AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ENG vs IND 2ns Test: ಟೀಮ್ ಇಂಡಿಯಾಕ್ಕೆ ಶುಭ ಸುದ್ದಿ: ಎರಡನೇ ಟೆಸ್ಟ್​ನಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕೆ?, ಇಲ್ಲಿದೆ ಸಾಕ್ಷಿ

Jasprit Bumrah, India vs England 2nd Test: ಮೊದಲ ಟೆಸ್ಟ್ ಪಂದ್ಯ ಮುಗಿದ ನಂತರ, ಬುಮ್ರಾ ಎರಡನೇ ಟೆಸ್ಟ್ ಪಂದ್ಯವನ್ನು ಆಡುವುದಿಲ್ಲ ಎಂಬ ಸುದ್ದಿಗಳು ಹೊರಬರಲು ಪ್ರಾರಂಭಿಸಿದವು. ಆದರೆ ಈಗ ಬುಮ್ರಾ ಆಡುವ ಬಗ್ಗೆ ಟೆಸ್ಟ್ ಪಂದ್ಯಕ್ಕೆ ಒಂದು ದಿನ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್‌ಗಳನ್ನು ಕಬಳಿಸಿದ್ದರು.

ENG vs IND 2ns Test: ಟೀಮ್ ಇಂಡಿಯಾಕ್ಕೆ ಶುಭ ಸುದ್ದಿ: ಎರಡನೇ ಟೆಸ್ಟ್​ನಲ್ಲಿ ಜಸ್ಪ್ರೀತ್ ಬುಮ್ರಾ ಕಣಕ್ಕೆ?, ಇಲ್ಲಿದೆ ಸಾಕ್ಷಿ
Jasprit Bumrah (3)
Vinay Bhat
|

Updated on: Jun 29, 2025 | 9:59 AM

Share

ಬೆಂಗಳೂರು (ಜೂ. 29): ಇಂಗ್ಲೆಂಡ್ ಮತ್ತು ಭಾರತ ನಡುವಿನ ಎರಡನೇ ಟೆಸ್ಟ್ ಪಂದ್ಯವು ಜುಲೈ 2 ರಿಂದ ಬರ್ಮಿಂಗ್ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕಾಗಿ ಭಾರತ ತಂಡವು ತನ್ನ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಜೂನ್ 28, ಶನಿವಾರ, ಟೀಮ್ ಇಂಡಿಯಾ ಆಟಗಾರರು ಎಡ್ಜ್‌ಬಾಸ್ಟನ್ ಮೈದಾನದಲ್ಲಿ ಕಠಿಣ ಅಭ್ಯಾಸ ನಡೆಸಿದರು. ಈ ಸಮಯದಲ್ಲಿ, ಭಾರತ ತಂಡಕ್ಕೆ ಉತ್ತಮವಾದ ವಿಷಯವೆಂದರೆ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (Jasprit Bumrah) ಕೂಡ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿ ಸಂಪೂರ್ಣವಾಗಿ ತಮ್ಮನ್ನು ಅಭ್ಯಾಸದಲ್ಲಿ ತೋಡಗಿಸಿಕೊಂಡರು. ಬುಮ್ರಾ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವುದನ್ನು ನೋಡಿದ ಅಭಿಮಾನಿಗಳು ಈಗ ಅವರು ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡುವುದನ್ನು ಕಾಣಬಹುದು ಎಂದು ಊಹಿಸಲು ಪ್ರಾರಂಭಿಸಿದ್ದಾರೆ.

ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ 5 ವಿಕೆಟ್ ಕಬಳಿಸಿದ್ದರು

ಮೊದಲ ಟೆಸ್ಟ್ ಪಂದ್ಯ ಮುಗಿದ ನಂತರ, ಬುಮ್ರಾ ಎರಡನೇ ಟೆಸ್ಟ್ ಪಂದ್ಯವನ್ನು ಆಡುವುದಿಲ್ಲ ಎಂಬ ಸುದ್ದಿಗಳು ಹೊರಬರಲು ಪ್ರಾರಂಭಿಸಿದವು. ಆದರೆ ಈಗ ಬುಮ್ರಾ ಆಡುವ ಬಗ್ಗೆ ಟೆಸ್ಟ್ ಪಂದ್ಯಕ್ಕೆ ಒಂದು ದಿನ ಮೊದಲು ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ. ಲೀಡ್ಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬುಮ್ರಾ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್‌ಗಳನ್ನು ಕಬಳಿಸಿದರು, ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಅವರಿಗೆ ಯಾವುದೇ ವಿಕೆಟ್ ಸಿಗಲಿಲ್ಲ. ಈಗ ಅವರು ಎಡ್ಜ್‌ಬಾಸ್ಟನ್ ಟೆಸ್ಟ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ.

ಶನಿವಾರ ನಡೆದ ಅಭ್ಯಾಸ ಅವಧಿಯಲ್ಲಿ ಯಶಸ್ವಿ ಜೈಸ್ವಾಲ್, ಶುಭ್​ಮನ್ ಗಿಲ್, ಕೆಎಲ್ ರಾಹುಲ್ ಮತ್ತು ರಿಷಭ್ ಪಂತ್ ಹೊರತುಪಡಿಸಿ ಉಳಿದೆಲ್ಲಾ ಆಟಗಾರರು ಭಾಗವಹಿಸಿದ್ದರು. ಈ ನಾಲ್ವರು ಬ್ಯಾಟ್ಸ್‌ಮನ್‌ಗಳು ಲೀಡ್ಸ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಭಾರತದ ಮುಂದಿನ ಅಭ್ಯಾಸ ಅವಧಿಯು ಸೋಮವಾರ ನಡೆಯಲಿದೆ. ಆ ದಿನ ಜಸ್ಪ್ರೀತ್ ಬುಮ್ರಾ ನೆಟ್‌ನಲ್ಲಿ ಬೌಲಿಂಗ್ ಮಾಡುತ್ತಾರೆಯೇ ಅಥವಾ ಇಲ್ಲವೇ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ.

ಇದನ್ನೂ ಓದಿ
Image
ಮಸಲ್ ಪವರ್​... ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ರಸೆಲ್
Image
ಏಷ್ಯಾಕಪ್​ಗೆ ಡೇಟ್​ ಫಿಕ್ಸ್: ಭಾರತ vs ಪಾಕಿಸ್ತಾನ್ ಮುಖಾಮುಖಿ
Image
ದಾಖಲೆಗಳ ಮೇಲೆ ದಾಖಲೆ ಬರೆದ ಸ್ಮೃತಿ ಮಂಧಾನ
Image
ಇಂಗ್ಲೆಂಡ್​ನಲ್ಲಿ ಶತಕ ಬಾರಿಸಿ ದಾಖಲೆಗಳ ಮಳೆಗರೆದ ಸ್ಮೃತಿ ಮಂಧಾನ

Asia Cup 2025: ಏಷ್ಯಾಕಪ್​ಗೆ ಡೇಟ್​ ಫಿಕ್ಸ್: ಭಾರತ vs ಪಾಕಿಸ್ತಾನ್ ಮುಖಾಮುಖಿ

ಬುಮ್ರಾ ಬದಲಿಗೆ ಯಾರಿಗೆ ಅವಕಾಶ ಸಿಗುತ್ತದೆ?

ಎರಡನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಇರುವ ದೊಡ್ಡ ಪ್ರಶ್ನೆಯೆಂದರೆ ಈ ಪಂದ್ಯಕ್ಕೆ ಭಾರತದ ಆಡುವ XI ಯಾವುದು ಎಂಬುದು. ಜಸ್ಪ್ರೀತ್ ಬುಮ್ರಾ ಎಡ್ಜ್‌ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಆಡದಿದ್ದರೆ, ಆಕಾಶ್ ದೀಪ್ ಅಥವಾ ಅರ್ಶ್‌ದೀಪ್ ಸಿಂಗ್ ಅವರಿಗೆ ಆಡಲು ಅವಕಾಶ ಸಿಗಬಹುದು. ಕುಲ್‌ದೀಪ್ ಯಾದವ್ ಮತ್ತೆ ಆಡುವ XI ಗೆ ಮರಳಬಹುದು ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ನಾಯಕ ಗಿಲ್ ಎರಡನೇ ಟೆಸ್ಟ್ ಪಂದ್ಯಕ್ಕೆ ತಮ್ಮ ಆಡುವ XI ನಲ್ಲಿ ಎಷ್ಟು ಬದಲಾವಣೆಗಳನ್ನು ಮಾಡುತ್ತಾರೆ ಎಂಬುದನ್ನು ರೋಚಕತೆ ಸೃಷ್ಟಿಸಿದೆ. ಹಾಗೆಯೆ ಸಾಯಿ ಸುದರ್ಶನ್ ಅಥವಾ ಕರುಣ್ ನಾಯರ್ ಕೈಬಿಟ್ಟು ನಿತೀಶ್ ರೆಡ್ಡಿಗೆ ಅವಕಾಶ ಸಿಗಲಿದೆ ಎಂಬ ಮಾತು ಕೂಡ ಕೇಳಿಬರುತ್ತಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ