ENG vs IND 2nd Test: ಟೀಮ್ ಇಂಡಿಯಾ ಪ್ರ್ಯಾಕ್ಟೀಸ್ ಸೆಷನ್ನಲ್ಲಿ ಮಾರಾಮಾರಿ: ಕೋಚ್-ಬೌಲರ್ ನಡುವೆ ಜಗಳ?, VIDEO
Team India Practice: ಬುಮ್ರಾ ಅಲಭ್ಯರದರೆ ಅರ್ಶ್ದೀಪ್ ಸಿಂಗ್ ಅಥವಾ ಆಕಾಶ್ ದೀಪ್ ಅವರು ಪ್ಲೇಯಿಂಗ್ ಇಲೆವೆನ್ಗೆ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಇವರಿಬ್ಬರು ಭರ್ಜರಿ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅರ್ಶ್ದೀಪ್ ಸಿಂಗ್ ಮತ್ತು ಭಾರತದ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಜಗಳ ಆಡುತ್ತಿರುವುದನ್ನು ಕಾಣಬಹುದು.

ಬೆಂಗಳೂರು (ಜೂ. 29): ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಭಾರತ ತಂಡ (Indian Cricket Team) ಸಿದ್ಧತೆ ನಡೆಸುತ್ತಿದೆ. ಈ ಪಂದ್ಯ ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿದೆ. ಸರಣಿಯ ಮೊದಲ ಪಂದ್ಯವನ್ನು ಟೀಮ್ ಇಂಡಿಯಾ 5 ವಿಕೆಟ್‌ಗಳಿಂದ ಸೋತ ಪರಿಣಾಮ ಎರಡನೇ ಪಂದ್ಯಕ್ಕೂ ಮುನ್ನ ಗಿಲ್ ಪಡೆಗೆ ಸಾಕಷ್ಟು ಒತ್ತಡವಿದೆ. ಇದರ ಮಧ್ಯೆ ಭಾರತ ತಂಡ ಎರಡನೇ ಟೆಸ್ಟ್‌ಗೆ ಸಿದ್ಧತೆ ಆರಂಭಿಸಿದೆ. ಈ ಪಂದ್ಯದಲ್ಲಿ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಆಡುವ ಬಗ್ಗೆಯೂ ಅನುಮಾನವಿದೆ.
ಬುಮ್ರಾ ಅಲಭ್ಯರದರೆ ಅರ್ಶ್ದೀಪ್ ಸಿಂಗ್ ಅಥವಾ ಆಕಾಶ್ ದೀಪ್ ಅವರು ಪ್ಲೇಯಿಂಗ್ ಇಲೆವೆನ್ಗೆ ಬರುವ ಸಾಧ್ಯತೆ ಇದೆ. ಇದಕ್ಕಾಗಿ ಇವರಿಬ್ಬರು ಭರ್ಜರಿ ಅಭ್ಯಾಸ ಕೂಡ ನಡೆಸುತ್ತಿದ್ದಾರೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಒಂದು ವೈರಲ್ ಆಗುತ್ತಿದೆ. ಇದರಲ್ಲಿ ಅರ್ಶ್ದೀಪ್ ಸಿಂಗ್ ಮತ್ತು ಭಾರತದ ಬೌಲಿಂಗ್ ಕೋಚ್ ಮೋರ್ನೆ ಮಾರ್ಕೆಲ್ ಜಗಳ ಆಡುತ್ತಿರುವುದನ್ನು ಕಾಣಬಹುದು. ಬಳಿಕ ಈ ಜಗಳಕ್ಕೆ ಆಕಾಶ್ ದೀಪ್ ಕೂಡ ಸೇರಿಕೊಳ್ಳುತ್ತಾರೆ. ಅರ್ಶ್ದೀಪ್ ಮೇಲೆ ಕೂತು ಮಾರ್ಕೆಲ್ ಅವರಿಗೆ ಬಡಿಯುವಂತೆ ಮಾಡುತ್ತಾರೆ.
WWE meets LOL at Indian nets! 😄 Morne Morkel vs Arshdeep & Akashdeep – not a fight, just full-on fun! Bouncers, banter & belly laughs. Who said net sessions can’t be entertaining? 😂 #INDvsENG #TeamIndiaNets
🎥 @AnkanKar pic.twitter.com/g7A9IZOscW
— Ray Sportz Cricket (@raysportz_cric) June 28, 2025
ಆದಾಗ್ಯೂ, ಇದು ನಿಜವಾಗಿ ನಡೆದ ಘಟನೆ ಅಲ್ಲ. ಬದಲಾಗಿ ಪಂದ್ಯದ ಅಭ್ಯಾಸದ ಮಧ್ಯೆ ಆಟಗಾರರು ತಮ್ಮ ಒತ್ತಡವನ್ನು ನಿವಾರಿಸಲು ಮೋಜಿನ ಕುಚೇಷ್ಟೆಗಳನ್ನು ಮಾಡಿದ್ದಾರೆ. ಈ ವಿಡಿಯೋದಲ್ಲಿ, ಅರ್ಶ್ದೀಪ್ ಸಿಂಗ್ ಮತ್ತು ಆಕಾಶ್ ದೀಪ್ ತಮಾಷೆಯಾಗಿ ಮೋರ್ನೆ ಮೋರ್ಕೆಲ್ಗೆ ಕಾಟ ಕೊಟ್ಟಿದ್ದಾರೆ. ಮೋರ್ಕೆಲ್ ಕೂಡ ತಮಾಷೆಯಾಗಿ ಅವರ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ. ಟೀಮ್ ಇಂಡಿಯಾ ಶಿಬಿರದಲ್ಲಿ ವಾತಾವರಣ ಎಷ್ಟು ಮೋಜಿನದಾಗಿದೆ ಎಂಬುದನ್ನು ಈ ವಿಡಿಯೋ ಸ್ಪಷ್ಟಪಡಿಸುತ್ತದೆ. ಆಟಗಾರರು ತಮ್ಮ ಒತ್ತಡವನ್ನು ನಿವಾರಿಸಲು ಇಂತಹ ಕುಚೇಷ್ಟೆಗಳನ್ನು ಮಾಡುತ್ತಾರೆ ಎಂಬುದು ಈ ವಿಡಿಯೋದಿಂದ ಸ್ಪಷ್ಟವಾಗುತ್ತದೆ, ಇದು ಅವರ ನಡುವೆ ಉತ್ತಮ ಬಾಂಧವ್ಯವನ್ನು ಬೆಳೆಸುತ್ತದೆ.
ಸಾಮಾನ್ಯವಾಗಿ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಟಗಾರರು ಹೆಚ್ಚಿನ ಒತ್ತಡದಲ್ಲಿರುತ್ತಾರೆ. ಟೆಸ್ಟ್ ಪಂದ್ಯಗಳು ಮತ್ತು ದೀರ್ಘ ಸರಣಿಗಳ ಸಮಯದಲ್ಲಿ ಈ ಒತ್ತಡವು ವಿಶೇಷವಾಗಿ ಹೆಚ್ಚಾಗಿರುತ್ತದೆ. ಅಂತಹ ಸಮಯದಲ್ಲಿ, ಕೋಚಿಂಗ್ ಸಿಬ್ಬಂದಿ ಮತ್ತು ಹಿರಿಯ ಆಟಗಾರರು ಜೂನಿಯರ್‌ಗಳೊಂದಿಗೆ ಆನಂದಿಸುವುದು ಮತ್ತು ಅವರನ್ನು ಪ್ರೋತ್ಸಾಹಿಸುವುದು ಬಹಳ ಮುಖ್ಯ. ಮಾರ್ನೆ ಮಾರ್ಕೆಲ್, ಅರ್ಶ್‌ದೀಪ್ ಮತ್ತು ಆಕಾಶ್ ದೀಪ್ ಅವರು ಅಂತಹ ಮೋಜಿನಿಂದ ಕೂಡಿರುವುದು ತಂಡದಲ್ಲಿ ಉತ್ತಮ ವಾತಾವರಣವಿದೆ ಎಂದು ತೋರಿಸುತ್ತದೆ. ಇದು ಆಟಗಾರರ ಪ್ರದರ್ಶನದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಭಾರತದ ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ನೇಮಕವಾದಾಗಿನಿಂದ, ಅವರು ಬೌಲಿಂಗ್ ವಿಭಾಗದೊಂದಿಗಿನ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಿದ್ದಾರೆ ಮತ್ತು ಆಟಗಾರರಿಗೆ ಉತ್ತಮ ತರಬೇತಿಯನ್ನು ನೀಡುತ್ತಿದ್ದಾರೆ. ಆಟಗಾರರೊಂದಿಗೆ ಅವರು ಎಷ್ಟು ಆನಂದಿಸುತ್ತಾರೆ ಮತ್ತು ಅವರಿಗೆ ಎಷ್ಟು ಹತ್ತಿರವಾಗುತ್ತಾರೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




