೂ ಓದಿ: 2 ವರ್ಷ ಬೆಂಚ್ ಕಾಯಿಸಿದ RCBಗೆ ಬ್ಯಾಟ್ ಮೂಲಕವೇ ಉತ್ತರ ನೀಡಿದ ಮನೋಜ್ ಭಾಂಡಗೆ

ಅಂದರೆ ಚಾಂಪಿಯನ್ಸ್ ಟ್ರೋಫಿಯನ್ನು ಮುಂದಿಟ್ಟುಕೊಂಡೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಬ್ರೆಂಡನ್ ಮೆಕಲಂ ಅವರಿಗೆ ಕೋಚ್ ಹುದ್ದೆಯನ್ನು ನೀಡಿದ್ದಾರೆ. ಅದರಂತೆ ಬ್ರೆಂಡನ್ ಮೆಕಲಂ ಬಲಿಷ್ಠ ಭಾರತದ ವಿರುದ್ಧದ ಸರಣಿಯೊಂದಿಗೆ ಶುಭಾರಂಭ ಮಾಡುವ ಇರಾದೆಯಲ್ಲಿದ್ದಾರೆ.

ಭಾರತ – ಇಂಗ್ಲೆಂಡ್ ಸರಣಿ ವೇಳಾಪಟ್ಟಿ:

ತಂಡಗಳು ದಿನಾಂಕ ಸಮಯ ಸ್ಥಳ
1ನೇ ಟಿ20, ಭಾರತ vs ಇಂಗ್ಲೆಂಡ್ ಬುಧವಾರ, 22 ಜನವರಿ 2025 7 PM ಚೆನ್ನೈ
2ನೇ ಟಿ20, ಭಾರತ vs ಇಂಗ್ಲೆಂಡ್ ಶನಿವಾರ, 25 ಜನವರಿ 2025 7 PM ಕೋಲ್ಕತ್ತಾ
3ನೇ ಟಿ20, ಭಾರತ vs ಇಂಗ್ಲೆಂಡ್ ಮಂಗಳವಾರ, 28 ಜನವರಿ 2025 7 PM ರಾಜ್ಕೋಟ್
4ನೇ ಟಿ20, ಭಾರತ vs ಇಂಗ್ಲೆಂಡ್ ಶುಕ್ರವಾರ, 31 ಜನವರಿ 2025 7 PM ಪುಣೆ
5ನೇ ಟಿ20, ಭಾರತ vs ಇಂಗ್ಲೆಂಡ್ ಭಾನುವಾರ, 2 ಫೆಬ್ರವರಿ 2025 7 PM ಮುಂಬೈ
1ನೇ ಏಕದಿನ, ಭಾರತ vs ಇಂಗ್ಲೆಂಡ್ ಗುರುವಾರ, 6 ಫೆಬ್ರವರಿ 2025 1:30 PM ನಾಗ್ಪುರ
2ನೇ ಏಕದಿನ, ಭಾರತ vs ಇಂಗ್ಲೆಂಡ್ ಭಾನುವಾರ, 9 ಫೆಬ್ರವರಿ 2025 1:30 PM ಕಟಕ್
3ನೇ ಏಕದಿನ, ಭಾರತ vs ಇಂಗ್ಲೆಂಡ್ ಬುಧವಾರ, 12 ಫೆಬ್ರವರಿ 2025 1:30 PM ಅಹಮದಾಬಾದ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ