ಗೋಲ್ಡನ್ ಡಕ್, ಡೈಮಂಡ್ ಡಕ್, ಸಿಲ್ವರ್ ಡಕ್: ಕ್ರಿಕೆಟ್ನಲ್ಲಿ 8 ಡಕ್ ಔಟ್ಗಳಿವೆ ಗೊತ್ತಾ?
DUCK OUT: ಕ್ರಿಕೆಟ್ನಲ್ಲಿ ಡಕ್ ಔಟ್ ಎಂಬ ಪದ ಬಳಸುವುದು ನೀವೆಲ್ಲಾ ಕೇಳಿರುತ್ತೀರಿ, ಇಲ್ಲಾ ಓದಿರುತ್ತೀರಿ. ಇಲ್ಲಿ ಡಕ್ ಎಂಬ ಪದ ಬಳಸುವುದೇಕೆ ಎಂಬ ಪ್ರಶ್ನೆ ಮೂಡುವುದು ಸಹಜ. ಸಾಮಾನ್ಯವಾಗಿ ಝೀರೋ ಸಿಕ್ಕಾಗ ಬಳಸುವ ಪದ, ಮೊಟ್ಟೆ. ಝೀರೋ ಬಾತುಕೋಳಿಯ ಮೊಟ್ಟೆಯಾಕಾರದಲ್ಲಿ ಇರುವ ಕಾರಣ ಕ್ರಿಕೆಟ್ನಲ್ಲಿ ಡಕ್ ಎಂದು ಬಳಸಲಾಗುತ್ತಿದೆ. ಹೀಗಾಗಿಯೇ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಡಕ್ ಔಟ್ ಎಂದು ಕರೆಯಲಾಗುತ್ತದೆ.
Updated on:Jun 29, 2025 | 9:59 AM

ಡಕ್ ಡಕ್ ಡಕ್... ಗೋಲ್ಡನ್ ಡಕ್. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ ಗೋಲ್ಡನ್ ಡಕ್ ಎಂಬ ಪದ ಬಳಕೆ ಕೇಳಿ ಬರುತ್ತಿರುತ್ತವೆ. ಆದರೆ ಆಟಗಾರನೊಬ್ಬ ಶೂನ್ಯಕ್ಕೆ ಔಟಾಗುವುದನ್ನು ಗೋಲ್ಡನ್ ಡಕ್ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಕ್ರಿಕೆಟ್ನಲ್ಲಿ ಗೋಲ್ಡನ್ ಡಕ್ ಝೀರೋಗೆ ಔಟಾದ್ರೆ ಬಳಸುವ ಪದವಲ್ಲ. ಬದಲಾಗಿ ಬ್ಯಾಟ್ಸ್‌ಮನ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಇಲ್ಲಿ ಗೋಲ್ಡನ್ ಡಕ್ ಜೊತೆ ಸಿಲ್ವರ್, ಡೈಮಂಡ್, ಪ್ಲಾಟಿನಂ ಡಕ್ ಔಟ್ಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ರೆ ಕ್ರಿಕೆಟ್ ಅಂಗಳದಲ್ಲಿರುವ ಇತರೆ ಡಕ್ ಔಟ್ಗಳಾವುವು ಎಂದು ನೋಡೋಣ...

1- ಗೋಲ್ಡನ್ ಡಕ್: ಬ್ಯಾಟ್ಸ್‌ಮನ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಉದಾಹರಣೆಗೆ 1 ಎಸೆತಗಳಲ್ಲಿ 0 ರನ್ಗಳಿಸಿ ಬೌಲ್ಡ್ ಅಥವಾ ಕ್ಯಾಚ್ ನೀಡಿ ಔಟಾಗುವುದನ್ನು ಗೋಲ್ಡನ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

2- ಸಿಲ್ವರ್ ಡಕ್: ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರೆ, ಅದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ. ಇಲ್ಲೂ ಕೂಡ ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಕ್ಯಾಚ್ ಅಥವಾ ಬೌಲ್ಡ್ ಆಗಿ ವಿಕೆಟ್ ಒಪ್ಪಿಸುವುದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ.

3- ಬ್ರೋನ್ಝ್ ಡಕ್: ಬ್ಯಾಟ್ಸ್‌ಮನ್ ತನ್ನ ಇನ್ನಿಂಗ್ಸ್‌ನ ಮೂರನೇ ಎಸೆತದಲ್ಲಿ ಖಾತೆ ತೆರೆಯದೆ ಔಟಾದರೆ ಅದು ಬ್ರೋನ್ಝ್ ಡಕ್. ಅಂದರೆ ಮೂರು ಎಸೆತಗಳನ್ನು ಎದುರಿಸಿ ಕ್ಯಾಚ್ ಅಥವಾ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರೆ ಅದು ಬ್ರೋನ್ಝ್ ಡಕ್ ಔಟ್.

4- ಡೈಮಂಡ್ ಡಕ್: ಬ್ಯಾಟ್ಸ್‌ಮನ್ ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾದರೆ ಅದನ್ನು ‘ಡೈಮಂಡ್ ಡಕ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾನ್ ಸ್ಟ್ರೈಕ್ನಲ್ಲಿದ್ದ ಆಟಗಾರರು ಒಂದು ಎಸೆತವನ್ನು ಎದುರಿಸದೇ ರನೌಟ್ ಆದರೆ ಅದನ್ನು ಡೈಮಂಡ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

5- ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್: ಇನ್ನಿಂಗ್ಸ್‌ನ ಮೊದಲ ಎಸೆತದಲ್ಲಿ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್ ಎಂದು ಕರೆಯಲಾಗುತ್ತದೆ. ಅಂದರೆ ಪಂದ್ಯದ ಮೊದಲ ಓವರ್ನ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರೆ ಅದು ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್.

6- ಪೇರ್ ಡಕ್: ಟೆಸ್ಟ್‌ನಲ್ಲಿ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದಾದರೆ ಅದನ್ನು ಪೇರ್ ಡಕ್ ಎಂದು ಕರೆಯಲಾಗುತ್ತದೆ. ಅಂದರೆ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿ ದ್ವಿತೀಯ ಇನಿಂಗ್ಸ್ನಲ್ಲೂ ಸೊನ್ನೆ ಸುತ್ತಿದರೆ ಅದು ಪೇರ್ ಡಕ್ ಔಟ್.

7- ಕಿಂಗ್ ಪೇರ್ ಡಕ್: ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟ್ಸ್‌ಮನ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಅದನ್ನು ಕಿಂಗ್ ಪೇರ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

ಲಾಫಿಂಗ್ ಡಕ್: ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಬ್ಯಾಟ್ಸ್‌ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಲಾಫಿಂಗ್ ಡಕ್ ಔಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಟಿ20, ಏಕದಿನ ಅಥವಾ ಟೆಸ್ಟ್ ಪಂದ್ಯದ ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ಸೊನ್ನೆಗೆ ಔಟಾದರೆ ಅದು ಲಾಫಿಂಗ್ ಡಕ್ ಔಟ್.

ಡಕ್ ಔಟ್ ಎಂದು ಯಾಕೆ ಕರೆಯಲಾಗುತ್ತೆ? ಇಂಗ್ಲಿಷ್ನಲ್ಲಿ ಡಕ್ ಅಂದರೆ ಬಾತುಕೋಳಿ. ಕ್ರಿಕೆಟ್ಗೂ ಬಾತುಕೋಳಿಗೂ ಏನು ಸಂಬಂಧ ಎಂದು ನೀವು ಯೋಚಿಸುತ್ತಿದ್ದರೆ, ಉತ್ತರ ಸಿಂಪಲ್. ನಾವು ಸಾಮಾನ್ಯವಾಗಿ ಝೀರೋ ಸಿಕ್ಕಾಗ ಬಳಸುವ ಪದ, ಮೊಟ್ಟೆ. ಝೀರೋ ಬಾತುಕೋಳಿಯ ಮೊಟ್ಟೆಯಾಕಾರದಲ್ಲಿ ಇರುವ ಕಾರಣ ಕ್ರಿಕೆಟ್ನಲ್ಲಿ ಡಕ್ ಎಂದು ಬಳಸಲಾಗಿದೆ. ಹೀಗಾಗಿ ಶೂನ್ಯಕ್ಕೆ ಔಟಾದರೆ ಡಕ್ ಔಟ್ ಎಂದು ಕರೆಯಲಾಗುತ್ತದೆ.
Published On - 9:54 am, Sun, 29 June 25

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.
Read More
