ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್‌ನಲ್ಲಿ ಹೊಸ ಶಕೆ ಆರಂಭಿಸಿದೆ. ಹೊಸ ನಾಯಕ ಮತ್ತು ಕೋಚ್ ಜೋಡಿಯ ಆಗಮನದೊಂದಿಗೆ, ಇಂಗ್ಲೆಂಡ್ ಕ್ರಿಕೆಟ್ ತಂಡವು ಟೆಸ್ಟ್ ಕ್ರಿಕೆಟ್‌ನಲ್ಲಿ ODI ಮತ್ತು T20ಯ ಉತ್ಸಾಹವನ್ನು ತುಂಬಿದೆ. ಅದರ ಮೊದಲ ಬಲಿಪಶು ವಿಶ್ವ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ (New Zealand Cricket Team) ಆಗಿದೆ. ಬೆನ್ ಸ್ಟೋಕ್ಸ್ ಅವರ ನಾಯಕತ್ವದಲ್ಲಿ ಮತ್ತು ಕೋಚ್ ಬ್ರೆಂಡನ್ ಮೆಕಲಮ್ ಅವರ ಮಾರ್ಗದರ್ಶನದಲ್ಲಿ, ಇಂಗ್ಲೆಂಡ್ ಲೀಡ್ಸ್ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿ ಸತತ ಮೂರನೇ ಜಯವನ್ನು ದಾಖಲಿಸಿತು. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 3-0 ಅಂತರದಲ್ಲಿ ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ನ್ಯೂಜಿಲೆಂಡ್ ತಂಡವನ್ನು ಸೋಲಿಸಿತು. ಅಷ್ಟೇ ಅಲ್ಲ, 145 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಈ ಸರಣಿಯನ್ನು ಗೆದ್ದ ರೀತಿಯೊಂದಿಗೆ ಬೆರಗುಗೊಳಿಸುವ ದಾಖಲೆಯೂ ಸೃಷ್ಟಿಯಾಗಿದೆ.
ಇತಿಹಾಸ ಸೃಷ್ಟಿ
ಈ ಸರಣಿಗೂ ಮುನ್ನ ಕಳೆದ ಒಂದು ವರ್ಷದಲ್ಲಿ 17 ಟೆಸ್ಟ್ ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದಿದ್ದ ಇಂಗ್ಲೆಂಡ್ ತಂಡ, ಕಳೆದ ಎರಡು ತಿಂಗಳ ಪ್ರಮುಖ ಬದಲಾವಣೆಗಳ ನಂತರ ತಮ್ಮ ಆಟ ಮತ್ತು ಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿತು. ಮೆಕಲಮ್ ಮತ್ತು ಸ್ಟೋಕ್ಸ್ ಅವರ ಆಕ್ರಮಣಕಾರಿ ಶೈಲಿಯೊಂದಿಗೆ ಬಂದ ಈ ಬದಲಾವಣೆಯ ಆಧಾರದ ಮೇಲೆ ಇಂಗ್ಲೆಂಡ್ ಐತಿಹಾಸಿಕ ಗೆಲುವು ದಾಖಲಿಸಿತು. ಲೀಡ್ಸ್ ಟೆಸ್ಟ್‌ನ ಐದನೇ ಮತ್ತು ಕೊನೆಯ ದಿನದಂದು, ಇಂಗ್ಲೆಂಡ್ ನ್ಯೂಜಿಲೆಂಡ್‌ನಿಂದ 296 ರನ್‌ಗಳ ಗುರಿಯನ್ನು ಸುಲಭವಾಗಿ ಸಾಧಿಸಿತು. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಸತತ ಮೂರು ಪಂದ್ಯಗಳಲ್ಲಿ 250ಕ್ಕೂ ಹೆಚ್ಚು ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಸಾಧಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡ್ ಪಾತ್ರವಾಯಿತು. ಇಂಗ್ಲೆಂಡ್ ಈ ಹಿಂದೆ ಲಾರ್ಡ್ಸ್ ಟೆಸ್ಟ್‌ನಲ್ಲಿ 277 ಮತ್ತು ನಾಟಿಂಗ್‌ಹ್ಯಾಮ್‌ನಲ್ಲಿ 299 ರನ್‌ಗಳ ಗುರಿಯನ್ನು ಸಾಧಿಸಿತ್ತು.
ಮೊದಲೆರಡು ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ಗುರಿ ಬೆನ್ನಟ್ಟಿದ ಶೈಲಿಯೇ ಈ ಟೆಸ್ಟ್ನಲ್ಲೂ ಕಂಡು ಬಂದಿದ್ದು, ನಾಲ್ಕನೇ ದಿನವೇ ಅಡಿಪಾಯ ಹಾಕಲಾಯಿತು. ಒಲಿ ಪೋಪ್ ಮತ್ತು ಜೋ ರೂಟ್ ಅರ್ಧಶತಕಗಳನ್ನು ಗಳಿಸುವ ಜೊತೆಗೆ ಶತಕದ ಜೊತೆಯಾಟವನ್ನು ಮಾಡಿ ತಂಡವನ್ನು ಬಲಿಷ್ಠ ಸ್ಥಿತಿಯಲ್ಲಿಟ್ಟಿದ್ದರು. ಆದರೆ, ಐದನೇ ದಿನ ಮಳೆಯಿಂದಾಗಿ ಮೊದಲ ಸೆಷನ್ ಸಂಪೂರ್ಣ ರದ್ದಾಯಿತು. ನಂತರ ಎರಡನೇ ಸೆಷನ್ನಲ್ಲಿ ಪೋಪ್ ಶೀಘ್ರದಲ್ಲೇ ಟಿಮ್ ಸೌಥಿಗೆ ಬಲಿಯಾದರು. ಹೀಗಿರುವಾಗ ನಾಟಿಂಗ್ ಹ್ಯಾಮ್ ಟೆಸ್ಟ್‌ನ ಕೊನೆಯ ಇನ್ನಿಂಗ್ಸ್ನಲ್ಲಿ ಬಿರುಸಿನ ಶತಕ ಸಿಡಿಸಿದ ಹಾಗೂ ಹೆಡಿಂಗ್ಲಿಯಲ್ಲಿ ಮೊದಲ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದ ಜಾನಿ ಬೈರ್ ಸ್ಟೋವ್, ಜೋ ರೂಟ್ ಜತೆ ಕ್ರೀಸ್ ಹಂಚಿಕೊಂಡರು.
ಬೈರ್‌ಸ್ಟೋವ್ ಮತ್ತು ರೂಟ್ ಜೊತೆಯಾಟ
ಬೈರ್‌ಸ್ಟೋವ್ ಮತ್ತು ರೂಟ್ ಜೊತೆಯಾಗಿ ಇನ್ನಿಂಗ್ಸ್‌ನ್ನು ಮುಂದಕ್ಕೆ ಕೊಂಡೊಯ್ದರು. ನಿರ್ದಿಷ್ಟವಾಗಿ ಬೈರ್‌ಸ್ಟೋವ್ ಅವರ ಆಕ್ರಮಣಕಾರಿ ಶೈಲಿಯನ್ನು ಮುಂದುವರೆಸಿದರು, ಇದು ಕೊನೆಯ ಮೂರು ಇನ್ನಿಂಗ್ಸ್‌ಗಳಲ್ಲೂ ತೋರಿಸಲ್ಪಟ್ಟಿತು. ತವರು ನೆಲದಲ್ಲಿ ಆಡುತ್ತಿರುವ ಈ ಆಂಗ್ಲ ಬ್ಯಾಟ್ಸ್‌ಮನ್ ಕೇವಲ 30 ಎಸೆತಗಳಲ್ಲಿ ತ್ವರಿತ ಅರ್ಧಶತಕ ಪೂರೈಸಿ ನ್ಯೂಜಿಲೆಂಡ್ ತಂಡವನ್ನು ಸಂಪೂರ್ಣವಾಗಿ ಗೆಲುವಿನಿಂದ ಔಟ್ ಮಾಡಿದರು. ಬೈರ್‌ಸ್ಟೋವ್ ಮತ್ತು ರೂಟ್ ಕೇವಲ 87 ಎಸೆತಗಳಲ್ಲಿ 111 ರನ್‌ಗಳ ಅಜೇಯ ಜೊತೆಯಾಟದಲ್ಲಿ ಪಂದ್ಯವನ್ನು ಎರಡನೇ ಸೆಷನ್ನಲ್ಲಿಯೇ ಕೊನೆಗೊಳಿಸಿದರು. ಮೈಕಲ್ ಬ್ರೇಸ್‌ವೆಲ್ ವಿರುದ್ಧ ಬೈರ್‌ಸ್ಟೋ ಸತತ ಬೌಂಡರಿ ಹಾಗೂ ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಬೈರ್‌ಸ್ಟೋವ್ 44 ಎಸೆತಗಳಲ್ಲಿ 71 ರನ್ (8 ಬೌಂಡರಿ, 3 ಸಿಕ್ಸರ್) ಮತ್ತು ರೂಟ್ 86 ರನ್ (125 ಎಸೆತ, 11 ಬೌಂಡರಿ, 1 ಸಿಕ್ಸರ್) ಗಳಿಸಿ ಅಜೇಯರಾಗಿ ಮರಳಿದರು.
Published On - 7:31 pm, Mon, 27 June 22